ಜೂನ್ 21 ರಂದು ‘ಸ್ವಾತಂತ್ರ್ಯ ಹೋರಾಟಗಾರ ದಿ| ಡಾ ಅಮ್ಮೆಂಬಳ ಬಾಳಪ್ಪರವರಿಗೆ ನುಡಿನಮನ ಮತ್ತು ಕವಿಕೂಟ’

ಜೂನ್ 21 ರಂದು ‘ಸ್ವಾತಂತ್ರ್ಯ ಹೋರಾಟಗಾರ ದಿ| ಡಾ ಅಮ್ಮೆಂಬಳ ಬಾಳಪ್ಪರವರಿಗೆ ನುಡಿನಮನ ಮತ್ತು ಕವಿಕೂಟ’

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಲಾಲ್‌ಬಾಗ್ ಮಂಗಳೂರು ಇಲ್ಲಿನ ಚಾವಡಿಯಲ್ಲಿ ಜೂನ್ ತಿಂಗಳ 21 ನೇ ತಾರೀಕು ಶನಿವಾರದಂದು ಅಪರಾಹ್ನ ಗಂಟೆ 3.00 ಕ್ಕೆ ಸ್ವಾತಂತ್ರ್ಯ ಹೋರಾಟಗಾರ ದಿ| ಡಾ ಅಮ್ಮೆಂಬಳ ಬಾಳಪ್ಪರವರಿಗೆ ನುಡಿನಮನ ಮತ್ತು ಕವಿಕೂಟ ಕಾರ್ಯಕ್ರಮವು ನಡೆಯಲಿರುವುದು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಎಂ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಲಿರುವರು. ಉಡುಪಿ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ ದುಗ್ಗಪ್ಪ ಕಜೆಕಾರ್ ದಿ| ಡಾ ಅಮ್ಮೆಂಬಳ ಬಾಳಪ್ಪರವರ ಕುರಿತು ನುಡಿನಮನ ಸಲ್ಲಿಸಲಿದ್ದಾರೆ. ಹಾಗೂ ಹಿರಿಯ ಸಾಹಿತಿ, ನಿವೃತ್ತ ಉದ್ಘೋಷಕರಾದ ಶ್ರೀ ಮುದ್ದು ಮೂಡುಬೆಳ್ಳೆ ಕವಿಕೂಟದ ಅಧ್ಯಕ್ಷತೆವಹಿಸಲಿರುವರು. ಕವಿಕೂಟದಲ್ಲಿ ಶ್ರೀ ಶರತ್ ಶೆಟ್ಟಿ, ಡಾ ಅನಸೂಯ ಸಾಲಿಯಾನ್, ತುಳು, ಕನ್ನಡ ಸಾಹಿತಿಯಾದ ಶ್ರೀ ಮಹೇಂದ್ರನಾಥ ಸಾಲೆತ್ತೂರು ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಇವರು ಭಾಗವಹಿಸಲಿರುವರು.