ತುಳುಭಾಷೆ ಅಧಿಕೃತ ಭಾಷೆಯಾಗಿ ಘೋಷಣೆಯಾದರೆ ಹೆಚ್ಚಿನ ಪ್ರಾತಿನಿಧ್ಯ: ಹರಿಪ್ರಸಾದ್

ತುಳುಭಾಷೆ ಅಧಿಕೃತ ಭಾಷೆಯಾಗಿ ಘೋಷಣೆಯಾದರೆ ಹೆಚ್ಚಿನ ಪ್ರಾತಿನಿಧ್ಯ: ಹರಿಪ್ರಸಾದ್

ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡ್ದ ಕಾರ್ಯಕ್ರಮದಲ್ಲಿ ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಬೇಕೆಂದು ಸಾಹಿತಿಗಳು, ಜನಪ್ರತಿನಿಧಿಗಳು ಹಾಗೂ ನಾನಾ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಶನಿವಾರ ಅಕಾಡೆಮಿಯ ಚಾವಡಿಯಲ್ಲಿ 8ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆ ಬಗ್ಗೆ ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಿದ ರಾಜ್ಯ ಸಭಾ ಸದಸ್ಯ ಬಿ. ಕೆ ಹರಿಪ್ರಸಾದ್ ಜತೆ ಸಂವಾದವೂ ನಡೆಯಿತು.

DSCN0295

ಬಿ. ಕೆ ಹರಿಪ್ರಸಾದ್ ಮಾತನಾಡಿ, ತುಳು ಭಾಷಿಗರು ರಾಜಕೀಯ ಒತ್ತಡ ಮೂಲಕ ತುಳು ಭಾಷೆಯನ್ನು ಸಂವಿಧಾನಿತ ಮಾನ್ಯತೆಗೆ ಪ್ರಯತ್ನಿಸಬೇಕು. ತುಳು ಸಾಹಿತ್ಯ, ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಗೌರವ ಸಿಗುವ ಕೆಲಸಕ್ಕೆ ಎಲ್ಲರೂ ರಾಜಕೀಯ ರಹಿತವಾಗಿ ಪ್ರಯತ್ನಿಸಬೇಕು. ಎಂದರು. ರಾಜ್ಯದ ಆರ್ಥಿಕ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಹೆಸರು ರಾರಾಜಿಸುತ್ತಿದೆ. ಮಾತೃ ಭಾಷೆಯ ಬಗೆಗಿನ ಅಭಿಮಾನ ಬೆಳೆಸಿಕೊಂಡು ಬೇಡಿಕೆ ಇಡಿ ಎಂದರು.

DSCN0257

ದಕ್ಷಿಣ ಕನ್ನಡ ಜನ ಬುದ್ಧಿವಂತರು. ನಮ್ಮ ಜನಸಂಖ್ಯೆ ಆಧಾರಿತವಾಗಿ ನಮಗೆ ಸಿಕ್ಕಿರುವ ಪ್ರಾತಿನಿಧ್ಯ ಶೂನ್ಯ, ತುಳು ಭಾಷೆ ಅಧಿಕೃತ ಭಾಷೆಯಾಗಿ ಘೋಷಣೆಯಾದರೆ ಹೆಚ್ಚಿನ ಪ್ರಾನಿಧ್ಯಕ್ಕೆ ಅನುಕೂಲವಾಗುತ್ತದೆ ಎಂದರು. ತುಳು ಅಕಾಡೆಮಿಯ ಅಧ್ಯಕ್ಷ ಎ. ಸಿ ಭಂಡಾರಿ ಸ್ವಾಗತಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಪ್ರಸ್ತಾವನೆಗೈದರು. ಗೋಪಾಲ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.