2005–2008

ಶ್ರೀ ಸೀತಾರಾಮ್ ಕುಲಾಲ್ (ಅಧ್ಯಕ್ಷರು)

ಶ್ರೀ ಮಚ್ಚೇಂದ್ರನಾಥ್ ಪಾಂಡೇಶ್ವರ     (ಸದಸ್ಯರು)

ಶ್ರೀ ಕೋಳ್ಯೂರು ರಾಮಚಂದ್ರ ರಾವ್      (ಸದಸ್ಯರು)

ಡಾ ಕಬ್ಬಿನಾಲೆ ವಸಂತ ಭಾರದ್ವಾಜ್     (ಸದಸ್ಯರು)

ಶ್ರೀ ಬಿ. ಎನ್. ಹರೀಶ್ ಬೋಳೂರು    (ಸದಸ್ಯರು)

ಶ್ರೀಮತಿ ಜಯಂತಿ ಎಸ್ ಬಂಗೇರ (ಸದಸ್ಯರು)

ಶ್ರೀ ಶಂಕರ ಖಂಡೇರಿ (ಸದಸ್ಯರು)

ಶ್ರೀ ಚಿದಂಬರ ಬೈಕಂಪಾಡಿ (ಸದಸ್ಯರು)

ಶ್ರೀ ಗಣೇಶ್ ಎಕ್ಕಾರ್ (ಸದಸ್ಯರು)

ಶ್ರೀ ಗಣೇಶ್ ಅಮೀನ್ ಸಂಕಮಾರ್ (ಸದಸ್ಯರು)

ಶ್ರೀಮತಿ ಗಿಡಿಕೆರೆ ರಾಮಕ್ಕ ಮುಗೇರ್‍ತಿ (ಸದಸ್ಯರು)

ಶ್ರೀ ರಾಮಚಂದ್ರ ಬೈಕಂಪಾಡಿ (ಸದಸ್ಯರು)

ಶ್ರೀಮತಿ ಸರೋಜಿನಿ ಶೆಟ್ಟಿ (ಸದಸ್ಯರು)

ಶ್ರೀ ಶ್ರೀನಿವಾಸ ಮಕಂಡೆ (ಸದಸ್ಯರು)

ಸೀತಾರಾಮ್ ಕುಲಾಲ್

೧೯೪೦ ಅಕ್ಟೋಬರ್ ೧೭ ರಂದು ಜನಿಸಿದರು. ಇವರು ಗಣಪತಿ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಇವರು ಯು. ಬಿ. ಎಮ್. ಸಿ ಹೈಯರ್ ಪ್ರೈಮರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಜಿಲ್ಲಾ ಕುಲಾಲ ಸಮಾಜದ ನ್ಯಾಯ ಮಂಡಳಿ ಸದಸ್ಯರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ರಚಿಸಿದ ಕೃತಿಗಳು: ಕನ್ನಡ ಸಾಮಾಜಿಕ, ಚಾರಿತ್ರಿಕ, ಪೌರಾಣಿಕ ಮತ್ತು ತುಳು ಭಾಷಾಂತರ ಒಟ್ಟು ೬೬ ಕೃತಿಗಳನ್ನು ರಚಿಸಿರುತ್ತಾರೆ. ಇವುಗಳಲ್ಲದೆ ಹಲವಾರು ದೃಶ್ಯ ರೂಪಕಗಳನ್ನು ರಚಿಸಿ ಶಾಲೆಗಳಲ್ಲಿ ಪ್ರದರ್ಶನಕ್ಕೆ ಒದಗಿಸಲಾಗಿದೆ.

ನವಭಾರತ ತುಳು ಕೂಟ ತುಳು ಚಲನಚಿತ್ರ ಸಮಾರಂಭದಲ್ಲ್ಲಿ ಉಡಲ್ದ ತುಡಾರ್ ತುಳು ಚಿತ್ರದ ತುಳು ಚಿತ್ರಕಥೆಗೆ ಪ್ರಶಸ್ತಿ ಪಡೆದಿದೆ.

ಬಿರುದು: ರಂಗ ಕಲಾ ಭೂಷಣ ಬಿರುದು ಪ್ರದಾನ ೨೦೦೫, ಮೀರಜ್ ತುಳುನಾಡ್ ಸಾಂಸ್ಕೃತಿಕ ಸಂಘದ ವಾರ್ಷಿಕ ಸಮಾರಂಭದಲ್ಲಿ ತುಳು ರತ್ನ ಬಿರುದು.

ತುಳು ಸಾಮಾಜಿಕ: ತಗೆನಾ? ತಂಗಡಿಯಾ, ಕರ್ಲ್ಡ್ ಉರ್ಲ್ ಮತ್ತು ಮೇವಾಡೊಡು ಉಲತ್, ಸಿನೆಮಾ ತುಳು ಉಡಲ್ದ ತುಡಾರ್ ಇತ್ಯಾದಿ. ನಾಟಕ ಮಣ್ಣಿನ ಮಗಳು ಅಬ್ಬಕ್ಕ, ನಾಟಕದಾಯೆ ಇತ್ಯಾದಿ.

ಶ್ರೀ ಮಚ್ಚೇಂದ್ರನಾಥ್ ಪಾಂಡೇಶ್ವರ

ಮಂಗಳೂರಿನಲ್ಲಿ ೧೯೩೫ ರಲ್ಲಿ ಜನಿಸಿದ ಇವರು ತುಳು ನಾಟಕ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸೇವಿಯನ್ನು ಸಲ್ಲಿಸಿದ್ದಾರೆ. ಸುಮಾರು ೧೫೦ ಕ್ಕೂ ಹೆಚ್ಚಿನ ತುಳುನಾಟಕಗಳನ್ನು ಬರೆದು ಪ್ರದರ್ಶನಕೂಡ ಮಾಡಿದ್ದಾರೆ. ತುಳು ಸಿನಿಮಾಗಳಿಗೆ ಕತೆ , ಸಾಹಿತ್ಯ, ಸಂಭಾಷಣೆ ಕೂಡ ಬರೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ತುಳು ನಾಟಕ ಕಲಾವಿದರ ಬಕ್ಕೂಟ (ರಿ) ಇದರ ಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿಗಳು : ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಮತ್ತು ಸಂಸ್ಕಾರ ಭಾರತಿ ಪ್ರಶಸ್ತಿ ಮುಂತಾದವುಗಳು.
ಸುಮಾರು ೧೫೦ ಕ್ಕೂ ಹೆಚ್ಚಿನ ತುಳು ನಾಟಕವನ್ನು ಬರೆದು ಪ್ರದರ್ಶನ ಮಾಡಿದ್ದಾರೆ ೫ ತುಳು ಸಿನಿಮಾಗಳಿಗೆ ಕತೆ ಸಾಹಿತ್ಯ ಸಂಭಾಷಣೆ ಬರೆದು ಪಾತ್ರವಹಿಸಿದ್ದಾರೆ.

ಕೋಳ್ಯೂರು ರಾಮಚಂದ್ರ ರಾವ್

೧೯೩೨ ನವೆಂಬರ್ ೯ ರಂದು ಕರೋಪಾಡಿ ಗ್ರಾಮದ ಬಂಟ್ವಾಳ ತಾಲೂಕಿನಲ್ಲಿ ಜನಿಸಿದರು. ಕೊಡ್ಲ ಮೊಗರು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದರು. ದಿ. ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯರಾಗಿ ಯಕ್ಷಗಾನ ಕಲಾವಿದರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ, ಮಹಮ್ಮಾಯೀ ಯಕ್ಷಗಾನ ಮಂಡಳಿ ಕದ್ರಿ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ ಇತ್ಯಾದಿಗಳಲ್ಲಿ ಸೇವೆಸಲ್ಲಿಸಿದ್ದಾರೆ. ಅಭಿಮನ್ಯು, ಬಬ್ರುವಾಹನ, ರಾಮ ಕೃಷ್ಣ, ಪರಶುರಾಮ ಇತ್ಯಾದಿ ಇವರ ಮುಖ್ಯವಾದ ಪಾತ್ರಗಳು.

ಪ್ರಶಸ್ತಿಗಳು : ೫ನೇ ಅಖಿಲ ಕರ್ನಾಟಕ ರಾಜ್ಯ ಸಮ್ಮೇಳನ ‘ಸಾಧನಾ ಪ್ರಶಸ್ತಿ’ , ಉಡುಪಿ ಜಿಲ್ಲಾ ಪ್ರಶಸ್ತಿ, ವಿಠಲ ಶಾಸ್ತ್ರಿ ಯಕ್ಷಗಾನ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಇತ್ಯಾದಿ.

ಡಾ ಕಬ್ಬಿನಾಲೆ ವಸಂತ ಭಾರದ್ವಾಜ್

೧೯೬೧ ಡಿಸೆಂಬರ್ ೫ ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು. ಪಿ.ಹೆಚ್.ಡಿ ಪದವೀಧರರಾದ ಇವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು: ಭಗವಂತನ ಭಾವಗೀತೆ, ವಸಂತ ವಿಶ್ವ, ಶಬ್ದ ಶಾರದೆ, ಮುಂತಾದವುಗಳು

ಪ್ರಶಸ್ತಿಗಳು : ಪೊಲ್ಯ ಪ್ರಶಸ್ತಿ, ಗಾನಸೌರಭ ಯಕ್ಷಗಾನ ಪ್ರಶಸ್ತಿ, ಕರಾವಳಿ ರತ್ನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದವುಗಳು.

ಬೆಂಗಳೂರಿನ ದೂರದರ್ಶನದಲ್ಲಿ ಗದುಗಿನ ಭಾರತದ ಗಮಕ ವ್ಯಾಖ್ಯಾನ ಆರು ತಿಂಗಳ ಕಾಲ ಪ್ರಸಾರವಾಗಿದೆ, ‘ಬಿರ್ಸೆ’ ತುಳು ಚಲನಚಿತ್ರಕ್ಕೆ ಗೀತೆ ರಚನೆ ಮಾಡಿದ್ದಾರೆ.

ಸಾಹಿತ್ಯ ಕೃತಿಗಳು: ಯಕ್ಷಗಾನ ಛಂದಸ್ಸು, ಅಂಬುರುಹದಳ, ಮತ್ತೆ ಬರಲಿ ಭಾವಗೀತೆ ಪುರಂದರದಸೆರ ಪದೊಕುಲು, ಕಂರ್ಬುದ ಪೇರ್ ಮತ್ತು ಹೊಸ ಬ್ಯಾಂಕಿಂಗ್ ನಿಘಂಟು ಇತ್ಯಾದಿ.

ಪ್ರಕಟವಾಗುವ ಕೃತಿ: ವಸಂತ ವಿಶ್ವ, ಶಬ್ದ ಶಾರದೆ, ಶ್ರೀ ಭದ್ರಗಿರಿ ಅಚ್ಯುತದಾಸರು ಇತ್ಯಾದಿ.

ಯಕ್ಷಗಾನ: ಪುಣ್ಯ ಕೋಟಿ, ಶ್ರೀ ಕೃಷ್ಣ ಜನ್ಮ ಮತ್ತು ಶಿವ ಸಂಧಾನ ಇತ್ಯಾದಿ

ಶ್ರೀ ಬಿ. ಎನ್. ಹರೀಶ್ ಬೋಳೂರು

೧೯೪೩ ಡಿಸೆಂಬರ್ ೧೪ ರಂದು ಮಂಗಳೂರಿನಲ್ಲಿ ಜನಿಸಿದರು. ಮಂಗಳೂರಿನಲ್ಲಿ ತಮ್ಮ ಫ್ರೌಢಶಿಕ್ಷಣವನ್ನು ಮುಗಿಸಿ ನವಭಾರತ್ ದಿನಪತ್ರಿಕೆ ಪ್ರಸ್ ವಿಭಾಗದಲ್ಲಿ ಮತ್ತು ಉದಯವಾಣಿ ದಿನಪತ್ರಿಕೆ ಕಂಪೋಸಿಂಗ್ ವಿನ್ಯಾಸ ವಿಭಾಗದಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆಸಲ್ಲಿಸಿದ್ದಾರೆ. ಆನೇಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃತಿಗಳು: ಪದ್ಮಶಾಲಿ ಬಂದು ಪ್ರಕಾಶನದ ‘ಮಗ್ಗದ ಮದನೆ’ ಕಥಾ ಸಂಕಲನ, ಲಾಲ್ ಬಹದ್ದೂರ್ ಶಾಸ್ತ್ರಿ ವ್ಯಕ್ತಿ ಚಿತ್ರಣ ಕೃತಿ, ಪ್ರಕಟಿಸಿದ್ದಾರೆ.

ಶ್ರೀಮತಿ ಜಯಂತಿ ಎಸ್ ಬಂಗೇರ

೧೯೫೭ ಮಾರ್ಚ್ ೧೫ ರಂದು ಜನಿಸಿದರು. ಇವರು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇವರಿಗೆ ಎನ್ನಂದಿ ಭಾಗ್ಯ, ಮನಸ್ಸ್ ಬದಲಾನಗ, ಸತ್ಯ ನೆಗಪುನಗ, ಮಾಯಿದ ಪುಣ್ಣಮೆ, ಸೊರಗೆದ ಪೂ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಸಾಹಿತ್ಯ ಸಿರಿ ಬಿರುದು ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಗೂ ಗಾಣೆಗರ ಯಾನೆ ಸಪಳಿಗ ಸೇವಾ ಸಂಘ, ಕನ್ನಡ ಬಳಗ, ಕರ್ನಾಟಕ ತುಳುನಾಡ ಸಂಘ ಮಿರಾಜ್, ಕನಟಕ ಸಂಘ ದೆಹಲಿ ನಿಸರ್ಗ ಫ್ರೆಂಡ್ಸ್ ಕ್ಲಬ್ ಇತ್ಯಾದಿ ಕಡೆಗಳಲ್ಲಿ ಸನ್ಮಾನಗಳು ನಡೆದಿವೆ.

ಪ್ರಕಟಿಸಿದ ಪುಸ್ತಕಗಳು: ಮನಸ್ಸ್ ಬದಲಾನಗ, ಸತ್ಯ ನೆಗಪುನಗ, ನೀಲಿ ಕಡಲ್ದ ನಡುಟು, ಸುರಗಿಯ ಹೂವು ಇತ್ಯಾದಿ.

ಕಾದಂಬರಿಗಳು: ಮಿಡಿದ ಕಂಬನಿ, ಗೋರಿ, ಗಗ್ಗರ ಇತ್ಯಾದಿ.

ನಾಟಕಗಳು: ಅರ್ಥ ಆವಂದಿ ಪಾತೆರ, ಸವಿತನ ಮದ್ಮೆ, ರಾಪುನ ಪಾಂತೆ ಮಾಯಿದ ಪುಣ್ಣಮೆ, ಬಿನ್ನರೆ ಗೌಜಿ ಇತ್ಯಾದಿ.

ಸಣ್ಣ ಕಥೆಗಳು: ೧೦೦ ಕ್ಕೂ ಮಿಕ್ಕಿದ ಸಣ್ಣ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಗಿದೆ.

ಇವರು ಉಡಲ್ ಮಾಸ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.