ತುಳು ಅಕಾಡೆಮಿ: ಜೂನ್ 5 ರಂದು ‘ಚಾವಡಿ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ’

ತುಳು ಅಕಾಡೆಮಿ: ಜೂನ್ 5 ರಂದು ‘ಚಾವಡಿ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ’

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಲಾಲ್‌ಬಾಗ್ ಮಂಗಳೂರು ಇಲ್ಲಿನ ಚಾವಡಿಯಲ್ಲಿ ಜುಲಾಯಿ ತಿಂಗಳ 5ನೇ ತಾರೀಕು ಶನಿವಾರದಂದು ಅಪರಾಹ್ನ ಗಂಟೆ ೩.೦೦ಕ್ಕೆ ಚಾವಡಿ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್‍ಯಕ್ರಮವು ನಡೆಯಲಿರುವುದು. ಈ ಸಮಾರಂಭದಲ್ಲಿ ತುಳು, ಕನ್ನಡ ಸಾಹಿತಿ ಮತ್ತು ಸಂಶೋಧಕಿಯಾದ ಡಾ ಸಾಯಿಗೀತಾ ಪುಸ್ತಕ ಬಿಡುಗಡೆ ಮತ್ತು ಪುಸ್ತಕಗಳ ಪರಿಚಯ ಮಾಡಲಿದ್ದಾರೆ.

 

ಈ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಮರೆಪ್ಪೆರಾವಂದಿ ತುಳುವೆರ್ ಮಾಲಿಕೆಯಲ್ಲಿ’ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್‌ರವರು ಬರೆದ ‘ಲಿಪಿ ಶಿಲ್ಪಿ ಅತ್ತಾವರ ಅನಂತಾಚಾರ್ಯೆರ್’ ಶಂಕರ ನಾರಾಯಣ ಡಿ ಪೂಜಾರಿ ಅನುವಾದಿಸಿದ ಶ್ರೀಮತಿ ಯಶವಂತಿ ಸುವರ್ಣ ಅವರ ಕೃತಿ ‘ಮಾಯಾಂದಲ್’ ಇಂಗ್ಲೀಷ್ ಭಾಷಾಂತರ ಕೃತಿ, ಹಾಗೂ ಪ್ರೊ. ಡಿ. ವೇದಾವತಿಯವರು ಬರೆದ ಹರಿಹರನ ರಗಳೆಗಳ ತುಳು ಕಾವ್ಯಾನುವಾದ ಪುಸ್ತಕಗಳು ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದ ನಂತರ ಜಗದೀಶ ಶಿವಪುರ ಬಳಗದವರಿಂದ ತುಳು ಪದರಂಗಿತ ಕಾರ್ಯಕ್ರಮ ನಡೆಯಲಿದೆ.

ಈ ಕಾರ್‍ಯಕ್ರಮದಲ್ಲಿ ತುಳುವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಅವರು ವಿನಂತಿಸಿದ್ದಾರೆ.