ತುಳುನಾಡು ಛಾಯಾಚಿತ್ರ ಸ್ಪರ್ಧೆಗೆ ಅರ್ಜಿ ಆಹ್ವಾನ
ವಿಶ್ವ ತುಳುವೆರೆ ಪರ್ಬ ೨೦೧೪ರ ಅಂಗವಾಗಿ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ತುಳುನಾಡು ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿಲಾಗಿದೆ. ಸ್ಪರ್ಧಿಗಳು ಛಾಯಾಚಿತ್ರಗಳನ್ನು ಪಿಕ್ಸೆಲ್ಟುಲೈಫ್.ಇನ್ (ಠಿixeಟ೨ಟiಜಿe.iಟಿ) ಈ ಹೆಸರಿನ ಅಂತರ್ಜಾಲದಲ್ಲಿ ನೋಂದಾಯಿಸಬೇಕು. ಈ ಬಗ್ಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ‘ತುಳುನಾಡಿನ ವಿಶೇಷತೆಗಳು’ ಎಂಬ ಶಿರೋನಾಮೆಯಲ್ಲಿ ಈ ಕೆಳಗಿನ ವಿಭಾಗಳಲ್ಲಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಛಾಯಾಚಿತ್ರಗಳು ತುಳುನಾಡಿನ ಪ್ರೇಕ್ಷಣೀಯ ಸ್ಥಳಗಳ ಮಹತ್ವವನ್ನು ಎತ್ತಿ ತೋರಿಸುವಂತಿರಬೇಕು.
ವಿಭಾಗಗಳು:- ಡಿಜಿಟಲ್
ಎ – ತುಳುನಾಡಿನ ಕಲೆ ಮತ್ತು ಸಂಸ್ಕೃತಿ
ಬಿ – ತುಳುನಾಡಿನ ಕೃಷಿ ಮತ್ತು ಮೀನುಗಾರಿಕೆ.
(ಸೃಜನಶೀಲ (ಕ್ರಿಯೇಟಿವ್) ಚಿತ್ರಗಳಿಗೆ ಆದ್ಯತೆ)
ಸಿ – ತುಳುನಾಡಿನ ಪ್ರಕೃತಿ ರಮಣೀಯ ಛಾಯಾಚಿತ್ರ
ಡಿ – ತುಳುನಾಡಿನ ಪ್ರೇಕ್ಷಣೀಯ ಮತ್ತು ಧಾರ್ಮಿಕ ಸ್ಥಳಗಳು
ಛಾಯಾಚಿತ್ರ ಸ್ಪರ್ಧಿಗಳು ತಮ್ಮ ಛಾಯಾಚಿತ್ರಗಳನ್ನು ಅಂತರ್ಜಾಲದಲ್ಲಿ ನೋಂದಾಯಿಸಲು ಕೊನೆಯ ದಿನಾಂಕ: ೦೫ ದಶಂಬರ್ ೨೦೧೪ ಆಗಿರುತ್ತದೆ. ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶವನ್ನು ೧೦ ನೇ ದಶಂಬರ್ ೨೦೧೪ ರ ವಾರ್ತಾ ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು. ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಮತ್ತು ಅವರ ಛಾಯಾಚಿತ್ರವನ್ನು ಅಂತರ್ಜಾಲದಲ್ಲು ಪ್ರಕಟಿಸಲಾಗುವುದು (ಪಿಕ್ಸೆಲ್ಟುಲೈಫ್.ಇನ್ (ಠಿixeಟ೨ಟiಜಿe.iಟಿ). ವಿಜೇತರಾದ ಸ್ಪರ್ಧಿಗಳಿಗೆ ಪ್ರತಿ ವಿಭಾಗದಲ್ಲಿ : ಪ್ರಥಮ ಬಹುಮಾನ: ರೂ ೫,೦೦೦, ದ್ವಿತೀಯ ಬಹುಮಾನ: ರೂ ೩,೦೦೦ ,ತೃತೀಯ ಬಹುಮಾನ: ರೂ ೨,೦೦೦ ಹಾಗೂ ೨ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಈ ಬಗ್ಗೆ ನಿಯಮ ಮತ್ತು ಸೂಚನೆಗಳಿಗೆ <hಣಣಠಿ://ಠಿixeಟ೨ಟiಜಿe.iಟಿ> ಅಂತರ್ಜಾಲವನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆ ಹಾಗೂ ಇನ್ನಿತರ ಮಾಹಿತಿಗಾಗಿ ಕೇದಿಗೆ ವಸಂತ ರಾವ್ (+೯೧ ೯೪೪೮೨ ೬೨೨೦೪), ಇ-ಮೇಲ್ vಚಿsಚಿಟಿಣ[email protected]ಞeಜige.ಛಿom ಇವರನ್ನು ಸಂಪರ್ಕಿಸುವಂತೆ ಅಕಾಡೆಮಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.