2008-2011

ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ (ಅಧ್ಯಕ್ಷರು)

ಯದುಪತಿ ಗೌಡ (ಸದಸ್ಯರು )

ಭಾಸ್ಕರ್ ರೈ ಕುಕ್ಕುವಳ್ಳಿ (ಸದಸ್ಯರು )

ಶಿಮಂತೂರು ಚಂದ್ರಹಾಸ ಸುವರ್ಣ (ಸದಸ್ಯರು )

ದಯಾನಂದ ಜಿ. ಕತ್ತಲ್ಸಾರ್ (ಸದಸ್ಯರು )

ಡಾ| ಕೆ. ಪದ್ಮನಾಭ ಕೇಕುಣ್ಣಾಯ (ಸದಸ್ಯರು )

ಶ್ರೀಮತಿ ಟಿ. ಪ್ರೇಮಲತಾ ರಾವ್ (ಸದಸ್ಯರು )

ಡಾ. ದುಗ್ಗಪ್ಪ ಕಜೆಕಾರ್ (ಸದಸ್ಯರು )

ಶ್ರೀಮತಿ ರತ್ನಾವತಿ ಜೆ. ಬೈಕಾಡಿ (ಸದಸ್ಯರು )

ಸರಪಾಡಿ ಅಶೋಕ ಶೆಟ್ಟಿ (ಸದಸ್ಯರು )

ಶ್ರೀ ಉದಯ ಕುಮಾರ್ ಧರ್ಮಸ್ಥಳ (ಸದಸ್ಯರು )

ಶ್ರೀ ಯೋಗೀಶ್ ಕಾಂಚನ್ (ಸದಸ್ಯರು )

ವಿಲಾಸ್ ಕುಮಾರ್ ನಿಟ್ಟೆ (ಸದಸ್ಯರು )

 

 

 

ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್

1945 ಸಪ್ಟೆಂಬರ್ 9 ರಂದು ಜನಿಸಿದರು. ಪ್ರಾಥವಿಕ ಹಾಗೂ ಪ್ರೌಡ ಶಿಕ್ಷಣವನ್ನು ಪುತ್ತೂರಿನಲ್ಲಿ ಪಡೆದ ಇವರು ಕನ್ನಡಲ್ಲಿ ಎಂ.ಎ, ಬಿ. ಇಡಿ, ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. 1963 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಮುಂದೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಬಡ್ತಿ ಹೊಂದಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು.

ತುಳುವಿನಲ್ಲಿ ಕೃತಿಗಳು: ಪಚ್ಚೆ ಕುರಲ್, ದುನಿಪು, ಭೂತಾಳ ಪಾಂಡ್ಯ, ಡಾ. ಶಿವರಾಮ ಕಾರಂತೆರ್, ತುಳು ಸಂಸ್ಕೃತಿದ ಪೊಲಬು, ತುಳು ನಾಡ್ಡ ನಾಗಬೆರ್ಮೆರ್ ಮುಂತಾದವು

ತುಳು ಸಂಸ್ಕೃತಿಯ ಬಗ್ಗೆ ಗ್ರಂಥಗಳು: ತುಳುವರ ಜನಪದ ಕಥೆಗಳು, ಜಾನಪದ ಸ್ಪಂದನ, ಜಾನಪದ ಕುಣಿತ, ಕಲ್ಕುಡ ಕಲ್ಲುರ್ಟಿ ಇತ್ಯಾದಿ

ಇತರ ಕೃತಿಗಳು: ಬಂಗ್ಲಾ ವಿಜಯ (ಯಕ್ಷಗಾನ), ಕಿರಣ, ಅಂತರ್ಭೂತ, ನಮ್ಮ ಸರಕಾರ, ಕಾವ್ಯ ರಶ್ಮಿ ಇತ್ಯಾದಿ.

ದ್ವನಿಸುರುಳಿಗಳಿಗೆ ಸಾಹಿತ್ಯ: ತುಳುವ ಸಿರಿ, ತುಳುವ ಮಲ್ಲಿಗೆ, ಅತರ್ಿದ ಪೂ, ಮುಂತಾದವು.

ಪ್ರಶಸ್ತಿಗಳು: ತುಳು ಡೈಯಾಲೆಕ್ಟ್ಸ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಿಮಿಯಿಂದ 1995ರ ಸಾಲಿನ ಪುಸ್ತಕ ಪ್ರಶಸ್ತಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2005, ಮುಂಬಯಿಯಲ್ಲಿ ನಡೆದ 10ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ – 2001, ಕರ್ನಾಟಕ ಸರಕಾರದಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ – 1993 ಇತ್ಯಾದಿ.

ತುಳು ಭಾಷಾಧ್ಯಯನ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ 1995ರಲ್ಲಿ ತುಳುಕೂಟ ಉಡುಪಿ ಇದರ ದಶಮಾನೋತ್ಸವ ಗೌರವಸಂಮಾನ.

ಇವರು ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯದುಪತಿ ಗೌಡ

1963 ಜುಲೈ 20 ರಂದು ಬೆಳ್ತಂಡಿಯ ಪುದುವೆಟ್ಟು ಗ್ರಾಮದಲ್ಲಿ ಜನಿಸಿದ ಇವರು ಮಂಗಳೂರು ವಿ. ವಿ ಯಲ್ಲಿ ಕನ್ನಡದಲ್ಲಿ ಎಂ. ಎ ಪದವಿಯನ್ನು, ಎಂ.ಫಿಲ್ ಪದವಿಗಳನ್ನು ಗಳಿಸಿದ್ದಾರೆ. ಇವರು ಆನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಳುವಿನ ಆಟ ತಿಂಗಳ ‘ರಾಶಿ’ ತುಳು ಜಾನಸದ ಪತ್ರಿಕೆ, ತುಳುವರ ಆಟಿ ಕಳೆಂಜ ಮುಂತಾದ ಲೇಖನಗಳು ಪ್ರಕಟಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಆನೇಕ ಕಡೆಗಳಲ್ಲಿ ತಮ್ಮ ಪ್ರಬಂಧಗಳನ್ನು ವಿಚಾರಗೋಷ್ಠಿಗಳಲ್ಲಿ ಮಂಡಿಸಿದ್ದಾರೆ.

ಪ್ರಕಟಿತ ಗ್ರಂಥಗಳು: ಮಲೆ ಕುಡಿಯರು, ಮಾಯೊದ ಪೊಣ್ಣು, ಭೂತಾರಾಧನೆಯ ಬಣ್ಣಗಾರಿಕೆ, ಪುಟ್ಟು ಬಳಕೆಯ ಪಾಡ್ದನಗಳು, ಸ್ವರ್ಣ ಪುಷ್ಪ, ತುಳುನಾಡ್ದ ನಲಿಕೆಲು ಇತ್ಯಾದಿ.

ಪ್ರಕಟಿತ ಸಂಶೋಧನ ಲೇಖನಗಳು: ಕನ್ನಡ ಸಾಹಿತ್ಯ ಚರಿತ್ರೆಯ ಬರವಣಿಗೆಯ ಹಿನ್ನೆಲೆ, ಜಾನಪದದಲ್ಲಿ ವೀಳ್ಯ, ತುಳುವಿನ ಆಟಿ ತಿಂಗಳು ‘ರಾಶಿ’ ತುಳು ಜಾನಪದ ಪತ್ರಿಕೆ ಸಂಪುಟ, ಜಾನಪದೊಟ್ಟು ವೀಳ್ಯೆ (ತುಳು), ತುಳುವರ ಆಟಿ ಕಳೆಂಜ ಇತ್ಯಾದಿ.

ಆಕಾಶವಾಣಿಯಲ್ಲಿ ಪ್ರಸಾರ ಭಾಷಣ: ನಾನು ಓದಿದ ಪುಸ್ತಕ ಮಾಲೆಯಲ್ಲಿ – ಕಾಡ್ಯನಾಟ – ಪಠ್ಯ ಮತ್ತು ಪ್ರದರ್ಶನ’ ಕೃತಿ ಸಮೀಕ್ಷೆ, ಜಾನಪದ ಸ್ಪಂದನ, ದೀಪಾವಳಿ ಹಬ್ಬ, ಚಿಂತನ ಸಂಸ್ಕೃತಿ ಇತ್ಯಾದಿ.

ಭಾಸ್ಕರ್ ರೈ ಕುಕ್ಕುವಳ್ಳಿ

1956 ಜೂನ್ 29 ರಂದು ಪೂತ್ತೂರು ತಾಲೂಕಿನ ಇರ್ದೆ ಗ್ರಾಮದ ಕುಕ್ಕುವಳ್ಳಿಯಲ್ಲಿ ಜನಿಸಿದ ಇವರು ಎಂ.ಎ ಹಾಗೂ ಎಂ ಎಡ್ ಪದವಿದರರು ಪ್ರಸ್ತುತ ಮಂಗಳೂರಿನ ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಪ್ರ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳೂರಿನ ‘ನಮ್ಮ ಕುಡ್ಲ’ ತುಳು ವಾರ್ತಾವಾಹಿನಿಯ ನಿರ್ವಾಹಕರಾಗಿ ‘ಸಂಪರ್ಕ’ ಮಾಸ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.

ಕೃತಿಗಳು : ಒಡ್ಡೋಲಗ, ಯಕ್ಷಿಕಾ, ಯಕ್ಷ ಬಂಟರು, ಯಕ್ಷ ಪ್ರಮೀಳಾ ಮುಂತಾದವು

ಪ್ರಸಾರ ನಿರ್ವಹಣೆ: ಬೆಂಗಳೂರು ದೂರದರ್ಶನ ಮತ್ತು ಮಂಗಳೂರು ಆಕಾಶವಾಣಿಗಳಲ್ಲಿ ಭಾಷಣ, ನಾಟಕ, ಪ್ರವಚನ, ರೂಪಕ, ಯಕ್ಷಗಾನ ತಾಳಮದ್ದಲೆ ಮತ್ತು ವಿ4 ಮೀಡಿಯಾದಲ್ಲಿ ನೇರ ಪ್ರಸಾರ ನಿರ್ವಹಣೆ.

ಪ್ರಶಸ್ತಿಗಳು : ಸುವರ್ಣ ಕರ್ನಾಟಕ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ, ಸೌರಭ ಪ್ರಶಸ್ತಿ, ವಿದ್ಯಾರತ್ನ ಬಿರುದು ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿದ್ದಾರೆ.

2010 ರಲ್ಲಿ ‘ನೆಯಿಪೇರ್’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಶಿಮಂತೂರು ಚಂದ್ರಹಾಸ ಸುವರ್ಣ

1955 ಮಾರ್ಚ್ 12 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮೂಲ್ಕಿ ಹೋಬಳಿಯ ಶಿಮಂತೂರು ಗ್ರಾಮದಲ್ಲಿ ಜನಿಸಿದರು. ಬಿ. ಕಾಂ ಪದವಿಯನ್ನು ಪಡೆದರು.

ಕೃತಿಗಳು, ತುಳು ನಾಟಕಗಳು: ಕಲಾಗಾರನ ಕೊಲೆಗಾರೆ ಏರ್, ಉಂದು ವಾ ನ್ಯಾಯ?, ಗಾಲ, ಗೊಡ್ಡು ಏರ್? – (ಅನುವಾದ), ಅಗ್ನಿ ಸಾಕ್ಷಿ, ಚಕ್ರ, ಸಯ್ಯರಾಂಡಲಾ ಬುಡ್ಲೆ.

ತುಳು ಕವಿತಾ ಸಂಕಲನ : ಒರಲ್, ಒಸರ್

ಧಾಮರ್ಿಕ ಕೃತಿ : ಬಪ್ಪನಾಡು ಕ್ಷೇತ್ರ ಮಹಾತ್ಮೆ

ಪ್ರಶಸ್ತಿಗಳು: 1995 ರಲ್ಲಿ ನನ್ನ ಹುಡುಕಿ ಕೊಡಿ ಎಂಬ ಕಥೆಗೆ ಪ್ರಧಮ ಬಹುಮಾನ ಪಡೆದಿದ್ದಾರೆ. ಸಯ್ಯರಾಂಡಲ ಬುಡ್ಲೆ ನಾಟಕಕ್ಕೆ ಅತ್ಯುತ್ತಮ ನಾಟಕ ಪ್ರಶಸ್ತಿ ಗಗ್ಗರ ಕಥೆಗೆ 2005 ರಲ್ಲಿ ಪ್ರಥಮ ಪ್ರಶಸ್ತಿ. ಕಾಂಚನ್ ಕಲ್ಚರಲ್ ಫೌಂಡೇಶನ್, ಬ್ರಹೈನ್ ಇವರಿಂದ ತುಳು ಮತ್ತು ಕನ್ನಡ ಕವಿತೆಗೆ ದ್ವಿತೀಯ ಮತ್ತು ತೃತೀಯ 2010 ರ ಪ್ರಶಸ್ತಿ ಮತ್ತು ಕನ್ನಡ ಸೇವಾ ಸಂಘ ಮುಂಬಯಿ ಇವರಿಂದ ‘ಕನ್ನಡ ಜ್ಯೋತಿ – 2010 ರ ಪ್ರಶಸ್ತಿ.

ದಯಾನಂದ ಜಿ. ಕತ್ತಲ್ಸಾರ್

1975 ಎಪ್ರೀಲ್ 20 ರಂದು ಜನಿಸಿದ ಇವರು ಪದವಿಪೂರ್ವ ಶಿಕ್ಷಣ ಪಡೆದ ಇವರು ಪ್ರಧಾನ ಅಂಚೆ ಕಛೇರಿಯಲ್ಲಿ ಅಂಚೆ ಪೇದೆಯಾಗಿ ಸೇವೆ ಸಲ್ಲಿತ್ತಿದ್ದಾರೆ.

ಕೃತಿಗಳು : ಪಿಂಗಾರ , ನೆಂಪು

ಸೇವಾ ಕ್ಷೇತ್ರ: ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಜನಜಾಗೃತಿ ವೇದಿಕೆ ಜತೆ ಕಾರ್ಯದಶರ್ಿ, ಪಂಬದರ ಅಭ್ಯುದಯ ಯುವಜನ ಸೇವಾಟ್ರಸ್ಟ್ (ರಿ) ಪಡೆಪೆರಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪುರಸ್ಕಾರಗಳು: ಶ್ರೀ ಬ್ರಹ್ಮದೇವ ಸ್ವಸಹಾಯ ಸಂಘ ಗೋಳಿ ಪಲ್ಕೆ ಇವರಿಂದ ಸನ್ಮಾನ, ಸೆವೆನ್ ಸ್ಟಾರ್ ತರುಣ ವೃಂದ (ರಿ) ಶಕ್ತಿನಗರ ಇವರಿಂದ ‘ಸಂಜಯ ನಗರ ಸಂಜಯ ಪುರಸ್ಕಾರ ಮುಂತಾದವು.

ಡಾ| ಕೆ. ಪದ್ಮನಾಭ ಕೇಕುಣ್ಣಾಯ

1957 ಮೇ 2 ರಂದು ಕಾಸರಗೋಡು ತಾಲೂಕಿನ ಕಡುಮನಡ್ಕ, ಅಡೂರು ಗ್ರಾಮದಲ್ಲಿ ಜನಿಸಿದರು. ಕೇರಳದ ಅಡೂರಿನ ಗವರ್ನಮೆಂಟ್ನಲ್ಲಿ ಪ್ರೌಡಶಿಕ್ಷಣವನ್ನು ಪಡೆದರು. ಸಂತ ಫಿಲೋಮಿನಾ ಕಾಲೇಜ್ ಬಿ.ಎ ಪದವಿಯನ್ನು ಪಡೆದರು. ಮದರಾಸು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪದವಿಯನ್ನು ಪಡೆದು ಭಾಷಾ ವಿಜ್ಞಾನದಲ್ಲಿ ಪಿ.ಎಚ್.ಡಿಯನ್ನು ಪಡೆದರು. ಇವರು ತುಳು,ಕನ್ನಡ, ಸಂಸ್ಕೃತ, ಇಂಗ್ಲೀಷ್, ಹಿಂದಿ, ಕೊಂಕಣಿ ಭಾಷೆಗಳಲ್ಲಿ ವಿವಿಧ ಪುಸ್ತಕಗಳ ಅಕ್ಷರ ಸಂಯೋಜನ ಕಾರ್ಯವನ್ನು ಪೂರ್ಣಾವಧಿಕೆ ಪರಿವರ್ತಿಸಿ ಪ್ರಧಾನ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಆನೇಕ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಮತ್ತು ಕಮ್ಮಟಗಳಲ್ಲಿ ಬಾಗಹವಹಿಸಿದ್ದಾರೆ.

ಪ್ರಬಂಧ ಮಂಡನೆ: ಕೇರಳ ವಿಶ್ವವಿದ್ಯಾನಿಲಯ ಏರ್ಪಡಿಸಿದ ಭಾಷಾಶಾಸ್ತ್ರ, ನಿಘಂಟು ಶಾಸ್ತ್ರ ಸಮ್ಮೇಳನಗಳಲ್ಲಿ ಸ್ಥಳನಾಮಾಧ್ಯಯನ ಸಂಸ್ಥೆಯ ವಿಚಾರಗೋಷ್ಠಿ, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಇತರ ಅನೇಕ ಕಮ್ಮಟ, ವಿಚಾರಗೋಷ್ಠಿ ಸಭೆ ಸಮಾರಂಭಗಳಲ್ಲಿ ಪ್ರಬಂಧ ಮಂಡನೆ ಹಾಗೂ ಭಾಷಣಗಳು.

ಪುಸ್ತಕಗಳು: A Comparative Study of TULU DIALECTS (ಸಂಶೋಧನಾ ಗ್ರಂಥ, ರೆವರೆಂಡ್ ಅಗಸ್ಟ್ ಮೇನರ್ (ವ್ಯಕ್ತಿ ಪರಿಚಯ – ತುಳುವಿನಲ್ಲಿ),

ಪ್ರಕಟನೆಯಲ್ಲಿ: ತುಳು ಭಾಷಾ ಪ್ರಬೇಧಗಳು, ಕಾವೇರಿ (ತುಳುವಿನಲ್ಲಿ ಪರಿಚಯಾತ್ಮಕ ಕೃತಿ)

ಪ್ರಶಸ್ತಿಗಳು: Tulu Dialects ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ 1995ರ ಸಾಲಿನ ಪುಸ್ತಕ ಪ್ರಶಸ್ತಿ, ತುಳು ಭಾಷಾಧ್ಯಯನ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ 1995ರಲ್ಲಿ ತುಳು ಕೂಟ ಉಡುಪಿ ಇದರ ದಶಮಾನೋತ್ಸವ ಗೌರವಸಂಮಾನ,

ವಿಶೇಷ ಗೌರವ: 74ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ – 2007 ಇದರ ಮುಖ್ಯ ಕೇಂದ್ರ ಕಚೇರಿ ಸಮಿತಿಯ ಸಂಚಾಲಕ.

ಶ್ರೀಮತಿ ಟಿ. ಪ್ರೇಮಲತಾ ರಾವ್

1948 ಮಾರ್ಚ 5 ರಂದು ಪೂತ್ತೂರಿನಲ್ಲಿ ಜನಿಸಿದರು. ವಿವೇಕಾನಂದ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು. 1987ರಲ್ಲಿ ಲಯನ್ಸ್ ಸಂಸ್ಥಯಲ್ಲಿ ಸೇರ್ಪಡೆಗೊಂಡು ಎರಡು ಬಾರಿ ಅಧ್ಯಕ್ಷೆಯಾಗಿ, ಕಾರ್ಯನಿರ್ವಹಿಸಿದ್ದಾರೆ. 23ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಡೆಲ್ಲಿ ಇಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೇಯನ್ನು ಪರಿಗಣಿಸಿ 2006ರಂದು ಇವರಿಗೆ ನ್ಯಾಯಮೂರ್ತಿ ಶಿನರಾಜ್ ಪಾಟೀಲ್ ಸನ್ಮಾನ ಮಾಡಿದರು.

ತುಳು ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ. ಈಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ. ದುಗ್ಗಪ್ಪ ಕಜೆಕಾರ್

1969 ಅಗೋಸ್ಟ್ 2 ರಂದು ಮಡಂತ್ಯಾರಿನ ಕಜೆಕಾರ್ ನಲ್ಲಿ ಜನಿಸಿದ ಇವರು ಮಂಗಳೂರು ವಿ. ವಿ ಯಲ್ಲಿ ಸಮಾಜಶಾಸ್ತ್ರ ಎಂ. ಎ ಪದವಿಯನ್ನು , ಎಂ.ಫಿಲ್ , ಪಿ.ಹೆಚ್.ಡಿ ಪದವಿಗಳನ್ನು ಗಳಿಸಿದ್ದಾರೆ.

ಡಾ. ದುಗ್ಗಪ್ಪ ಕಜೆಕಾರ್ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಪ್ರಕಟಿತ ಕೃತಿ: 2008 ರಲ್ಲಿ ‘ರಿಸರ್ಚ್ ಮೆತೋಡೋಲಾಜಿ’ ಮಂಗಳೂರು ವಿ. ವಿ ಅಂತಿಮ ಬಿ. ಎ. ತರಗತಿಗೆ ಕೈಪಿಡಿಯ ಪ್ರಕಟಣೆ.

ಪ್ರಕಟಿತ ಲೇಖನಗಳು: ‘ಕುಂಬಾರಿಕೆ ದಕ್ಷಿಣ ಕನ್ನಡದ ವ್ಯಾಪ್ತಿಯಲ್ಲಿ’ ಕನ್ನಡ ಪುಸ್ತಕ ಪ್ರಾಧಿಕಾರದ ಗ್ರಾಮ ಸಂಸ್ಕೃತಿ ಮಾಲೆಯಲ್ಲಿ ಪ್ರಕಟಗೊಂಡಿದೆ. ‘ಒಕ್ಯುಪೇಶನಲ್ ಮೊಬಿಲಿಟಿ ಎಮಂಗ್ ಕುಲಾಲ್ಸ್, ಮೀಸಲಾತಿ ಮತ್ತು ಕುಲಾಲರು ಇವುಗಳು ಪ್ರಕಟಗೊಂಡಿದೆ.

ಪ್ರಬಂಧ ಮಂಡನೆಗಳು: ಕರ್ನಾಟಕ ರಾಜ್ಯ ಮಟ್ಟದ ಸಮಾಜಶಾಸ್ತ್ರ ಸಮ್ಮೇಳನ, ಹಾಸನ, ರಾಷ್ಟ್ರ ಮಟ್ಟದ ಸಮಾಜಶಾಸ್ತ್ರ ವಿಚಾರ ಸಂಕಿರಣ ಮಂಗಳೂರು ಇಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಸಂಪಾದಕತ್ವ: ತುಳು ಅಕಾಡೆಮಿಯ ತ್ರೈಮಾಸಿಕ ಮದಿಪು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ 4 ಸಂಚಿಕೆಗಳ ಪ್ರಕಟಣೆ. ಕೊಂಕಣಿ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ “ಕೊಂಕಣಿ ಸಿರಿಸಂಪದ’ದ ವ್ಯವಸ್ಥಾಪಕ ಸಂಪಾದಕರಾಗಿ ಸಂಚಿಕೆಗಳ ಪ್ರಕಟಣೆ.

ಶ್ರೀಮತಿ ರತ್ನಾವತಿ ಜೆ. ಬೈಕಾಡಿ

1956 ಜೂನ್ 1 ರಲ್ಲಿ ಉಡುಪಿ ಸಮೀಪದ ಕುಂಜೆಬೆಟ್ಟಿನಲ್ಲಿ ಜನಿಸಿದರು. ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕಡಿಯಾಳಿ ಹಿ. ಪ್ರಾ ಶಾಲೆ ಉಡುಪಿ ಹಾಗೂ ಪ್ರೌಢ ಶಿಕ್ಷಣವನ್ನು ಕಮಲಾ ಬಾ ಹೆಸ್ಕೂಲ್ ಕಡಿಯಾಳಿ ಇಲ್ಲಿ ಮುಗಿಸಿದರು. ನಂತರ ಉಡುಪಿಯ ಎಂ.ಜಿ. ಎಂ. ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು, ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದರು. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎಯನ್ನೂ ಕೂಡ ಪಡೆದಿದ್ದಾರೆ. ಪ್ರಸ್ತುತ ರತ್ನಾವತಿಯವರು ಬೆಸೆಂಟ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದೆ ಸಂಗೀತ ರಂಗಕ್ಕೆ ಪ್ರವೇಶಿಸಿದ ಇವರು ಹೆಸರಾಂತ ಶಿಕ್ಷಕ ದಿ.ಎನ್.ಕೆ. ಸುಂದರಾಚಾರ್ಯ ಇವರಿಂದ ಕರ್ನಾಟಕ ಸಂಗೀತ ಆರಂಭಿಸಿದರು. ಭಾವಗಾನ, ಜಾನಪದ ಹಾಡು ಹಾಡುವುದರಲ್ಲಿ ವಿ.ವಿ ಮಟ್ಟದ ಸ್ಪರ್ಧೆ ಗಳಲ್ಲಿ ಹತ್ತು – ಹಲವಾರು ಬಹುಮಾನ ಪಡೆದಿದ್ದಾರೆ.

ಶ್ರೀಮತಿ ರತ್ನಾವತಿಯವರು ನಾಟಕ ಹಾಗೂ ಧಾರವಾಹಿಗಳಲ್ಲಿಯೂ ಕೂಡ ಪಾತ್ರ ನಿರ್ವಹಿಸಿರುತ್ತಾರೆ. ಗೋಂದೊಳು ನಾಟಕಕ್ಕೆ ದೇಬೆ ಪಾತ್ರಕ್ಕೆ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಶ್ರೀಮತಿ ರತ್ನಾವರಿ ಜೆ. ಬೈಕಾಡಿ ಅವರು ಸಾಂಸ್ಕೃತಿಕ ಕ್ಷೇತೆಕ್ಕೆ ಸಲ್ಲಿಸಿದ ಸೇವೆಗಾಗಿ ಸನ್ಮಾನಗಳನ್ನೂ ಪಡೆದಿರುತ್ತಾರೆ. 2004ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಲ್ಲಿನ ಲಯನ್ಸ್ ಕ್ಲಬ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯವರು ಜಂಟಿಯಾಗಿ ಸನ್ಮಾನಿಸಿದ್ದಾರೆ. 2005ರಲ್ಲಿ ಪುತ್ತೂರಿನಲ್ಲಿ ನಡೆದ ಬೃಹತ್ ವಿಶ್ವಕರ್ಮ ಸಮ್ಮೇಳನದಲ್ಲಿ ಇವರು ಸಲ್ಲಿಸಿದ ಸಮಾಜ ಸೇವೆಗಾಗಿ ಮಾಜಿ ಪ್ರಧಾನಿ ದೇವೇಗೌಡರಿಂದ ಸನ್ಮಾನವನ್ನೂ ಪಡೆದಿರುತ್ತಾರೆ.

ಸರಪಾಡಿ ಅಶೋಕ ಶೆಟ್ಟಿ

1961 ಎಪ್ರೀಲ್ 6 ರಂದು ದ.ಕ ಜಿಲ್ಲೆಯ ಅಜಿಲಮೊಗರು ಗ್ರಾಮದಲ್ಲಿ ಜನಿಸಿದರು. ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದಿ, ಪಡ್ರೆ ಚಂದು ಇವರಿಂದ ನಾಟ್ಯಾಭ್ಯಾಸ ಮುಗಿಸಿದರು.

ಮೇಳಗಳು: ಶ್ರೀ ಕಟೀಲು ಮೇಳ, ಅಳದಂಗಡಿ ಮೇಳ, ಕುಂಬಳೆ ಮೇಳ, ಶ್ರೀ ಮಂಗಳಾದೇವಿ ಮೇಳ, ಶ್ರೀ ಕದ್ರಿ ಮೇಳ ಇತ್ಯಾದಿ ಮೇಳಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅರ್ಜುನ, ದೇವೇಂದ್ರ, ರಕ್ತ ಬೀಜ, ಕೌಂಟ್ಲಿಕ, ಶತ್ರುಘ್ನ ಇಂದ್ರಜಿತು ಮುಂತಾದ ಇವರ ಮೆಚ್ಚಿನ ಪಾತ್ರಗಳು. ಅನೇಕ ಯಕ್ಷಗಾನ ಪ್ರಸಂಗಳ ರಚನೆ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ.

ಸನ್ಮಾನ: ಮುಂಬಯಿ ಹಾಗೂ ಮದ್ರಾಸು (ಚೆನ್ನೈ) ಮತ್ತು ಅಹಮದಾಬಾದ್ನಲ್ಲಿ

ಸಾಹಿತ್ಯ: ‘ವಿಜಯ ಪುಷ್ಪ’, ‘ಸತ್ಯದೈವ ಚಾಮುಂಡಿ’, ‘ಸರಪಾಡಿದ ಸರ್ಪ’, ಶ್ರೀ ಕೃಷ್ಣ ದೇವರಾಯ (ಐತಿಹಾಸಿಕ) 6 ಯಕ್ಷಗಾನ ಪ್ರಸಂಗಗಳ ರಚನೆ ಮತ್ತು ನಿರ್ದೇಶನ.

ಪ್ರಶಸ್ತಿಗಳು : ಸ್ವಾತಂತ್ರ್ಯ ಸ್ವರ್ಣ ಜಯಂತಿ, ಬಂಟ್ವಾಳ ತಾಲೂಕು ಪ್ರಶಸ್ತಿ, ಬಂಟ್ವಾಳ ತಾಲೂಕು 9ನೇ ಸಾಹಿತ್ಯ ಸಮ್ಮೇಳನ ಪುರಸ್ಕಾರ ಪ್ರಶಸ್ತಿ, 2002 ರಾಜೋತ್ಸವ ಜಿಲ್ಲಾ ಪ್ರಶಸ್ತಿ ಮೊದಲಾದವು.

ಶ್ರೀ ಉದಯ ಕುಮಾರ್ ಧರ್ಮಸ್ಥಳ

1956 ಮೇ 7 ರಲ್ಲಿ ಧರ್ಮಸ್ಥಳದಲ್ಲಿ ಜನಿಸಿದರು. ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು, ಕವನ ಸಂಕಲನ : ಸಂಸಾರ, ಮಂದಾರ, ಚಿತ್ತಾರ, ರಂಗಸ್ಥಳ, ಇತ್ಯಾದಿ

ಪತ್ತೇದಾರಿ ಕಾದಂಬರಿ : ಬೋಸ್ಟನ್ನಿನ ಕೊಲೆಗಡುಕ, ಅಮವಾಸ್ಯೆಯ ಅಂಗಳ

ಪತ್ರಿಕೆ – ಪ್ರಕಾಶನ : ರಮ್ಯ ಭೀಕರ ( ಗೂಢಚಾರ – ವಮಾಚಾರ ಮಾಸಪತ್ರಿಕೆ), ಬಾಲ ವಿಹಾರ (ಮಕ್ಕಳಿಗಾಗಿ ಸಚಿತ್ರ ವರ್ಣ ಮಾಸಪತ್ರಿಕೆ)

ಸಂಘ – ಸಂಸ್ಥೆಗಳಲ್ಲಿ ಪಾತ್ರ: ದಕ್ಷಿಣ ಕನ್ನಡಿಗರ ಸಂಘ ಮಾಜಿ ಪ್ರಧಾನ ಕಾರ್ಯದಶರ್ಿ, ತುಳುವೆರೆಂಕುಲು ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಗೌರವ ಸನ್ಮಾನ: ಕನ್ನಡ ಸಿರಿ ಪ್ರಶಸ್ತಿ, ಶಿಕ್ಷಕ ಬಂಧು ಪ್ರಶಸ್ತಿ, ಸ್ನೇಹ ಜೀವಿ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ರಾಜ್ಯೋತ್ಸವ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ದಿ|| ಜಿ. ನಾರಾಯಣಕುಮಾರ್ರಿಂದ ಗೌರವ ಸನ್ಮಾನ ಮೊದಲಾವುದು.

ಶ್ರೀ ಯೋಗೀಶ್ ಕಾಂಚನ್

ಬೈಕಾಂಪಾಡಿಯಲ್ಲಿ ಜನಿಸಿದ ಇವರು ಬಿ.ಕಾಂ ಪದವಿಯನ್ನು ಪಡೆದರು ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಮಂಗಳೂರು ಅಕಾಶವಾಣಿಯಲ್ಲಿ ನಾಟಕ, ಕಥೆ, ಕವನ, ಲೇಖನಗಳು ಪ್ರಸಾರಗೊಂಡು ಜನಪ್ರಿಯಗೊಂಡಿವೆ.

ತುಳು ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ತುಳುವರೆಂಕುಲು ಕುಡ್ಲ(ರಿ) ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಅಖಿಲ ಭಾರತ ತುಳು ಒಕ್ಕೂಟ (ರಿ) ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಹಲವಾರು ವರ್ಷಗಳಿಂದ ಸೇವೆ.

ಅಪ್ರಕಟಿತ 5 ತುಳು ನಾಟಕಗಳು ಮತ್ತು ಒಂದು ತುಳು ಕಾದಂಬರಿ ಪ್ರಕಟಣೆಗಾಗಿ ಸಿದ್ಧವಿದೆ.

2010 ರಲ್ಲಿ ‘ಪನ್ನಂಬರೊ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.

ವಿಲಾಸ್ ಕುಮಾರ್ ನಿಟ್ಟೆ

1978 ಸಪ್ಟೆಂಬರ್ 23 ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಜನಿಸಿದರು. ಇವರು ಬಿ. ಕಾಂ ಪದವಿಧರರು, ಇವರು 19ನೇ ವರ್ಷದಲ್ಲಿ ತುಳು ನಾಟಕ ರಚನೆಗೆ ತೊಡಗಿಸಿಕೊಂಡರು. ಕಳೆದ 11 ವರ್ಷದಿಂದ ತುಳು ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾರಂಭದಲ್ಲಿ ಗುತ್ತುದ ಗುರಿಕ್ಕಾರ್ರೆ, ಮುತ್ತೈಸಿ ಮದ್ಮಲ್, ತೆಲಿಕೆದ ನಲಿಕೆ, ಗಗ್ಗರ ಬದಿಬಂಗಾರ್ ಹೀಗೆ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಪ್ರಸಿದ್ಧ ಕಲಾವಿದರ ತಂಡದ ಮೂಲಕ ನಮನ ಕಲಾವಿದೆರ್ ನಿಟ್ಟೆ ಎಂಬ ತಂಡವನ್ನು ರಚಿಸಿಕೊಂಡಿದ್ದಾರೆ. 400 ಕ್ಕೂ ಮಿಕ್ಕಿ ಸನ್ಮಾನಗಳು ನಡೆದಿದೆ.

ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜೇಶ್ ಶಿಬಾಜೆ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪ್ರಶಸ್ತಿ: 2002 ನೇ ಸಾಲಿನ ತುಳು ನಾಟಕ ಕೃತಿ ರಚನಾ ಸ್ಪರ್ಧೆಯಲ್ಲಿ ಗಗ್ಗರ ಪ್ರಥಮ ಸ್ಥಾನ, ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ, ಕಂಬುಳದ ನಡುಟೊಂಜಿ ಕಥೆ ಇತ್ಯಾದಿ.

ಇವರು ಪ್ರಸ್ತುತ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.