ಗೌರವ ಪ್ರಶಸ್ತಿ 1995

ಗೌರವ ಪ್ರಶಸ್ತಿ 1995

ಶ್ರೀ ಕೆದಂಬಾಡಿ ಜತ್ತಪ್ಪ ರೈ
ಕ್ಷೇತ್ರ : ಸಾಹಿತ್ಯ
ತುಳು ಸಾಹಿತ್ಯದ ಹೆಸರಾಂತ ಕವಿ ಸಾಹಿತಿ ಶ್ರೀ ಕೆದಂಬಾಡಿ ಜತ್ತಪ್ಪ ರೈ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿನ ೧೯೧೬ ರಂದು ಜನಿಸಿದರು. ತುಳು ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಸೇವೆಯನ್ನು ಸಲ್ಲಿಸಿದವರು.
ಕೃತಿಗಳು, ನಾಟಕಗಳು : ತುಳುತ್ತ ಪೋರ್ಲು ಅಜ್ಜಬಿರು
ಕುಜಿಲೆ ಪೂಜೆ (ಮೂಲ ಡಿ. ವಿ. ಜಿ. ಕನ್ನಡೊಗು ಕಣತ್ತಿನ ಉಮರ್ ಖಯ್ಯಾಮನ ರುಬಾಯತ್) ಅಸೆನಿಯಾಗೊ ಕಾಂತಗ ಜೋಗಿ (ಮೂಲ ಆಂಗ್ಲ ಕವಿ ಬೌನಿಂಗ್ನ ದಿ ಪೈಪರ್ ಬೊಕ್ಕ ಕುವೆಂಪು ಅವರ ಕಿಂದರ ಜೋಗಿ).
ಪುಸ್ತಕಗಳು : ಬೇಟೆಯ ನೆನಪುಗಳು, ಈಡೊಂದು ಹುಲಿಯೆರಡು ಬೇಟೆಯ ಉರುಳು ಬೆಟ್ಟದ ತಪ್ಪಲಿಂದ ಕಡಲ ತಡಿಯವರೆಗೆ, ಈ ಪುಸ್ತಕಗಳು ಶ್ರೀ ಕೆದಂಬಾಡಿ ಜತ್ತಪ್ಪ ರೈ ಅವರಿಗೆ ತುಂಬಾ ಖ್ಯಾತಿಯನ್ನು ತಂದಿವೆ. ಬೇಟೆಯ ನೆನಪುಗಳು ಕೃತಿಗೆ ಕರ್ನಾಟಕ ಸಆಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭ್ಯವಾಗಿದೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿ ಗೌರವ ಪಡೆದ ಶ್ರೀ ಕೆದಂಬಾಡಿ ಜತ್ತಪ್ಪ ರೈಗಳು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು.
ಹಿರಿಯ ಸಾಹಿತಿ ಶ್ರೀ ಕೆದಂಬಾಡಿ ಜತ್ತಪ್ಪ ರೈ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೧೯೯೪-೯೫ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

 

ಶ್ರೀ ಮಂದಾರ ಕೇಶವ ಭಟ್ಟ
ಕ್ಷೇತ್ರ : ಸಾಹಿತ್ಯ
ತುಳು ಭಾಷೆಗೆ ಮಹಾಕಾವ್ಯದ ಮಾಧ್ಯಮವೆನಿಸುವ ಸಾಮರ್ಧ್ಯ, ಯೋಗ್ಯತೆ ಇದೆ ಎಂಬುದನ್ನು ಆಧುನಿಕ ಕಾಲದಲ್ಲಿ ತಮ್ಮ ಸಾಹಿತ್ಯ ಸಾಧನೆಯಿಂದ ರುಜುವಾತು ಮಾಡಿ ತೋರಿಸಿದ ತುಳು ಮಹಾಕವಿ ವಿದ್ವಾನ್ ಶ್ರೀ ಮಂದಾರ ಕೇಶವ ಭಟ್ಟರು ಮಂಗಳೂರಿನ ಕುಡುಪು ಸಮೀಪದ ಮಂದಾರ ಮನೆಯಲ್ಲಿ ೧೯೧೮ರಲ್ಲಿ ಜನಿಸಿದ ಶ್ರೀ ಮಂದಾರರು ಶಾಲೆಯಲ್ಲಿ ಪಡೆದದ್ದು ಪ್ರಾಥಮಿಕ ಶಿಕ್ಷಣ ಮಾತ್ರ. ಮತ್ತಿನ ಕಲಿಕೆಯೆಲ್ಲ ಅವರ ಖಾಸಗಿ ಗಳಿಕೆ. ಕವಿಯಾಗಿ, ಕಲಾವಿದರಾಗಿ, ವಿದ್ವಾಂಸರಾಗಿ, ಅಧ್ಯಾಪಕರಾಗಿ ಮಂದಾರರು ನಿರ್ವಹಿಸಿದ ಕೆಲಸ ಹಿರಿಯವಾದದ್ದು.
ಕೃತಿಗಳು: ಮಹಾಕಾವ್ಯ ಮಂದಾರ ರಾಮಾಯಣ ಅಲ್ಲದೆ ತುಳುವಿನಲ್ಲಿ ‘ಜಾಗಂಟೆ’ ಎಂಬ ಕವನ ಸಂಕಲನ, ‘ಕನತ್ತ ಪೊಣ್ಣು’ ಎಂಬ ನಾಟಕ (ಮೂಲ: ಭಾಸನ ಸ್ವಪ್ನವಾಸವದತ್ತ) ಕನ್ನಡದಲ್ಲಿ ‘ಮಂದಾರ ಮಾಲೆ’ ಅಲ್ಲದೆ ಅನೇಕ ಲೇಖನಗಳು ಅಚ್ಚಾಗಿವೆ.
ದೀರ್ಘ ಕಾವ್ಯ ‘ಬೀರದ ಬೊಲ್ಪು’, ಹುಟ್ಟು ‘ಜೋಗಿಯ ಹಾಡು’, ಮೊದಲಾದ ಕಾವ್ಯ ಕೃತಿಗಳು, ಉನ್ಮತ್ತ ರಾಘವ’, ‘ಪ್ರೇಕ್ಷಾರ್ಣ’ ಇತ್ಯಾದಿ ನಾಟಕಗಳು,
ನಾಟಕಗಳು: ಶ್ರೀರಾಮ ಪರಂಧಾಮ, ಗೋವರ್ದನೋದ್ಧರಣ, ಪುಣ್ಯಕೋಟಿ ಈ ಯಕ್ಷಗಾನ ಪ್ರಸಂಗಗಳು ಮುಖ್ಯವಾದವು.
ಪ್ರಶಸ್ತಿ: ಮಂದಾರ ರಾಮಾಯಣ ಕಾರಣವಾಗಿ ತುಳುನಾಡಿನುದ್ದಕ್ಕೂ ಹಿರಿಮೆಯ ಹೆಸರಾದ ಶ್ರೀ ಮಂದಾರರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭ್ಯವಾಗಿದೆ. ಬೇರೆ ಬೇರೆ ಸಂಘ ಸಂಸ್ಥೆಗಳಿಂದ ಸನ್ಮಾನ ಸಂದಿದೆ. ಕಾಡಿಪಳ್ಳದಲ್ಲಿ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಹಿರಿಯ ಸಾಹಿತಿ ಶ್ರೀ ಮಂದಾರ ಕೇಶವ ಭಟ್ಟ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೧೯೯೪-೧೯೯೫ ಸಾಲಿನ ಗೌರವ ಪ್ರಶಸ್ತಿಯಯನ್ನು ನೀಡಿ ಗೌರವಿಸಲಾಗಿದೆ.