ಉಪನಿಬಂಧನೆಗಳು (Bylaws)

ಉಪನಿಬಂಧನೆಗಳು (Bylaws)

ಕರ್ನಾಟಕ ಸರಕಾರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
(ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು)
ಮಹಾನಗರಪಾಲಿಕೆ ಕಟ್ಟಡ, ಲಾಲ್ಬಾsಗ್, ಮಂಗಳೂರು – 575 003.
ದೂರವಾಣಿ / fax: 0824-2459389, email: [email protected]

ಉಪನಿಬಂಧನೆಗಳು (ಬೈಲಾಸ್)

ಅಕಾಡೆಮಿಯ ಬೈಲಾವನ್ನು ತಾ:7-2-2009 ರ ಸರ್ವ ಸದಸ್ಯರ ಸಭೆಯಲ್ಲಿ ರಚಿಸಲಾಗಿದ್ದು, ಬೈಲಾವನ್ನು ಅಕಾಡೆಮಿಯ ಪತ್ರ ಸಂಖ್ಯೆ:ಕತುಸಾಅ/ಬೈಲಾ/70/2008-09, 19-2-2009 ರಂತೆ ಇಲಾಖೆಯ ಅನುಮೋದನೆಗೆ ಕಳುಹಿಸಿ ಕೊಡಲಾಗಿದೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು, ಮುಂದೆ ‘ಅಕಾಡೆಮಿ’ ಎಂದು ಉಲ್ಲೇಖಿಸಲಾಗಿದೆ

1. ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು
01. ಅಕಾಡೆಮಿಯ ಕಾರ್ಯಕ್ರಮಗಳು ಹಾಗೂ ವಿಚಾರಸಂಕಿರಣಗಳ ಉದ್ಘಾಟನೆ, ಸಮಾರೋಪ ಸಮಾರಂಭಗಳ ಮುಖ್ಯ ಅತಿಥಿಗಳಿಗೆ, ಉದ್ಘಾಟಕರಿಗೆ, ಸಮಾರೋಪ ಭಾಷಣಕಾರರಿಗೆ, ಆಶಯ ಭಾಷಣಕಾರರಿಗೆ, ಅಧ್ಯಕ್ಷತೆ ವಹಿಸುವವರಿಗೆ, ಪ್ರಬಂಧ ಮಂಡಿಸುವವರಿಗೆ, ಉಪನ್ಯಾಸ ನೀಡುವವರಿಗೆ ರೂ.500-00 ಸಂಭಾವನೆ ನೀಡಲಾಗುವುದು.
02. ವಿಚಾರಸಂಕಿರಣ ಹಾಗೂ ಉಪನ್ಯಾಸಗಳಲ್ಲಿ ಮಂಡಿಸಿದ ಪ್ರಬಂಧಗಳನ್ನು ಅಕಾಡೆಮಿಯು ಪುಸ್ತಕ ರೂಪದಲ್ಲಿ, ಸಂಚಿಕೆಗಳಲ್ಲಿ ಪ್ರಕಟಿಸುವಾಗ ಬೇರೆ ಸಂಭಾವನೆ ಇರುವುದಿಲ್ಲ. ಆದರೆ ಪ್ರಕಟಿತ ಕೃತಿಯ 2 ಗೌರವ ಪ್ರತಿ ನೀಡಲಾಗುವುದು.
03. ಇದರೊಂದಿಗೆ ಮೇಲ್ಕಾಣಿಸಿದ ಆಹ್ವಾನಿತರು ತಮ್ಮ ಊರುಗಳಿಂದ ವಿಚಾರ ಸಂಕಿರಣವನ್ನು ಏರ್ಪಡಿಸುವ ಸ್ಥಳಗಳಿಗೆ ಬಂದು ಹೋಗಲು ಪ್ರಥಮ ದರ್ಜೆ ರೈಲು ದರದಲ್ಲಿ ಪ್ರಯಾಣ ಭತ್ಯವನ್ನು ನೀಡಲಾಗುವುದು. ರೈಲು ಇಲ್ಲದ ಕಡೆ ಸಾರ್ವಜನಿಕ ಸಾರಿಗೆಯ ಸೂಪರ್ ಡಿಲಕ್ಸ್, ರಾಜಹಂಸ, ಅಥವಾ ವೋಲ್ವಾ ಬಸ್ ದರ ನೀಡುವುದು.
04. ಅಕಾಡೆಮಿಯು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಹ್ವಾನಿತರಿಗೆ ಊಟ ಮತ್ತು ವಸತಿಯನ್ನು ಅಕಾಡೆಮಿಯಿಂದಲೇ ಏರ್ಪಾಟು ಮಾಡಿದಲ್ಲಿ ಸಂಭಾವನೆ ಮತ್ತು ಪ್ರಯಾಣ ವೆಚ್ಚ ಮಾತ್ರ ನೀಡುವುದು.
05. ಅಕಾಡೆಮಿಯ ಕಾರ್ಯಕ್ರಮ, ವಿಚಾರಸಂಕಿರಣ, ಗೋಷ್ಟಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅಕಾಡೆಮಿಯು ಆಮಂತ್ರಿಸುವ ‘ವಿಶೇಷ ಆಹ್ವಾನಿತರಿಗೆ’ ದಿನವೊಂದಕ್ಕೆ ಸ್ಥಳೀಯರಿಗೆ ರೂ.100-00ನ್ನು ಸ್ಥಳೀಯ ವಾಹನ ವೆಚ್ಚವೆಂದು ನೀಡುವುದು. ಸುತ್ತಮುತ್ತಲಿನ ಊರಿನಿಂದ ಬರುವವರಿಗೆ ರೂ.200-00 ಸಾರಿಗೆ ವೆಚ್ಚವೆಂದು ನೀಡುವುದು.
06. ಕಾರ್ಯಕ್ರಮ, ಗೋಷ್ಠಿಗಳ ನಿರ್ವಹಣಕಾರರಿಗೆ ರೂ.200-00 ಗೌರವ ಸಂಭಾವನೆ ನೀಡಲಾಗುವುದು. ಒಂದು ಪೂರ್ತಿ (ಬೆಳಗ್ಗೆಯಿಂದ ಸಂಜೆವರೆಗೆ) ದಿನದ ಕಾರ್ಯಕ್ರಮವನ್ನು ಒಬ್ಬರೇ ನಿರ್ವಹಣೆ ಮಾಡಿದರೆ ರೂ.400-00 ಗೌರವ ಸಂಭಾವನೆ ನೀಡುವುದು.
07. ಅಗತ್ಯವಿದ್ದಲ್ಲಿ ಕಾರ್ಯಕ್ರಮಗಳಿಗೆ ಆಹ್ವಾನಿಸಲ್ಪಡುವ ಗಣ್ಯ ಮತ್ತು ಅತಿ ಗಣ್ಯ ಅತಿಥಿಗಳಿಗೆ ವಿಶೇಷ ಸಂದರ್ಭಗಳಲ್ಲಿ ಟ್ಯಾಕ್ಸಿಯನ್ನು ವ್ಯವಸ್ಥೆ ಮಾಡಲು ಅವಕಾಶವಿರುತ್ತದೆ. ಮತ್ತು ಅಕಾಡೆಮಿಯೇ ಅಂಥವರ ಆತಿಥ್ಯವನ್ನು ವಹಿಸಿಕೊಳ್ಳಲು ಅವಕಾಶವಿರುತ್ತದೆ.
08. ಅಕಾಡೆಮಿಯ ಕಾರ್ಯಕ್ರಮ, ವಿಚಾರ ಸಂಕಿರಣಗಳಲ್ಲಿ ಧ್ವನಿಮುದ್ರಿತವಾಗಿರುವ ಪ್ರಬಂಧ, ಭಾಷಣಗಳನ್ನು ಬರಹರೂಪಕ್ಕೆ ಸಿದ್ಧಪಡಿಸಿ ಕೊಡುವವರಿಗೆ ಒಂದು ಬರಹಕ್ಕೆ ರೂ.200-00 ಗೌರವ ಸಂಭಾವನೆ ನೀಡಲಾಗುವುದು.
09. ಅಕಾಡೆಮಿ ನಡೆಸುವ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸುವವರಿಗೆ ರೂ.200-00 ಸಂಭಾವನೆ ಮತ್ತು ಪ್ರಯಾಣ ವೆಚ್ಚ ನೀಡಲಾಗುವುದು.
10. ಅಕಾಡೆಮಿಯ ಸಭೆ, ಕಾರ್ಯಕ್ರಮಗಳಿಗೆ ಸದಸ್ಯರುಗಳು ಬಂದಾಗ ಅವರಿಗೆ ಕೆ.ಎಸ್.ಆರ್.ಟಿ.ಸಿ. ರಾಜಹಂಸ/ವೋಲ್ವಾ ಪ್ರಥಮ ದರ್ಜೆ ನಿಯಮಾನುಸಾರ ಪ್ರಯಾಣ ಭತ್ಯೆ ನೀಡುವುದು. ರೈಲಿನಲ್ಲಿ ಬಂದಾಗ 3ಚೇಯರ್ ಎ.ಸಿ. ಅವಕಾಶವಿದ್ದು, ಟಿಕೇಟು ಹಾಜರುಪಡಿಸಿದಾಗ ರೈಲಿನ ಪ್ರಯಾಣ ಭತ್ಯೆ ಪಡೆಯಬಹುದು. ಸ್ಥಳೀಯರಿಗೆ ರೂ.50-00 ಸ್ಥಳೀಯ ವಾಹನ ವೆಚ್ಚವೆಂದು ನೀಡುವುದು. ಸದಸ್ಯರು ಸಂಚಾಲಕರಾಗಿದ್ದಲ್ಲಿ ರೂ.500-00 ಸಂಭಾವನೆ ನೀಡುವುದು.
11. ಅಕಾಡೆಮಿಯ ಸಭೆ, ಸಮಾರಂಭದಲ್ಲಿ ಭಾಗವಹಿಸುವ ಅಧ್ಯಕ್ಷ ಸದಸ್ಯರಿಗೆ, ಗಣ್ಯರಿಗೆ ಪ್ರಯಾಣಕ್ಕೆ ವಾಹನ ಹಾಗೂ ತಂಗಲು ವಸತಿ ವ್ಯವಸ್ಥೆಯನ್ನು ಅಕಾಡೆಮಿ ವತಿಯಿಂದ ಒದಗಿಸಿದಲ್ಲಿ ಯಾವುದೇ ಭತ್ಯೆಗೆ, ಅವಕಾಶವಿರುವುದಿಲ್ಲ.
*********
2. ಕವಿಸಮ್ಮೇಳನ/ಕವಿಗೋಷ್ಠಿ, ಕಥಾಗೋಷ್ಠಿ
01. ವಿಚಾರ ಸಂಕಿರಣಗಳ ಜೊತೆಗೆ ಅಥವಾ ಪ್ರತ್ಯೇಕವಾಗಿ ಅಕಾಡೆಮಿ ಕವಿಸಮ್ಮೇಳನ ಅಥವಾ ಕವಿಗೋಷ್ಠಿ ಮತ್ತು ಕಥಾ ಗೋಷ್ಠಿ ಏರ್ಪಡಿಸಿದಾಗ ಭಾಗವಹಿಸುವ ಕವಿಗಳಿಗೆ/ಕಥಾಗಾರರಿಗೆ ರೂ.200-00 ಗೌರವ ಸಂಭಾವನೆಯನ್ನು ನೀಡಲಾಗುವುದು. ಈ ಕವಿತೆಗಳನ್ನು / ಕಥೆಗಳನ್ನು ಅಕಾಡೆಮಿಯು ಪ್ರಕಟ ಮಾಡಿದಾಗ ಪ್ರತ್ಯೇಕ ಸಂಭಾವನೆ ನೀಡಲಾಗುವುದಿಲ್ಲ. ಆದರೆ 1 ಗೌರವ ಪ್ರತಿ ನೀಡಲಾಗುವುದು.
02. ಜೊತೆಗೆ ಉಪನಿಬಂಧನೆ Iರ (3) ಮತ್ತು (4)ರಲ್ಲಿ ಸೂಚಿಸಿದಂತೆ ನೀಡಲಾಗುವುದು.
03. ಕವಿಗೋಷ್ಠಿ, ಕಥಾಗೋಷ್ಠಿಗಳ ಮುಖ್ಯ ಅತಿಥಿ, ಉದ್ಘಾಟಕರು, ಅಧ್ಯಕ್ಷರುಗಳಿಗೆ ಉಪನಿಬಂಧನೆ Iರ (1) ಮತ್ತು (7)ರಲ್ಲಿ ಸೂಚಿಸಿದಂತೆ ಗೌರವ ಸಂಭಾವನೆ ಹಾಗೂ ಪ್ರಯಾಣ ಭತ್ಯೆ ನೀಡಲಾಗುವುದು.
04. ರಾಜ್ಯ ಮಟ್ಟದ ಯುವ ಕವಿಗೋಷ್ಠಿ/ಯುವ ಕವಿಸಮ್ಮೇಳನ, ಯುವ ಕಥಾಗೋಷ್ಠಿಗಳಲ್ಲಿ ಭಾಗವಹಿಸುವ ಕವಿಗಳಿಗೆ, ಕಥಾಗಾರರಿಗೆ ರೂ.250-00 ಗೌರವ ಸಂಭಾವನೆ ಹಾಗೂ ಸಾಮಾನ್ಯ ಬಸ್ ಪ್ರಯಾಣ ವೆಚ್ಚ ನೀಡಲಾಗುವುದು. ಮತ್ತು ಊಟ – ವಸತಿ ವ್ಯವಸ್ಥೆಯನ್ನು ಅಕಾಡೆಮಿಯಿಂದಲೇ ಒದಗಿಸಲಾಗುವುದು. (ಅಂತಹ ಸಂದರ್ಭ ಸಂಭಾವನೆ, ಮತ್ತು ಪ್ರಯಾಣ ವೆಚ್ಚ ಮಾತ್ರ ನೀಡಲಾಗುವುದು) ಉಳಿದಂತೆ ಮುಖ್ಯ ಅತಿಥಿ, ಉದ್ಘಾಟಕರಿಗೆ, ಅಧ್ಯಕ್ಷರಿಗೆ ಉಪನಿಬಂಧನೆ Iರ (1) ಮತ್ತು (7)ರಲ್ಲಿ ಸೂಚಿಸಿದಂತೆ ಗೌರವ ಸಂಭಾವನೆ ಹಾಗೂ ಪ್ರಯಾಣ ಭತ್ಯೆ ನೀಡಲಾಗುವುದು.
*********
3. ಕಮ್ಮಟಗಳು
1. ಅಕಾಡೆಮಿ ಏರ್ಪಡಿಸುವ ಕಮ್ಮಟಗಳಲ್ಲಿ ಭಾಗವಹಿಸುವವರಿಗೆ ಕೊಡುವ ಸಂಭಾವನೆ ವಿವರ ಈ ರೀತಿ ಇರುತ್ತದೆ.
ಅ) ನಿರ್ದೇಶಕರು (ಒಬ್ಬರು) ರೂ.2000-00
ಆ) ಸಹ ನಿರ್ದೇಶಕರು (ಒಬ್ಬರು) ರೂ.1000-00
ಇ) ವಿಶೇಷ ಉಪನ್ಯಾಸಕರು, ಉದ್ಘಾಟಕರು, ಮುಖ್ಯ ಅತಿಥಿ, ಅಧ್ಯಕ್ಷತೆ ವಹಿಸುವವರು, ಸಂವಾದದಲ್ಲಿ ಭಾಗವಹಿಸುವ
ಗಣ್ಯರಿಗೆ ರೂ. 500-00
2. ನಿರ್ದೇಶಕರುಗಳಿಗೆ ಮತ್ತು ವಿಶೇಷ ಉಪನ್ಯಾಸಕರಿಗೆ Iರ (3)ರಂತೆ ಪ್ರಯಾಣ ಭತ್ಯೆ ನೀಡಲಾಗುವುದು.
3. ಕಮ್ಮಟದ ಉದ್ಘಾಟಕರು, ಮುಖ್ಯ ಅತಿಥಿ, ಸಮಾರೋಪ ಭಾಷಣಕಾರರು, ಅಧ್ಯಕ್ಷತೆ ವಹಿಸುವವರಿಗೆ ಉಪನಿಬಂಧನೆ Iರ (3), (4) ಮತ್ತು (7) ಅನ್ವಯವಾಗುತ್ತದೆ. (ಯಾವುದಾದರು ಒಂದು)
4. ಕಮ್ಮಟದ ಸದಸ್ಯ ಸಂಚಾಲಕರಿಗೆ ರೂ.500-00 ಸಂಭಾವನೆ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದು.
5. (ಅ) ಕಮ್ಮಟದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಅವರ ಊರುಗಳಿಂದ ಕಮ್ಮಟ ನಡೆಯುವ ಊರಿನ ವರೆಗೆ ಬಂದು ಹೋಗಲು ವೇಗದೂತ (ಎಕ್ಸ್ಪ್ರೆ ಸ್) ವಾಸ್ತವ ಬಸ್ ದರದಲ್ಲಿ ಪ್ರಯಾಣ ವೆಚ್ಚ ಕೊಡಲಾಗುವುದು. ಉಳಿದಂತೆ ಕಮ್ಮಟದ ಅವಧಿಯಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಊಟ ವಸತಿ ವ್ಯವಸ್ಥೆ ಮಾಡಲಾಗುವುದು.
6. (ಆ) ಅಭ್ಯರ್ಥಿಗಳಿಗೆ ಪ್ರಯಾಣಭತ್ಯೆಯನ್ನು ಕಮ್ಮಟದ ಕೊನೆಯ ದಿನವೇ ಕೊಡಲಾಗುವುದು.
7. ಕಮ್ಮಟವು ಮೂರರಿಂದ ಐದು ದಿನಗಳದ್ದಾಗಿರಬೇಕು.

4. ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ

1. ಗೌರವ ಪ್ರಶಸ್ತಿಯ ಬಗ್ಗೆ:
[01] ಗೌರವ ಪ್ರಶಸ್ತಿಯನ್ನು ಮೂರು ಜನ ಗಣ್ಯರಿಗೆ ನೀಡಲಾಗುವುದು. ಗೌರವ ಪ್ರಶಸ್ತಿಯು ರೂ.10000/- ಹಣ, ಪ್ರಮಾಣ ಪತ್ರ, ಶಾಲು,
ಗಂಧದ ಹಾರ, ಸ್ಮರಣಿಕೆ, ¥sóÀಲ ತಾಂಬೂಲಗಳನ್ನು ಹೊಂದಿರುತ್ತದೆ.
ಅ) ತುಳು ಭಾಷೆ, ಸಾಹಿತ್ಯ ಸಂಶೋಧನೆಗಳ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬರಿಗೆ.
ಆ) ತುಳು ನಾಟಕ – ಚಲನಚಿತ್ರ ಕ್ಷೇತ್ರದಲ್ಲಿ ಸಾಹಿತಿಯಾಗಿ ಅಥವಾ ಕಲಾವಿದನಾಗಿ ಗಣನೀಯ
ಸೇವೆ ಸಲ್ಲಿಸಿದ ಒಬ್ಬರಿಗೆ.
ಇ) ತುಳು ಜಾನಪದ ಕ್ಷೇತ್ರದಲ್ಲಿ (ಜಾನಪದ ಕುಣಿತ, ಪಾಡ್ದನ, ಭೂತನರ್ತನ) ಅನನ್ಯ ಸೇವೆ
ಸಲ್ಲಿಸಿದ ಒಬ್ಬರಿಗೆ :
[02] ಆಯಾ ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರ ಜೀವನ ಸಾಧನೆ ಕುರಿತು ಪ್ರಶಸ್ತಿ ಪ್ರದಾನ ಸಮಾರಂಭದಂದು ವಿಚಾರಸಂಕಿರಣವನ್ನು
ಏರ್ಪಡಿಸುವುದು.
[03] ಗೌರವ ಪ್ರಶಸ್ತಿಗಾಗಿ ಅರ್ಜಿಗಳನ್ನು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸುವುದು. ವಿಜೇತರ ಆಯ್ಕೆಗಾಗಿ ಮೂವರು ತಜ್ಞ ವಿದ್ವಾಂಸರ ಆಯ್ಕೆ ಸಮಿತಿಯನ್ನು ರಚಿಸಿ, ಅವರಿಂದ ವಿಜೇತರ ಒಂದು ಪಟ್ಟಿಯನ್ನು ಸಿದ್ಧಪಡಿಸಿ, ಅನಂತರ ಆ ಪಟ್ಟಿಯನ್ನು ಅಧರಿಸಿ, ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ, ಆಯ್ಕೆ ಮಾಡುವುದು. ಆ ಪಟ್ಟಿಯು ಸರ್ವ ಸದಸ್ಯರ ಸಭೆಯ ಚರ್ಚೆಗೆ ಆಧಾರ ಒದಗಿಸತಕ್ಕದ್ದು.
[4] ವಿಜೇತರಿಗೆ ಕ್ರಮವಾಗಿ ಕಾರ್ಯಕ್ರಮದಲ್ಲಿ ಸಂವಾದಕ್ಕೆ ಅವಕಾಶ ಕಲ್ಪಿಸುವುದು.
ಸಮಾರಂಭದ ಬಗ್ಗೆ:
1. ಅಕಾಡೆಮಿಯ ಗೌರವ ಪ್ರಶಸ್ತಿ – ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿಜೇತರಿಗೆ ಉಪನಿಬಂಧನೆ Iರ (3) (4) ಮತ್ತು (7)ರಲ್ಲಿರುವಂತೆ ಅನ್ವಯವಾಗುತ್ತದೆ.
2. ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ವಿಶೇಷ ಸಮಾರಂಭವಾಗಿರುವುದರಿಂದ, ಗೌರವ ಪ್ರಶಸ್ತಿ ವಿಜೇತರ ಜೊತೆಗೆ ಅವರೊಂದಿಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಲು ಬರುವ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಪ್ರಯಾಣ ವೆಚ್ಚ ಪಾವತಿಸುವುದು.
3. ಗೌರವ ಪ್ರಶಸ್ತಿ – ಪುಸ್ತಕ ಬಹುಮಾನ ಪ್ರದಾನ ಸಮಾರಂಭಕ್ಕೆ ವಿಜೇತರ ಪರವಾಗಿ ಬೇರೆಯವರು ಪ್ರಶಸ್ತಿ, ಬಹುಮಾನ ಸ್ವೀಕರಿಸಲು ಕಾರ್ಯಕ್ರಮಕ್ಕೆ ಬಂದಲ್ಲಿ, ಅವರಿಗೆ ಪ್ರಯಾಣ ಭತ್ಯೆ ಕೊಡಲು ಅವಕಾಶವಿರುವುದಿಲ್ಲ. ಆದರೆ ಊಟ ವಸತಿ ಮಾಡಲಾಗುವುದು.
4. ಕಾರ್ಯಕ್ರಮದ ಇಬ್ಬರು ನಿರ್ವಹಣಾಕಾರರಿಗೆ ರೂ.1000-00 ಗೌರವ ಸಂಭಾವನೆ ನೀಡುವುದು.
5. ಪ್ರತಿ ವರ್ಷ ಗೌರವ ಪ್ರಶಸ್ತಿ, ಪುರಸ್ಕೃತರ ಮತ್ತು ಪುಸ್ತಕ ಬಹುಮಾನಿತರ ಬಗ್ಗೆ ಲೇಖನ ಬರೆಸಿ, ಪರಿಚಯ ವಾಚಿಕೆ ಪ್ರಕಟಿಸುವುದು. ಮತ್ತು ಲೇಖನ ಬರೆದವರಿಗೆ ಒಂದು ಲೇಖನಕ್ಕೆ ರೂ.100-00 ಗೌರವ ಸಂಭಾವನೆ ನೀಡಲಾಗುವುದು.
*********
5. ಪುಸ್ತಕ ಬಹುಮಾನ
ತುಳು – ಕನ್ನಡ ಭಾಷಾಂತರವನ್ನು ಒಳಗೊಂಡಂತೆ, ಗರಿಷ್ಠ ಮೂರು ಪುಸ್ತಕ ಬಹುಮಾನವನ್ನು ಕೊಡುವುದು. ಸರ್ಕಾರಿ ಆದೇಶ ಸಂಖ್ಯೆ : ಸಂಕಇ 68 ಕರಅ 2006, ಬೆಂಗಳೂರು,ದಿನಾಂಕ 30.08.2006ರಂತೆ, ಅಕಾಡೆಮಿ ಪುಸ್ತಕ ಬಹುಮಾನಕ್ಕೆ ಪರಿಗಣಿಸುವ ಯಾವುದೇ ಮೂರು ಪ್ರಕಾರವಿರಲಿ, ಅದರಲ್ಲಿ ಕನಿಷ್ಠ 3 ಕೃತಿಗಳು ಆದರೂ ಪ್ರಕಟವಾಗಿರಬೇಕು. ಪುಸ್ತಕ ಬಹುಮಾನವು ರೂ.5000/- ಹಣ, ಪ್ರಮಾಣ ಪತ್ರ, ಶಾಲು, ಗಂಧದ ಹಾರ, ಸ್ಮರಣಿಕೆ, ¥sóÀಲ ತಾಂಬೂಲಗಳನ್ನು ಹೊಂದಿರುತ್ತದೆ.
ಪುಸ್ತಕ ಬಹುಮಾನ ಯೋಜನೆಯ ಬಗ್ಗೆ:
1. ಪ್ರತಿ ವರ್ಷ ಪುಸ್ತಕ ಬಹುಮಾನಕ್ಕಾಗಿ ಬರಮಾಡಿಕೊಳ್ಳಲು ವಿವಿಧ ಪತ್ರಿಕೆಗಳಿಗೆ ಪ್ರಕಟಣೆ ನೀಡಬೇಕು. ಬಹುಮಾನಕ್ಕೆ ಪರಿಗಣಿಸಲು ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಬರಮಾಡಿಕೊಳ್ಳುವುದರೊಂದಿಗೆ ಆಸಕ್ತ ಸಾರ್ವಜನಿಕರಿಂದಲೂ ಅರ್ಹ ಪುಸ್ತಕಗಳನ್ನು ಸೂಚಿಸುವಂತೆ ಪ್ರಕಟಣೆಯಲ್ಲಿ ಕೇಳತಕ್ಕದ್ದು. ಹೀಗೆ ಸೂಚಿಸಲ್ಪಡುವ ಪುಸ್ತಕಗಳನ್ನು ಲೇಖಕರು ಮತ್ತು ಪ್ರಕಾಶಕರು ಕಳುಹಿಸದಿದ್ದರೆ, ಅಂಥ ಪುಸ್ತಕಗಳನ್ನು ಅಕಾಡೆಮಿ ನೇರವಾಗಿ ಪಡೆದುಕೊಂಡು ಬಹುಮಾನಗಳಿಗೆ ಪರಿಗಣಿಸತಕ್ಕದ್ದು.
2. ಅಕಾಡೆಮಿಯ ಸ್ಥಾಯೀ ಸಮಿತಿ ಅಥವಾ ಸ್ಥಾಯೀ ನೇಮಿಸಿದ ಉಪಸಮಿತಿಯು ಬಂದ ಪುಸ್ತಕಗಳನ್ನು ಪರಿಶೀಲಿಸಿ ಪ್ರತಿಯೊಂದು ಪ್ರಕಾರದಲ್ಲಿ 3 ಕ್ಕೆ ಕಡಿಮೆಯಾಗದಂತೆ ಪುಸ್ತಕಗಳನ್ನು ಆರಿಸಬೇಕು. ಹಾಗೂ ಅವುಗಳನ್ನು ಪರಿಶೀಲನೆಗಾಗಿ ಪರಿಶೀಲಕರಿಗೆ ಕಳುಹಿಸಬೇಕು. ಪರಿಶೀಲನೆಗೆ ಕಳುಹಿಸಿದ ಪುಸ್ತಕಗಳನ್ನು ಪರಿಶೀಲಕರೇ ಇಟ್ಟುಕೊಳ್ಳುವುದು.
3. ಹೀಗೆ ಆರಿಸಿದ ಪ್ರತಿಯೊಂದು ಪುಸ್ತಕದ 4 ಪ್ರತಿಗಳನ್ನು ಅಕಾಡೆಮಿ ಕೊಂಡುಕೊಳ್ಳತಕ್ಕದ್ದು.
4. ಇಂಥ ಆಯ್ಕೆಯ ನಂತರವೂ, ಒಂದು ವೇಳೆ ಕೆಲವು ಉತ್ತಮ ಕೃತಿಗಳು ಬಿಟ್ಟು ಹೋಗಿದ್ದಲ್ಲಿ ಅಧ್ಯಕ್ಷರು/ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದು ಖರೀದಿಸಿ ಆ ಪ್ರಕಾರದ ವಿಮರ್ಶಕರಿಗೆ ಕಳುಹಿಸಬಹುದು.
ಪುಸ್ತಕ ಬಹುಮಾನಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ:
1. ಯಾವುದೇ ಪದವಿಗಾಗಿ ಸಿದ್ಧಪಡಿಸಿದ ಗ್ರಂಥವನ್ನು ಪರಿಗಣಿಸಬಾರದು.
2. ಪಠ್ಯಕ್ರಮಕ್ಕೆ ಅನುಗುಣವಾಗಿ ಬರೆಯಲಾದ ಪುಸ್ತಕಗಳನ್ನು ಪರಿಗಣಿಸಬಾರದು.
3. ಪುಸ್ತಕರೂಪದಲ್ಲಿ ಪ್ರಕಟವಾದ ನಿಯತಕಾಲಿಕೆಗಳನ್ನು ಪರಿಗಣಿಸಬಾರದು.
4. ಅಪೂರ್ಣವಾದ, ಭಾಗಶಃ ಪ್ರಕಟವಾದ ಪುಸ್ತಕಗಳನ್ನು ಪರಿಗಣಿಸಬಾರದು.
5. ಬೇರೆ ಬೇರೆ ಲೇಖಕರು ಬರೆದ, ಒಬ್ಬರಿಂದ ಅಥವಾ ಹೆಚ್ಚು ಜನರಿಂದ ಸಂಪಾದಿಸಲ್ಪಟ್ಟ ಯಾವುದೇ ಪ್ರಕಾರದ ಸಂಕಲನಗಳನ್ನು ಪರಿಗಣಿಸಬಾರದು.
6. ಪ್ರಕಟಿತ ವರ್ಷವನ್ನು ನಮೂದಿಸದ ಅಥವಾ ಪ್ರಕಟಿತ ವರ್ಷವನ್ನು ತಿದ್ದಿದ ಪುಸ್ತಕಗಳನ್ನು ಪರಿಗಣಿಸಬಾರದು.
7. ಪುನರ್ಮುದ್ರಣಗಳನ್ನು ಪರಿಗಣಿಸಬಾರದು. ಆದರೆ ನಿಗದಿತ ಒಂದೇ ವರ್ಷದಲ್ಲಿ ಒಂದೇ ಪುಸ್ತಕದ ಪುನರ್ಮುದ್ರಣವಾಗಿದ್ದರೆ ಅದನ್ನು ಪರಿಗಣಿಸಬಹುದು.
8. ಯಾವುದೇ ಪ್ರಕಾರದ ಸಂಗ್ರಹಿತ ಆವೃತ್ತಿಯನ್ನು ಪರಿಗಣಿಸಬಾರದು.
9. ಯಾವುದೇ ಪುಸ್ತಕದಲ್ಲಿ ಹಿಂದೆ ಪುಸ್ತಕ ರೂಪವಾಗಿ ಪ್ರಕಟವಾಗಿದ್ದ ಭಾಗಗಳಿದ್ದಲ್ಲಿ ಆ ಪುಸ್ತಕದಲ್ಲಿ ಶೇಕಡ 60ಕ್ಕಿಂತ ಹೆಚ್ಚು ಭಾಗ ಮೊದಲ ಸಲಕ್ಕೆ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ವಿಷಯಗಳಿರಬೇಕು.
10. ಒಮ್ಮೆ ಈ ಅಕಾಡೆಮಿಯಿಂದ ಬಹುಮಾನ ಪಡೆದ ಕೃತಿಯ ವಿಸ್ತೃತ ಅಥವಾ ಸಂಕ್ಷಿಪ್ತ ರೂಪವನ್ನು ಪರಿಗಣಿಸಬಾರದು.

11. ಒಂದು ಪ್ರಕಾರದಲ್ಲಿ ಒಬ್ಬ ಲೇಖಕರು ಬಹುಮಾನ ಪಡೆದ ನಂತರ ಮುಂದಿನ ಮೂರು ವರ್ಷಗಳವರೆಗೆ ಆ ಲೇಖಕರ ಅದೇ ಪ್ರಕಾರದ ಕೃತಿಯನ್ನು ಬಹುಮಾನಕ್ಕೆ ಪರಿಗಣಿಸುವಂತಿಲ್ಲ.
12. ತೀರ್ಪುಗಾರ ಮೌಲ್ಯಮಾಪನದಲ್ಲಿ ಎರಡು ಅಥವಾ ಹೆಚ್ಚು ಕೃತಿಗಳಿಗೆ ಸಮಾನವಾದ ಅಂಕಗಳು ಬಂದಲ್ಲಿ ಅಂಥ ಪ್ರಕರಣಗಳನ್ನು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಉಪಸಮಿತಿಯು ಚರ್ಚಿಸಿ, ಒಂದು ಕೃತಿಗೆ ಮಾತ್ರ ಬಹುಮಾನವನ್ನು ನಿರ್ಧರಿಸಬೇಕು.
13. ಒಬ್ಬರೇ ಲೇಖಕರ ಎರಡು ಕಾದಂಬರಿಗಳನ್ನು ಒಟ್ಟಾಗಿ ಸೇರಿಸಿ, ಪ್ರಕಟ ಮಾಡಿರುವ ಸಂದರ್ಭದಲ್ಲಿ ಮೌಲ್ಯಮಾಪಕರು ಶಿ¥sóÁರಸ್ಸು ಮಾಡುವ ಒಂದು ಕೃತಿಗೆ ಬಹುಮಾನವನ್ನು ನೀಡಬಹುದು.
14. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಸದಸ್ಯರು, ರಿಜಿಸ್ಟ್ರಾರ್ ಮತ್ತು ಸಿಬ್ಬಂದಿ ತಮ್ಮ ಅವಧಿಯಲ್ಲಿ ಅಕಾಡೆಮಿಯ ಯಾವ ಬಹುಮಾನವನ್ನೂ ಸ್ವೀಕರಿಸುವಂತಿಲ್ಲ.
15. ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದವರ ಪುಸ್ತಕಗಳನ್ನು ಪುಸ್ತಕ ಬಹುಮಾನಕ್ಕೆ ಪರಿಗಣಿಸುವಂತಿಲ್ಲ.
16. ಬೇರೆ ಬೇರೆ ಸಾಹಿತ್ಯ ಪ್ರಕಾರಗಳಲ್ಲಿ ಒಟ್ಟು 3 ಅಥವಾ 3ಕ್ಕಿಂತ ಹೆಚ್ಚು ಸಲ ಬಹುಮಾನ ಪಡೆದವರ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸುವುದಿಲ್ಲ.
17. ಒಂದು ಸಾಹಿತ್ಯ ಪ್ರಕಾರದಲ್ಲಿ ಒಬ್ಬರಿಗೆ ಎರಡು ಸಲ ಬಹುಮಾನ ಬಂದ ಮೇಲೆ ಅದೇ ಪ್ರಕಾರದಲ್ಲಿ ಅವರಿಗೆ ಮತ್ತೆ ಬಹುಮಾನವಿರುವುದಿಲ್ಲ.
18. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳನ್ನು ಬಹುಮಾನಕ್ಕೆ ಪರಿಗಣಿಸುವಂತಿಲ್ಲ.
*********

ಪುಸ್ತಕ ಬಹುಮಾನದ ಪುಸ್ತಕ ವಿಮರ್ಶೆ ಮಾಡುವ ಬಗ್ಗೆ:
1. ಆಯ್ಕೆಯಾದ ಪುಸ್ತಕಗಳನ್ನು ಪುಸ್ತಕಗಳನ್ನು ವಿಮರ್ಶಿಸಲು ಪ್ರತಿಯೊಂದು ಪ್ರಕಾರಕ್ಕೂ 3 ಜನ ವಿಮರ್ಶಕರನ್ನು ಸ್ಥಾಯೀ ಸಮಿತಿ ಗೊತ್ತುಮಾಡಬೇಕು.
2. ಹೀಗೆ ಗೊತ್ತುಮಾಡುವ ವಿಮರ್ಶಕರು ಆಯಾ ವಿಷಯಗಳನ್ನು ಚೆನ್ನಾಗಿ ಬಲ್ಲ ತಜ್ಞರಾಗಿರಬೇಕು.
3. ಪ್ರತಿ ವರ್ಷ ಆಯಾ ಪ್ರಕಾರದ ವಿಮರ್ಶಕರನ್ನು ಬದಲಾಯಿಸಬೇಕು. ಒಂದು ವರ್ಷ ಬಳಸಿದ ವಿಮರ್ಶಕರನ್ನು ನಂತರ ಕನಿಷ್ಠ ಒಂದು ವರ್ಷ ಮತ್ತೆ ಬಳಸಬಾರದು.
4. ವಿಮರ್ಶಕರಿಗೆ. 5ಕ್ಕಿಂತ ಕಡಿಮೆ ಪುಸ್ತಕಗಳಿದ್ದರೆ ಕನಿಷ್ಟ ಸಂಭಾವನೆ ರೂ.500-00, 5ಕ್ಕಿಂತ ಹೆಚ್ಚಾದಲ್ಲಿ ಎಷ್ಟಿದ್ದರೂ ಪ್ರತಿ ಪುಸ್ತಕಕ್ಕೆ ತಲಾ ರೂ.100-00ರಂತೆ ಸಂಭಾವನೆ ನೀಡುವುದು.
5. ವಿಮರ್ಶಕರು ಪ್ರತಿ ಪುಸ್ತಕಕ್ಕೆ 25 ಅಂಕಗಳಿಗೆ ಮೌಲ್ಯಮಾಪನ ಮಾಡಬೇಕು. ಅಕಾಡೆಮಿಯ ಒಂದು ಸಮಿತಿಯು ಎಲ್ಲಾ ಪುಸ್ತಕಗಳನ್ನು ಪರಿಶೀಲಿಸಿ, ಬಹುಮಾನಕ್ಕೆ ಅರ್ಹವಾದ ಪುಸ್ತಕಗಳನ್ನು ಆಯ್ಕೆ ಮಾಡಿ ಕಳಿಸಿರುವುದರಿಂದ ಯಾವ ಪುಸ್ತಕಕ್ಕೂ ‘ಸೊನ್ನೆ’ ಕೊಡಬಾರದು. ಬಹುಮಾನಕ್ಕೆ ಪರಿಶೀಲನಾರ್ಹವೆಂದು ತೀರ್ಮಾನವಾದ ಪುಸ್ತಕಗಳಿಗೆ ಕನಿಷ್ಠ 5 ಅಂಕಗಳನ್ನು ಕೊಡಬೇಕು.
6. ಪ್ರತಿಯೊಂದು ಪುಸ್ತಕದ ಬಗೆಗೂ ತಮ್ಮ ಅಭಿಪ್ರಾಯವನ್ನು ಖಚಿತವಾಗಿ ಒಂದು ಪುಟಕ್ಕೆ ಕಡಿಮೆಯಿಲ್ಲದಂತೆ ಬರೆದು ತಿಳಿಸಬೇಕು.
7. ವಿಮರ್ಶಕರು, ಎರಡು ಪುಸ್ತಕಗಳಿಗೆ ಒಂದೇ ಅಂಕ ಕೊಟ್ಟಿದ್ದರೆ ಅವುಗಳಲ್ಲಿ ತಮ್ಮ ಆದ್ಯತೆಯನ್ನು ಅವರು ಸೂಚಿಸಬೇಕು.
8. ವಿಮರ್ಶಕರಿಂದ ಬಂದ ಅಂಕಗಳನ್ನು ಕ್ರೋಢೀಕರಿಸಿ ಆ ವಿವರಗಳನ್ನು ಅಕಾಡೆಮಿಯ ಸರ್ವ ಸದಸ್ಯರ ಸಭೆಯ ಮುಂದೆ ಇಡತಕ್ಕದ್ದು.
9. ಅತಿ ಹೆಚ್ಚು ಅಂಕಗಳನ್ನು ಪಡೆದ ಪುಸ್ತಕಗಳನ್ನು ಅಂತಿಮವಾಗಿ ಬಹುಮಾನಕ್ಕೆ ಆಯ್ಕೆ ಮಾಡಬೇಕು.
10. ಬಹುಮಾನಗಳನ್ನು ಕೊಡಲು 3 ಜನ ವಿಮರ್ಶಕರ ಅಂಕಗಳನ್ನು, ಅಭಿಪ್ರಾಯಗಳನ್ನು ಆಧರಿಸಲೇ ಬೇಕು. (ಒಂದು ವೇಳೆ ಯಾವುದೇ ವಿಮರ್ಶಕರಿಂದ ನಿಗದಿತವಾದ ವೇಳೆಯಲ್ಲಿ ವಿಮರ್ಶೆ, ಅಂಕಗಳು ಬಾರದೆ ಇದ್ದರೆ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಮ್ಮ ವಿವೇಚನೆಯನ್ನು ಬಳಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು.
11. ಒಬ್ಬರಿಗೆ ಒಂದು ವರ್ಷದಲ್ಲಿ ಒಂದೇ ಬಹುಮಾನವನ್ನು ಕೊಡಬೇಕು. ವಿಮರ್ಶಕರು ಕೊಟ್ಟಿರುವ ಅಂಕಗಳ ಪ್ರಕಾರ ಒಬ್ಬರ ಒಂದಕ್ಕಿಂತ ಹೆಚ್ಚು ಪುಸ್ತಕಗಳಿಗೆ ಬಹುಮಾನ ಬರುವಂತಿದ್ದರೆ ಸರ್ವ ಸದಸ್ಯರ ಸಭೆಯು ಹೆಚ್ಚು ಅಂಕ ಬಂದಿರುವುದಕ್ಕೆ ಆದ್ಯತೆ ನೀಡಿ, ಯಾವ ಪ್ರಕಾರದ ಪುಸ್ತಕಕ್ಕೆ ಬಹುಮಾನ ಕೊಡಬೇಕೆಂದು ನಿರ್ಧರಿಸಬೇಕು. ಕೈಬಿಟ್ಟ ಪುಸ್ತಕದ ಪ್ರಕಾರದಲ್ಲಿ ಎರಡನೇ ಸ್ಥಾನದಲ್ಲಿರುವ ಪುಸ್ತಕಕ್ಕೆ ಬಹುಮಾನ ಕೊಡಬೇಕು.
12. ಪುಸ್ತಕ ಬಹುಮಾನ ಪಡೆದ ಕೃತಿಗಳ ಕುರಿತು ವಿಮರ್ಶಕರ ಅಭಿಪ್ರಾಯ ಮತ್ತು ಆಯಾ ಲೇಖಕರ ಪರಿಚಯಗಳನ್ನೊಳಗೊಂಡ ಕಿರುಹೊತ್ತಿಗೆ ಪ್ರಕಟಿಸುವುದು.

*********

6. ತುಳು ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳು
ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಭಾಷಾ ಬೆಳವಣಿಗಾಗಿ ಮತ್ತು ಸಂಸ್ಕೃತಿಯ ಅಭಿರುಚಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ಹಾಗೂ ಶಾಲಾ ವಿದ್ಯಾರ್ಥಿಗಳಿಗಾಗಿ ಸಂಗೀತ, ಜಾನಪದ, ನಾಟಕ ಸ್ಪರ್ಧೆಗಳನ್ನು ನಡೆಸುವುದು. ವಿಜೇತರಾದವರಿಗೆ ಸ್ಪರ್ಧೆಯ ಗುಣಮಟ್ಟವನ್ನು ಪರಿಶೀಲಿಸಿಕೊಂಡು ಅಕಾಡೆಮಿಯ ಸ್ಥಾಯಿ ಸಮಿತಿ ನಿರ್ಧರಿಸುವಂತೆ ನಗದು ಬಹುಮಾನ, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡುವುದು.
ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಒಬ್ಬ ತೀರ್ಪುಗಾರರಿಗೆ ರೂ. 500-00ರಂತೆ ಗೌರವ ಸಂಭಾವನೆ ಕೊಡಲಾಗುವುದು. ಒಂದು ಸ್ಪರ್ಧೆಗೆ ಮೂರು ಜನ ತೀರ್ಪುಗಾರರನ್ನು ಆಯ್ಕೆ ಮಾಡುವುದು. ದೊಡ್ಡ ಮಟ್ಟದ ಸ್ಪಧಾ ಕಾರ್ಯಕ್ರಮವಾದಲ್ಲಿ ಭಾಗವಹಿಸುವ ತೀರ್ಪುಗಾರರಿಗೆ ಒಬ್ಬರಿಗೆ ರೂ.1000-00 ಗೌರವ ಸಂಭಾವನೆ ಕೊಡಲಾಗುವುದು. ಸ್ಪರ್ಧೆಗಳನ್ನು ನಿರ್ವಹಿಸುವವರಿಗೆ ರೂ.300-00 ಸಂಭಾವನೆ ನೀಡುವುದು. ಇದರೊಂದಿಗೆ ನಿಯಾಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.
ಚಿಕ್ಕ ಸ್ಪರ್ಧೆಗಳಾಗಿದ್ದಲ್ಲಿ, ಆಯಾ ತಿಂಗಳಲ್ಲಿ ನಡೆಯುವ ಸ್ಥಾಯಿ ಸಮಿತಿಯ ನಿರ್ಣಯದಂತೆ ಸಂಭಾವನೆ ನಿಗದಿ ಮಾಡಿಸಿ ಪಾವತಿಸುವುದು. ಹಾಗೂ ನಿಯಾಮಾನುಸಾರ ಪ್ರಯಾಣ ಭತ್ಯೆ ನೀಡಲಾಗುವುದು.
*********
7. ಕಲಾತಂಡಗಳಿಗೆ ಪಾವತಿ ಕುರಿತು

ಸರಕಾರದ ಆದೇಶ ಸಂಖ್ಯೆ: ಎ¥sóïಡಿ/3/ಬಿಪಿಇ/2008, ದಿನಾಂಕ 31-3-2008 ಹಾಗೂ ನಿರ್ದೇಶನಾಲಯದ ಅಧಿಕೃತ ಜ್ಞಾಪನ ಸಂಖ್ಯೆ : ಕಸನಿ/05/ಲೆಕ್ಕ-4/2008-09, ದಿನಾಂಕ 11-6-2008ರಂತೆ ಈ ಕೆಳಕಂಡಂತೆ ಪಾವತಿಸುವುದು.
ಕಲಾತಂಡಗಳಿಗೆ/ಕಲಾವಿದರಿಗೆ
 ಗಮಕ, ಕಾವ್ಯವಾಚನ – ರೂ.3,000/-
 ಸಂಗೀತ ಕಾರ್ಯಕ್ರಮ :- ಸುಗಮ, ಶಾಸ್ತ್ರೀಯ, ಜಾನಪದ – ರೂ. 10,000/-
 ನೃತ್ಯ ಕಾರ್ಯಕ್ರಮ :- ಶಾಸ್ತ್ರೀಯ, ಜಾನಪದ ನೃತ್ಯ ಮತ್ತು ಕುಣಿತ – ರೂ. 12,000/-
 ಸಾಮಾಜಿಕ ನಾಟಕ, ಯಕ್ಷಗಾನ, ಬೊಂಬೆಯಾಟ, ಸಮೂಹ ಕಾರ್ಯಕ್ರಮ – ರೂ. 15,000/-
 ಐತಿಹಾಸಿಕ ಮತ್ತು ಪೌರಣಿಕ ನಾಟಕ, ರೂಪಕ ಸಮೂಹನೃತ್ಯ (ಲೈವ್) – ರೂ. 20,000/-
ಪ್ರತಿಷ್ಠಿತ, ಪ್ರಸಿದ್ದ ಕಲಾವಿದರಿಂದ ನಡೆಸಲಾಗುವ ಕಾರ್ಯಕ್ರಮಗಳಿಗೆ

• ಶಾಸ್ತ್ರೀಯ ನೃತ್ಯ – ಸಂಗೀತ
• ಸುಗಮ ಸಂಗೀತ
• ಜಾನಪದ ನೃತ್ಯ – ಸಂಗೀತ – ರೂ.15,000/-
• ಸಾಮಾಜಿಕ ನಾಟಕ, ಬೀದಿನಾಟಕ
• ರಂಗರೂಪಕ, ಎಲ್ಲಾ ವಿಧದ ಸಾಂಸ್ಕೃತಿಕ ಕಾರ್ಯಕ್ರಮಗಳು
ಯುವ ಕಲಾವಿದರಿಗೆ : ಯುವ ಕಲಾವಿದರಿಂದ ನಡೆಸಲಾಗುವ ಕಾರ್ಯಕ್ರಮಗಳಿಗೆ
(14 ರಿಂದ 25ರ ವಯಸ್ಸಿನವರಿಗೆ)
 ಶಾಸ್ತ್ರೀಯ ನೃತ್ಯ – ಸಂಗೀತ
 ಸುಗಮ ಸಂಗೀತ
 ಜಾನಪದ ನೃತ್ಯ – ಸಂಗೀತ – ರೂ.10,000/-
 ಸಾಮಾಜಿಕ ನಾಟಕ, ಬೀದಿನಾಟಕ
 ರಂಗರೂಪಕ, ಎಲ್ಲಾ ವಿಧದ ಸಾಂಸ್ಕೃತಿಕ ಕಾರ್ಯಕ್ರಮಗಳು

ಚಿಗುರು ಶಾಲಾ ವಿದ್ಯಾರ್ಥಿ ಕಲಾವಿದರಿಂದ ನಡೆಸಲಾಗುವ ಕಾರ್ಯಕ್ರಮಗಳಿಗೆ
(8 ರಿಂದ 14 ವರ್ಷ ವಯಸ್ಸಿನವರಿಗೆ)
 ಶಾಸ್ತ್ರೀಯ ನೃತ್ಯ – ಸಂಗೀತ
 ಸುಗಮ ಸಂಗೀತ
 ಜಾನಪದ ನೃತ್ಯ – ಸಂಗೀತ – ರೂ.5,000/-
 ಸಾಮಾಜಿಕ ನಾಟಕ, ಬೀದಿನಾಟಕ
 ರಂಗರೂಪಕ, ಎಲ್ಲಾ ವಿಧದ ಸಾಂಸ್ಕೃತಿಕ ಕಾರ್ಯಕ್ರಮಗಳು
 ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ – ಲೈವ್ ಕಾರ್ಯಕ್ರಮಗಳಿಗೆ – ರೂ.7,000/-
*********

8. ಇತರ ಸಂದರ್ಭಗಳಲ್ಲಿ ಸಂಭಾವನೆ
 ಇದರೊಂದಿಗೆ ಅಕಾಡೆಮಿ ಕ್ರಿಯಾಯೋಜನೆಯಡಿ ಅಳವಡಿಸುವ ಸಾಂಸ್ಕೃತಿಕ, ಜಾನಪದ ಮತ್ತು ನಾಟಕ ಸ್ಪರ್ಧೆಗಳಿಗೆ ಭಾಗವಹಿಸುವ ತಂಡಗಳಿಗೆ ಭಾಗವಹಿಸಿದ ಬಗ್ಗೆ ಸಂಭಾವನೆಯನ್ನು ಪಾವತಿಸುವುದು. ಈ ಬಗ್ಗೆ ಮೊತ್ತವನ್ನು ಆಯಾ ಕಾರ್ಯಕ್ರಮ ಆಯೋಜಿಸುವ ಸಂದರ್ಭ, ರೂಪುರೇಶೆ ಪರಿಶೀಲಿಸಿ, ಸ್ಥಾಯಿ ಸಮಿತಿ ಅಥವಾ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಿದಂತೆ, ಕ್ರಮ ಕೈಗೊಳ್ಳುವುದು.
 ಈ ಮೇಲ್ಕಾಣಿಸಿದ ಆದೇಶದಂತೆ, ಅಕಾಡೆಮಿ ಕ್ರಿಯಾಯೋಜನೆಯಡಿ ನಿರಂತರವಾಗಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು. ವಿಶೇಷ ಸಂದರ್ಭದಲ್ಲಿ ಪರಿಗಣಿಸಲಾಗುವ ತಂಡದ ಸಂಭಾವನೆಯನ್ನು ಅಕಾಡೆಮಿಯ ಸಭೆಯ ನಿರ್ಣಯದಂತೆ ಅಳವಡಿಸಿ ಸಂಭಾವನೆ ಪಾವತಿಸುವುದು. ಅಲ್ಲದೆ ಮೇಲೆ ಸೂಚಿಸಿದ ಸಂಭಾವನೆಯ ದರಗಳ ಜೊತೆಗೆ ಹೊರಜಿಲ್ಲೆಯ ಮತ್ತು ಹೊರರಾಜ್ಯದ ಕಲಾವಿ ದರಿಗೆ ನಿಯಮಾನುಸಾರ ಪ್ರಯಾಣ ಭತ್ಯೆ ಪಾವತಿಸುವುದು.
 ಇದರೊಂದಿಗೆ ಒಬ್ಬೊಬ್ಬ ಕಲಾವಿದರು ನಡೆಸಿಕೊಡುವಂತ ಮೇಲ್ಕಾಣಿಸಿದ ಕಲಾ ಪ್ರಕಾರಗಳೊಂದಿಗೆ ಏಕಪಾತ್ರಭಿನಯ, ಸಂಗೀತ ಕಾರ್ಯಕ್ರಮ ….. ಇನ್ನೀತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಕಲಾವಿದರಿಗೆ ರೂ.1,500-00 ಗೌರವ ಸಂಭಾವನೆ ಮತ್ತು ಸಾಮಾನ್ಯ ದರದ ಬಸ್ ಪ್ರಯಾಣ ವೆಚ್ಚ ಪಾವತಿಸುವುದು.
****************
9. ಅಕಾಡೆಮಿಯ ಪುಸ್ತಕ ಪ್ರಕಟಣೆ
1. ಅಕಾಡೆಮಿ ಪುಸ್ತಕ ಪ್ರಕಟಣೆ ಮಾಡುವಾಗ ಪುಸ್ತಕದ ಹಕ್ಕು ಅಕಾಡೆಮಿಯದ್ದಾಗಿರಬೇಕು. ಅವುಗಳ ಮರು ಮುದ್ರಣದ ಹಕ್ಕೂ ಅಕಾಡೆಮಿಯದ್ದೇ ಆಗಿರುತ್ತದೆ.
2. ಅಕಾಡೆಮಿ ಪುಸ್ತಕ ಪ್ರಕಟಣೆಗೆ ಹಸ್ತ ಪ್ರತಿ ಆಹ್ವಾನಿಸಿದಾಗ, ಹಸ್ತಪ್ರತಿಗಳನ್ನು ಪರಿಶೀಲನೆಗೆ ಕಳುಹಿಸುವಾಗ ಪರಿಶೀಲಕರಿಗೆ ರೂ.500-00 ಸಂಭಾವನೆ ಕೊಡಲಾಗುವುದು. ಪರಿಶೀಲನೆ ಮಾಡಿ, ಪರಿಶೀಲಕರು ಕೃತಿಯ ಬಗ್ಗೆ ಅಭಿಪ್ರಾಯ ಬರೆದು ಅಕಾಡೆಮಿಗೆ ನೀಡಬೇಕು.
3. ಅಕಾಡೆಮಿ ಹಸ್ತಪ್ರತಿ ಆಹ್ವಾನಿಸಿ, ಗ್ರಂಥ ಪ್ರಕಟ ಮಾಡುವಾಗ ಲೇಖಕರಿಗೆ ಸಂಭಾವನೆ ನೀಡುವುದು. ಅಕಾಡೆಮಿ ಪ್ರಕಟ ಮಾಡುವ ಮರೆಯಬಾರದ ಮಾಲಿಕೆಯ ಹಾಗೂ ಮಕ್ಕಳ ಕತೆ ಮಾಲಿಕೆಗಳಲ್ಲಿ ಪುಸ್ತಕ ಬರೆದು ಕೊಡುವ ಗ್ರಂಥದ ಲೇಖಕರಿಗೆ ರೂ. 1000-00 ಗೌರವ ಸಂಭಾವನೆ ನೀಡುವುದು.
4. ಇತರೆ ಯಾವುದೇ ಕೃತಿಯ ಲೇಖಕರಿಗೆ ಮೊದಲ ಮುದ್ರಣ ಹಾಗೂ ಮರು ಮುದ್ರಣದ ಕಾಲಕ್ಕೆ ಮುಖ ಬೆಲೆಯ ಮೇಲೆ 15% ಗೌರವ ಸಂಭಾವನೆ ನೀಡುವುದು. ಪುಸ್ತಕದ ಲೇಖಕರಿಗೆ 25 ಪುಸ್ತಕಗಳನ್ನು ಗೌರವ ಪ್ರತಿಯಾಗಿ ನೀಡುವುದು.
5. ಕರಡು ತಿದ್ದುವವರಿಗೆ ಕ್ರೌನ್ 1 ಪುಟಕ್ಕೆ ರೂ.3ರಂತೆ, ಡೆಮ್ಮಿ 1 ಪುಟಕ್ಕೆ ರೂ. 4ರಂತೆ ಸಂಭಾವನೆ ನೀಡಲಾಗುವುದು. ಕರಡು ತಿದ್ದುವವರು 3 ಸಲ ತಿದ್ದಿ, ಅಚ್ಚಿಗೆ ಒಪ್ಪಿಸಬೇಕು.
6. ಪುಸ್ತಕದ ಲೇಖಕರು ಒಂದು ಸಲ ಕರಡು ತಿದ್ದಿಕೊಟ್ಟ ಸಂದರ್ಭದಲ್ಲಿ ಉಳಿದ ಕರಡು ತಿದ್ದುವವರಿಗೆ ಪುಟಕ್ಕೆ ರೂ.2ರಂತೆ ಸಂಭಾವನೆ ಕೊಡಬೇಕು. ಲೇಖಕರಿಗೆ ಕರಡು ತಿದ್ದಿದ ಬಗ್ಗೆ ಸಂಭಾವನೆ ಇರುವುದಿಲ್ಲ.
7. ಅಕಾಡೆಮಿಯ ಪ್ರಕಟಣೆಯನ್ನು ಒಂದು ವೇಳೆ ಅಕಾಡೆಮಿಯು ಮರುಮುದ್ರಣ ಮಾಡಲು ಇಚ್ಚಿಸದಿದ್ದರೆ, ಹಿಂದಿನ ಮುದ್ರಣದ ಪ್ರತಿಗಳು ಮುಗಿದ ಮೇಲೆ, ಲೇಖಕರು ಅಕಾಡೆಮಿಯ ಒಪ್ಪಿಗೆ ಪಡೆದು ಮರುಮುದ್ರಣ ಮಾಡಿಸಿಕೊಳ್ಳಬಹುದು.
8. ಅಕಾಡೆಮಿಯ ಸಂಚಿಕೆ, ಪುಸ್ತಕಗಳಲ್ಲಿ ಪ್ರಕಟವಾಗುವ ಲೇಖನ, ಕವಿತೆಗಳ ಹಕ್ಕು ಲೇಖಕರಿಗೇ ಸೇರಿರುತ್ತದೆ. ಅವರು ಅವುಗಳನ್ನು ಬೇರೆಡೆ ಪ್ರಕಟಿಸಿಕೊಳ್ಳಬಹುದು. ಆದರೆ ಇಡಿಯಾಗಿ ಸಂಕಲನಗಳನ್ನು ಮರುಮುದ್ರಣ ಮಾಡಿಕೊಳ್ಳುವ ಹಕ್ಕು ಅಕಾಡೆಮಿಗೆ ಮಾತ್ರ ಇರುತ್ತದೆ.
9. ಅಕಾಡೆಮಿಯ ಪ್ರಕಟಣೆಗಳು ಪಠ್ಯಪುಸ್ತಕಗಳಾಗಿ ಗೊತ್ತು ಮಾಡಲ್ಪಟ್ಟ ಸಂದರ್ಭದಲ್ಲಿ ಅವುಗಳನ್ನು ಮರುಮುದ್ರಣ ಮಾಡಿಸಿಕೊಳ್ಳುವ ಮೊದಲ ಹಕ್ಕು ಅಕಾಡೆಮಿಗೇ ಇರುತ್ತದೆ. ಅಕಾಡೆಮಿಯು ಮರುಮುದ್ರಣ ಮಾಡಲು ಇಚ್ಚಿಸದಿದ್ದಲ್ಲಿ ಲೇಖಕರು ಅಕಾಡೆಮಿಯ ಒಪ್ಪಿಗೆ ಪಡೆದು ಪ್ರಕಟಿಸಿಕೊಳ್ಳಬಹುದು.
10. ಪಠ್ಯ ಪುಸ್ತಕವಾಗಿ ಮುದ್ರಣಗೊಂಡಾಗ 1000 ಪ್ರತಿಗಳನ್ನು ಮುದ್ರಿಸಿದಾಗ, ಮುಖಬೆಲೆಯ ಮೇಲೆ ಶೇಕಡಾ 15ರಷ್ಟ ಗೌರವ ಧನ ಮತ್ತು 25 ಗೌರವ ಪ್ರತಿಯಾಗಿ ಪುಸ್ತಕಗಳನ್ನು ಲೇಖಕರಿಗೆ ನೀಡಲಾಗುವುದು.
11. ಅಕಾಡೆಮಿ ಪ್ರಕಟಿಸಿದ ಸಂಕಲನ ರೂಪದ ಪುಸ್ತಕಗಳು ಪಠ್ಯಪುಸ್ತಕವಾಗಿದಲ್ಲಿ 1000ಕ್ಕಿಂತ ಹೆಚ್ಚು ಪ್ರತಿಗಳನ್ನು ಅಚ್ಚುಮಾಡಿಸಿದ ಸಂದರ್ಭದಲ್ಲಿ ಪ್ರತಿಯೊಂದು ಲೇಖನ, ಕಥೆಗೆ ರೂ.500-00 ಹಾಗೂ ಕವಿತೆಗೆ ರೂ.200-00 ಗೌರವ ಧನ ಲೇಖಕರಿಗೆ ನೀಡಬೇಕು. ಸಂಪಾದಕರಿಗೆ ಗೌರವಧನ ಇರುವುದಿಲ್ಲ.
12. ಅಕಾಡೆಮಿ ಪ್ರಕಟ ಮಾಡಿದ ಪುಸ್ತಕಗಳ ಲೇಖಕರಿಗೆ 25 ಗೌರವ ಪ್ರತಿಗಳನ್ನು ನೀಡಬೇಕು. ಹೆಚ್ಚಿನ ಪ್ರತಿ ಬೇಕಾದಲ್ಲಿ ಲೇಖಕರಿಗೆ, ಸಂಪಾದಕರಿಗೆ 50 ಪ್ರತಿಗಳನ್ನು 50% ದರದಲ್ಲಿ ನೀಡಬಹುದು.
13. ಸಂಪಾದಕರಿಗೆ ಮೊದಲ ಮುದ್ರಣ ಹಾಗೂ ಮರುಮುದ್ರಣ ಕಾಲಕ್ಕೆ ಮುಖಬೆಲೆಯ ಮೇಲೆ 6% ಗೌರವ ಧನ ನೀಡಬೇಕು. ಸಂಪಾದಕರಿಗೆ 15 ಗೌರವ ಪ್ರತಿಗಳನ್ನು ನೀಡಬೇಕು.
14. ಅಕಾಡೆಮಿಯ ಪ್ರಕಟಿತ ಪುಸ್ತಕಗಳನ್ನು 30% ರಿಯಾಯಿತಿಯಲ್ಲಿ ಮಾರಾಟ ಮಾಡುವುದು. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ 50% ರಿಯಾಯಿತಿಯಲ್ಲಿ ಮಾರಾಟ ಮಾಡುವುದು.
10. ಮದಿಪು ತ್ರೈಮಾಸಿಕ ಸಂಚಿಕೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಬರಹಗಾರರಿಗೆ ಪೆÇ್ರೀತ್ಸಾಹ ನೀಡುವ ಹಾಗೂ ಸಾಹಿತ್ಯದ ಅಭಿವೃದ್ಧಿ ಸಲುವಾಗಿ ‘ಮದಿಪು’ ಎನ್ನುವ ತುಳು ತ್ರೈಮಾಸಿಕ ಸಂಚಿಕೆಯನ್ನು ಪ್ರಕಟಿಸುತ್ತದೆ.
ಸಂಪಾದಕರಿಗೆ:
01. ಅಕಾಡೆಮಿ ಪ್ರಕಟ ಮಾಡುವ ಮದಿಪು ತ್ರೈಮಾಸಿಕ ಸಂಚಿಕೆಯ ಸಂಪಾದಕರ ಸಂಖ್ಯೆ ಎರಡನ್ನು ಮೀರಿರಬಾರದು.
02. ಸಂಪಾದಕರು ಇಬ್ಬರು ಇದ್ದಲ್ಲಿ ಸಂಚಿಕೆಗೆ ಪ್ರತಿಯೊಬ್ಬ ಸಂಪಾದಕರಿಗೆ ತಲಾ ರೂ.1000-00 ಗೌರವ ಸಂಭಾವನೆ ನೀಡಲಾಗುವುದು.
03. ಸಂಪಾದಕರು ಒಬ್ಬರೇ ಇದ್ದಲ್ಲಿ ಸಂಚಿಕೆಗೆ ರೂ.1500-00 ಗೌರವ ಸಂಭಾವನೆ ನೀಡಲಾಗುವುದು.
04. ಪ್ರತಿ ಸಂಚಿಕೆಗೆ ಒಟ್ಟಾಗಿ ರೂ.500-00ಗಳನ್ನು ಸಾದಿಲ್ವಾರು ವೆಚ್ಚಕ್ಕಾಗಿ ನೀಡಲಾಗುವುದು. ನಿಯಮಾನುಸಾರ ಬಿಲ್ಲುಗಳಿಗೆ ಒಳಪಟ್ಟು.
05. ಪ್ರತಿ ಸಂಚಿಕೆಗೆ ಒಂದು ಬಾರಿಗೆ ಸಂಪಾದಕರು ತಮ್ಮ ಸ್ಥಾನದಿಂದ ಅಕಾಡೆಮಿಗೆ ಬಂದು ಹೋಗಲು ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದು.
06. ಸಂಪಾದಕರಿಗೆ ಆಯಾ ಸಂಚಿಕೆಯ 2 ಗೌರವ ಪ್ರತಿ ನೀಡಲಾಗುವುದು.
ಲೇಖಕರಿಗೆ
1. ಅನುವಾದಿತ ಕವಿತೆ : ಕವಿತೆಗಳ ಮೂಲ ಲೇಖಕರಿಗೆ ರೂ.250-00 ಮತ್ತು ಅನುವಾದಕರಿಗೆ ರೂ.250-00 ಸಾಂಕೇತಿಕ ಗೌರವಧನ ನೀಡಲಾಗುವುದು. ಒಬ್ಬ ಕವಿಯ/ಲೇಖಕನ ಒಂದಕ್ಕಿಂತ ಹೆಚ್ಚು ಕವಿತೆ/ಲೇಖನ/ಕತೆ ಒಂದೇ ಸಂಚಿಕೆಯಲ್ಲಿ ಬಳಸಕೂಡದು.
2. ಸ್ವರಚಿತ ಕವಿತೆ : ಒಬ್ಬ ಕವಿಯ ಸ್ವತಂತ್ರ ಕವಿತೆ 1ಕ್ಕಿಂತ ಹೆಚ್ಚಿನ ಪುಟವಾಗಿದ್ದಲ್ಲಿ ರೂ.250-00 ಗೌರವಧನ, 1 ಪುಟದ ಕವಿತೆಯಾಗಿದ್ದಲ್ಲಿ ರೂ.200-00 ಗೌರವಧನ ನೀಡಲಾಗುವುದು. ಒಬ್ಬ ಕವಿಯ 2 ಕ್ಕಿಂತ ಹೆಚ್ಚು ಕವಿತೆ ಬಳಸಕೂಡದು. 2ನೇ ಕವಿತೆಗೆ ಪ್ರತ್ಯೇಕ ಸಂಭಾವನೆ ಇರುವುದಿಲ್ಲ. ಒಬ್ಬ ಕವಿಯ 1 ಅಥವಾ 2 ಕವನಕ್ಕಿಂತ ಹೆಚ್ಚು ಕವನ ಬಳಸಕೂಡದು.
3. ಒಬ್ಬ ಕವಿಯ 5 ಹನಿಗವನಗಳಿದ್ದರೆ ರೂ.250-00 ಗೌರವಧನ ನೀಡಲಾಗುವುದು. 5ಕ್ಕಿಂತ ಕಡಿಮೆಯಿದ್ದರೆ ರೂ.150-00 ಗೌರವಧನ ನೀಡುವುದು. ಒಬ್ಬರೇ ಕವಿಯ 10ಕ್ಕಿಂತ ಹೆಚ್ಚು ಹನಿಗವನ ಒಂದು ಸಂಚಿಕೆಯಲ್ಲಿ ಬಳಸಕೂಡದು.
4. ಸಂಚಿಕೆಯಲ್ಲಿ ಪ್ರಕಟವಾಗುವ ಇತರೆ ಬರಹಗಳ ಮೂಲ ಲೇಖಕರಿಗೆ ರೂ.300-00 ಮತ್ತು ಅನುವಾದಕರಿಗೆ ರೂ.300-00 ಗೌರವಧನ ನೀಡಲಾಗುವುದು.
5. ಲೇಖನ ಅಥವಾ ಕವಿತೆಗೆ/ಕವಿತೆಗಳಿಗೆ ಪೂರ್ವಭಾವಿಯಾದ ಟಿಪ್ಪಣಿ ಇದ್ದರೆ ಅದು ಲೇಖನ ಅಥವಾ ಕವಿತೆಗೆ ಸಂಬಂಧಿಸಿದ ಭಾಗವೆಂದು ಪರಿಗಣಿಸಬೇಕು. ಅಂಥ ಟಿಪ್ಪಣಿಗಳಿಗೆ ಪ್ರತ್ಯೇಕ ಸಂಭಾವನೆ ಇರುವುದಿಲ್ಲ.
6. ಒಬ್ಬ ಲೇಖಕನ ಸ್ವತಂತ್ರ ಲೇಖನ 3 ಅಥವಾ ಅದಕ್ಕಿಂತ ಹೆಚ್ಚಿನ ಪುಟವಾಗಿದ್ದಲ್ಲಿ ರೂ.400-00 ಗೌರವಧನ, 3ಕ್ಕಿಂತ ಕಡಿಮೆ ಪುಟದ ಲೇಖನವಾಗಿದ್ದಲ್ಲಿ ರೂ.300-00, ಇದಕ್ಕಿಂತ ಕಡಿಮೆಯಿದ್ದಲ್ಲಿ ರೂ.200-00 ಗೌರವಧನ ನೀಡಲಾಗುವುದು. ಒಬ್ಬ ಲೇಖಕನ ಒಂದಕ್ಕಿಂತ ಹೆಚ್ಚು ಲೇಖನವನ್ನು ಒಂದು ಸಂಚಿಕೆಯಲ್ಲಿ ಬಳಸಕೂಡದು.
7. ಎಲ್ಲಾ ಲೇಖಕ- ಕವಿಗಳಿಗೆ ಆಯಾ ಸಂಚಿಕೆಯ 1 ಗೌರವ ಪ್ರತಿ ನೀಡುವುದು.
11. ವಾರ್ತಾಪತ್ರಿಕೆ (ತುಳುವ ದರ್ಶನ)
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತನ್ನ ಕಾರ್ಯಚಟುವಟಿಕೆಗಳನ್ನು ಪ್ರಕಟ ಮಾಡುವ ಸಲುವಾಗಿ ‘ತುಳುದರ್ಶನ’ ಎನ್ನುವ ತ್ರೈಮಾಸಿಕ ಕನ್ನಡ ವಾರ್ತಾಪತ್ರಿಕೆಯನ್ನು ಪ್ರಕಟ ಮಾಡುತ್ತದೆ.
01. ವಾರ್ತಾಪತ್ರಕ್ಕೆ ಒಬ್ಬರೇ ಸಂಪಾದಕರಿರಬೇಕು.
02. ವಾರ್ತಾಪತ್ರದ ಸಂಪಾದಕರಿಗೆ ಪ್ರತಿ ಸಂಚಿಕೆಗೆ ರೂ.1,000-00 ಸಂಭಾವನೆ ನೀಡಲಾಗುವುದು. (ಜೆರಾಕ್ಸ್, ಅಂಚೆ ವೆಚ್ಚ, ಸಾದಿಲ್ವಾರು ವೆಚ್ಚಗಳನ್ನೊಳಗೊಂಡಂತೆ)
03. ಪ್ರತಿ ಸಂಚಿಕೆಗೆ ಸಂಪಾದಕರು ಒಂದು ಬಾರಿ ತಮ್ಮ ಸ್ಥಾನದಿಂದ ಅಕಾಡೆಮಿಗೆ ಬಂದು ಹೋಗಲು ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದು.
04. ಸಂಪಾದಕರಿಗೆ ಆಯಾ ಸಂಚಿಕೆಯ 2 ಗೌರವ ಪ್ರತಿ ನೀಡಲಾಗುವುದು.
**********
12. ಪುಸ್ತಕ ಸಗಟು ಖರೀದಿ ಯೋಜನೆ
ತುಳು – ಕನ್ನಡ ಬರಹಗಾರರಿಗೆ, ಲೇಖಕರಿಗೆ ಪೆÇ್ರೀತ್ಸಾಹ ನೀಡಿ, ಸಾಹಿತ್ಯಕ್ಕೆ ಆದ್ಯತೆ ಕೊಡುವ ಉದ್ದೇಶದಿಂದ ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಪುಸ್ತಕ ಖರೀದಿ ಮಾಡುವ ನಿಯಮಾವಳಿಯನ್ನು ಈ ಕೆಳ ಕಂಡಂತೆ ತಿದ್ದುಪಡಿ ಮಾಡಿ, ಬದಲಾವಣೆ ಮಾಡಲಾಯಿತು.
• ಯಾವುದೇ ಪ್ರಕಾರದ (ಕತೆ, ಕವಿತೆ, ಕಾದಂಬರಿ…ಇತ್ಯಾದಿ) ಪುಸ್ತಕ ಆಗಿದ್ದರೂ, “ತುಳು” ಆಗಿದ್ದಲ್ಲಿ, ಅಂತಹ ಪುಸ್ತಕಗಳನ್ನು ಈ ರೀತಿ ಖರೀದಿ ಮಾಡುವುದು.
• ಕೃತಿಯ ಮುಖಬೆಲೆಯು ಕನಿಷ್ಠ ರೂ. 100/-ರೊಳಗೆ ಇರುವ ಪುಸ್ತಕಗಳನ್ನು ತಲಾ 25 ಪ್ರತಿ ಖರೀದಿ ಮಾಡುವುದು.
• ರೂ.100ಕ್ಕಿಂತ ಹೆಚ್ಚಿನ ಮುಖಬೆಲೆಯ ಕೃತಿಗಳನ್ನು, 2,000/-ರೂಪಾಯಿಗಳಿಗೆ ಮೀರದಂತೆ ಖರೀದಿ ಮಾಡುವುದು.
• ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಇತರೆ ಭಾಷೆಗಳ ಪುಸ್ತಕಗಲಾಗಿದ್ದಲ್ಲಿ, ಅಂತಹ ಪುಸ್ತಕಗಳ ಮುಖ ಬೆಲೆಯು ಕನಿಷ್ಠ ರೂ. 100/-ರೊಳಗೆ ಇರುವ ಪುಸ್ತಕಗಳನ್ನು ತಲಾ 10 ಪ್ರತಿ ಖರೀದಿ ಮಾಡುವುದು.
• ರೂ.100ಕ್ಕಿಂತ ಹೆಚ್ಚಿನ ಮುಖಬೆಲೆಯ ಕೃತಿಗಳನ್ನು, 1,000/-ರೂಪಾಯಿಗಳಿಗೆ ಮೀರದಂತೆ ಖರೀದಿ ಮಾಡುವುದು.
• (2) ಗ್ರಂಥಾಲಯಕ್ಕೆ ಪುಸ್ತಕ ಖರೀದಿ
• ತುಳು – ಕನ್ನಡ ಬರಹಗಾರರಿಗೆ, ಲೇಖಕರಿಗೆ, ಸಂಶೋಧಕರಿಗೆ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲು ಅಕಾಡೆಮಿ ಗ್ರಂಥಾಲಯವನ್ನು ಹೊಂದಿದೆ. ಅಧ್ಯಯನಕ್ಕೆ ಅನುಕೂಲವಾಗುವಂತೆ, ಪುಸ್ತಕಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಂಡಿದೆ. ಇದರಲ್ಲಿ ತಲಾ 2 ಪುಸ್ತಕಗಳನ್ನು ಖರೀದಿಸಲಾಗುವುದು.
13. ಅಕಾಡೆಮಿಯ ದತ್ತಿನಿಧಿಗಳು
ಅನುಬಂಧ – 1
(1) ಶ್ರೀಮತಿ ವೇದಾವತಿ ಜಿ. ಶೆಟ್ಟಿ, ಮಂಗಳೂರು ಇವರು ಅಕಾಡೆಮಿಗೆ ರೂ. 10,000.00 ದತ್ತಿನಿಧಿಯನ್ನು ನೀಡಿದ್ದಾರೆ. ಈ ದತ್ತಿನಿಧಿಯನ್ನು ‘ವೇದಾವತಿ ಜಿ. ಶೆಟ್ಟಿ’ ದತ್ತಿನಿಧಿ ಎಂದು ಕರೆಯಲಾಗುವುದು.
(2) ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಿಟ್ಟು ಅದರಿಂದ ಬರುವ ಬಡ್ಡಿಯ ಹಣಕ್ಕೆ ಅಕಾಡೆಮಿಯ ಹಣ ಸೇರಿಸಿ ವೇದಾವತಿ ಜಿ. ಶೆಟ್ಟಿಯವರ ತಂದೆ ತಾಯಿಯ ನೆನಪಿನಲ್ಲಿ ವೇದಾವತಿ ಶೆಟ್ಟಿಯವರ ಹೆಸರಿನಲ್ಲಿ ಅವರು ತಿಳಿಸಿದಂತೆ ಪ್ರತಿವರ್ಷ ಕಾರ್ಯಕ್ರಮವನ್ನು ನಡೆಸುವುದು.
(3) ಕಾರ್ಯಕ್ರಮವನ್ನು ಅವರೊಂದಿಗೆ ಚರ್ಚಿಸಿ, ಅಕಾಡೆಮಿ ಉಪನ್ಯಾಸವಾಗಿ ಅಳವಡಿಸಿಕೊಂಡು, ಕಾರ್ಯಕ್ರಮ ನಡೆಸುವುದು.
(4) ಈ ದತ್ತಿನಿಧಿಯ ಹಣವನ್ನು ತಾರೀಕು 6-4-2000ದಂದು ಸ್ವೀಕರಿಸಿದೆ, ದಿನಾಂಕ 10-6-2000ದಂದು ಜರಗಿದ ಸರ್ವ ಸದಸ್ಯರ ಸಭೆಯಲ್ಲಿ ಮೇಲ್ಕಂಡ ನಿಯಮಾವಳಿಗಳು ಅಂಗೀಕೃತವಾಗಿವೆ.
ಅನುಬಂಧ – 2
(1) ಶ್ರೀ ಸದಾನಂದ ಸುವರ್ಣ, ಮುಂಬಯಿ ಇವರು ಅಕಾಡೆಮಿಗೆ ರೂ. 15,000 ದತ್ತಿನಿಧಿ ಹಣ ನೀಡಿರುತ್ತಾರೆ. ಈ ದತ್ತಿನಿಧಿಯನ್ನು ‘ಸದಾನಂದ ಸುವರ್ಣ’ ದತ್ತಿನಿಧಿ ಎಂದು ಕರೆಯಲಾಗುವುದು.
(2) ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿರಿಸಿ ಅದರಿಂದ ಬರುವ ಬಡ್ಡಿಯಲ್ಲಿ ಪ್ರತಿ ವರ್ಷ ಆ ವರ್ಷಾಂತ್ಯದೊಳಗೆ ಒಂದು ದಿನ ರಂಗಭೂಮಿಯ ವಿವಿಧ ರಂಗತಜ್ಞರ / ನಿಪುಣ ಕಲಾವಿದರ ಸಹಕಾರದೊಂದಿಗೆ ಮುಂಬಯಿ, ಮದ್ರಾಸ್, ಬರೋಡ, ದೆಹಲಿ, ಮುಂತಾದ ಹೊರನಾಡುಗಳಲ್ಲಿ ಒಂದು ದಿನದ ವಿಚಾರ ಸಂಕಿರಣ /ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವುದು.
(3) ಈ ಕಾರ್ಯಕ್ರಮವನ್ನು ಹೊರನಾಡಿನಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ನಡೆಸಬಹುದಾಗಿದ್ದು, ಸದಾನಂದ ಸುವರ್ಣ ದತ್ತಿನಿಧಿ ಕಾರ್ಯವೆಂದು ನಡೆಸಲಾಗುವುದು.
(4) ಈ ದತ್ತಿನಿಧಿಯ ಹಣವನ್ನು ದಿನಾಂಕ 22-1-2002 ರಂದು ಸ್ವೀಕರಿಸಲಾಗಿದ್ದು, ದಿನಾಂಕ 27-12-2002ರ ಸರ್ವಸದಸ್ಯರ ಸಭೆಯಲ್ಲಿ ಮೇಲ್ಕಂಡ ಈ ನಿಯಮಾವಳಿಗಳು ಅಂಗೀಕೃತವಾಗಿವೆ.

ಅನುಬಂಧ – 3
1. ಕಾಸರಗೋಡು ತುಳು ಉತ್ಸವ ಸಮಿತಿ, ಕಾಸರಗೋಡು ಇವರು ತುಳು ಅಕಾಡೆಮಿಗೆ ರೂ. 30,000.00 ದತ್ತಿನಿಧಿಯನ್ನು ನೀಡಿದ್ದಾರೆ. ಈ ದತ್ತಿನಿಧಿಯನು ‘ಕಾಸರಗೋಡು ತುಳು ಉತ್ಸವ ಸಮಿತಿ’ ದತ್ತಿನಿಧಿ ಎಂದು ಕರೆಯಲಾಗುವುದು.
2. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪ್ರತಿ ವರ್ಷ ಕಾಸರಗೋಡು ಜಿಲ್ಲೆಯ ತುಳು ಮಾತೃ ಭಾಷೆಯ ಎಸ್. ಎಲ್. ಎಲ್. ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮಕ್ಕಳಿಬ್ಬರಿಗೆ ಪೆÇ್ರೀತ್ಸಾಹಕ ಪಾರಿತೋಷಕವಾಗಿ ನಗದು ಹಣ ನೀಡುವುದು.
3. ಈ ಬಹುಮಾನವನ್ನು ತುಳು ಮಾತೃಭಾಷೆಗೆ ಪೆÇ್ರೀತ್ಸಾಹಿಸುವ ನೆಲೆಯ ಪಾರಿತೋಷಕ ನಗದು ಬಹುಮಾನವೆಂದು ಕರೆಯಲಾಗುವುದು.
4. ಈ ದತ್ತಿನಿಧಿಯ ಹಣವನ್ನು ದಿನಾಂಕ 9-1-2003ರಂದು ಸ್ವೀಕರಿಸಿದೆ, ದಿನಾಂಕ 10-6-2003ರ ಸರ್ವ ಸದಸ್ಯರ ಸಭೆಯಲ್ಲಿ ಮೇಲ್ಕಂಡ ನಿಯಮಾವಳಿಗಳು ಅಂಗೀಕೃತವಾಗಿವೆ.
ಅನುಬಂಧ – 4
1. ಶ್ರೀ ಎಂ. ಕೆ. ರವೀಂದ್ರನಾಥ 61, ಚೌಡೇಶ್ವರಿ ಗುಡಿ ಬೀದಿ, ಬೆಂಗಳೂರು ಇವರು ತಮ್ಮ ಪತ್ನಿಯ ಹೆಸರಿನಲ್ಲಿ ತುಳು ಅಕಾಡೆಮಿಗೆ ರೂ. 15,000-00 ದತ್ತಿನಿಧಿಯನ್ನು ನೀಡಿದ್ದಾರೆ. ಈ ದತ್ತಿನಿಧಿಯನ್ನು ‘ರವೀಂದ್ರನಾಥ’ ದತ್ತಿನಿಧಿ ಎಂದು ಕರೆಯಲಾಗುವುದು.
2. ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಪ್ರತಿ ವರ್ಷ ಶ್ರೀ ಎಂ. ಕೆ. ರವೀಂದ್ರನಾಥ ಅವರ ದಿವಂಗತ ಪತ್ನಿ ಎಂ. ಕೆ. ವಿಜಯಲಕ್ಷ್ಮಿ ಅವರ ಹೆಸರಿನಲ್ಲಿ “ತುಳು ನಾಡು ನುಡಿಗೆ ಜೈನರ ಕೊಡುಗೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವುದು.
3. ಈ ದತ್ತಿನಿಧಿಯ ಹಣವನ್ನು ದಿನಾಂಕ 19-9-2005ರಂದು ಸ್ವೀಕರಿಸಿ, ತಾ.4-10-2005ರ ಸ್ಥಾಯಿ ಸಮಿತಿ ಸಭೆಯಲ್ಲಿ ಮೇಲ್ಕಂಡ ನಿಯಮಾವಳಿಗಳು ಅಂಗೀಕೃತವಾಗಿವೆ.
 ಮೇಲೆ ನಮೂದಿಸಲಾದ ಎಲ್ಲಾ ದತ್ತಿನಿಧಿಯ ಕಾರ್ಯಕ್ರಮಗಳನ್ನು ಅಕಾಡೆಮಿ ತನ್ನ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳುವ
ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡು ನಡೆಸುವುದು.
 ದತ್ತಿನಿಧಿಯ ಉದ್ದೇಶಗಳಿಗೆ ಸದರಿ ಮೊತ್ತದಿಂದ ಬರುವ ಬಡ್ಡಿ ಹಣವನ್ನು ಉಪಯೋಗಿಸಲಾಗುವುದು.
 ಇದಕ್ಕಾಗಿ ಬೇರೆ ಕಾರ್ಯಕ್ರಮಗಳಿರುವುದಿಲ್ಲ.

14. ಮದಿಪು ಚಂದಾ ಹೂಡಿಕೆಗಳು
ಅನುಬಂಧ – 5
(1) ಅಕಾಡೆಮಿ ಪ್ರಕಟ ಮಾಡುವ ‘ಮದಿಪು’ ತ್ರೈಮಾಸಿಕ ಸಂಚಿಕೆಯ ಆಜೀವ ಚಂದಾದಾರ ಚಂದಾ ಮೊತ್ತ ರೂ.500ನ್ನು ಠೇವಣಿಯಲ್ಲಿ ಹೂಡಿಸುವುದು.
(2) ಈ ಠೇವಣಿಯಿಂದ ಬಡ್ಡಿಯನ್ನು ಆಯಾ ಯೋಜನೆಗೆ ಬಳಸಿಕೊಳ್ಳುವುದು.
ಈ ಮೇಲ್ಕಾಣಿಸಿದ ನಿಯಮಗಳನ್ನು ಅಳವಡಿಸಿ, ದಿನಾಂಕ 7-2-2009ರಿಂದ ಅನ್ವಯವಾಗುವಂತೆ ಅನುಸರಿಸಲು ನಿರ್ಣಯಿಸಿ ಅನುಮೋದನೆ ನೀಡಲಾಯಿತು. ಇಲಾಖೆಯ ಅನುಮತಿ ವಿವರ ಲಗತ್ತಿಸಿ ಕಳುಹಿಸಿ ಕೊಡುವುದೆಂದು ತೀರ್ಮಾನಿಸಲಾಯಿತು.
ಸೂಚನೆ : ಈ ಮೇಲ್ಕಂಡ 4 ದತ್ತಿನಿಧಿಗಳನ್ನು ಮತ್ತು ಮದಿಪು ಆಜೀವ ಚಂದಾದಾರರ ಚಂದಾ ಹಣಮೊತ್ತವನ್ನು ಕಾಪೆರ್Çರೇಶನ್ ಬ್ಯಾಂಕ್, ಎಂ.ಜಿ.ರಸ್ತೆ, ಲಾಲ್ಬಾರಗ್, ಮಂಗಳೂರು – 575003 ಶಾಖೆಯಲ್ಲಿ ನಿಶ್ಚಿತ ಠೇವಣಿಯಲ್ಲಿಡಲಾಗಿದೆ.
***************