ಧ್ಯೇಯ ಮತ್ತು ಉದ್ದೇಶಗಳು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವ್ಯಾಪ್ತಿಯ ಲ್ಲಿ ಎಲ್ಲ ಅಕಾಡೆಮಿಗಳ ಕಾರ್ಯ ಚಟುವಟಿಕೆಗಳಲ್ಲಿ ಏಕರೂಪತೆಯ ನ್ನು ತಂದು ಅವು ಯೋಜಿತವಾಗಿ ಹಾಗೂ ಸಮನ್ವಿತವಾಗಿ ನಡೆಯುವ ದೃಷ್ಟಿಯಿಂದ ಏಕರೂಪದ ನಿಯ ಮಾವಳಿಗಳನ್ನು ಅಕಾಡೆಮಿಗಳು ಹೊಂದಿರುತ್ತದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಈ ಕೆಳಗಿನ ಧ್ಯೇಯ ಮತ್ತು ಉದ್ದೇಶಗಳನ್ನು ಹೊಂದಿದೆ.

  • ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜಾನಪದ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು. ಈ ಉದ್ದೇಶಕ್ಕಾಗಿ ಸಂಶೋಧನಾಲಯ, ಗ್ರಂಥಾಲಯ ಮುಂತಾದುವುಗಳನ್ನು ಸ್ಥಾಪಿಸುವುದು.
  • ತುಳು ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಅದೇ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕ ದಲ್ಲಿರುವ ಇತರ ಸಂಸ್ಥೆಗಳೊಡನೆ ಸಹಕರಿಸುವುದು; ಉತ್ತೇಜನ ನೀಡುವುದು.
  • ಅಕಾಡೆಮಿಯ ಕಾರ್ಯ ಚಟುವಟಿಕೆಗಳ ಉದ್ದೇಶಕ್ಕಾಗಿ ಸರ್ಕಾರ ದಿಂದ ಪಡೆದ ಅನುದಾನ ಹಾಗೂ ವಿವಿಧ ಮೂಲಗಳಿಂದ ವಂತಿಕೆಗಳು ಮತ್ತು ದಾನಗಳ ಮೂಲಕ ನಿಧಿ ಸಂಗ್ರಹಿಸಿ ಆ ನಿಧಿಯ ನ್ನು ಅಕಾಡೆಮಿಯ ಕಾರ್ಯೋದ್ದೇಶಗಳಿಗೆ ಬದ್ಧವಾಗಿ ಬಳಸಿದ ಬಗ್ಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, ಕರ್ನಾಟಕ ಆರ್ಥಿಕ ಸಂಹಿತೆ, ಸಾದಿಲ್ವಾರು ಸಂಹಿತೆ ಪ್ರಕಾರ ಖರ್ಚಿನ ವಿವರಗಳನ್ನು ಇಡುವುದು. ವಂತಿಕೆ ಹಾಗೂ ದಾನ ಕೊಟ್ಟವರು ಅಪೇಕ್ಷಿಸಿದಲ್ಲಿ ಅವರ ವಂತಿಕೆ ಹಾಗೂ ದಾನದ ಮೊತ್ತದ ಖರ್ಚಿನ ವಿವರಗಳನ್ನು ಲಿಖಿತವಾಗಿ ಅವರಿಗೆ ಒದಗಿಸುವುದು.
  • ಅಕಾಡೆಮಿಯು ತನ್ನ ವಿಷಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಾರ್ಯಗಾರ, ಸಂವಾದ, ಉನ್ನತಮಟ್ಟದ ಅಕಾಡೆಮಿಕ್ ಉತ್ಸವ ಮುಂತಾದ ಕಾರ್ಯ ಕ್ರಮಗಳನ್ನು ನಡೆಸುತ್ತದೆ. ಈ ಕಾರ್ಯ ಕ್ರಮಗಳನ್ನು ಎರಡು ವಿಧಾನಗಳಲ್ಲಿ ನಡೆಸಲು ಅವಕಾಶವಿರುತ್ತದೆ.

(i) ಅಕಾಡೆಮಿಗಳೇ ನೇರವಾಗಿ ಈ ಕಾರ್ಯ ಕ್ರಮಗಳನ್ನು ರೂಪಿಸಿ ವ್ಯವಸ್ಥೆಗೊಳಿಸುವುದು.
(ii) ವಿವಿಧ ಸಂಘ-ಸಂಸ್ಥೆಗಳ ಜೊತೆ ಸಂಯುಕ್ತವಾಗಿ ಕಾರ್ಯ ಕ್ರಮಗಳನ್ನು ವ್ಯವಸ್ಥೆಗೊಳಿಸುವುದು.

  • ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಸೂಕ್ತ ಸಲಹೆಗಳನ್ನು ನೀಡುವುದು.
  • ಅಕಾಡೆಮಿಯು ತನ್ನ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ಪುಸ್ತಕ ಪ್ರಕಟಣೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯ ಮದಂತೆ ಮಾಡುತ್ತದೆ. ಈ ಪ್ರಕಟಣೆಗಳಿಗೆ ವಾರ್ಷಿ ಕ ಅನುದಾನದಲ್ಲಿ ವಾರ್ಷಿಕ ಕಾರ್ಯ ಕ್ರಮಗಳಿಗೆ ಗೊತ್ತುಪಡಿಸಿದ ಮೊತ್ತದಲ್ಲಿ ಶೇ. 15ರಷ್ಟನ್ನು ಮಾತ್ರ ಹಂಚಿಕೆ ಮಾಡಿ ಬಳಸಿಕೊಳ್ಳುತ್ತದೆ.
  • ಅಕಾಡೆಮಿಯು ತನ್ನ ಕ್ಷೇತ್ರ ಹಾಗೂ ವ್ಯಾಪ್ತಿಗೆ ಸೇರಿದ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡುತ್ತದೆ. ತನ್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ ಮೇಲೆ ತಿಳಿಸಿದಂಥ ಧ್ಯೇಯೋ ದ್ದೇಶಗಳಿಗೆ ಅನುಗುಣವಾದ ಕಾರ್ಯಗಳನ್ನು ನಿರ್ವಹಿಸುತ್ತದೆ.
  • ಆರ್ಥಿಕ ವರ್ಷದ ಪ್ರಾರಂಭದಲ್ಲಿ ಆಯ ವ್ಯಯದ ಪರಿಮಿತಿಯಲ್ಲಿಯೇ ಕ್ರಿಯಾಯೋಜನೆ ಮತ್ತು ಬಜೆಟನ್ನು ಸಿದ್ಧಪಡಿಸಿ ಸರ್ಕಾರ ದಿಂದ ಅನುಮೋದನೆ ಪಡೆದು ಆ ಪ್ರಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ.
  • ತುಳು ಭಾಷೆ, ಸಾಹಿತ್ಯ, ಕಲೆ, ಜಾನಪದ ಮತ್ತು ಸಂಶೋಧನಾ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರತಿವರ್ಷವೂ ಕೊಡುತ್ತದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆ, ಸಾಹಿತ್ಯ, ಕಲೆ ಮುಂತಾದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಯ ನ್ನು ಪರಿಗಣಿಸಿ ಕರ್ನಾಟಕ ದ ಮೂವರನ್ನು ಮೀರದಂತೆ ಗೌರವ ಪ್ರಶಸ್ತಿಗಳನ್ನು ಕೊಡುತ್ತದೆ. ಗೌರವ ಪ್ರಶಸ್ತಿಯ ಮೊತ್ತ ತಲಾ ರೂ. 10,000 ನಗದು ಹಣ, ಫಲತಾಂಬೂಲ, ಶಾಲು, ಹಾರ, ಪ್ರಮಾಣಪತ್ರ, ಸ್ಮರಣಿಕೆಗಳನ್ನೊಳಗೊಂಡಿರುತ್ತದೆ. ಪುಸ್ತಕಗಳಲ್ಲಿ ಕನ್ನಡ – ತುಳು ಭಾಷಾಂತರವನ್ನು ಒಳಗೊಂಡಂತೆ ಗರಿಷ್ಠ ಮೂರು ಪುಸ್ತಕ ಬಹುಮಾನ ನೀಡಲು ಅವಕಾಶವಿದ್ದು, ಹೆಚ್ಚು ಪುಸ್ತಕಗಳು ಬಂದ ಪ್ರಕಾರವನ್ನು ಪರಿಗಣಿಸಿ, ಪ್ರತಿ ಪ್ರಕಾರದಲ್ಲೂ ಆ ವರ್ಷದಲ್ಲಿ ಕನಿಷ್ಠ 3 ಶೀರ್ಷಿಕೆಗಳಲ್ಲಿ ಪ್ರಕಟವಾಗಿರುವ ಪುಸ್ತಕಗಳನ್ನು ವಿದ್ವಾಂಸರಿಂದ ಮೌಲ್ಯಮಾಪನಗೊಳಿಸಿ ಆಯ್ಕೆಗೊಳಿಸಲಾಗುತ್ತದೆ. ಈ ಬಹುಮಾನವು ರೂ. 5,000 ನಗದು, ಶಾಲು, ಹಾರ, ಹಣ್ಞು, ಪ್ರಮಾಣ ಪತ್ರ, ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.

ಅಕಾಡೆಮಿಯ ಸಮಿತಿ ಮತ್ತು ಅಧಿಕಾರ ವರ್ಗ ಈ ಕೆಳಗಿನಂತಿರುತ್ತದೆ.
(1) ಅಧ್ಯಕ್ಷರು
(2) ಸದಸ್ಯರು (13 ಮಂದಿ)
(3) ನಿರ್ದೇಶಕರ ಪ್ರತಿನಿಧಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಯದ ಅಧಿಕಾರಿ
(4) ಅರ್ಥ ಸದಸ್ಯರು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು
(5) ರಿಜಿಸ್ಟ್ರಾರ್

ಅಕಾಡೆಮಿಯ ಕಾರ್ಯಚಟುವಟಿಕಗಳ ವಿವರ:
ಅಕಾಡೆಮಿಯ ಕಾರ್ಯಕ್ರಮಗಳು:- ಭಾಷಾ ಬೆಳವಣಿಗೆಗೆ ಪೂರಕವಾದ ಕಮ್ಮಟ, ವಿಚಾರಗೋಷ್ಠಿ, ಕವಿಗೋಷ್ಠಿ, ಸಂಸ್ಮರಣ ಕಾರ್ಯಕ್ರಮ, ಗ್ರಂಥ ಬಿಡುಗಡೆ, ಸಾಹಿತ್ಯಿಕ ಸಮಾವೇಶ, ಸಾಂಸ್ಕೃತಿಕ ಉತ್ಸವ, ಪ್ರಶಸ್ತಿ – ಫೆಲೋಶಿಪ್ ಪ್ರದಾನ ಕಾರ್ಯಕ್ರಮ, ಪುರಸ್ಕಾರ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ, ಕಲಾಮೇಳ, ಇಲ್ಲ್ ಇಲ್ಲಡ್ ತುಳುವಪ್ಪೆ, ತುಳು ಪುಸ್ತಕ ಮಾರಾಟ ಅಭಿಯಾನ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ, ಸಾಹಿತ್ಯ ಕರ್ನಾಗಳು, ಅಭಿನಂದನಾ ಕಾರ್ಯಕ್ರಮಗಳು, ದತ್ತಿನಿಧಿ ಉಪನ್ಯಾಸ ಮತ್ತು ಬಹುಮಾನ ಪ್ರದಾನ ಕಾರ್ಯಕ್ರಮ, ಕೃತಿ ಬಿಡುಗಡೆ ಸಮಾರಂಭಗಳು, ತುಳು ಉತ್ಸವ, ತುಳು ಪರ್ಬ, ತುಳು ಸಾಹಿತಿ ಕಲಾವಿದರ ಶತಮಾನೋತ್ಸವ, ತುಳು ಅಕಾಡೆಮಿಯ ದಶಮಾನೋತ್ಸವ ಕಾರ್ಯಕ್ರಮ, ತುಳು ಮಹನೀಯರುಗಳನ್ನು ಅಭಿನಂದಿಸುವ ಸಲುವಾಗಿ ತಿಂಗಳ ಕಾರ್ಯಕ್ರಮಗಳು, ತುಳುವೇತರರಿಗಾಗಿ ತುಳು ಕಲಿಕೆ ಯೋಜನೆ ಇತ್ಯಾದಿ ತುಳುವೇತರರಿಗಾಗಿ ತುಳು ಕಲಿಕೆ ಯೋಜನೆ ಇತ್ಯಾದಿ, ಅಲ್ಲದೆ ಅಕಾಡೆಮಿಯ ಸಹಯೋಗದಲ್ಲಿ ಹಾಗೂ ಸಹಾಯಧನದಲ್ಲಿ ನಡೆದ ಕಾರ್ಯಕ್ರಮಗಳು. ಹೊರನಾಡಿನಲ್ಲಿ ಕಾರ್ಯಕ್ರಮ ನಡೆದ ಸ್ಥಳಗಳು: ಕಾಸರಗೋಡು, ಮುಂಬಯಿ, ಚೆನ್ನೈ, ತಿರುವನಂತಪುರ, ಗೋವಾ, ಬರೋಡ, ಪೂನಾ, ಸೂರತ್, ದೆಹಲಿ, ವಿೂರಜ್. ಇತ್ಯಾದಿ ಕಾರ್ಯಕ್ರಮಗಳು.

ಅಕಾಡೆಮಿಯ ಪ್ರಕಟಣೆಗಳು:- ಅಕಾಡೆಮಿ ವಿವಿಧ ಪ್ರಕಾರಗಳಾದ ಮರೆಯಬಾರದ ತುಳುವರು ಮಾಲಿಕೆಯಲ್ಲಿ ತುಳು ಮತ್ತು ಕನ್ನಡದಲ್ಲಿ 29 ಪುಸ್ತಕಗಳು, ವಿಶೇಷ ಘಟಕ ಯೋಜನೆಯಲ್ಲಿ 3 ಪುಸ್ತಕಗಳು, ಮಕ್ಕಳಿಗಾಗಿ ತುಳು ಕತೆಗಳು ಮಾಲಿಕೆಯಲ್ಲಿ ತುಳು ಮತ್ತು ಕನ್ನಡದಲ್ಲಿ 26 ಪುಸ್ತಕಗಳು, ಇತರೆ ಪ್ರಕಟಣೆಗಳು ಮಾಲಿಕೆಯಲ್ಲಿ 45 ಪುಸ್ತಕಗಳು, ಸುವರ್ಣ ಕರ್ನಾಟಕಯೋಜನೆಯಡಿ 17 ಪುಸ್ತಕಗಳು, ಒಟ್ಟು 120 ಪುಸ್ತಕಗಳನ್ನು ಹಾಗೂ ತ್ರೈಮಾಸಿಕ ತುಳು ಸಂಚಿಕೆ ಮದಿಪು ಸಂಚಿಕೆಯ 50 ಸಂಚಿಕೆ ಒಟ್ಟಾರೆ 170 ಪುಸ್ತಕಗಳನ್ನು ಅಕಾಡೆಮಿ ಪ್ರಕಟಿಸಿದೆ. ಇದರೊಂದಿಗೆ ಹತ್ತನೇ ವರ್ಷದ ಸಾಹಿತ್ಯ ಸಿರಿ ಎನ್ನು ತುಳು ಸ್ಮರಣ ಸಂಚಿಕೆಯನ್ನು ಪ್ರಕಟಿಸಿದೆ. ಮದಿಪು ಸಂಚಿಕೆಯ ಪ್ರಕಟಣೆಯ ಮೂಲಕ ಸುಮಾರು 2 ರಿಂದ 3 ಸಾವಿರ ಲೇಖಕರಿಗೆ ಬರವಣಿಗೆಗೆ ಅವಕಾಶ ಕಲ್ಪಿಸಲಾಗಿದೆ.

ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಗಳು:- ತುಳುವಿನಲ್ಲಿ ಸಾಧನೆ ಮಾಡಿದ ಹಿರಿಯ ಮೂವರು ಗಣ್ಯರನ್ನು ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಅದರೊಂದಿಗೆ ತುಳುವಿನ ಮೂವರು ಉತ್ತಮ ಲೇಖಕರ ಪುಸ್ತಕಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸುತ್ತದೆ. ಈ ವರೆಗೆ 54 ಹಿರಿಯರಿಗೆ ಗೌರವ ಪ್ರಶಸ್ತಿ ಮತ್ತು 79 ಲೇಖಕರನ್ನು ಪುಸ್ತಕ ಬಹುಮಾನ ನೀಡಿ ಗೌರವಿಸಲಾಗಿದೆ. ಇದರೊಂದಿಗೆ ಇಬ್ಬರು ತುಳುವಿನ ಕೆಲಸ ಮಾಡಿದ ಗಣ್ಯರಿಗೆ ಗೌರವ ಫಲೋಶಿಪ್ ನೀಡಿ, 8 ಜನ ಜಾನಪದ ಕಲಾವಿದರಿಗೆ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಅಲ್ಲದೆ 62 ಕಲಾವಿದರನ್ನು ಸನ್ಮಾನ ಮಾಡಿ ಅಭಿನಂದಿಸಿದೆ.

ಮಾಹಿತಿ ಕೇಂದ್ರ ಆಧ್ಯಯನ ಕೇಂದ್ರ ನಿರ್ವಹಣೆ:- ಅಕಾಡೆಮಿ ಅಧ್ಯಯನ ಮತ್ತು ಮಾಹಿತಿಗಾಗಿ ವಿವಿಧ ಪುಸ್ತಕಗಳ ಮಾಹಿತಿ ಕೇಂದ್ರ-ಅಧ್ಯಯನ ಕೇಂದ್ರವನ್ನು ಹೊಂದಿದೆ. ಇದರಲ್ಲಿ 1500 ಗ್ರಂಥಗಳು, 25 ಅಡಿಯೋ ಕ್ಯಾಸೆಟ್‍ಗಳು, 100 ವಿಡಿಯೋ ಕ್ಯಾಸೆಟ್‍ಗಳು, ಕಲಾ ಗ್ಯಾಲರಿಯ ಪೊಟೊಗಳು- 600, ವಿವಿಧ ಪೊಟೋ ಸಂಗ್ರಹಗಳು- 20000, ಸುವರ್ಣ ಕರ್ನಾಟಕಯೋಜನೆಯ ಸಿಡಿಗಳು -24, ತಾಳೆಗರಿ ಸಿಡಿಗಳು- 7, ತಾಳೆಗರಿ ಸಂಗ್ರಹದ ಬಗೆಗಿನ ಮಾಹಿತಿ ಪುಸ್ತಕಗಳು-2 ಮುಂತಾದವುಗಳನ್ನು ಹೊಂದಿರುತ್ತದೆ.

ಕಮ್ಮಟ, ಶಿಬಿರ, ಕಾರ್ಯಗಾರ, ತರಬೇತಿಗಳು:- ಅಕಾಡೆಮಿಯ ಧ್ಯೇಯ ಮತ್ತು ಉದ್ದೇಶಗಳಿಗನುಗುಣವಾಗಿ, ವಿವಿಧ ರೀತಿಯ ತುಳು ಬರವಣಿಗೆ, ಅನುವಾದ, ನಾಟಕ ರಚನಾ ಕಮ್ಮಟ, ಕತೆ ಕಾದಂಬರಿ ರಚನಾ ಕಮ್ಮಟ, ಕಾವ್ಯ ರಚನಾ ಕಮ್ಮಟ, ಭಾವಗೀತೆ ಗಾಯನ ರಚನಾ ಕಮ್ಮಟ, ಸಾಹಿತ್ಯ ರಚನಾ ಕಮ್ಮಟ, ಮಕ್ಕಳ ನಾಟಕ ತರಬೇತಿ ಕಮ್ಮಟ, ಸಂಶೋಧನಾ ಯೋಜನೆಯ ಕಮ್ಮಟ, ಜಾನಪದ ಕುಣಿತಗಳ ತರಬೇತಿ, ಅಲ್ಲದೆ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ವಿವಿಧ ಕಮ್ಮಟಗಳು, ಹಾಗೂ ತುಳುವನ್ನು ಪ್ರಾಥಮಿಕ ಶಾಲೆಯಿಂದ ಬೋಧನೆಯಲ್ಲಿ ಅಳವಡಿಸುವ ಉದ್ದೇಶದಿಂದ ಶಾಲಾ ಶಿಕ್ಷಕರಿಗೆ ತರಬೇತಿ ಕಮ್ಮಟಗಳು, ಮೊದಲಾದ ಕಮ್ಮಟಗಳನ್ನು ನಡೆಸಿದೆ.

ರಾಜ್ಯ ಅಕಾಡೆಮಿಗಳೊಂದಿಗೆ ಕಾರ್ಯಕ್ರಮ:- ಅಕಾಡೆಮಿಯ ಅಂಗರಚನೆಯ ನಿಯಮಾವಳಿಗಳಂತೆ, ಕರ್ನಾಟಕದ ವಿವಿಧ ಅಕಾಡೆಮಿಗಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವಲ್ಲಿ ಕೆಲಸ ನಿರ್ವಹಿಸುತ್ತಿವೆ. ತುಳು, ಕೊಂಕಣಿ, ಕೊಡವ ಮತ್ತು ಉರ್ದು ಭಾಷೆ, ಕಲೆ ಮತ್ತು ಸಂಸ್ಕೃತಿಗಳನ್ನು ಪರಸ್ಪರ ಪರಿಚಯಿಸುವ ಉದ್ದೇಶದಿಂದ ನಾಲ್ಕು ಭಾಷಾ ಅಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಪ್ರದೇಶಗಳಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು “ಸಾಂಸ್ಕೃತಿಕ ಸಂಗಮ” (ಭಾಷಾ ಬಾಂಧವ್ಯ) ಎನ್ನುವ ಕಾರ್ಯಕ್ರಮವನ್ನು ನಡೆಸಲು ಅಕಾಡೆಮಿ ಯೋಜಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ತುಳು, ಕೊಂಕಣಿ, ಮತ್ತು ಕೊಡವ ಅಕಾಡೆಮಿಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಮಂಗಳೂರು, ಉಡುಪಿ, ಮಡಿಕೇರಿ, ಬೆಂಗಳೂರು, ಮೈಸೂರಿನಲ್ಲಿ ನಡೆಸಿಕೊಂಡು ಬರಲಾಗಿದೆ. ಇದರೊಂದಿಗೆ ಕನ್ನಡ ಸಂಸ್ಕೃತಿ ಇಲಾಖೆ, ಕೊಂಕಣಿ ಅಕಾಡೆಮಿ ಮತ್ತು ತುಳು ಅಕಾಡೆಮಿ ಸಹಯೋಗದಲ್ಲಿ ತ್ರಿಭಾಷಾ ಬಾಂಧವ್ಯ ಕಾಯಕ್ರಮಗಳನ್ನು ಚಿಕ್ಕಮಗಳೂರು, ದಾವಣಗೆರೆ, ಉಡುಪಿಗಳಲ್ಲಿ ತುಳು ಉತ್ಸವ , ಸಂಗೀತೋತ್ಸವ ಕಾರ್ಯಕ್ರಮಗಳನ್ನು ಅಕಾಡೆಮಿ ನಡೆಸಿದೆ.

ಸ್ವಾತಂತ್ರೋತ್ಸವದ 50ನೇ ವರ್ಷ ಆಚರಣೆ:- ಸ್ವಾತಂತ್ರ್ಯೋತ್ಸವ ಸುವರ್ಣೋತ್ಸವದ ಅಂಗವಾಗಿ ಬಂಗಾರ್ ಪರ್ಬದ ಸಿಂಗಾರ ಪದೊಕುಲು ಎನ್ನುವ ಕೃತಿಯನ್ನು ಅಕಾಡೆಮಿ ಪ್ರಕಟಿಸಿರುತ್ತದೆ. ಅಲ್ಲದೆ 1994ರಲ್ಲಿ ಅಕಾಡೆಮಿ ಸ್ಥಾಪನೆಗೊಂಡು ಹತ್ತು ವರ್ಷಗಳು ತುಂಬಿದ ನೆನಪಿನಲ್ಲಿ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಆಚರಿಸಿದ್ದು, ಈ ಅಂಗವಾಗಿ ಸಾಹಿತ್ಯ ಸಿರಿ ಎನ್ನುವ ಸ್ಮರಣ ಸಂಚಿಕೆಯನ್ನು ಅಕಾಡೆಮಿ ಪ್ರಕಟ ಮಾಡಿದೆ.

ತುಳು ಲೇಖಕರಿಗೆ ಪ್ರೋತ್ಸಾಹ:- ತುಳು ಭಾಷೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮದಿಪು ಎನ್ನುವ ತ್ರೈಮಾಸಿಕ ಸಂಚಿಕೆಯನ್ನು ಅಕಾಡೆಮ ಪ್ರಕಟ ಮಾಡಿ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತದೆ. ಇದರೊಂದಿಗೆ ತುಳು ಲೇಖಕ ಸಂಪಾದಕರಿಂದ ತುಳು ಕೃತಿಗಳನ್ನು ಖರೀದಿಸುವ ಮೂಲಕವೂ ಪ್ರೋತ್ಸಾಹ ನೀಡುತ್ತದೆ.

ವಿಶೇಷ ಘಟಕ ಯೋಜನೆ:- ಕರ್ನಾಟಕಸರಕಾರದ ವಿಶೇಷ ಘಟಕ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗಾಗಿ ನಡೆಸಿದ ಕಾರ್ಯಕ್ರಮಗಳು : 1. ದುಡಿ ಸಡಗರ : ದುಡಿ ಕುಣಿತದ ವಿವಿಧ ಪ್ರಕಾರಗಳ ಪ್ರದರ್ಶನ, ವಿಚಾರಗೋಷ್ಠಿ ಮತ್ತು ಸಂವಾದ 2. ನಲಿಕೆ – ಕಲಿಕೆ : ತುಳು ಜನಪದ ಕುಣಿತಗಳ ತರಬೇತಿ ಕಮ್ಮಟ ; 3. ಪಾಣಾರ – ನಲಿಕೆ ಪಾಣಾರ ನಲಿಕೆ ಜನಾಂಗದ ವಿವಿಧ ಕುಣಿತಗಳ ಪ್ರದರ್ಶನ ಮತ್ತು ವಿಚಾರಗೋಷ್ಠಿ ಕಲಾವಿದರೊಂದಿಗೆ ಸಂವಾದ, ಕರಕುಶಲ ವಸ್ತು ಪ್ರದರ್ಶನ ಮತ್ತು ತುಳು ಯಕ್ಷಗಾನ ಪ್ರದರ್ಶನ 4. ಕುಡಿಯರ ಕನಸು – ಮಲೆ ಕುಡಿಯರ ಸಾಂಸ್ಕೃತಿಕ ಉತ್ಸವ 5. ಕೊರಗ ರಂಗ – ಕೊರಗ ಮಕ್ಕಳಿಗೆ ರಂಗ ತರಬೇತಿ – ಸಾಂಸ್ಕೃತಿಕ ಪ್ರೇರಣೆ ಕುರಿತ ಕಮ್ಮಟ 6. ಜನಪದ ಪರಿಕರಗಳ ವಿತರಣೆ – ಪರಿಶಿಷ್ಟ ಜಾತಿಯ 10 ಕಲಾವಿದರಿಗೆ ಕರ್ನಾಟಕಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯದ ವಿಶೇಷ ಘಟಕ ಯೋಜನೆಯ ಸಹಾಯಧನದಿಂದ ಹಾರ್ಮೊನಿಯಂ, ವಾಲಗ, ಶ್ರುತಿ, ಟಂಕಿ ವಾದನಗಳ ವಿತರಣೆ ಮಾಡಲಾಗಿದೆ. ಅದಲ್ಲದೆ ದಲಿತ ಲೇಖಕರ ಮುಗೇರರು- ಜನಾಂಗ ಒಂದು ಅಧ್ಯಯನ ಗ್ರಂಥ, ಡಾ.ಬಾಬ ಸಾಹೇಭ ಅಂಬೇಡ್ಕರ್, ನಿಲೆ ಎನ್ನುವ ಮೂರು ಕೃತಿಗಳನ್ನು ಅಕಾಡೆಮಿ ಪ್ರಕಟಿಸಿರುತ್ತದೆ.

ತುಳು ಸಾಹಿತ್ಯ ಚರಿತ್ರೆ:- ತುಳು ಭಾಷೆ, ಸಾಹಿತ್ಯಕ್ಕೆ ಮಹತ್ತರವಾದ ಮತ್ತೊಂದು ಕೊಡುಗೆಯಾದ ತುಳುವಿನ ಮಹಾ ಗ್ರಂಥ ತುಳು ಸಾಹಿತ್ಯ ಚರಿತ್ರೆ ಗ್ರಂಥದ ಕ್ಷೇತ್ರ ಕಾರ್ಯ ಮಾಡಿ ಗ್ರಂಥದ ಪ್ರಕಟಣೆಗೆ ಹಂಪಿ ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಿ ಕೆಲಸ ನಿರ್ವಹಿಸಿದೆ.

ಸುವರ್ಣ ಕರ್ನಾಟಕಯೋಜನೆ:- 2005-06, 2006-2007ರಲ್ಲಿ ಕರ್ನಾಟಕ ಸುವರ್ಣ ಕರ್ನಾಟಕಮಹೋತ್ಸವವನ್ನು ಆಚರಿಸಿಕೊಂಡಿದ್ದು, ಈ ಅಂಗವಾಗಿ ವಿವಿಧ ಗ್ರಂಥಗಳನ್ನು ಅಕಾಡೆಮಿ ಪ್ರಕಟ ಮಾಡಿರುತ್ತದೆ. ಸುವರ್ಣ ಸಂಸ್ಕೃತಿ ದಿಬ್ಬಣದ ಸಂದರ್ಭದಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಿರುತ್ತದೆ. ಅಲ್ಲದೆ ವಿವಿಧ ಸಿ.ಡಿ.ದಾಖಲೀಕರಣ ಯೋಜನೆ, ತಾಳೆಗರಿ ಹಸ್ತಪ್ರತಿ ಮಾಹಿತಿ ಸಂಗ್ರಹಣೆ ಮತ್ತು ಹಸ್ತಪ್ರತಿಗಳ ದಾಖಲೀಕರಣ ಯೋಜನೆಯನ್ನು ಕೈಗೊಂಡು, ಇದರಲ್ಲಿ ತುಳು ನಾಡಿನ ಆರಾಧನೆಗಳಾದ ಭೂತಾರಾಧನೆ, ನಾಗಾರಾಧನೆ, ತುಳು ಜಾನಪದ ಕುಣಿತಗಳ ಪರಿಚಯ, ಯಕ್ಷಗಾನ ಪರಿಚಯ, ತುಳು ಸಿರಿ, ತುಳುನಾಡಿನ ಐತಿಹಾಸಿಕ ಸ್ಥಳಗಳು, ಅಕಾಡೆಮಿ ನಡೆದು ಬಂದ ದಾರಿ, ತುಳು ನಾಡಿನ ವೃತ್ತಿ ಪರಂಪರೆ, ಹಾಗೂ ತುಳು ನಾಡಿನ ಮಹನೀಯರ ವ್ಯಕ್ತಿ ಚಿತ್ರಣ ಎನ್ನುವ ವಿಷಯಗಳಲ್ಲಿ 10 ಸಿ.ಡಿ.ಗಳನ್ನು ದಾಖಲೀಕರಣ ಮಾಡಲಾಗಿದೆ.

ತುಳು ಓಲೆಗರಿಗ್ರಂಥಗಳ ಗ್ರಂಥಗಳು:- ತುಳು ಲಿಪಿಯಲ್ಲಿರುವ ಓಲೆಗರಿಗಳಲ್ಲಿರುವ ತುಳುವಿನ ಮಹಾನ್ ಗ್ರಂಥಗಳ ತಾಳೆಗರಿ ದಾಖಲೀಕರಣದೊಂದಿಗೆ ಪುಸ್ತಕ ರೂಪದಲ್ಲಿ ಮುದ್ರಿಸಿ ದಾಖಲೀಕರಣ ಮಾಡುವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸುವರ್ಣ ಕರ್ನಾಟಕಯೋಜನೆಯ ಇನ್ನೊಂದು ಯೋಜನೆ ತಾಳೆಗರಿ ಸಂಗ್ರಹ ಮತ್ತು ದಾಖಲೀಕರಣ. ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಧರ್ಮಸ್ಥಳದ ಸಂಸ್ಕೃತಿ ಸಂಶೋಧನಾ ಪ್ರತಿಪ್ಠಾನ, ಉಡುಪಿ ಜಿಲ್ಲೆಯಿಂದ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರ ಹಾಗೂ ಕಾಸರಗೋಡು ವಲಯದಿಂದ ಡಾ. ರಾಧಾಕೃಷ್ಣ ಬೆಳ್ಳೂರು – ಮಾಹಿತಿ ಸಂಗ್ರಹ ಮಾಡಿ ವರದಿ ಸಲ್ಲಿಸಿ ಯಶಸ್ವಿಗೊಳಿಸಿರುತ್ತಾರೆ. ಅಲ್ಲದೆ ತುಳು ವಿನ ಅಪೂರ್ವ ಗ್ರಂಥಗಳಾದ ವಿನಾಯಕ ಸ್ತುತಿ, ಅನಂತ ವೃತ ಕಥೆ, ತುಳು ಭಾಗವತ, ತುಳು ಮಹಾಭಾರತೊ, ಪುಣ್ಯಾಹ ವಿಧಿ, ತುಳು ರಾಮಾಯಣ, ಶ್ರೀಮನ್ಮಾರಾಯಣ ಮಹಾನ್ 7 ಗ್ರಂಥಗಳ ತಾಳೆಗರಿಗಳನ್ನು ದಾಖಲೀಕರಣ ಮಾಡಿಕೊಂಡು ಪುಸ್ತಕ ರೂಪದಲ್ಲಿ ಪ್ರಕಟ ಮಾಡಲಾಗಿದೆ. ಈ ಯೋಜನೆಯನ್ನು ಉಡುಪಿಯ ಪ್ರೊ.ಎಸ್.ಎ. ಕೃಷ್ಣರು ಅವರು ಸಂಯೋಜನೆ ಮಾಡಿ ಯಶಸ್ವಿಯಾಗಿ ಮಾಡಿರುತ್ತಾರೆ.

ಸಂಶೋಧನಾ ಯೋಜನೆ:- ಅಕಾಡೆಮಿಯಿಂದ ವಿವಿಧ ವಿಷಯಗಳಲ್ಲಿ ಅಧ್ಯಯನ ನಡೆಸುವವರಿಗೆ ಅವಕಾಶ ನೀಡುವ ಉದ್ದೇಶದಿಂದ ಸಂಶೋಧನಾ ಯೋಜನೆಯನ್ನು ಹಮ್ಮಿಕೊಂಡು ಎಂಟು ವಿಷಯಗಳ ಅಧ್ಯಯನ ನಡೆಸಿ, ಸಂಶೋಧನಾ ಕೃತಿಗಳನ್ನು ಪ್ರಕಟ ಮಾಡಿದೆ. ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತುಳು ನಾಟಕ ಕರ್ನಾ, ತುಳು ಸಂಗೀತ ಕರ್ನಾಗಳನ್ನು ನಡೆಸಿದೆ. ಅಕಾಡೆಮಿ ನಡೆಸಿದ ತುಳು ನಾಟಕ ಕರ್ನಾಯಲ್ಲಿ ಉತ್ತಮ ಸಾಹಿತ್ಯವೆಂದು ವಿದ್ವಾಂಸರಿಂದ ಅಭಿಪ್ರಾಯ ಪಡೆದ ಮೂರು ಕೃತಿಗಳನ್ನು ಅಕಾಡೆಮಿ ಪ್ರಕಟ ಮಾಡಿದೆ.

ಹೊರನಾಡು ಕಾರ್ಯಕ್ರಮಗಳು:- ಹೊರನಾಡಿನಲ್ಲಿ ಕಾರ್ಯಕ್ರಮಗಳು ಕರ್ನಾಟಕದ ಹೊರ ಜಿಲ್ಲೆಗಳಲ್ಲಿ ಹಾಗೂ ದೇಶದ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ. ಹೊರನಾಡಿನ ಕಾರ್ಯಕ್ರಮವಾಗಿ ತಿರುವನಂತಪುರ, ಕೊಯಮುತ್ತೂರು, ಮುಂಬಯಿ, ಪೂನಾ, ಬರೋಡ, ಸೂರತ್ ಹಾಗೂ ದೆಹಲಿ ಮೊದಲಾದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತು:- ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತಾಗಿ ಸಂಘ ಸಂಸ್ಥೆಗಳ ಅಕಾಡೆಮಿ ವಿವಿಧ ವಿಚಾರಗೋಷ್ಠಿಗಳನ್ನು ನಡೆಸಿತು. ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದ, ದಿ| ಅ. ಬಾಲಕೃಷ್ಣ ಶೆಟ್ಟಿಯವವರ ನೇತೃತ್ವದಲ್ಲಿ ನಿಯೋಗವೊಂದು 2001ರಲ್ಲಿ ಬೆಂಗಳೂರಿಗೆ ತೆರಳಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ದಿನಾಂಕ 25-6-2001ರಂದು ಬೆಂಗಳೂರಿನಲ್ಲಿ ಮನವಿ ಸಲ್ಲಿಸಿ, ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವ ಕುರಿತು ಕೇಂದ್ರ ಸರಕಾರಕ್ಕೆ ಒತ್ತಡ ತರಲು ವಿನಂತಿಸಲಾಯಿತು. ತದನಂತರ ರಾಜ್ಯ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. 2003ರಲ್ಲಿ ಸಮಸ್ತ ತುಳುವರ ಸಹಕಾರದೊಂದಿಗೆ, ಕರ್ನಾಟಕತುಳು ಸಾಹಿತ್ಯ ಅಕಾಡೆಮಿ, ಅಖಿಲಭಾರತ ತುಳು ಒಕ್ಕೂಟ ಮಂಗಳೂರು ಹಾಗೂ ತುಳು ಡೆವಲಪ್ಮೆಂಟ್ ಫಾರಂನ ನೇತೃತ್ವದಲ್ಲಿ ದೆಹಲಿಯಲ್ಲಿ ತುಳು ಸಮಾವೇಶ ನಡೆಸಿ, ಕೇಂದ್ರ ಸರ್ಕಾರಕ್ಕೆ ಆಗಿನ ಪ್ರಧಾನ ಮಂತ್ರಿಗಳಾಗಿದ್ದ, ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಆಗಿನ ಸಚಿವರಾದ ಮಾನ್ಯ ಶ್ರೀ ಜಾರ್ಜ್ ಫೆರ್ನಾಂಡಿಸ್ ಮತ್ತು ಶ್ರೀ ಫೆರ್ನಾಂಡಿಸ್ ಹಾಗೂ ಮಾನ್ಯ ಶ್ರೀ ವೀರಪ್ಪ ಮೊಯಿಲಿಯವರ ಸಮ್ಮುಖದಲ್ಲಿ ಮತ್ತೊಂದು ಮನವಿಯನ್ನು ದಿನಾಂಕ 16-2-2003ರಂದು ದೆಹಲಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾಗಿದ್ದ್ದ ಡಾ. ವಾಮನ ನಂದಾವರ ಹಾಗೂ ತುಳು ವಿದ್ವಾಂಸರು ಸೇರಿ ಸಲ್ಲಿಸಿ, ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವಂತೆ ವಿನಂತಿಸಲಾಯಿತು. ಈ ನಡುವೆ ಸೀತಾಕಾಂತ ಮಹಾಜನ ವರದಿ ಸಮಿತಿಯು ತುಳು ಭಾಷೆಗೆ ಯಾವ ರೀತಿಯ ಅರ್ಹತೆ ಎಂಬುದರ ಬಗ್ಗೆ ಪ್ರಶ್ನೆ ಎತ್ತಿ ವರದಿಯನ್ನು ಕೋರಿತು. ಈ ಸಂಬಂಧವಾಗಿ ಅಕಾಡೆಮಿಯ ಅಧ್ಯಕ್ಷರಾಗಿದ್ದ, ಶ್ರೀ ಯಮ್.ಕೆ.ಸೀತಾರಾಮ್ ಕುಲಾಲ್ ಅವರು ತುಳು ಭಾಷೆಯ ಕುರಿತಾದ ಒಂದು ವಿವರವನ್ನು ಈ ಸಮಿತಿಯವರಿಗೆ, ಪ್ರಧಾನ ಮಂತ್ರಿಯವರಿಗೆ, ಕೇಂದ್ರ ಸಚಿವರಿಗೆ, ರಾಜ್ಯಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು ಹಾಗೂ ಶಾಸಕರುಗಳಿಗೆ ಸಲ್ಲಿಸಿದರು. ಬಳಿಕ 2007ರಲ್ಲಿ ಮತ್ತೊಂದು ಸಮಾವೇಶವನ್ನು ದೆಹಲಿಯಲ್ಲಿ ನಡೆಸಿ, ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಚೇದದಲ್ಲಿ ಸೇರಿಸುವ ಕುರಿತಾಗಿ, ಪ್ರಧಾನ ಮಂತ್ರಿಯವರಾದ ಮಾನ್ಯ ಶ್ರೀ ಮನಮೋಹನ ಸಿಂಗ್ ಅವರಿಗೆ ದಿನಾಂಕ 17-11-2007ರಂದು ದೆಹಲಿಯಲ್ಲಿ ಅಕಾಡೆಮಿಯ ಅಧ್ಯಕ್ಷರಾಗಿದ್ದ ಶ್ರೀ ಯಮ್.ಕೆ. ಸೀತಾರಾಮ್ ಕುಲಾಲ್ ಅವರ ನೇತೃತ್ವದಲ್ಲಿ ವಿದ್ವಾಂಸ ಗಣ್ಯರೊಂದಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಯಿತು. ಅಲ್ಲದೆ ಪ್ರಸ್ತುತ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ಪಾಲ್ತಾಡಿ ರಾಮಕೃಷ್ಙ ಆಚಾರ್ ಅವರು ಕೂಡ ಈ ನಿಟ್ಟಿನಲ್ಲಿ ನಮ್ಮ ನಾಡಿನ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಿ ಅನೇಕ ಕೆಲಸ ಕಾರ್ಯಗಳನ್ನು ನಡೆಸಿ ಇದಕ್ಕೆ ಪೂರಕ ಮಾಹಿತಿಗಳನ್ನು ರಾಜಕೀಯ ನಾಯಕರುಗಳಿಗೆ ಒದಿಗಿಸಿ, ಮತ್ತೆ ಮನವಿ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಕಾಡೆಮಿ ಹೆಚ್ಚಿನ ಕೆಲಸ ಕಾರ್ಯಗಳನ್ನು ನಡೆಸುತ್ತಿದೆ.

ತುಳು ಭವನ ಯೋಜನೆ:- ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ತುಳು ಸಾಹಿತ್ಯ ಅಕಾಡೆಮಿ ಕಳೆದ 16 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದೆ. ಆದರೆ ಅಕಾಡೆಮಿಗೆ ತನ್ನದೇ ಆದ ಸ್ವಂತ ನಿವೇಶನವಿಲ್ಲವಾದ ಕಾರಣ, ಒಂದು ಹೊಸ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಕೈಗೊಂಡಿದ್ದು, ತುಳು ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಾಣ ಯೋಜನೆಗೆ ಚಾಲನೆ ನೀಡಿ ಕೆಲಸ ನಿರ್ವಹಿಸಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿ ಕರ್ನಾಟಕತುಳು ಸಾಹಿತ್ಯ ಅಕಾಡೆಮಿಯ ಕಟ್ಟಡ ನಿರ್ಮಾಣಕ್ಕಾಗಿ 0.5 ಎಕರೆ (50 ಸೆನ್ಸ್) ಉಚಿತ ನಿವೇಶನ (ಜಾಗ)ವನ್ನು ಪಡೆಯಲಾಗಿದೆ. ಈಗಾಗಲೇ ಈ ಸಂಬಂಧವಾದ ತಾಂತ್ರಿಕ ಕೆಲಸ ಕಾರ್ಯಗಳನ್ನು ನಡೆಸಲಾಗಿದ್ದು, ಕಟ್ಟಡ ನಿರ್ಮಾಣದ ಆರ್ಥಕ ಸಂಪನ್ಮೂಲ ಕ್ರೋಢೀಕರಣ ಕೆಲಸವನ್ನು ಮುಂದುವರಿಸಲಾಗಿದ್ದು, ಕಟ್ಟಡ ನಿರ್ಮಾಣ ಯೋಜನೆಯನ್ನು ಅಕಾಡೆಮಿ ಕೈಗೊಂಡಿದೆ.

ಬಲೆ ತುಳು ಕಲ್ಪುಗ ಯೋಜನೆ:- ಅಕಾಡೆಮಿ ಬಲೆ ತುಳು ಕಲ್ಪುಗ ಎನ್ನುವ ಯೋಜನೆಯಡಿಯಲ್ಲಿ ಸ್ಥಳೀಯ ಸಾರ್ವಜನಿಕರಿಗೆ, ಉದ್ಯೋಗಸ್ಥರಿಗೆ, ತುಳು ಬಾರದವರಿಗೆ ತುಳು ಮಾತನಾಡಲು ತುಳು ಕಲಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ಸ್ಥಳೀಯ ಬೇರೆ ಬೇರೆ ಉದ್ಯಮಗಳಲ್ಲಿ ಕೆಲಸ ಮಾಡುವವರು ತುಳು ಮಾತನಾಡಲು ಅವಕಾಶ ಮಾಡಿ ಇವರು ಸ್ಥಳೀಯರೊಂದಿಗೆ ಸುಲಲಿತವಾಗಿ ವ್ಯವಹರಿಸಲು ಕಾರಣವಾಗಿ, ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದನ್ನು ಮಂಗಳೂರು, ಉಡುಪಿ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಯಲ್ಲಿ ನಡೆಸಿ ಯೋಜನೆ ಯಶಸ್ವಿಗೊಂಡು ಇದರ ಪ್ರಯೋಜನವನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಪಡೆದುಕೊಂಡಿದ್ದಾರೆ. ಈ ಯೋಜನೆಯನ್ನು ಅಕಾಡೆಮಿಯಲ್ಲಿ ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.

ತುಳು ವಿಶ್ವ ಸಮ್ಮೇಳನ:- ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಸಂಪದ್ಬರಿತವಾದ ಒಂದು ಶ್ರೀಮಂತಿಕೆಯ ಪ್ರತಿಫಲ ವಾಗಿ ಕಳೆದ 2009 ಡಿಸೆಂಬರ್ 10 ರಿಂದ 13ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಉಜಿರೆಯಲ್ಲಿ ಅಕಾಡೆಮಿಯ ಸಹಕಾರದೊಂದಿಗೆ ತುಳು ವಿಶ್ವ ಸಮ್ಮೇಳನ ಹಿಂದೆಂದೂ ಕಂಡರಿಯದ, ರೀತಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ಸಮ್ಮೇಳನದಲ್ಲಿ ತುಳುವಿನ ವಿಷಯಗಳ ಬಗ್ಗೆ ವಿಚಾರಗೋಷ್ಟಿಗಳು, ಕವಿಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಕುಣಿತಗಳು, ತುಳುನಾಡಿನ ವಿಶೇಷತೆಗಳು ಮುಂತಾದವುಗಳು ಪ್ರದರ್ಶನಗೊಂಡಿತು.

ಆರನೇ ತರಗತಿ ತುಳು ಪಠ್ಯ ಯೋಜನೆ:- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಾಥಮಿಕ ಶಾಲೆಗಳಲ್ಲಿ ಆರನೇ ತರಗತಿಯಿಂದ ತುಳುವನ್ನು ತೃತೀಯ ಐಚ್ಚಿಕ ವಿಷಯವಾಗಿ ಬೋಧನೆ ಮಾಡಲು ಸರಕಾರ ಕಳೆದ 2010 ಮಾರ್ಚ್ 26ರಂದು ಆದೇಶ ಹೊರಡಿಸಿ ತುಳು ಭಾಷೆಯನ್ನು ಶಾಲೆಗಳಲ್ಲಿ ಬೋಧಿಸಲು ಅವಕಾಶ ಮಾಡಿದೆ. ಇದರಿಂದಾಗಿ ತುಳು ಭಾಷೆಗೆ ಕಲಿಕೆಯ ಅವಕಾಶವಾಯಿತು. ಈ ನಿಟ್ಟಿನಲ್ಲಿ ಡಿ.ಎಸ್.ಇ.ಆರ್.ಟಿ.ಯವರ ಸಹಕಾರದೊಂದಿಗೆ ತುಳು ಪಠ್ಯ ಪುಸ್ತಕ ರಚನೆ ಮಾಡಿತು. ಪ್ರಸ್ತುತ ತಾಲೂಕುಗಳಲ್ಲಿ ಸಮಾವೇಶ ನಡೆಸಿ, ತುಳು ಪಠ್ಯ ವಿತರಣೆ ಮತ್ತು ಪ್ರಾಥಮಿಕ ಶಾಲೆಗಳ ಮುಖ್ಯಗುರುಗಳಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಿ ತುಳು ಭಾಷೆ, ಕಲಿಕೆಯಿಂದ ಆಗುವ ಪ್ರಯೋಜನ ಹಾಗೂ ಇನ್ನೀತರ ವಿಷಯಗಳ ಬಗೆಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.