2017-2019

ಎ.ಸಿ ಭಂಡಾರಿ
(ಅಧ್ಯಕ್ಷರು)
ಸುಧಾ ನಾಗೇಶ್

(ಸದಸ್ಯರು)

ವಿಜಯಾ ಶೆಟ್ಟಿ

(ಸದಸ್ಯರು)

ಗೋಪಾಲ್ ಅಂಚನ್

(ಸದಸ್ಯರು)

ತಾರಾನಾಥ ಗಟ್ಟಿ ಕಾಪಿಕಾಡ್

(ಸದಸ್ಯರು)

ವಿದ್ಯಾಶ್ರೀ ಎಸ್

(ಸದಸ್ಯರು)

ದುರ್ಗಾ ಮೆನನ್

(ಸದಸ್ಯರು)

ಬೆನೆಟ್ ಅಮ್ಮನ್ನ

(ಸದಸ್ಯರು)

ಶಿವಾನಂದ ಕರ್ಕೇರ

(ಸದಸ್ಯರು)

ಚಂದ್ರಶೇಖರ ಗಟ್ಟಿ ಬೋಳೂರು

(ಸದಸ್ಯರು)

ಡಾ. ವಾಸುದೇವ ಬೆಳ್ಳೆ

(ಸದಸ್ಯರು)

ನಿರಂಜನ ರೈ. ಮಠಂತಬೆಟ್ಟು

(ಸದಸ್ಯರು)

ಡಾ. ವೈ.ಎನ್. ಶೆಟ್ಟಿ

(ಸದಸ್ಯರು)

ಪುರುಷೋತ್ತಮ ಚೆಂಡ್ಲ

(ಸದಸ್ಯರು)

ನರೇಶ್ ಕುಮಾರ್

(ಸದಸ್ಯರು)

ಪ್ರಭಾಕರ್ ನೀರುಮಾರ್ಗ

(ಸದಸ್ಯರು)

ಸುಧಾ ನಾಗೇಶ್ :

ಸುಧಾ ನಾಗೇಶ್ ಇವರು ಶಾರದಾ ಸ್ಕೂಲ್, ಪಾಣೆಮಂಗಳೂರು ಇಲ್ಲಿನ ಶಿಕ್ಷಕಿಯಾಗಿದ್ದಾರೆ. ಎಂ.ಎ.ಬಿ.ಇಡಿ ಪದವಿದರರು, ತುಳು ಕನ್ನಡ ಬರಹಗಾರ್ತಿ, ಪ್ರಕಟಿತ ಕೃತಿಗಳು : ಮೂಡಲಮನೆ’, ‘ಹೃದಯರಾಗ’ (ಕವನ ಸಂಕಲನ) ಹನಿ’ (ಹನಿಗವನ ಸಂಕಲನ) ಹೀಗೆ ಸುಮ್ಮನೆ’ (ಹಾಸ್ಯ ಲಹರಿ) ಮಿನಿ ಎನ್ ಸೈಕ್ಲೋಪೀಡಿಯ ಫಾರ್ ಸ್ಟೂಡೆಂಟ್ಸ್’ (ಮಿನಿ ಅರ್ಥಕೋಶ) ಜೀನಿಯಸ್ (10ನೇ ತರಗತಿ ವಿದ್ಯಾರ್ಥಿಗಳ ಕೈಪಿಡಿ)

ಮದರಂಗಿ ಪತ್ರಿಕೆಯು ನಡೆಸಿದ ಸ್ವಾತಂತ್ರ್ಯ ದಿನಾಚರಣೆ ಕುರಿತ ಪ್ರಬಂಧ ಸ್ಪರ್ಧೆ, ನಿರತ ಸಾಹಿತ್ಯ ತುಂಬೆ ಇವರ ಚುಟುಕು ರಚನಾ ಸ್ಪರ್ಧೆ, ಲಯನ್ಸ್ ಕ್ಲಬ್ ಮಂಗಳೂರು ಇವರ ಹಾಸ್ಯ ಸ್ಪರ್ಧೆ, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನಡೆದ ಬೋಧನೋಪಕರಣ ತಯಾರಿ ಸ್ಪರ್ಧೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಡೆಸಿದ ಕುಸಲ್ದ ಬರವು ಪಂಥೊ, ಮೈಸೂರಿನ ಪಾತಿ ಫೌಂಡೇಶನ್ನಿಂದ ನಡೆಸಿದ ವಿಷ್ಣುವರ್ಧನ್ ಕುರಿತ ಚುಟುಕು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ.

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಚುಟುಕು ಶ್ರೀ ಪ್ರಶಸ್ತಿ’, ಬಂಟ್ವಾಳ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿಯಲ್ಲಿ ಉತ್ತಮ ಗೈಡರ್ ಪ್ರಶಸಿ್ತ, ರೋಟರಾಕ್ಟ್ ಕ್ಲಬ್ ಬಂಟ್ವಾಳದಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ’, ಚಿಂತನಾ ಪ್ರಕಾಶ ಚಿತ್ರದುರ್ಗದಿಂದ ಉತ್ತಮ ಸಂಘಟನಾ ಶಿಕ್ಷಕಿ ಪ್ರಶಸ್ತಿ’, ಭಾರತ್ ಸ್ಕೌಟ್ ಆಂಡ್ ಗೈಡ್ಸ್ ರಾಷ್ಟ್ರೀಯ ಸಂಸ್ಥೆಯಿಂದ ಹಿಮಾಲಯ ವುಡ್ ಬ್ಯಾಜ್ ಪ್ರಶಸ್ತಿ’, ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಪತಂಜಲಿ ಯೋಗ ಸಮಿತಿಯಿಂದ ಸಾಹಿತ್ಯ ರತ್ನ ಪ್ರಶಸ್ತಿ’, ಕರ್ನಾಟಕ ಶ್ರೀ ಪ್ರಗತಿಪರ ಸಂಸ್ಥೆಯಿಂದ ರಾಜ್ಯ ಕಲಾರತ್ನ ಪ್ರಶಸಿ್ತ, ಕಥಾ ಬಿಂದು ಪ್ರಕಾಶನದಿಂದ ಚೈತನ್ಯಶ್ರೀ ಪ್ರಶಸ್ತಿ’ (2017) ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಸಂಪಾದಿತ ಕೃತಿ: ಶಾರದಾವಾಣಿ (ಶಾರದಾ ಹೈಸ್ಕೂಲಿನ ವಾರ್ಷಿಕ ಸಂಚಿಕೆ)

ವಿಜಯಾ ಶೆಟ್ಟಿ :

ವಿಜಯಾ ಶೆಟ್ಟಿ ಇವರು ಬಂಟ್ವ್ವಾಳ ತಾಲೂಕಿನ ಇರಾ ಬಾಳೆಪುಣಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ, ಕನ್ನಡ ಎಂ. ಎ ಪದವಿದರರು.

ಪ್ರಕಟಿತ ಕೃತಿಗಳು: ಬೆಂಗ್’, ‘ತನ್ನೆ ತೋಡುದ ಸೊನ್ನೆ’, ‘ಧಿರೇಂದ್ರನಾಥ ಭಟ್ಟಾಚಾರ್ಯ

ತನ್ನೆ ತೋಡುದ ಸೊನ್ನೆ’, ಎಂಬ ಕೃತಿಗೆ ಉಡುಪಿ ತುಳುಕೂಟದಿಂದ ಎಸ್. ಯು ಫಣಿಯಾಡಿ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ಪತ್ರ ಪುರಸ್ಕಾರ ನಾಟಕ ರಚನೆಗಾಗಿ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ ಕತೆಗಳಿಗಾಗಿ ಹಲವು ಬಹುಮಾನಗಳು ಲಭಿಸಿವೆ.

ಹಬ್ಬಗಳಲ್ಲಿ ಅನನ್ಯತೆ ಎಂಬ ಪ್ರಬಂಧಕ್ಕೆ ತುಳು ಸಾಹಿತ್ಯ ಅಕಾಡೆಮಿಯಿಂದ ಫೆಲೋಶಿಪ್ ದೊರಕಿದೆ.

7ನೇ ತರಗತಿಯ ತುಳು ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ತೀರ್ಪುಗಾರರಾಗಿ ಭಾಗವಹಿಸಿದ್ದ ಇವರು ಆಕಾಶವಾಣಿಗೆ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಯಕ್ಷಪ್ರಿಯಾ ಮಹಿಳಾ ಯಕ್ಷಬಳಗ ಸಾಲೆತ್ತೂರು ಇದರ ಸಂಚಾಲಕಿಯಾಗಿರುವ ಶ್ರೀಮತಿ ವಿಜಯ ಶೆಟ್ಟಿಯವರು ಸಾಲೆತ್ತೂರು ಬಂಟರ ವಲಯದ ಮಹಿಳಾ ಘಟಕದ ಅಧ್ಯಕ್ಷೆ. ಮಂಚಿ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೊದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುತ್ತಾರೆ.

ತಾರಾನಾಥ ಗಟ್ಟಿ  :

ತಾರಾನಾಥ ಗಟ್ಟಿ, ಕಾಪಿಕಾಡು ಎರಡು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನ ಮಂಗಳೂರನ್ನೇ ತನ್ನ ಕಾರ್ಯಕ್ಷೇತ್ರದ ಕೇಂದ್ರವಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವವರು. ಮಂಗಳೂರು ತಾಲೂಕಿನ ಉಳ್ಳಾಲದ ಕಾಪಿಕಾಡ್  ಇವರ ಊರು.

1994 ರಲ್ಲಿ ಮಂಗಳೂರಿನಲ್ಲಿ ಪತ್ರಕರ್ತನಾಗಿ ಸೇವೆ ಆರಂಭ .1994 ರಿಂದ 1998 ರ ತನಕ ಸ್ಥಳೀಯ ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1998 ರಿಂದ 2002 ತನಕ ” ಜನವಾಹಿನಿ ” ರಾಜ್ಯಮಟ್ಟದ  ದೈನಿಕದಲ್ಲಿ ಮಂಗಳೂರಿನಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದಾರೆ. 2002 ರಿಂದ 2004 ರ ತನಕ ” ಕ್ವಿಜ್ ಟೈಮ್ ” ಮಕ್ಕಳ ಪತ್ರಿಕೆಯ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ.   2004 ರಿಂದ 2006 ರ ತನಕ  “ಸಂಜೆ ವಾಣಿ” ಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. 2006 ರಿಂದ 2008 ರ ತನಕ ” ಟಿ.ವಿ 9 ” ಸುದ್ದಿ ವಾಹಿನಿಯ ಹಿರಿಯ ವರದಿಗಾರನಾಗಿ  ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 2010 ರಿಂದ 2017 ರ ತನಕ ” ಜನಶ್ರೀ ” ಸುದ್ದಿ ವಾಹಿನಿಯಲ್ಲಿ ಬ್ಯೂರೋ ಮುಖ್ಯಸ್ಥ ಹಾಗೂ ಹಿರಿಯ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಹಾಗೂ ರಂಗಭೂಮಿ ವಿಶೇಷ ಆಸಕ್ತಿಯ ಕ್ಷೇತ್ರಗಳು, ” ನೀನಾಸಮ್ ” ಸಂಸ್ಕøತಿ ಶಿಬಿರದಲ್ಲಿ ಭಾಗವಹಿಸಿರುತ್ತಾರೆ.

* ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಜಿ ಹಾಗೂ ಕಾರ್ಯದರ್ಶಿಯಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

* ಮಂಗಳೂರು ಪ್ರೆಸ್ ಕ್ಲಬ್ ಸ್ಥಾಪಕ ಮಂಡಲಿ ಸದಸ್ಯನಾಗಿ, ಮಂಗಳೂರು ಪತ್ರಿಕಾ ಭವನ ಟ್ರಸ್ಟ್‍ನ ಸ್ಥಾಪಕ ಟ್ರಸ್ಟಿಯಾಗಿ

ಕಾರ್ಯ ನಿರ್ವಹಿಸಿದ್ದಾರೆ.

2014 ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ನೀಡಲಾಗುವ ” ಹೂಗಾರ್ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಗೋಪಾಲ ಅಂಚನ್ :

ಗೋಪಾಲ ಅಂಚನ್ ಬಂಟ್ವಾಳ ತಾಲೂಕಿನಲ್ಲಿ ಜನಿಸಿದ ಇವರು ಬಿ. ಎ. ಪದವಿದರರು, ಪತ್ರಕರ್ತನಾಗಿ, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಕಾರ್ಯಕ್ರಮ ನಿರೂಪಕರಾಗಿ, ರಂಗ ನಿರ್ದೇಶಕ, ಕಲೆ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಂಘಟಕನಾಗಿ ಸೇವೆ ಸಲ್ಲಿಸಿರುತ್ತಾರೆ ಬಿ. ಎ ಪದವಿಯನ್ನು ಗಳಿಸಿದ್ದಾರೆ.

ಅಕ್ಷರ ಪ್ರತಿಷ್ಠಾನ ಆಲದಪದವು, ಮಾನವ ಬಂಧುತ್ವ ವೇದಿಕೆ ಬಂಟ್ವಾಳ, ಯಕ್ಷಲೋಕ ಸಾಂಸ್ಕೃತಿಕ ಸಂಗಮ ಬಿ. ಸಿ ರೋಡ್, ಯಕ್ಷಲೋಕ ಜೀವನ ಶಿಕ್ಷಣ ಪ್ರತಿಷ್ಠಾನ, ಬಿ. ಸಿ ರೋಡು ಹಾಗೂ ಗ್ರಾಮ ಪಂಚಾಯತು ಜನಪ್ರತಿನಿಧಿಗಳ ಒಕ್ಕೂಟ ಬಂಟ್ವಾಳದ ಸಂಚಾಲಕ-ಸಲಹೆಗಾರ-ನಿರ್ದೇಶಕರಾಗಿದ್ದಾರೆ.

ಗ್ರಾಮೀಣಾಭಿವೃದ್ಧಿ ಶಿಕ್ಷಣ: ಎಸ್.ಐ.ಆರ್.ಡಿ ಮೈಸೂರು

ಸಂವಾದ ಬೆಂಗಳೂರು, ವೆಲೊರೆಡ್ ಮಂಗಳೂರು, ಯೂನಿಸೆಫ್ ಹೈದರಾಬಾದ್, ಬ್ರೇಕ್ ಥ್ರೂ ನವದೆಹಲಿಯಲ್ಲಿ ಶೈಕ್ಷಣಿಕ ತರಬೇತಿಯನ್ನು ನೀಡಿದ್ದಾರೆ.

ರಂಗ ಶಿಕ್ಷಣ: ಕಿನ್ನರ ಮೇಳ ತುಮರಿ, ಸಾಗರ

15 ವರ್ಷ ಬಂಟ್ವಾಳದಲ್ಲಿ ವಿಜಯ ಕರ್ನಟಕ ಪತ್ರಿಕೆಯ ವರದಿಗಾರನಾಗಿ ಸೇವೆ, ‘ನಮ್ಮ ಬಂಟ್ವಾಳವಾರಪತ್ರಿಕೆಯಲ್ಲಿ 2 ವರ್ಷ ಕಾರ್ಯ ನಿರ್ವಾಹಕ ಸಂಪಾದಕನಾಗಿ ಸೇವೆ ಸಲ್ಲಿಸಿದ್ದಾರೆ.

ಏಕಾದಶ, ಅಕ್ಷರ, ದಶಾಕ್ಷರ, ನವಚೇತನ, ಚಿಂತನಾ, ನವೋದಯ ಮೊದಲಾದ ಸ್ಮರಣ ಸಂಚಿಕೆಗಳು ಹಾಗೂ ಶುಭೋದಯ ಕವನ ಸಂಕಲನ, ಸಭಾ ನಿರ್ವಹಣೆ ಹೇಗಿರಬೇಕು ಪ್ರಬಂಧ ಸಂಕಲನ, ನೇತ್ರಾವತಿ ತಿರುವು ಯೋಜನೆ – ನನ್ನ ಚಿಂತನೆ ಮೊದಲದ ಕೃತಿಗಳ ಪ್ರಕಟಣೆಯಾಗಿವೆ.

ವಿದ್ಯಾಶ್ರೀ ಎಸ್ :

ವಿದ್ಯಾಶ್ರೀ ಎಸ್ ಇವರು 1992 ಜೂನ್ 1 ರಂದು ಪುತ್ತೂರು ತಾಲೂಕು ಪಡುಮಲೆ ಸೇನೆರೆ ಮಜಲಲ್ಲಿ ಲಕ್ಷ್ಮೀ ನಾರಾಯಣ ರೈ ಮತ್ತು ಯಶೋಧ ರೈ ದಂಪತಿ ಪುತ್ರಿಯಾಗಿ ಜನನ. ಬಡಗನ್ನೂರು ಮತ್ತು ಕುಂಬ್ರದಲ್ಲಿ ಪ್ರಾಥಮಿಕ ಪ್ರೌಢ ಮತ್ತು ಪಿಯುಸಿ ಮುಗಿಸಿ ಬೆಂಗಳೂರಿನಲ್ಲಿ ವೃತ್ತಿಪರ ಕೋರ್ಸ್ ಹಾಗೂ     ಕಾಲೇಜ್ ಆಫ್ ಮೀಡಿಯಾ ಆಂಡ್ ಡಿಸೈನ್ ಸಂಸ್ಥೆಯಲ್ಲಿ ಬಿಎಸ್ಸ್ ಇನ್ ಮಲ್ಟಿಮಿಡಿಯಾ ಟೆಕ್ನೋಲಜಿ ಮಾಡಿರುತ್ತಾರೆ.

ವಿದ್ವಾನ್ ವಿಶ್ವನಾಥ ರೈ ಕುದ್ಕಾಡಿಯವರ ಪ್ರೇರೇಪಣೆ ಹಾಗೂ ಡಾ. ಎಸ್. ಆರ್ ವಿಘ್ನರಾಜ್ ಧರ್ಮಸ್ಥಳರವರ ಮಾರ್ಗದರ್ಶನದಲ್ಲಿ ತುಳು ಲಿಪಿ ಅಧ್ಯಯನ ನಡೆಸಿರುತ್ತಾರೆ.

2013 ರಿಂದ ತುಳು ಲಿಪಿ ಶಿಕ್ಷಕಿಯಾಗಿ ತುಳು ಅಕಾಡೆಮಿ, ಮಂಗಳೂರು, ಬೆಂಗಳೂರು, ಕಾಸರಗೋಡು, ಕಾರ್ಕಳಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ತುಳು ಲಿಪಿ ಕಲಿಸಿದ್ದು, ಒನ್‍ಲೈನ್ ತುಳುಲಿಪಿ ತರಗತಿಗಳನ್ನು ನಡೆಸಿರುತ್ತಾರೆ. ಅದರ ಜೊತೆಗೆ ತುಳು ಲಿಪಿಯ ಗ್ರಾಫಿಕ್ ಡಿಸೈನ್ ಮತ್ತು ಬರವು ಸರವುತುಳುಲಿಪಿ ಒನ್‍ಲೈನ್  ಪತ್ರಿಕೆ ಮಾಡಿದ್ದರು. ಪ್ರಸ್ತುತ ನಂದಲತುಳು ಲಿಪಿ ದ್ವೈಮಾಸಿಕದ ಪ್ರಧಾನ ಸಂಪಾದಕಿ ಹಾಗೂ ನಮ್ಮ ತುಳುನಾಡ್ ಟ್ರಸ್ಟ್‍ನ ಸಂಚಾಲಕಿಯಾಗಿದ್ದಾರೆ. ತುಳು ಕನ್ನಡ ಭಾಷೆಯಲ್ಲಿ ಕಥೆ ಕವನ ಲೇಖನ ಹಾಗೂ ನಾಟಕ ಬರೆಯುವ ಹವ್ಯಾಸವಿದೆ.

 ದುರ್ಗಾ ಮೆನನ್ :

 ಶಿವಾನಂದ ಕರ್ಕೇರ :

ಶಿವಾನಂದ ಕರ್ಕೇರ ದಿನಾಂಕ 14-01-1948 ರಂದು ಬಿಲ್ಲವ ಕುಟುಂಬದಲ್ಲಿ ಹುಟ್ಟಿದ ಸ್ವಯಂ ಪ್ರಯತ್ನದಿಂದ ಮೇಲೆ ಬಂದವರು. ಚಿಕ್ಕಂದಿನಿಂದಲೇ ವಿವಿಧ ಸಂಘ ಸಂಸ್ಥೆಗಳಲ್ಲಿ ದುಡಿಮೆ. ದುಡಿಮೆಯೊಂದಿಗೆ ಕಲಿಕೆ ಮುಂದುವರಿಸಿ ಸಂಜೆ ಕಾಲೇಜಿನಲ್ಲಿ ಪದವಿ ಪಡೆದು ಕಾನೂನು ಪದವಿಯನ್ನು ಗಳಿಸಿದ್ದಾರೆ.

ದೆಹಲಿಯ ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ ಸದಸ್ಯನಾಗಿ, ದೆಹಲಿಯ ಹಲವಾರು ಕನ್ನಡಪರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದ ಎರಡು ತುಳು ಮತ್ತು ಕನ್ನಡ ನಾಟಕ ದಿಲ್ಲಿಯಲ್ಲಿ ಪ್ರದರ್ಶನವಾಗಿದೆ. ದೆಹಲಿ ಕರ್ನಾಟಕ ಸಂಘದ ನಾಟಕ ಸ್ಪರ್ಧೆಗಾಗಿ ಬರೆದು ನಿರ್ದೇಶಿಸಿದ ಗಂಡ ಹೆಂಡಿರ ಸಂಘ ನಾಟಕಕ್ಕೆ ಪ್ರಶಸ್ತಿ ಲಭಿಸಿದೆ.

ಆಕಾಶವಾಣಿ ಇವರು ಬರೆದ ಕಾಲಚಕ್ರ’, ‘ಏರುಮೈಂದೆ’ ‘ಗಂಡ ಹೆಂಡಿರ ಸಂಘ’, ‘ಗಾಂಧೆರ್ ಬತ್ತೆರ್ನಾಟಕ ಪ್ರಸಾರವಾಗಿರುತ್ತದೆ. ಇವರ ಹಲವಾರು ಲೇಖನ, ಕವನ, ಕಥೆ ಚಿಂತನ ಪ್ರಸಾರವಾಗಿರುತ್ತದೆ.

ಎರು ಮೈಂದಜಾನಪದ ನಾಟಕಕ್ಕೆ ಮೂಲ್ಕಿಯಲ್ಲಿ ಜರಗಿದ ಪ್ರಥಮ ತುಳು ಸಾಹಿತ್ಯ ಸಮ್ಮೆಳನದ ನಾಟಕ ಬರೆವ ಪಂಥದಲ್ಲಿ ಪ್ರಥಮ ಬಹುಮಾನ ಬಂದಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ಪಡೆದ ನಾಟಕ ಕೋಣ ಕೋದಂಡದೂರ ದರ್ಶನ ಚಂದನದಲ್ಲಿ ಪ್ರಸಾರವಾಗಿದೆ. ಈ ನಾಟಕಕ್ಕೆ ಜಿಲ್ಲೆ ಮತ್ತು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳು ಬಂದಿರುತ್ತದೆ. ಹಾಗೂ ನೂರಾರು ಪ್ರದರ್ಶನ ಕಂಡಿರುತ್ತದೆ.

2008 ರ ಸಾಹಿತ್ಯ ಮತ್ತು ನಾಟಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಗಳು ಲಭಿಸಿವೆ.

ಶ್ರೀ ಗೋಕರ್ಣನಾಥ ಕೋ ಓಪರೇಟಿವ್ ಬ್ಯಾಂಕ್‍ನ ನಿಕಟ ಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಬೆನೆಟ್ ಜಿ. ಅಮ್ಮನ್ನ:

ಬೆನೆಟ್ ಜಿ. ಅಮ್ಮನ್ನ ಇವರು ಗುಡ್ಡೆ ಪಾಂಗಲ ಉಡುಪಿಯಲ್ಲಿ ಜನಿಸಿದರು. ಇವರು ಕರ್ನಾಟಕ ತಿಯೊಲಾಜಿಕಲ್ ಕಾಲೇಜು ಪತ್ರಾಗಾರದಲ್ಲಿ ಪತ್ರಾಗಾರ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಪ್ರಕಟಿತ ಕೃತಿಗಳು: ಚಿಗುರಿದ ಬದುಕು (ಕಿರು ಕಾದಂಬರಿ), ಕ್ರೈಸ್ತರು ಮತ್ತು ಬಾಸೆಲ್ ಮಿಶನ್ ಗಾನ ಗೊಂಚಲುಸಂಕಲನ( 200 ಆಯ್ದ ಸಂಗೀತಗಳು), ಜಾನ್ ಜೇಮ್ಸ್ ಬ್ರಿಗೆಲ್- ಬದ್‍ಕ್ ಬೊಕ್ಕ ಬರವು, ಹಂಪಿ ವಿಶ್ವವಿದ್ಯಾನಿಲಯ

ಸಂಪಾದಿತ ಕೃತಿಗಳು: ಬಾಸೆಲ್ ಮಿಶನರಿಗಳ ತುಳು ಟಿಪ್ಪಣಿಗಳು (ಸಂ) ಡಾ. ದುರ್ಗಾ ಪ್ರವೀಣ್‍ರರೊಂದಿಗೆ,   ವಿಕ್ರಮಾರ್ಕ (ಸಂ.) ಡಾ. ದುರ್ಗಾ ಪ್ರವೀಣ್‍ರೊಂದಿಗೆ ಬಾಸೆಲ್ ಮಿಶನ್ 200 (ಸಂ.)ರೆವೆ. ಸಾಗರ್ ಸುಂದರ್‍ರಾಜ್‍ರೊಂದಿಗೆ ಸಂಪಾದಕ ಮಂಡಳಿ ಸದಸ್ಯರಾಗಿ, ತುಳು ವಿಕಿಪಿಡಿಯಾ ಸಂಪಾದಕರಾಗಿ (ಪ್ರಸ್ತುತ), ತುಳು ಜ್ಞಾತಿಪದಕೋಶ ಸಲಹಾ ಸಮಿತಿ ಸದಸ್ಯರಾಗಿ (ಪ್ರಸ್ತುತ), ತುಳು ಬೈಬಲ್ ಭಾಷಾಂತರ ಸಮಿತಿ ಸದಸ್ಯರಾಗಿರುತ್ತಾರೆ.

ಲೇಖನಗಳು: ಮಿಶನರಿಗಳ ತುಳು ಸಾಹಿತ್ಯ, ನೂದು ವರ್ಷದ ತುಳು ಪಿರವುದ ತುಳು ನಿಘಂಟ್, ಕನ್ನಡದ ಮೊದಲ ಪತ್ರಿಕೆ, ಚರಿತ್ರೆ ಹೇಳುವ ಪಂಚಾಂಗ, ಬಾಸೆಲ್ ಮಿಶನ್ ಸ್ಮಾರಕಗಳುತುಳುನಾಡ್‍ದ ಸುರುತ್ತ ಅಚ್ಚಿದ ಇಲ್ಲ್, ತುಳುವೆರ್ ಬೊಕ್ಕ ಕ್ರೈಸ್ತೆರ್, ತುಳು ಭಾಷೆ ಸಂಸ್ಕøತಿ, ಚರಿತ್ರೆ, ಸಭಾ ಚರಿತ್ರೆ, ಜೀನವ ಚರಿತ್ರೆ, ಪುಸ್ತಕ ಪರಿಚಯ, ತುಳುನಾಡಿನಲ್ಲಿರುವ ಕ್ರೈಸ್ತರ ಶಾಲೆಗಳು ಮತ್ತು ದೇವಾಲಯಗಳು ಮುಂತಾದ ವಿಭಾಗದಲ್ಲಿ ನೂರಾರು ಲೇಖನಗಳು ಪತ್ರಿಕೆ, ಸ್ಮರಣ ಸಂಚಿಕೆಯಲ್ಲಿ, ಆಕಾಶವಾಣಿಯಲ್ಲಿ ಅನೇಕ ಲೇಖನಗಳು, ಪ್ರಬಂಧಗಳು ಪ್ರಸಾರಗೊಂಡಿವೆ. ಕನ್ನಡ ಮತ್ತು ತುಳು ಭಾಷೆಯಲ್ಲಿ ಗ್ರಂಥಗಳಲ್ಲಿ ಪ್ರಕಟಗೊಂಡಿದೆ

ಚಂದ್ರಶೇಖರ ಗಟ್ಟಿ ಬೋಳೂರು :

ಚಂದ್ರಶೇಖರ ಗಟ್ಟಿ ಬೋಳೂರು ಇವರು ಮಂಗಳೂರು ಬೋಳೂರಿನಲ್ಲಿ ಶ್ರೀ ರಾಮಗಟ್ಟಿ ಮತ್ತು ಶ್ರೀಮತಿ ಜಾನಕಿ ಗಟ್ಟಿ ಇವರ ಜೇಷ್ಟ ಪುತ್ರನಾಗಿ 06, ನವೆಂಬರ್ 1957 ರಲ್ಲಿ ಜನಿಸಿದರು. ಇವರು ಬಿ. ಕಾಂ ಪದವಿ ಎಲ್‍ಎಲ್‍ಬಿ, ಡಿ.ಪಿ.ಎಂ ಹಾಗೂ ಪತ್ರಿಕೋದ್ಯಮದ ಸರ್ಟಿಫಿಕೇಟು ಕೋರ್ಸನ್ನು ಪಡೆದಿರುತ್ತಾರೆ. ಹಾಗೂ ಕರ್ನಾಟಕ ಸರಕಾರದ ಬಯೋ ಡೈವರ್ಸಿಟಿ ಬೋರ್ಡು, ಬೆಂಗಳೂರಿನಿಂದ ತರಬೇತಿ ಪಡೆದಿದ್ದಾರೆ.

ಲಯನ್ಸ್ ಕ್ಲಬ್‍ನಲ್ಲಿ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಅನೇಕ ಉಪನ್ಯಾಸ ನೀಡಿದ್ದಾರೆ.

ಎಲ್ಲರಿಗಿಂತ ಚೆಲುವೆ ನನ್ನಾಕೆಹಾಗೂ ಅಕ್ಕರೆಯ ಅಂಗಳದಲ್ಲಿ ಸಕ್ಕರೆಯ ಪುಳಕಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಬಂಗಾರದ ಹನಿಗಳುಎಂಬ ಪುಸ್ತಕ ಪ್ರಕಟಣೆಯ ಹಾದಿಯಲ್ಲಿದೆ.

ಪೆÇಯೆಟ್ ಆಫ್ ಪೆÇಯೆಟ್ ಹಾಗೂ ಸಮಾಜ ರತ್ನ ಪ್ರಶಸ್ತಿಯನ್ನು ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಇವರಿಂದ ಪಡೆದಿರುತ್ತಾರೆ.

ಡಾ. ವಾಸುದೇವ ಬೆಳ್ಳೆ :

ಡಾ. ವಾಸುದೇವ ಬೆಳ್ಳೆಯವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ. ಎ., ಎಂ.ಫಿಲ್., ಹಾಗೂ ಪಿಹೆಚ್.ಡಿ ಪದವಿಗಳನ್ನು ಪಡೆದಿದ್ದಾರೆ.

ದಲಿತ ಸಂಸ್ಕೃತಿ, ತುಳು ಸಂಸ್ಕೃತಿ ಇವರ ಆಸಕ್ತಿಯ ಕ್ಷೇತ್ರ. ವಿವಿಧ ವಿಚಾರ ಸಂಕಿರಣಗಳಲ್ಲಿ 35 ಪ್ರಬಂಧಗಳನ್ನು ಮಂಡಿಸಿದ್ದಾರೆ. ದಲಿತ ಸಂಕಥನ” “ಕೆ. ಟಿ. ಗಟ್ಟಿಯವರ ಕಾದಂಬರಿಗಳ ಅಧ್ಯಯನಎರಡು ಪುಸ್ತಕಗಳು ಹಾಗೂ ವಿವಿಧ ಪುಸ್ತಕ ಹಾಗೂ ಪತ್ರಿಕೆಗಳಲ್ಲಿ 15 ಲೇಖನಗಳು ಪ್ರಕಟವಾಗಿವೆ. ಪ್ರಸ್ತುತ ಇವರು ಸರಕಾರಿ ಪದವಿ ಪೂರ್ವ ಕಾಲೇಜು ಬೊಕ್ಕಪಟ್ನ ಇಲ್ಲಿ ಉಪನ್ಯಾಸಕರಾಗಿದ್ದಾರೆ.

ನಿರಂಜನ ರೈ ಮಠಂತಬೆಟ್ಟು :

ನಿರಂಜನ ರೈ ಮಠಂತಬೆಟ್ಟು , 1970, ಮೇ 21 ರಂದು ಮಠಂತಬೆಟ್ಟಿನಲ್ಲಿ ಜನಿಸಿದ ಇವರು ಬಿ. ಕಾಂ, ಡಿಗ್ರಿ ಪದವಿಧರರು, ಇವರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನಪದ ಕ್ರೀಡೆ ಕಂಬಳದ ತೀರ್ಪುಗಾರರಾಗಿದ್ದಾರೆ.

ತುಳು ನಾಟಕ ರಚನೆ, ನಟನೆ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ರಾಮಕೃಷ್ಣ ಪ್ರೌಢಶಾಲೆ ಕೊಂಬೆಟ್ಟು ಪುತ್ತೂರು ಇದರ ಸಲಹಾ ಮಂಡಳಿ ಸದಸ್ಯ ಧಾರ್ಮಿಕ, ಸಾಮಾಜಿಕ, ಜನಪದ ಶೈಕ್ಷಣಿಕ, ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಕೃಷಿ ಮತ್ತು ವ್ಯಾಪಾರಸ್ಥಾರಾಗಿ ದುಡಿಯುತ್ತಿದಾರೆ.

 ಡಾ| ವೈ. ಎನ್ ಶೆಟ್ಟಿ :

ಡಾ| ವೈ. ಎನ್ ಶೆಟ್ಟಿ (ಡಾ| ಎರ್ಮಾಳು ನಾರಾಯಣ ಶೆಟ್ಟಿ) ಉಡುಪಿ ಜಿಲ್ಲೆಯಲ್ಲಿ ಜನಿಸಿದ ಇವರು ಬಿ. ಎಸ್ಸಿ, ಬಿ.ಎ.ಎಂ.ಎಸ್. ಎಂ. ಡಿ (ಆಯು), ಪದವೀಧರರು, ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಉಡುಪಿಯಲ್ಲಿ ನಿವೃತ್ತ ಪ್ರಾಧ್ಯಾಪಕರಾಗಿ ಮತ್ತು ವೈದ್ಯಕೀಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಕಾಲೇಜುಗಳಲ್ಲಿ ಸಂದರ್ಶಕ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ತುಳು ಸಾಹಿತ್ಯ ಸಂಸ್ಕೃತಿಗೆ ಕೊಡುಗೆ, ತುಳು ಜಾನಪದ ಕಲೆ – ಭೂತಾರಾಧನೆ ಮತ್ತು ನಾಗಾರಾಧನೆಗಳ ದಾಖಲೀಕರಣ ಮತ್ತು ಸಂಶೋಧನೆ ನಡೆಸಿದ್ದಾರೆ. ದಿನಕ್ಕೊಂಜಿ ದೈವದ ಕಥೆ (ಜನ ಮೆಚ್ಚಿದ ಏಳು ದಿನಗಳ ದೈವಾರಾಧನೆಯ ಮಾಹಿತಿ ಕಾರ್ಯಕ್ರಮ) ತುಳುವ ಐಸಿರಿ, ಕೊಡಿಯಡಿ ದೈವಾರಾಧಕರ ಸಮ್ಮೇಳನಾಧ್ಯಕ್ಷತೆ, ತುಳುವ ಐಸಿರಿ ದುಬೈ ಸಮ್ಮೇಳನಾಧ್ಯಕ್ಷತೆ 2014, ತುಳುವ ಐಸಿರಿದ ಐಸ್ರ ಮೂಲ್ಕಿ ತುಳು ಸಮ್ಮೇಳನ ಸಮಿತಿ ಅಧ್ಯಕ್ಷತೆ, ಸಿರಿ ತುಳು ಚಾವಡಿ ಒಡಿಪು ಗೌರವಾಧ್ಯಕ್ಷ, 2009 ರ ವಿಶ್ವ ತುಳು ಸಮ್ಮೇಳನ ಉಜಿರೆಯ ಉಡುಪಿ ಪ್ರಾಂತೀಯ ಸಮ್ಮೇಳನದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಜನಜಾಗೃತಿ ನಂದಿಕೂರು (ರಿ) ಉಪಾಧ್ಯಕ್ಷರಾಗಿ ಸೇವೆ-ಪ್ರಸ್ತುತ ಸಲಹಾ ಸಮಿತಿ ಸದಸ್ಯನಾಗಿ, ಹವ್ಯಾಸಿ ಲೇಖಕ – ಪರಿಸರ, ಆದ್ಯಾತ್ಮ ಜಾನಪದ ಕಲೆಗಳ ಕುರಿತು ಲೇಖನ ಬರೆದಿದ್ದಾರೆ. ಸಂಸ್ಕೃತ ಭಾರತಿ ಉಡುಪಿ – ಮಾಜಿ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಟಿ ವಿ ಯಲ್ಲಿ ಪಟ್ಟಾಂಗ ತುಳು ಸಂಸ್ಕೃತಿ ಕಾರ್ಯಕ್ರಮದಲ್ಲಿ ಐದು ವರ್ಷ ನಿರಂತರವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ತುಳು ಸಾಹಿತ್ಯ ಸೇವೆಗೆ 2012 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಮಟ್ಟದ ಪುರಸ್ಕಾರ – 2010,  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಚಾವಡಿ ಸನ್ಮಾನ, ಸಮಾಜ ಸೇವೆ ಗುರುತಿಸಿ ಅಲೆವೂರು ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಗಳಿಸಿದ್ದಾರೆ .

ಪುರುಷೋತ್ತಮ ಚೇಂಡ್ಲಾ :

ಪುರುಷೋತ್ತಮ ಚೇಂಡ್ಲಾ, 1959 ಏಪ್ರಿಲ್ 21 ರಂದು ಜನಿಸಿದರು. ಕೇಂಪೆÇ್ಕೀ ಸಂಸ್ಥೆಯ ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ಸ್ವಂತ ಉದ್ದಿಮೆ ನಡೆಸುತ್ತಿದ್ದಾರೆ.

ತುಳು, ಕನ್ನಡ ನಾಟಕ ರಚನೆ, ನಿರ್ದೇಶನ, ಅಭಿನಯ, ತುಳು ಭಾಷೆಯ ನಾಟಕ ರಚನೆ, ತುಳು, ಕನ್ನಡ ಧ್ವನಿಸುರುಳಿಗೆ ಸಾಹಿತ್ಯ ರಚನೆಯನ್ನು ನೀಡಿದ್ದಾರೆ.

ವಿಶ್ವ ತುಳು ಸಮ್ಮೇಳನ ಧರ್ಮಸ್ಥಳ ಮತ್ತು ಅಡ್ಯಾರ್ ಮಂಗಳೂರು ಇಲ್ಲಿ ನಡೆದ ಕಾರ್ಯಕ್ರಮದ ಬೆಂಗಳೂರು ವಲಯದ ಸಂಚಾಲಕನಾಗಿ ಕಾರ್ಯನಿರ್ವಹಿಸಿರುವುದು, ಇತ್ತೀಚೆಗೆ ನಡೆದ ವಿಶ್ವ ತುಳುವೆರೆ ಆಯೊನೊ ಬದಿಯಡ್ಕ ಇದರ ಕಾರ್ಯಧ್ಯಕ್ಷನಾಗಿ ಕಾರ್ಯ ನಿರ್ವಹಣೆ

ದಕ್ಷಿಣ ಕನ್ನಡ ಕುಲಾಲ ಸಂಘ ಬೆಂಗಳೂರು ಇದರ ಕಾರ್ಯದರ್ಶಿ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷನಾಗಿ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿರುವುದು.

ಪ್ರಸ್ತುತ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.

ದಕ್ಶಿಣ ಕನ್ನಡಿಗರ ಸಂಘದ ಕರಾವಳಿ ಜ್ಯೋತಿ ತ್ರೈಮಾಸಿಕ ವಾರ್ತಾ ಪತ್ರ ಇದರ ಸಲಹಾ ಮಂಡಳಿ ಸದಸ್ಯರಾಗಿದ್ದಾರೆ.

ಬೆಂಗಳೂರಿನಲ್ಲಿ ತುಳು ಲಿಪಿ ಕಲಿಕಾ ಶಿಬಿರ ಏರ್ಪಡಿಸಿ ತುಳುಲಿಪಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಸೃಷ್ಠಿ ಕಲಾಭೂಮಿ ವತಿಯಿಂದ ತುಳುನಾಡ್ದ ಬೊಳ್ಳಿಪ್ರಶಸ್ತಿ ಪುರಸ್ಕಾರ, ಶ್ರೀ ಸಾಯಿರಾಂ ಸೇವಾರತ್ನ ಪ್ರಶಸ್ತಿ 2017, ಕರ್ನಾಟಕ ಕಲಾ ಸಂಘದ ಪ್ರಶಸ್ತಿ 2017 ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ನರೇಶ್‍ಕುಮಾರ್ ಸಸಿಹಿತ್ಲು :

ನರೇಶ್ ಕುಮಾರ್ ಅವರು, ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರರು. ಪ್ರವೃತ್ತಿಯಲ್ಲಿ ಲೇಖಕ, ನಾಟಕಕಾರ, ನಿರ್ದೇಶಕ, ನೃತ್ಯ ಪಟುವಾಗಿ ಗುರುತಿಸಿ ಕೊಂಡವರು. ಮೂಲ ಜಾನಪದ ಕುಣಿತಗಳ ಅಧ್ಯಯನ, ತರಬೇತಿ ಮತ್ತು ಪ್ರದರ್ಶನದ ವಿಶೇಷ ಆಸಕ್ತಿ ಹೊಂದಿರುವಇವರು, ನೇಪಾಳ, ಅಸ್ಸಾಂ, ಒರಿಸ್ಸಾ, ದೆಹಲಿ ಸಹಿತ ದೇಶದ ಹತ್ತಕ್ಕೂ ಅಧಿಕ ರಾಜ್ಯದಲ್ಲಿ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ತುಳು ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಿರಂತರ ಮೂರು ವರುಷ ದ.ಕ, ಉಡುಪಿ ಜಿಲ್ಲೆಯ 60 ಯುವಕ- ಯುವತಿ ಮಂಡಲಗಳಿಗೆ ಮೂರು ದಿನದ, 100 ಶಾಲೆಯ 100ಕ್ಕೂ ಅಧಿಕ ಶಿಕ್ಷಕರಿಗೆ ಎರಡು ದಿನದ ತುಳು ಸಾಹಿತ್ಯ-ಜಾನಪದ ಕುಣಿತ-ಸಾಂಪ್ರದಾಯಿಕ ಕ್ರೀಡೆಯ ಕಾರ್ಯಾಗಾರ ನಡೆಸಿದ್ದಾರೆ. ಇದಲ್ಲದೆ ಚಂದನ ದೂರದರ್ಶನ ವಾಹಿನಿಯಲ್ಲಿ ಐದು ಬಾರಿ ತುಳು ಕಾರ್ಯಕ್ರಮ ನೀಡಿದ ಹಿರಿಮೆ ಇವರದ್ದು. ತಿಂಗೋಳ್ದ ಬೊಲ್ಪು ಎನ್ನುವ ತುಳು ಕಥಾ ಸಂಕಲನ ಪ್ರಕಟಿಸಿರುವ ಇವರು, ಬೀರೆದಡೆನ್ನಾನ ಎನ್ನುವ ತುಳು ಜಾನಪದ ಶೈಲಿಯ ಹಾಡುಗಳ ಸಿ.ಡಿ ನಿರ್ಮಾಣ ಮಾಡಿದ್ದಾರೆ. ಜ್ಯೋತಿರ್ನಾದ, ಬ್ರಹ್ಮಶ್ರೀ ನಾರಾಯಣಗುರು ಮುಂತಾದ ಭಜನಾ ಸಿ.ಡಿಗಳಿಗೆ ಗೀತಾ ಸಾಹಿತ್ಯ ಒದಗಿಸಿದ್ದು, ಬೀರೆರೆಗರೋಡಿ, ಅಜನೆ, ಅಮ್ಮ, ಏರಾದುಪ್ಪು, ಏರೆಗ್ಲಾ ಪನೋಡ್ಚಿ, ದೈವಚಾವಡಿ, ಕೆಂಚನ ಕುರ್ಲರಿ, ಕಾರ್ಗಿಲ್ ಕಂಬನಿ, ಕಾರ್ನಿಕದ ಬಬ್ಬುಬಬ್ಬರ್ಯೆರ್, ಮಾಯೆದ ಶಕ್ತಿಲು, ಶಾಂತಿನಗರ ಸೆಕೆಂಡ್‍ಕ್ರಾಸ್, ಹೀಗೆ 12 ತುಳು ನಾಟಕ ರಚಿಸಿದ್ದಾರೆಪ್ರಸಕ್ತ ವರುಷಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಭಾರತೀಯ ಯುವಜನ ಸೇವಾ ಸಂಘವು 2007 ರಲ್ಲಿ ಬಸವಶ್ರೀ ರಾಜ್ಯಯುವ ಪ್ರಶಸ್ತಿ ಹಾಗೂ ಯುವವಾಹಿನಿ ಸಂಸ್ಥೆ 2011 ರಲ್ಲಿ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಭಾಕರ ನೀರ್‍ಮಾರ್ಗ :

ಪ್ರಭಾಕರ ನೀರ್‍ಮಾರ್ಗ, ಇವರು ನೀರ್‍ಮಾರ್ಗದಲ್ಲಿ ಜನಿಸಿದರು. ಕತೆ, ಕಾದಂಬರಿ ಮತ್ತು ಕಿರು ನಾಟಕಗಳ ರಚನೆಯಲ್ಲಿ ಸಕ್ರಿಯರಾಗಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪಕುಲಸಚಿವ, ಅಂಚೆ ತೆರಪಿನ ಶಿಕ್ಷಣ ನಿರ್ದೇಶನಾಲಯದ ಉಪನಿರ್ದೇಶಕ, ಉಪಕುಲಸಚಿವ ಮತ್ತು ಎಸ್ಟೇಟ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇಪ್ಪತ್ತೊಂದು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಪ್ರತಿಶೋಧ, ಧೀಂಗಣ, ತಿಲ್ಲಾನ, ದಳವಾಯಿ ದುಗ್ಗಣ, ತಂಬಿಲ, ಭೀಕರ ನ್ಯಾಯಕಟ್ಟೆ, ಕಂಬುಳ, ಮಥನ, ಜಾತ್ರೆ, ಭಾರಣೆ, ವೇಷ, ದಿಬ್ಬಣ, ಗುರಿಕಾರ, ತರಿಕಿಟ, ಕಾರ್ಣಿಕ, ಮಂಗಳೂರು ಕ್ರಾಂತಿ ಪ್ರಮುಖ ಕೃತಿಗಳಾಗಿವೆ. ಮಂಗಳೂರು ಕ್ರಾಂತಿಪ್ರತಿಷ್ಠಿತ ವಿಶುಕುಮಾರ್ ಪ್ರಶಸ್ತಿ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದೆ.

ಇವರ ಮಂಗಳೂರು ಕ್ರಾಂತಿಐತಿಹಾಸಿಕ ನಾಟಕವು 2007-08ನೇ ಸಾಲಿನ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಬಾನುಲಿ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಾಟಕ ಎಂಬ ಬಹುಮಾನಕ್ಕೆ ಭಾಜನವಾಗಿರುತ್ತದೆ.

ಹೊಸ ಪ್ರತಿಭಾನ್ವಿತ ಲೇಖಕರನ್ನು ಪೆÇ್ರೀತ್ಸಾಹಿಸುವ ಉದ್ದೇಶದಿಂದ ಸ್ವಂತ ನೆಲೆಯಲ್ಲಿ ಹೇಮಾವತಿ ಪ್ರಕಾಶನದ ಮೂಲಕ ಎಂಟು ಕೃತಿಗಳನ್ನು ಪ್ರಕಟಿಸಿರುತ್ತಾರೆ.

ಹೊಸ ಪ್ರತಿಭಾನ್ವಿತ ಕಥೆಗಾರರು ಮತ್ತು ಕವಿಗಳನ್ನು ಪೆÇ್ರೀತ್ಸಾಹಿಸುವ ದೃಷ್ಟಿಯಿಂದ ಪ್ರಭಾಕರ ನೀರ್‍ಮಾರ್ಗ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

ಇವರ ಸಮಗ್ರ ಕಾದಂಬರಿಗಳ ಕುರಿತು ಸಂಶೋಧನಾ ಅಧ್ಯಯನವನ್ನು ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ಶ್ರೀ ಕಿಟ್ಟುರವರು ಶ್ರೀ ಪ್ರಭಾಕರ ನೀರ್‍ಮಾರ್ಗ ಅವರ ಕಾದಂಬರಿಗಳಲ್ಲಿ ತುಳುವ ಸಂಸ್ಕೃತಿಯ ಪ್ರತಿನಿಧೀಕರಣಎಂಬ ವಿಷಯದಲ್ಲಿ ಎಂ. ಫಿಲ್ ಪದವಿಯನ್ನು ಕನ್ನಡ ವಿ. ವಿ ಹಂಪಿಯಿಂದ ಪಡೆದಿದ್ದಾರೆ.

ನಮ್ಮ ಟಿವಿಯ ಕಾರ್ಯಕ್ರಮದ ಪಟ್ಟಾಂಗಕಟ್ಟೆಯಲ್ಲಿ ತುಳು ಸಂಸ್ಕೃತಿ, ತುಳುವರ ಬದುಕು, ಆಚರಣೆಗಳು ಸಂಪ್ರದಾಯಗಳ ಬಗ್ಗೆ ನಿರೂಪಕನಾಗಿ ಕಾರ್ಯ ನಿರ್ವಹಿಸಿದ್ದಾರೆ.