ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸಿಗಾಗಿ ಅರ್ಜಿ ಆಹ್ವಾನ

ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸಿಗಾಗಿ ಅರ್ಜಿ ಆಹ್ವಾನ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನ್‍ಕಟ್ಟೆ, ಮಂಗಳೂರು ಇಲ್ಲಿ ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸಿಗಾಗಿ ಅರ್ಜಿ ಆಹ್ವಾನ
ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ನಿರಂತರ ಪ್ರಯತ್ನದ ಪಲವಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸಿಗಾಗಿ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿರುತ್ತದೆ. ಸದ್ರಿ ಕೋರ್ಸು ಕೆಲಸದಲ್ಲಿರುವವರಿಗೆ ಅನುಕೂಲವಾಗಲು ಸಂಧ್ಯಾ ಕೋರ್ಸಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಪ್ರಯೋಜನವನ್ನು ತುಳು ಆಸಕ್ತರು ಪಡೆಯಬೇಕಾಗಿ ಈ ಮೂಲಕ ಕೋರಲಾಗಿದೆ.
ಸದ್ರಿ ಕೋರ್ಸು ಎಂ.ಎ ಕನ್ನಡ ಸೇರಿದಂತೆ ಇತರೇ ಸಮಾಜ ವಿಜ್ಞಾನ ಕೋರ್ಸುಗಳಿಗೆ ಸಮನಾಗಿದ್ದು, ಉದ್ಯೋಗಕಾಂಕ್ಷಿಗಳಿಗೆ ಈ ಕೋರ್ಸಿನಿಂದ ಪ್ರಯೋಜನವಾಗಲಿದೆ. ಈಗಾಗಲೇ ತುಳು ಬಾಷೆ ಕಲಿಸಲು ಪದವಿ ಹೊಂದಿದ ಅಧ್ಯಾಪಕರ ಕೊರತೆಯಿದ್ದು, ಸದ್ರಿ ಕೋರ್ಸನ್ನು ಅಬ್ಯಸಿಸಿದಲ್ಲಿ ಮುಂದಕ್ಕೆ ಅವರಿಗೆ ಉಜ್ಜಲ ಭವಿಷ್ಯವಿದೆ.
ಈ ಕೋರ್ಸಿನಲ್ಲಿ ತುಳು ಭಾಷೆಯ ಪ್ರಾಚೀನತೆ, ತುಳು ಸಂಸ್ಕ್ರತಿ, ತುಳುವರ ಆರಾಧನೆಗಳು ತುಳು ಲಿಪಿ ತುಳುವರ ಕೃಷಿ ಪದ್ಧತಿ, ವ್ಯಾಪಾರ ಸೇರಿದಂತೆ ತುಳುವರ ಉದ್ಯಮಶೀಲತೆಯ ವಿಷಯಗಳು ಒಳಗೊಂಡಿದ್ದು, ತುಳುವರು, ತುಳುವ ಸಮಾಜವನ್ನು ಸಂಕ್ಷೀಪ್ತವಾಗಿ ತಿಳಿದುಕೊಳ್ಳಲು ಈ ಕೋರ್ಸಿನಲ್ಲಿ ಅವಕಾಶವಿರುತ್ತದೆ.
ಆದುದರಿಂದ ಆಸಕ್ತರು ಈ ಪ್ರಯೋಜನವನ್ನು ಪಡೆದುಕೊಂಡು ವಿಶ್ವವಿದ್ಯಾನಿಲಯ ಆರಂಭಿಸುವ ಈ ಕೋರ್ಸಿಗೆ ಪ್ರವೇಶಾತಿ ಪಡೆದು ತುಳು ಬಾಷೆ, ಸಂಸ್ಕ್ರತಿಯ ಸಮಗ್ರ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಗಿ ತಿಳಿಸಲಾಗಿದೆ.
ಈ ಕೋರ್ಸಿಗೆ ಸೇರಲು ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಪದವೀದರರು ಆರ್ಹರಾಗಿದ್ದು, ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಅಭ್ಯಾಸ ಮಾಡಿಕೊಂಡು ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು.
ಅರ್ಜಿ ಹಾಗೂ ಮಾಹಿತಿ ಪುಸ್ತಕ ದೊರೆಯುವ ಸ್ಥಳ
1) ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ, ಮಂಗಳಗಂಗೋತ್ರಿ, ಕೋಣಾಜೆ
2) ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-07-2018
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನ್ನು ಸಂಪರ್ಕಿಸಬಹುದು.

www.mangaloreuniversity.ac.in