ವಿಕಿ ಪೀಡಿಯಾದಲ್ಲಿ ತುಳು ಲೇಖನಗಳನ್ನು ಬರೆಯುವ ಕಮ್ಮಟ

ವಿಕಿ ಪೀಡಿಯಾದಲ್ಲಿ ತುಳು ಲೇಖನಗಳನ್ನು ಬರೆಯುವ ಕಮ್ಮಟ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಅಡ್ಯಾರ್ ಇವರ ಸಕಾರದೊಂದಿಗೆ “ವಿಕಿ ಪೀಡಿಯಾದಲ್ಲಿ ತುಳು ಭಾಷೆಯ ಲೇಖನಗಳನ್ನು ಬರೆಯುವ ಕಮ್ಮಟವನ್ನು ದಿನಾಂಕ ೨೬-೧೧-೨೦೧೪ ರಿಂದ ೨೮-೧೧-೨೦೧೪ ರವರೆಗೆ ಮೂರು ದಿನಗಳಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಅಡ್ಯಾರ್‌ನಲ್ಲ್ಲಿ ಹಮ್ಮಿಕೊಳ್ಳಲಾಗಿದೆ.

ಕಮ್ಮಟದ ಉದ್ಘಾಟನಾ ಸಮಾರಂಭವು ದಿನಾಂಕ ೨೬-೧೧-೨೦೧೪, ಬುಧವಾರ ಬೆಳಗ್ಗೆ ೧೦.೦೦ ಕ್ಕೆ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಎಮ್ ಜಾನಕಿ ಬ್ರಹ್ಮಾವರ ಅವರು ವಹಿಸಲಿದ್ದು, ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಶ್ರೀ ಎ.ಸಿ ಭಂಡಾರಿ, ವಿಶ್ವ ತುಳುವೆರೆ ಪರ್ಬದ ಪ್ರಧಾನ ಸಂಚಾಲಕರಾದ ಶ್ರಿ ಕದ್ರಿ ನವನೀತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ದಿನಾಂಕ ೨೮-೧೧-೨೦೧೪ ರಂದು ಸಾಯಂಕಾಲ ೩.೦೦ ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲರಾದ ಪ್ರೊ. ಯು.ಎಂ ಭೂಷಿ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದು, ತುಳುಕೂಟ ಮಂಗಳೂರಿನ ಅಧ್ಯಕ್ಷರಾದ ಶ್ರೀ ದಾಮೋದರ ನಿಸರ್ಗ , ವಿಶ್ವ ತುಳುವೆರೆ ಪರ್ಬದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನಿಟ್ಟೆ ಶಶಿಧರ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಮ್ಮಟದ ಸಂಪನ್ಮೂಲ ವ್ಯಕಿಯಾಗಿ ಶ್ರೀ ಪವನಜ ಯು.ಬಿ ಇವರು ಭಾಗವಹಿಸಲಿರುವರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಸುತ್ತಿರುವ ಈ ಕಮ್ಮಟದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಮ್ಮಟವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.