ತುಳು ಅಕಾಡೆಮಿಯಿಂದ ತುಳು ನಾಟಕ ಪರ್ಬ

ತುಳು ಅಕಾಡೆಮಿಯಿಂದ ತುಳು ನಾಟಕ ಪರ್ಬ

ಕರ್ನಾಟಕ ಸರಕಾರ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
(ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ)

ತುಳುಭವನ, ಪೋಸ್ಟ್: ಅಶೋಕನಗರ,
ಉರ್ವಸ್ಟೋರ್, ಮಂಗಳೂರು – 575006
ದೂರವಾಣಿ: 0284-2459389

ಕ್ರಮಾಂಕ : ಕತುಸಾಅ/ಪ್ರಕಟಣೆ/2017-18                                                                                                             ದಿನಾಂಕ: 06-01-2017

ಇವರಿಗೆ:
ಪ್ರಧಾನ ವರದಿಗಾರರು/ ಸಂಪಾದಕರು

ಮಾನ್ಯರೆ,
ವಿಷಯ: ಸುದ್ದಿ ವಿಭಾಗದಲ್ಲಿ ಪತ್ರಿಕಾ ಪ್ರಕಟಣೆಗಾಗಿ
ಈ ಕೆಳಗೆ ನೀಡಿರುವ ವಿವರವನ್ನು ತಮ್ಮ ಪತ್ರಿಕೆಯಲ್ಲಿ/ಮಾಧ್ಯಮದಲ್ಲಿ ಸುದ್ಧಿಯಾಗಿ ಪ್ರಕಟಿಸಬೇಕಾಗಿ ಹಾಗೂ ಕಾರ್ಯಕ್ರಮದಂದು ತಮ್ಮ ವರದಿಗಾರರನ್ನು ಕಳುಹಿಸಿ ಕೊಡಬೇಕಾಗಿ ಈ ಮೂಲಕ ವಿನಂತಿಸಿದೆ.

ಸಹಿ/-
ರಿಜಿಸ್ಟ್ರಾರ್

ಮಾರ್ಚ್ 25 – 31: ತುಳು ಅಕಾಡೆಮಿಯಿಂದ ತುಳು ನಾಟಕ ಪರ್ಬ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಮಾರ್ಚ್ ತಿಂಗಳ 25 ರಿಂದ 31 ರ ವರೆಗೆ 7 ದಿನಗಳ ಅವಧಿಯ ತುಳು ನಾಟಕ ಪರ್ಬವನ್ನು ಮಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ತುಳು ರಂಗಭೂಮಿಯ ಹಿರಿಯ ಕಲಾವಿದರೊಂದಿಗೆ ಸಮಾಲೋಚನಾ ಸಭೆಯು ಶುಕ್ರವಾರ ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಿತು.
ಅಕಾಡೆಮಿ ಅಧ್ಯಕ್ಷ ಎ.ಡಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ತುಳು ಭಾಷೆ ಮತ್ತು ಸಾಹಿತ್ಯ – ಸಂಸ್ಕøತಿಗೆ ತುಳು ರಂಗಭೂಮಿಯ ಕೊಡುಗೆ ಅನನ್ಯವಾದುದು. ಈ ನಿಟ್ಟಿನಲ್ಲಿ ತುಳು ರಂಗಭೂಮಿಗೆ ಕೊಡುಗೆ ನೀಡಿ ನಮ್ಮನ್ನಗಲಿರುವ ಹಿರಿಯ ನಾಟಕಕಾರರ ಸಂಸ್ಮರಣೆ ಮಾಡುವುದು ಹಾಗೂ ಅವರ ಕೃತಿಗಳನ್ನು ಪ್ರದರ್ಶಿಸಿಲು ಉದ್ದೇಶಿಸಲಾಗಿದೆ ಎಂದು ಎ.ಸಿ.ಭಂಡಾರಿ ತಿಳಿಸಿದರು.
ಸಭೆಯಲ್ಲಿ ಹಿರಿಯ ನಾಟಕಕಾರರಾದ ಎಂ. ಕೆ. ಸೀತಾರಾಮ ಕುಲಾಲ್, ಡಾ. ಸಂಜೀವ ದಂಡೆಕೇರಿ, ರೋಹಿದಾಸ್ ಕದ್ರಿ, ಗಂಗಾಧರ ಕಿದಿಯೂರು , ತಮ್ಮ ಲಕ್ಷಣ್ , ಚಂದ್ರಹಾಸ ದೇವಾಡಿಗ , ಜಗನ್ ಪವಾರ್ ಬೇಕಲ್ , ಕದ್ರಿ ನವನೀತ ಶೆಟ್ಟಿ , ಶಶಿರಾಜ್ ಕಾವೂರು , ಶರತ್ ಶೆಟ್ಟಿ ಕಿನ್ನಿಗೋಳಿ , ರಾಜೇಶ್ ಕೆಂಚನಕೆರೆ , ಹರಿಶ್ ನೀರ್ಮಾರ್ಗ , ಡಿ.ಎಂ. ಕುಲಾಲ್, ಅಕಾಡೆಮಿ ಸದಸ್ಯರಾರ ತಾರಾನಾಥ್ ಗಟ್ಟಿ ಕಾಪಿಕಾಡ್ , ಶ್ರೀಮತಿ ವಿದ್ಯಾಶ್ರೀ , ಡಾ. ವಾಸುದೇವ ಬೆಳ್ಳೆ, ನರೇಶ್ ಸಸಿಹಿತ್ಲು ಮೊದಲಾದವರು ಭಾಗವಹಿಸಿದ್ದರು.
ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು, ಸದಸ್ಯರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ವಂದಿಸಿದರು.

******************
ಸಹಿ/-
(ಚಂದ್ರಹಾಸ ರೈ. ಬಿ)
ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ