1995-1998

ಶ್ರೀ ಪ್ರೊ. ಬಿ. ಎ. ವಿವೇಕ್ ರೈ (ಅಧ್ಯಕ್ಷರು)

ಶ್ರೀ ಅಮೃತ ಸೋಮೇಶ್ವರ (ಸದಸ್ಯರು)

ಶ್ರೀ ಕುದ್ಕಾಡಿ ವಿಶ್ವನಾಥ ರೈ (ಸದಸ್ಯರು)

ಡಾ. ವೆಂಕಟರಾಜ ಪುಣಿಂಚಿತ್ತಾಯ (ಸದಸ್ಯರು)

ಶ್ರೀ ಬಾಲಕೃಷ್ಣ ಶೆಟ್ಟಿ ಪೊಳಲಿ (ಸದಸ್ಯರು)

ಡಾ. ವಾಮನ ನಂದಾವರ (ಸದಸ್ಯರು)

ಶ್ರೀ ಅನಂತರಾಮ ಬಂಗಾಡಿ (ಸದಸ್ಯರು)

ಡಾ.ಯು.ಪಿ.ಉಪಾಧ್ಯಾಯ (ಸದಸ್ಯರು)

ಶ್ರೀ ಗುಣಪಾಲ ಕದಂಬ (ಸದಸ್ಯರು)

ಶ್ರೀ ಕೆ. ಎನ್. ಟೈಲರ್ (ಸದಸ್ಯರು)

ಶ್ರೀ ಮಾಧವ ಕುಲಾಲ್ (ಸದಸ್ಯರು)

ಶ್ರೀ ಮಿಜಾರ್ ಅಣ್ಣಪ್ (ಸದಸ್ಯರು)

ಶ್ರೀ ಪಿ. ಎಸ್. ರಾವ್ (ಸದಸ್ಯರು)

ಶ್ರೀ ಸೀತಾರಾಮ ಕೆದಿಲಾಯ (ಸದಸ್ಯರು)

ಶ್ರೀ ಎಸ್. ಆರ್. ಹೆಗ್ಡೆ (ಸದಸ್ಯರು)

ಶ್ರೀಮತಿ ಕೆ. ಲೀಲಾವತಿ (ಸದಸ್ಯರು)

ಶ್ರೀಮತಿ ಯಶವಂತಿ ಸುವರ್ಣ (ಸದಸ್ಯರು)

ಪ್ರೊ. ಬಿ. ಎ. ವಿವೇಕ್ ರೈ

ಇವರು ೧೯೪೬ ಡಿಸೆಂಬರ್ ೬ ರಂದು ಪುಣಚ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರು ಮಂಗಳೂರು ವಿಶ್ವ ವಿದ್ಯಾನಿಲಯ ತುಳುಪೀಠದ ಮೊದಲ ಅಧ್ಯಕ್ಷರು ಹಾಗೂ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಕುಲಪತಿಗಳಾಗಿದ್ದರು.

ತುಳು, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವಿದ್ವಾಂಸರು, ಸಂಶೋಧಕರು ವಿಮರ್ಶಕರು ಮತ್ತು ಮಾರ್ಗದರ್ಶಕರು. ತುಳು ಜನಪದ ಸಾಹಿತ್ಯದ ಮೇಲೆ ಅಧ್ಯಯನ ಮಾಡಿ ಮೊದಲು ಡಾಕ್ಟರೇಟ್ ಪದವಿಯನ್ನು ಪಡೆದವರು. ಇವರು ಫಿನ್ಲೇಂಡ್, ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಮತ್ತು ಜಪಾನ್ ಮುಂತಾದ ದೇಶಗಳಿಗೆ ಹೋಗಿ ಬಂದವರು. ೧೯೯೪-೧೯೯೮ ರ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ.

ತುಳು ಗಾದೆಗಳು, ತುಳು ಒಗಟುಗಳು, ತೌಳವ ಸಂಸ್ಕೃತಿ, ತುಳು ಅಧ್ಯಯನ ಕೆಲವು ವಿಚಾರಗಳು, ಪೆರವಾಯಿ ಸುಬ್ಬಯ ಶೆಟ್ಟಿಯವರ ತುಳು ಗಾದೆಗಳು , ಭೂತಾರಾಧನೆಯ ಬಣ್ಣಗಾರಿಕೆ ಮತ್ತು ಕನ್ನಡದಲ್ಲಿ ೧೦ ಗ್ರಂಥಗಳು ಪ್ರಕಟವಾಗಿದೆ. ಇವರು ಅಕಾಡೆಮಿಯ ಅಧ್ಯಕ್ಷರಾದ ಹೊತ್ತಿನಲ್ಲಿ ಸುಮಾರು ೫೭ ಬೂಕುಗಳನ್ನು ಪ್ರಕಟಿಸಿದ್ದಾರೆ.

ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ, ರಾಜ್ಯೋತ್ಸವ, ಸಂದೇಶ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಪೊಳಲಿ ಶೀನಪ್ಪ ಹೆಗ್ಡೆ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಇವರು ಪ್ರಸ್ತುತ ವ್ಯೂತ್ಸ್ಬುರ್ಗ್ ವಿಶ್ವ ವಿದ್ಯಾನಿಲಯ ಜರ್ಮನಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಮೃತ ಸೋಮೇಶ್ವರ

೧೯೩೫ ಸಪ್ಟೆಂಬರ್ ೨೭ ರಂದು ಜನಿಸಿದ ಇವರು ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಪ್ರಾಥsಮಿಕ ಶಿಕ್ಷಣವನ್ನು ಮತ್ತು ಅನಂದಾಶ್ರಮದಲ್ಲಿ ಪ್ರೌಢಶಿಕ್ಷಣವನ್ನು ಕರ್ನಾಟಕ ವಿ.ವಿ ಎಂ.ಎ ಪದವಿಯನ್ನು ಪಡೆದರು.

ಕನ್ನಡ ಮತ್ತು ತುಳುವಿನಲ್ಲಿ ಸುಮಾರು ೮೫ ರಷ್ಟು ಸಣ್ಣ ಕತೆ, ಕವಿತೆ, ವಿಮರ್ಶೆ, ಸಂಶೋಧನೆ, ನಾಟಕ, ಜಾನಪದ, ಅನುವಾದ, ಯಕ್ಷಗಾನ, ನೃತ್ಯರೂಪಕ, ಸ್ವತಂತ್ರ ಗಾದೆಗಳು, ವಿನೋದ ಕೋಶ, ಶಬ್ದಕೋಶ, ಕಾದಂಬರಿ ಇತ್ಯಾದಿ ವಿವಿಧ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ.

ಪ್ರಶಸ್ತಿಗಳು: ಜಿಲ್ಲಾ ಗಣರಾಜೋತ್ಸವ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಕರ್ಕಿ ಪ್ರಶಸ್ತಿ, ಅಳ್ವಾಸ್ ನುಡಿಸಿರಿ ಪ್ರಶಸ್ತಿ, ಪಾರ್ತಿಸುಬ್ಬ, ವಿಶುಕುಮಾರ್ ಇತ್ಯಾದಿ.

ಪುಸ್ತುಕ ಪುರಸ್ಕಾರ: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ( ಯಕ್ಷಗಾನ ಕೃತಿ ಸಂಪುಟ), ಆರ್ಯಭಟ (ಅಪಾರ್ಥಿನಿ) ಮತ್ತು ಕೇಂದ್ರ ವಿದ್ಯಾ ಇಲಾಖೆ (ತುಳು ಪಾಡ್ದನ ಕಥೆಗಳು)
ಸನ್ಮಾನ: ಬಹರೈನ್ ಕನ್ನಡ ಸಂಘ, ದುಬೈ ತುಳುಕೂಟ ಇತ್ಯಾದಿ.

ಕೆಲವು ಗಮನೀಯ ಪುಸ್ತಕಗಳು: ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನ ಸಂಪುಟ, ತುಳು ನಾಟಕ ಸಂಪುಟ, ಮೋಯ ಮಲೆಯಾಳ ಕನ್ನಡ ಕೋಶ, ಯಕ್ಷಾಂದೋಳ, ತುಳು ಜಾನಪದ ಕೆಲವು ನೋಟಗಳು ಇತ್ಯಾದಿ.

ಕುದ್ಕಾಡಿ ವಿಶ್ವನಾಥ ರೈ

೧೯೩೨ ಮೇ ೧೦ ರಂದು ಜನಿಸಿದ ಇವರು ಪ್ರೌಡಶಿಕ್ಷಣವನ್ನು ಕಾಸರಗೋಡಿನ ಮೈಪಾಡಿಯಲ್ಲಿ ಪೂರ್ಣಗೊಳಿಸಿದರು, ಬಿ.ಎ ಮತ್ತು ಎಂ. ಎ ಪದವಿಯನ್ನು ದಾರವಾಡ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿ ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ ಬಿ.ಎಡ್ ಪದವಿಯನ್ನು ಪಡೆದರು.

ಸಂತಫಿಲೋಮಿನಾ ಶಾಲೆಯಲ್ಲಿ ಅಧ್ಯಾಪಕರಾಗಿ ೩೫ ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ, ಕಲೆ, ಸಂಗೀತ, ಸಾಹಿತ್ಯ, ನೃತ್ಯ ಮೊದಾಲಾದ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಪುಸ್ತಕ ಬಹುಮಾನ : ಕನ್ನಡ ರಂಗಭೂಮಿ, ಅಬ್ಬಕಬ್ಬೆ, ಸಂಕ್ರಾತಿ, ಲಂಕ ದರ್ಶನ ಇತ್ಯಾದಿ.

ಪ್ರಶಸ್ತಿಗಳು: ಕರ್ನಾಟಕ ಸರ್ಕಾರದ ‘ಕರ್ನಾಟಕ ಕಲಾಶ್ರೀ’ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಗೌರವ ಪ್ರಶಸ್ತಿ’ ಮೊದಲಾದವು.

ಡಾ. ವೆಂಕಟರಾಜ ಪುಣಿಂಚಿತ್ತಾಯ

೧೯೩೬ ಅಕ್ಷೆಬರ್ ೧೦ ರಂದು ಕಾಸರಗೋಡಿನಲ್ಲಿ ಜನಿಸಿದ ಇವರು ಮೈಸೂರು ವಿಶ್ವವಿದ್ಯಾಲಯ ದಲ್ಲಿ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದರು.

ಕೃತಿಗಳು: ಸುಭಾಷಿತ ಲಹರಿ, ಸುಬ್ರಮಣ್ಯ ಸುಪ್ರಭಾತ, ಶೈಲೂಷಿ, ತುಳು ನಡೆನುಡಿ, ಜಡಿಮಳೆಯ ಮರುದಿನ, ಪಾಂಚಾಲಿ ಮುಂತಾದವು.

ಪ್ರಾಚೀನ ತುಳು ಗ್ರಂಥಗಳು: ಶ್ರೀ ಭಾಗವತೋ, ಕಾವೇರಿ, ದೇವಿ ಮಹಾತ್ಮೆ ಮುಂತಾದವು (ತುಳು ಸಾಹಿತ್ಯ ಸಂಶೋಧನೆ ತುಳುವುನಲ್ಲಿ ಶಿಷ್ಷ ಸಾಹಿತ್ಯ ಪರಂಪರೆಯೆ ಇದ್ದಿರಲಿಲ್ಲ ಎಂಬ ವಾದವನ್ನು ಅಲ್ಲಗಳೆದು ನಾಲ್ಕು ಅತೀ ಪ್ರಾಚೀನ ತಾಡೆವಾಲೆ ಗ್ರಂಥಗಳನ್ನು ಪತೆ ಹಚ್ಚಿ ಅವುಗಳನ್ನು ಕನ್ನಡಕ್ಕೆ ಲಿಪ್ಯಂತರಗೊಳಿಸಿ ವಿಸ್ತಾರವಾದ ಪೀಠಿಕೆ, ಅಡಿಟಿಪ್ಪಣಿ, ಅರ್ಥಕೋಶದೊಂದಿಗೆ ಸಂಪಾದಿಸುವ ಮೂಲಕ ತುಳು ಭಾಷೆಗೆ ಭಾರತದ ಇತರ ೨೦ ಭಾಷೆಗಳ ಸಾಲಿನಲ್ಲಿ ಸಮಾನ ಸ್ಥಾನವನ್ನು ಒದಗಿಸಿಕೊಟ್ಟ ಸಾಧನೆ)

ದ್ವನಿಸುರುಳಿಗಳಿಗೆ ಸಾಹಿತ್ಯ.

ಅರ್ಚನೆ, ದೇವಿದರ್ಶನ, ಕಾವೇರಿ ಗೀತಾರ್ಚನೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿದೇವಿ, ಅರ್ಪಣ, ವೃಂದಾವನ, ತುಳುವ ಮಲ್ಲಿಗೆ ಇತ್ಯಾದಿ

ಸಂಪಾದಿತ: ಸಂಕ್ಷೇಪ ರಾಮಾಯಣ (ತಾಡಮಾಲೆಯೊಂದರಲ್ಲಿ ಬರೆದಿದ್ದ ಗದುಗಿನ ವೀರನಾರಾಯಣ ಸ್ವಾಮಿ ಅಂಕಿತವಿರುವ ಭಾಮಿನಿ ಷಡ್ಪಡಿಯಲ್ಲಿ ರಚಿಸಲಾದ ಕಿರು ರಾಮಾಯಣ ಕೃತಿ).

ಸಂಸ್ಕೃತ ಯಕ್ಷಗಾನ ಪ್ರಸಂಗ: ವಾತಾಪಿ ಇಲ್ವಲ ವಧಂ, ಶ್ರೀ ಕೃಷ್ಣ ಜನನಂ, ಕೃಷ್ಣ ಮೇಘಮಾಲೇ ವರ್ಷಯ ಇತ್ಯಾದಿ.

ಕನ್ಯೆಕಾ, ಇದು ಭೂಮಿ, ಅವನು ಮರಳಿ ಬರುತ್ತಾನೆ ಎಂಬ ಮೂರು ಮಲಯಾಳ ನಾಟಕಗಳ ಕನ್ನಡಾನುವಾದವನ್ನು ನ್ಯಾಶನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಪ್ರಕಟನೆಗೆ ಆಯ್ಕೆ ಮಾಡಿದೆ.

ಅಭಿನಂದನ ಗ್ರಂಥ: ಸುಗಂಧ ೧೯೯೭, ಚಂದ್ರಗಿರಿಯ ರಾಜಹಂಸ, ಅಕ್ಷರ

ಸಂಸ್ಕೃತ ರೂಪಕಗಳು: ಜಯ ಜಯ ಸಂಸ್ಕೃತ ಜನನಿ, ಪರ್ಜನ್ಯಾಯ ಪ್ರಗಾಯತ, ನಾಟ್ಯಮೆತನ್ಮಯಾಕೃತಂ ಇತ್ಯಾದಿ.

ಸನ್ಮಾನ್ಮಗಳು: ಶೃಂಗೇರಿ ಮಠದಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ಸನ್ಮಾನ, ಬಹರೈನ್ನಲ್ಲಿ ಜರಗಿದ ಕರ್ನಾಟಕೋತ್ಸವದಲ್ಲಿ ಸನ್ಮಾನ, ತುಳು ರತ್ನೋ ಬಿರುದು ಕಾಸರಗೋಡು ಜಿಲ್ಲಾ ತುಳು ಜಾನಪದ ಜಾತ್ರೆ ಇತ್ಯಾದಿ.

ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಬದುಕು ಬರಹದ ವಿಷಯದಲ್ಲಿ ಶ್ರೀಮತಿ ವಾಣಿ ಪಿ ಎಸ್ ಇವರು ಪ್ರೌಢ ಪ್ರಬಂಧ ಬರೆದು ಕಣ್ಣೂರು ವಿಶ್ವ ವಿದ್ಯಾನಿಲಯದಿಂದ ಎಂ. ಫಿಲ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಭಕ್ತಿಗೀತೆಗಳು: ಪಡುಬಿದ್ರೆ ಮಹಾಲಿಂಗೇಶ್ವರ, ಮಹಾಗಣಪತಿ, ಸೌತಡ್ಕ ಗಣಪತಿ ಸುಪ್ರಭಾತ, ಬಿಲ್ವಪ್ರಿಯ, ಶ್ರೀ ಕೃಷ್ಣದರ್ಶನ, ಧರ್ಮಸ್ಥಳ ವೈಭವ, ತುಳುನಾಡ ವೈಭವ, ನಮೋ ಲೋಕಮಾತೆ, ಮದಿಮೆ ಸೋಬಾನೆ ಇತ್ಯಾದಿ.

ಪ್ರಶಸ್ತಿಗಳು: ಭಾರತದ ರಾಷ್ಟ್ರಪತಿ ಆರ್. ವೆಂಕಟರಮನ್ ಅವರಿಂದ ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ,ಕಯ್ಯಾರ ಕಾವ್ಯ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರದಾನ, ಕಿಲ್ಲೆ ಪ್ರಶಸ್ತಿ ಮುಂತಾದವುಗಳು.

ಬಾಲಕೃಷ್ಣ ಶೆಟ್ಟಿ ಪೊಳಲಿ

೧೯೪೧ ಜೂನ್ ೨೮ ರಲ್ಲಿ ಜನಿಸಿದರು. ಎಲ್. ಎಲ್. ಬಿ ಪದವಿಧರರು, ಇವರು ಸಿ.ಎ.ಐ.ಐ.ಬಿ ಬ್ಯಾಂಕಿಂಗ್ ಡಿಪ್ಲೋಮಾ ಭಾರತದಲ್ಲಿ ೪ನೇ ರ್ಯಾಂಕ್ ಪಡೆದವರು, ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕನ್ನಡದಲ್ಲಿ ಎಮ್. ಎ. ಪದವಿಯಲ್ಲಿ ೭ನೇ ರ್ಯಾಂಕ್ಗಳಿಸಿದ್ದಾರೆ. ಇವರಿಗೆ ಸಾಹಿತ್ಯದಲ್ಲಿ ಪ್ರೋತ್ಸಾಹ ನೀಡಿದವರು ದಿ. ಪೊಳಲಿ ಎನ್. ಎ. ಶೀನಪ್ಪ ಹೆಗ್ಡೆ ಹಾಗೂ ತುಳು ಮಹಾಕವಿ ಮಂದಾರ ಕೇಶವ ಭಟ್ರ್ .

೧೯೬೭ನೇ ಇಸವಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಸಾಂಗ್ಲಿ ಶಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ನಂತರ ಬ್ರಾಂಚ್ ಮೆನೇಜರ್, ಕೃಷಿ ಯೋಜನಾಧಿಕಾರಿ, ಸಿಬ್ಬಂದಿ ತರಬೇತಿ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಮಾರ್ಗದರ್ಶಿ ಬ್ಯಾಂಕ್ ಪ್ರಬಂದಕರಾಗಿ ಹೀಗೆ ೩೧ ವರ್ಷ ದುಡಿದರು.

ಇವರ ಕೃತಿಗಳು: ಪೆಂಗದೂಮನ ಕಬಿತೆ, ಶೀನಪ್ಪ ಹೆಗ್ಗಡೆಯವರ ಜೀವನ ಪರಿಚಯ, ಪೊಳಲಿ ನುಡಿಮಾಲೆ, ತುಳು ಕೋಡೆ-ಇನಿ-ಎಲ್ಲೆ ಇತ್ಯಾದಿ.

ಪುಸ್ತಕಗಳು: ಸೇಡಿಯಾಪು ಕೃಷ್ಣ ಭಟ್ರ ತಥ್ಯ ದರ್ಶನ, ಬೇಟೆಯ ನೆನಪುಗಳು, ನವನೀತ ಇತ್ಯಾದಿ. ಅಲ್ಲದೆ ಇವರು ‘ಫೊಕ್ ಟೆಲ್ಸ್ ಆಫ್ ತುಳುನಾಡ್’ ಎಂಬ ಕೋಟಿ ಚೆನ್ನಯ ಇದನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ. ಇದು ಸಾಗುಣ ಡೈಜೆಸ್ಟ್ ಎಂಬ ಇಂಗ್ಲೀಷ್ ಪತ್ರಿಕೆಯಲ್ಲಿ ಒಂದು ಧಾರವಾಹಿಯಾಗಿ ಪ್ರಕಟ ಆಗಿದೆ.

ಡಾ. ವಾಮನ ನಂದಾವರ

೧೯೯೪ ಡಿಸೆಂಬರ್ ೧೧ರಂದು ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಜನಿಸಿದರು. ಇವರು ಎಂ.ಎ.ಪಿ.ಎಚ್.ಡಿ. ಪದವೀಧರರು. ಧಾರವಾಡ, ಅಣ್ಣಾಮಲೈ, ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಇವರಿಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ.

೧೯೭೩ರಲ್ಲಿ ಅಧ್ಯಾಪನ ಹುದ್ದೆಗೆ ಸೇರಿ, ಸತತ ೩೪ ವರ್ಷಗಳ ಸೇವೆ ಸಲ್ಲಿಸಿದರು. ಸಹಾಯಕ ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಪಿಲಿಕುಲ ನಿಸರ್ಗಧಾಮ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೫ ರಿಂದ ೫ ವರ್ಷಗಳ ಕಾಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿ, ೨೦೦೧ರಲ್ಲಿ ತುಳು ಅಕಾಡೆಮಿಯ ೪ನೇ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಅಕಾಡೆಮಿಯಲ್ಲಿ ಅನೇಕ ಕೆಲಸ ಕಾರ್ಯಗಳನ್ನು ನಡೆಸಿದರು. ಇವರು ಒರ್ವ ಕವಿ, ಸಾಹಿತಿ, ಜಾನಪದ ವಿದ್ವಾಂಸ, ಚಿಂತಕರು, ಸಂಘಟಕರು ಆಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಹೇಮಾಂಶು ಪ್ರಕಾಶನ ಎನ್ನುವ ಪ್ರಕಾಶನ ಎನ್ನುವ ಪ್ರಕಾಶನವನ್ನು ಹೊಂದಿದ್ದು, ಅನೇಕ ತುಳು- ಕನ್ನಡ ಬರಹಗಾರರಿಗೆ ಪ್ರೊತ್ಸಾಹ ನೀಡಿ, ಪುಸ್ತಕಗಳನ್ನು ತಮ್ಮ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಅಲ್ಲದೆ ತುಳು ನಿಘಂಟು ಯೋಜನೆಯಡಿ ಸಹಾಯಕ ವಿದ್ವಾಂಸರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಮ್ಮಟಗಳಲ್ಲಿ, ವಿಚಾರಸಂಕಿರಗಳಲ್ಲಿ ಭಾಗವಹಿಸಿ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಇವರ ಕೃತಿಗಳು : ತುಳುವೆರೆ ಕುಸಾಲ್ ಕುಸಲ್, ಕೋಟಿ ಚೆನ್ನಯೆರ್, ಸಿಂಗದನ, ತುಳುಟು ಪನಿಕತೆ, ಬೀರ, ಕಲಾವಿದರೆ ಕೈಪಿಡಿ, ಒಂಜಿ ಕೋಪೆ ಕತೆಕುಲು, ತುಳುನಾಡ ಜನಾಂಗೊಲೆ ಅಧ್ಯಯನ, ಜೋಕುಲೆ ಸಂಚಿ (ಸಂ.) … ಇತ್ಯಾದಿ.

ಪುಸ್ತಕಗಳು : ತಾಳಮೇಳ, ಓಲೆಪಟಾಕಿ, ಸಿಂಗದನ, ಪಟ್ಟಾಂಗ, ಸರ್ ಜೇಮ್ಸ್ ಫ್ರೇಜರ್, ಕಿಡಿಗೇಡಿಯ ಕೀಟಲೆ, ಕೋಟಿ ಚೆನ್ನಯ, ಕೋಟಿಚೆನ್ನಯ ಜಾನಪದೀಯ ಅಧ್ಯಯನ, ಜನಪದ ಸಂಸ್ಕೃತಿ ರೂಪಿಸುವ ಬದಕು-ಕೆಲವು ಚಿಂತನೆಗಳು, ಎಂಕು ಪಣಂಬೂರಿಗೆ ಹೋದ ಹಾಗೆ, ಕೆ.ಬಿ.ಭಂಡಾರಿ… ಇತ್ಯಾದಿ. ಇದರೊಂದಿಗೆ ಅನೇಕ ಸಂಪಾದಿತ ಕೃತಿಗಳನ್ನೂ ಹೊರತಂದಿದ್ದಾರೆ.

ಇವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಅನೇಕ ಸಂಘಟನೆಗಳಿಂದ ಪ್ರಶಸ್ತಿ, ಫೆಲೋಶಿಪ್, ಸನ್ಮಾನಗಳನ್ನೂ ಪಡೆದಿದ್ದು, ೨೦೦೬ರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನೂ ಪಡೆದಿದ್ದಾರೆ.