ತುಳು ಅಕಾಡೆಮಿ – ನಾಟಕೋತ್ಸವಕ್ಕೆ ತಂಡಗಳಿಂದ ಅರ್ಜಿ ಆಹ್ವಾನ

ತುಳು ಅಕಾಡೆಮಿ – ನಾಟಕೋತ್ಸವಕ್ಕೆ ತಂಡಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ಸರಕಾರ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

(ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ)

 

                                                                                                                    ತುಳುಭವನ, ಪೋಸ್ಟ್: ಅಶೋಕನಗರ,

                                                                    ಉರ್ವಸ್ಟೋರ್, ಮಂಗಳೂರು – 575006

                                                                                    ದೂರವಾಣಿ: 0284-2459389

______________________________________________________________________

 

ಕ್ರಮಾಂಕ : ಕತುಸಾಅ/ಪ್ರಕಟಣೆ/2017-18                                                                                                                  ದಿನಾಂಕ:  08-01-2018

ಇವರಿಗೆ:

ಪ್ರಧಾನ ವರದಿಗಾರರು/ ಸಂಪಾದಕರು

 

ಮಾನ್ಯರೆ,

ವಿಷಯ: ಸುದ್ಧಿ ವಿಭಾಗದಲ್ಲಿ ಪ್ರಕಟಣೆಗಾಗಿ

ಈ ಕೆಳಗೆ ನೀಡಿರುವ ವಿವರವನ್ನು ತಮ್ಮ ಪತ್ರಿಕೆಯಲ್ಲಿ/ಮಾಧ್ಯಮದಲ್ಲಿ ಸುದ್ಧಿಯಾಗಿ ಪ್ರಕಟಿಸಬೇಕಾಗಿ ಈ ಮೂಲಕ ವಿನಂತಿಸಿದೆ.

ಸಹಿ/-

ರಿಜಿಸ್ಟ್ರಾರ್

***********************************

ತುಳು ಅಕಾಡೆಮಿ – ನಾಟಕೋತ್ಸವಕ್ಕೆ ತಂಡಗಳಿಂದ ಅರ್ಜಿ ಆಹ್ವಾನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ 2018 ರ ಮಾರ್ಚ್ ತಿಂಗಳ  25 ರಿಂದ 31 ರ ವರೆಗೆ 7 ದಿನಗಳ ಅವಧಿಯ ತುಳು ನಾಟಕೋತ್ಸವವನ್ನು ಮಂಗಳೂರಿ ಪುರಭವನದಲ್ಲಿ ಆಯೋಜಿಸಲು ಅಕಾಡೆಮಿ ತೀರ್ಮಾನಿಸಿದೆ. ಈ ಬಗ್ಗೆ ಜಿಲ್ಲೆಯ ರಂಗಭೂಮಿಯ ಹಿರಿಯ ರಂಗಕರ್ಮಿಗಳೊಂದಿಗೆ ನಾಟಕೋತ್ಸವ ಆಯೋಜನೆಯ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ತುಳು ಭಾಷೆ ಮತ್ತು ಸಾಹಿತ್ಯ – ಸಂಸ್ಕøತಿಗೆ ತುಳು ರಂಗಭೂಮಿಗೆ ಅನನ್ಯವಾದ ಕೊಡುಗೆ ನೀಡಿರುವ ಮತ್ತು ನಮ್ಮನ್ನಗಲಿರುವ ಹಿರಿಯ ನಾಟಕಕಾರರ ಸಂಸ್ಮರಣೆ ಮಾಡುವುದು ಮತ್ತು ಅವರ ಜನಪ್ರಿಯ ನಾಟಕಗಳನ್ನು ಪ್ರದರ್ಶಿಸಿಲು ತೀರ್ಮಾನಿಸಲಾಗಿದೆ.

ತುಳು ರಂಗಭೂಮಿಗೆ ಅವಿಸ್ಮರಣೀಯ ಕೊಡುಗೆ ನೀಡಿದ ದಿ. ಕೆ. ಬಿ. ಭಂಡಾರಿ, ದಿ. ರಾಮ ಕಿರೋಡಿಯನ್,     ದಿ. ಮಚ್ಚೇಂದ್ರನಾಥ ಪಾಂಡೇಶ್ವರ, ದಿ. ವಿಶುಕುಮಾರ್, ದಿ. ಕೆ. ಎನ್. ಟೇಲರ್, ದಿ. ಶಾಂತರಾಮ ಕಲ್ಲಡ್ಕ,                ದಿ. ಮೊಯಿದೀನಬ್ಬ, ದಿ. ಯು. ಆರ್. ಚಂದರ್, ಇವರ ನಾಟಕಗಳನ್ನು ನಾಟಕೋತ್ಸವಕ್ಕೆ ಆಯ್ಕೆ ಮಾಡಲಾಗಿದೆ. ಆಯಾಯ ದಿನಗಳಲ್ಲಿ ರಂಗಕರ್ಮಿಗಳ ಕೊಡುಗೆಯನ್ನು ಸ್ಮರಿಸಲು ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.

ಮೇಲಿನ ನಾಟಕಗಳನ್ನು ನಾಟಕೋತ್ಸವದಲ್ಲಿ ಅವಶ್ಯ ಸಿದ್ಧತೆಗಳೊಂದಿಗೆ ರಂಗದ ಮೇಲೆ ಪ್ರದರ್ಶಿಸಲು ಆಸಕ್ತ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ತಂಡಗಳಿಗೆ ಸೂಕ್ತ ಸಂಭಾವನೆ ನೀಡಲಾಗುವುದು. ಆಸಕ್ತ ತಂಡಗಳು ತಮ್ಮ ಅನುಭವ, ತಂಡದ ಕಲಾವಿದರ ವಿವರಗಳೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಭವನ, ಪೆÇೀಸ್ಟ್ ಅಶೋಕನಗರ, ಉರ್ವಸ್ಟೋರ್, ಮಂಗಳೂರು – 575006 ಈ ವಿಳಾಸಕ್ಕೆ ದಿನಾಂಕ:          16-01-2018 ರೊಳಗೆ ಸಲ್ಲಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್, ಚಂದ್ರಹಾಸ ರೈ ಬಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9901016962 ಸಂಪರ್ಕಿಸುವಂತೆ ವಿನಂತಿ.

******************

ಸಹಿ/-

(ಚಂದ್ರಹಾಸ ರೈ. ಬಿ)

ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ