2013-2014

 

ಜಾನಕಿ ಎಂ.(ಅಧ್ಯಕ್ಷರು)

ಬ್ರಹ್ಮಾವರ ‘ಪವನ’ ಕಪಿಲಾ ಕಂಪೌಂಡ್ ಹೇರೂರು, ಬ್ರಹ್ಮಾವರ – 576213

Ph : 8105758930

ಪ್ರೊ. ವೇದಾವತಿ ಬಿ. (ಸದಸ್ಯರು)

ಶ್ರೀಧಾಮ, ವಿದ್ಯಾಂಜನೇಯ ವ್ಯಾಯಾಮ ಶಾಲೆ ಎದುರು ಬಿಕರ್ನಕಟ್ಟೆ, ಮಂಗಳೂರು

Ph : 9341370754

ಶ್ರೀ ಡಿ. ಎಮ್. ಕುಲಾಲ್ (ಸದಸ್ಯರು)

‘ಕಾಮಧೇನು’, ದೈಪಲ, ಬಿಮೂಡ ವಿಲೇಜ್
ಬಿ. ಸಿ ರೋಡ್, ಬಂಟ್ವಾಳ ತಾಲೂಕು

Ph : 9448344633

ಶ್ರೀ ಸುಭಾಶ್ಚಂದ್ರ ಪಡಿವಾಳ್ (ಸದಸ್ಯರು)

ಮಾಲ್ದೊಟ್ಟು ಗುತ್ತು ಬನಂಗಡ ಅಂಚೆ, ವಯಾ-ಮೂಡಬಿದ್ರೆ-27

Ph : 9980038007

ಶ್ರೀ ದುರ್ಗಾಪ್ರಸಾದ್ ರೈ ಎ.(ಸದಸ್ಯರು)

ಕುಂಬ್ರ ತರವಾಡು ಮನೆ ಅಂಚೆ ಕುಂಬ್ರ, ಪುತ್ತೂರು ತಾಲೂಕು – 574210 ‘ವಕೀಲರು’ ರೈ & ರೈ ಅಸೋಸಿಯೇಟ್ಸ್, ಡಿಸೈನರ್ ಕಾಂಪ್ಲೆಕ್ಸ್ ಕೋರ್ಟ್ ರೋಡ್, ಪುತ್ತೂರು, ದ. ಕ

Ph : 9480164641

ಶ್ರೀಮತಿ ಜಯಶೀಲ (ಸದಸ್ಯರು)

ಶ್ರೀಹರಿ ಪ್ರಸಾದ್, ಡಿ/ಎನ್ 1-81 (ಬಿ) ಜೋಡು ಕಟ್ಟೆ, ಮರೋಳಿ, ಅಂಚೆ ಕುಲಶೇಖರ್, ಮಂಗಳೂರು-5
Ph : 9986449423

ಶ್ರೀ ಮೋಹನ್ ಕೊಪ್ಪಲ (ಸದಸ್ಯರು)

ಕೊಪ್ಪಲ ಮನೆ, ಕದ್ರಿ ದೇವಸ್ಥಾನದ ಎದುರು, ಮಂಗಳೂರು-2

Ph : 9343342379

ಶ್ರೀ ವಸಂತ್ ಶೆಟ್ಟಿ ಬೆಳ್ಳಾರೆ (ಸದಸ್ಯರು)

B-1226, 2nd Floor, Green Filed, Faridabad – 121003 [email protected]

Ph : 09958697823

ಶ್ರೀ ಕೃಷ್ಣಪ್ಪ ಉಪ್ಪೂರು (ಸದಸ್ಯರು)

ಸಿದ್ದಾರ್ಥ ರೆಸಿಡೆನ್ಸಿ, ಪ್ಲಾಟ್ ನಂ.502, ಬ್ರಹ್ಮವಾರ ಪೋಸ್ಟ್ ಉಡುಪಿ ತಾಲೂಕು – 576213 [email protected]
Ph : 9880070741

ಶ್ರೀ ರಘು ಇಡ್ಕಿದು (ಸದಸ್ಯರು)

‘ಸುಮ’ ಮಣಿಪಾಲ ಸ್ಕೂಲ್ ಹತ್ತಿರ ಅತ್ತಾವರ, ಮಂಗಳೂರು – 575001 [email protected]

Ph : 9449510848

ಶ್ರೀಮತಿ ರೂಪಕಲಾ ಆಳ್ವ (ಸದಸ್ಯರು )

701, ಫ್ಯಾಂಟೆಸಿ ರೆಸಿಡೆನ್ಸಿಸ್ ಕೆ. ಆರ್. ಆರ್. ರಸ್ತೆ ಕೊಡಿಯಾಲ್‌ಬೈಲು
ಮಂಗಳೂರು – 575003.

Ph : 9945396676

 

 

ಪ್ರೊ. ವೇದಾವತಿ ಡಿ:
ದಕ್ಷಿಣ ಕನ್ನಡದ ಬಿಕರ್ನಕಟ್ಟೆಯಲ್ಲಿ ಜನಿಸಿದ ಇವರು ಎಂ. ಎ (ಕನ್ನಡ), ಎಂ. ಎ (ಹಿಂದಿ) ಪದವಿಯನ್ನು ಗಳಿಸಿದ್ದಾರೆ. ಇವರು ಸಂತ ಎಲೋಷಿಯಸ್ ಸಂಧ್ಯಾ ಕಾಲೇಜು – ೨೩ ವರ್ಷ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು, ಮಂಗಳೂರು – ೧೦ ವರ್ಷ, ಮಂಗಳೂರು ವಿಶ್ವವಿದ್ಯಾನಿಲಯ (ಪರೀಕ್ಷಾ ವಿಭಾಗ) ಕ್ರೋಢೀಕರಣಾಧಿಕಾರಿ – ೧೫ ವರ್ಷ, ಮಂಗಳೂರು ಆಕಾಶವಾಣಿ – ತುಳು ಉದ್ಘೋಷಕಿ – ೨ ವರ್ಷ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದ್ದಾರೆ.

ಸಂಗೀತ, ಸಾಹಿತ್ಯ, ಗಮಕವಾಚನ ಇವರ ಹವ್ಯಾಸಗಳು,
‘ತುಳು ಜೈಮಿನಿ ಭಾರತ’ – ಮಹಾಕಾವ್ಯ – ಅಕಾಡೆಮಿಯ ಪುಸ್ತಕ ಬಹುಮಾನ, ನವರಂಗ – ಕಥಾ ಸಂಕಲನ, ದೇವೀ ಭಜನೆಗಳು, ಭಾವೈಕ್ಯ – ಕೋಮು ಸಾಮರಸ್ಯ ಚಿಂತನೆ ಇವುಗಳನ್ನು ತುಳು ಮತ್ತು ಕನ್ನಡದಲ್ಲಿ ಸಾಹಿತ್ಯ ರಚಿಸಿದ್ದಾರೆ.

ವಿವಿಧ ಸಂಚಿಕೆಗಳಲ್ಲಿ ಕವನ, ಪ್ರಬಂಧ ಮಂಡನೆ, ಮಂಗಳೂರು ಅಕಾಷವಾಣಿಯಲ್ಲಿ ನಾಟಕ, ಭಾಷಣ ಇತ್ಯಾದಿಗಳನ್ನು ನೀಡುವ ಹವ್ಯಾಸ ನಿರಂತರ, ಸಾಮಾಜಿಕ sಸಾಮಾಜಿಕ ಸಭೆ ಸಮಾರಂಭಗಳಲ್ಲಿ ತುಳು, ಕನ್ನಡ ಭಾಷಣ ವಕ್ತಾರರಾಗಿದ್ದಾರೆ.

ಶ್ರೀ ಚೀರುಂಬಾ ಕ್ರೆ. ಸೊಸೈಟಿಯಲ್ಲಿ ನಿರ್ದೇಶಕಿಯಾಗಿದ್ದಾರೆ, ಶ್ರೀ ಭಗವತಿ ಕ್ಷೇತ್ರ ಮಂಗಳೂರು ಇಲ್ಲಿನ ತ್ರೈಮಾಸಿಕ ಸಂಚಿಕೆಯಲ್ಲಿ ಪ್ರಧಾನ ಸಂಪಾದಕಿಯಾಗಿದ್ದಾರೆ, ಹಾಗೂ ಸಂತ ಜೋಸೇಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂಶಕಾಲಿಕ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಡಿ. ಎಂ ಕುಲಾಲ್ ಬಂಟ್ವಾಳ:
ದೈಪಲ, ಬಂಟ್ವಾಳ ತಾಲೂಕಿನಲ್ಲಿ ಜನಿಸಿದರು, ಇವರು ಸಾಮಾಜಿಕ ಕಾರ್ಯಕರ್ತರು. ಮಂಗಳೂರಿನ ಎಲೋಸಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು. ಹಾಗೂ ‘ಕುಂಭೋದರಿ ಕ್ಷೇತ್ರ ಮಹಾತ್ಮೆ’ ಕೃತಿ ರಚಿಸಿ ಬಿಡುಗಡೆಗೊಳಿಸಿದ್ದಾರೆ.

‘ಮುಂಗಾರು’ ಪತ್ರಿಕೆ ಮತ್ತು ‘ನೇತ್ರವಾತಿ ವಾರ್ತೆ’ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. ಬಂಟ್ವಾಳ ತಾಲೂಕಿನ ೧೩೭ ಸಂಘ ಸಂಸ್ಥೆ (ಯುವಕ ಮತ್ತು ಯುವತಿ ಮಂಡಲ) ಯುವ ಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ದ. ಕ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ‘ಹಿಂದುಳಿದವರಿಗೆ ಮೀಸಲಾತಿ’ ಪುಸ್ತಕ ಬಿಡುಗಡೆಯ ದಿ. ದಾಮೋದರ ಆರ್ ಸುವರ್ಣ ಅಧ್ಯಕ್ಷತೆಯಲ್ಲಿ ಮಂಗಳೂರು ಪುರಭವನದಲ್ಲಿ ಸನ್ಮಾನಿಸಿದ್ದಾರೆ.
ಬಿ. ಸಿ ರೋಡಿನಲ್ಲಿ ಶ್ರೀ ಬಸವೇಶ್ವರ ದಿವ್ಯಜ್ಞಾನ ವಿದ್ಯಾಲಯದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಶ್ರೀಧಾಮ ಸೇವಾ ಸಮಿತಿ, ಬಂಟ್ವಾಳ ಕುಲಾಲ ಸುಧಾರಕ ಸಂಘ, ಅಖಿಲ ಭಾರತ ಬಿಲ್ಲವರ ಯೂನಿಯನ್, ಬಂಟರ ಯಾನೆ ನಾಡವರ ಮಾತೃ ಸಂಘ, ದ ಕ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸುಭಾಶ್ಚಂದ್ರ ಪಡಿವಾಳ್
ಮೂಡಬಿದರೆಯ ಮಾಲ್ದಬೆಟ್ಟು ಗುತ್ತುವಿನಲ್ಲಿ ಜನಿಸಿದ ಇವರು ಬಿ. ಎ ಪದವಿದರರು. ಇವರು ಅಭಿನಯಿಸಿದ ತುಳು ಚಲನಚಿತ್ರ ‘ಕೋಟಿ – ಚೆನ್ನಯ’ ದಲ್ಲಿ ಕೋಟಿ ಪಾತ್ರವಹಿಸಿದ್ದಾರೆ. ‘ಯೇರ್ ಮಲ್ತಿನ ತಪ್ಪು’ ವಿನ ಕ್ಯಾಪ್ಟನ್ ರಘು ಪಾತ್ರ ‘ಸುದ್ಧ’ ದಲ್ಲಿ ಗುತ್ತಿನಾರ್ ಪಾತ್ರ ಹೀಗೆ ೪೦೦ ಕ್ಕೂ ಹೆಚ್ಚು ತುಳು ನಾಟಕ, ೧೦೦ ಕ್ಕೂ ಹೆಚ್ಚು ಕನ್ನಡ ನಾಟಕಗಳಲ್ಲಿ ನಟಿಸಿದ್ದಾರೆ.

ತುಳು ನಾಟಕ: ‘ಕಲಿಕಂಠೀರವ’, ‘ವೀರರಾಣಿ ಅಬ್ಬಕ್ಕ’, ‘ಸಾಮ್ರಾಟ್ ಶಹಜಹಾನ್’, ‘ಸಾಮ್ರಾಟ್ ಚಂದ್ರಗುಪ್ತ’, ‘ಅಂಗೂಲಿಮಾಲ’, ‘ಸಾಮ್ರಾಟ್ ಅಶೋಕ’ ಮೊದಲಾದ ಕನ್ನಡ ನಾಟಕಗಳನ್ನು ಬರೆದು ನಿರ್ದೇಶಿಸಿ ಅಭಿನಯಿಸಿದ ನಾಟಕಗಳು. ‘ಮಹಾಕವಿ ರತ್ನಾಕರ ವರ್ಣಿ’, ‘ಧರ್ಮವೀರ್’, ‘ಸಾವಿತ್ರಿ’, ಮೊದಲಾದವುಗಳು. ೩೦೦ ಕನ್ನಡ ಕವನಗಳನ್ನು ಬರೆದಿದ್ದಾರೆ.

ಪ್ರಸ್ತುತ ಇವರು ಶ್ರೀ ಮಹಾವೀರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ, ಆಳ್ವಾಸ್ ವಿದ್ಯಾಪ್ರತಿಷ್ಠಾನ ಇದರ ಸದಸ್ಯ ಸರ್ವೋದಯ ಪ್ರೌಢಶಾಲೆಯ ಸಂಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಯಶಸ್ವೀ ಕೃಷಿಕನಾಗಿ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ೩ನೇ ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಂಬ್ರ ದುರ್ಗಾಪ್ರಸಾದ್ ರೈ ಎ
ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಜನಿಸಿದ ಇವರು ಬಿ.ಎ.ಎಲ್.ಎಲ್.ಬಿ ಪದವಿದರರು ಹಾಗೂ ನ್ಯಾಯವಾದಿಗಳು. ಇವರ ಅಪ್ರಕಟಿತ ಕೃತಿಗಳು ತುಳುನಾಟಕ ‘ಸ್ವಾತಿದ ಬರ್ಸ’, ‘ಮುಗುರು ತೆಲಿಕೆ’, ಕಾಕಜಿ ಬತ್ತ್ಂಡ್’, ‘ಮುಂಡಾಸ್ ಮುಂಡಪ್ಪೆ’, ‘ದೊಂಬರಾಟ’, ‘ಕವನ ಸಂಕಲನ ‘ಪೆಟ್ಟಿಗೆ ಅಂಗಡಿ’

ಇವರು ಪುತ್ತೂರು ತುಳುಕೂಟದ ಅಧ್ಯಕ್ಷರು ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರಾಗಿರುತ್ತಾರೆ.

ಇತರ ಸಂಘಟನೆ, ಜವಾಬ್ದಾರಿ: ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾನೂನು ಹಾಗೂ ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷರು, ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರ ಸಂಘ, ಕುಂಬ್ರ, ಪುತ್ತೂರು, ದ. ಕ ಇದರ ಗೌರವಧ್ಯಾಕ್ಷರು, ಶ್ರೀ ರಾಮಕೃಷ್ಣ ಕೋ-ಓಪರೇಟಿವ್ ಸೊಸೈಟಿ, ಪುತ್ತೂರಿನ ಸಲಹಾ ಸಮಿತಿ ಸದಸ್ಯರು, ಸಹಕಾರಿ ಸಂಘದ ಗೌರವ ಮದ್ಯಸ್ಥದಾರರು, ಹಾಗೂ ವರ್ತಕ ಸಂಘ, ಕುಂಬ್ರ, ಪುತ್ತೂರು ಇದರ ಗೌರವ ಸಲಹೆಗಾರರಾಗಿದ್ದಾರೆ. , ಕೃಷಿ, ನಾಟಕ ರಚನೆ, ನಿರ್ದೇಶನ, ರಂಗನಟನೆ, ಧಾರವಾಹಿಯಲ್ಲಿ ನಟನೆ ಇವರ ಹವ್ಯಾಸಗಳು.
ಸಂಪಾದಿತ ಕೃತಿ: ಕಪ್ಪು ಹಕ್ಕಿಯ ಕಲರವ (ವಕೀಲರ ಕವನ ಸಂಕಲನ) ತಳಿರು (ಜೇಸೀ ವಲಯ ಸಮ್ಮೇಳನ ಸಂಚಿಕೆ), ದಶಕದ ತಳಿರು (ಜೇಸೀ ದಶಮಾನೋತ್ಸವ ಸಂಚಿಕೆ).

ಜಯಶೀಲ
ಮಂಗಳೂರಿನ ಮರೋಳಿಯಲ್ಲಿ ಜನಿಸಿದ ಇವರು ಎಸ್.ಎಸ್.ಎಲ್.ಸಿ ವರೆಗೆ ಶಿಕ್ಷಣವನ್ನು ಪಡೆದು ೧೯೭೨-೧೯೭೩ ರಲ್ಲಿ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬೆಂಗಳೂರಿನ ಆರ್ ನಾಗರತ್ನಮ್ಮನವರ ‘ಶ್ರೀ ಸ್ತ್ರೀ ನಾಟಕ ಮಂಡಳಿ’ ಯಲ್ಲಿ ಮೊದಲಾಗಿ ಸಖೀ ಪಾತ್ರವನ್ನು ಅಭಿನಯಿಸಿದ್ದಾರೆ. ಹಾಗೂ ‘ಶ್ರೀ ಗಣೇಶ ನಾಟಕ ಸಭಾ (ರಿ) ೨೫೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

”ಶ್ರೀ ಕೃಷ್ಣ ಗಾರುಡಿಯಲ್ಲಿ ನಕುಲನ ಪಾತ್ರ’, ಶ್ರೀ ಕೃಷ್ಣಲೀಲೆಯಲ್ಲಿ ‘ಗೋಪಿಕಾಳ ಪಾತ್ರ’, ಸಂಸಾರ ನೌಕೆಯಲಿ ಸಿದ್ದನ ಪಾತ್ರ, ‘ಅಂಗವಿಕಲ ಮೇಷ್ಟ್ರಪಾತ್ರ, ಹೀಗೆ ಅನೇಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಒರಿಯರ್ದೊರಿ ಅಸಲ್’ ನಾಟಕ ವಿದೇಶದಲ್ಲೂ ಹೋಗಿ ಅಭಿನಯಿಸಿದ್ದಾರೆ. ಅಭಿನಯವೇ ಅವರ ವೃತ್ತಿಯಾಗಿದೆ.

ಮೋಹನ್ ಕೊಪ್ಪಲ
೧೯೬೮ ಜೂನ್ ೩ ರಂದು ಜನಿಸಿದರು. ಇವರು ರಂಗಕಲಾವಿದರು. ಕದ್ರಿ ಮಲ್ಲಿಕಾ ಕಲಾವೃಂದ, ಜಯಮಾರುತಿ ಯುವಕ ವೃಂದದವರಾದ ಕೆ ವಿ ಶೆಟ್ಟಿ ರಚಿಸಿ ನಿರ್ದೇಶಿಸಿದ ‘ಸತ್ಯ ಮುನಿನಗ’ ಎಂಬ ನಾಟಕದ ಮೂಲಕ ರಂಗ ಪ್ರವೇಶ ಮಾಡಿದರು.

ಕಳೆದ ೨ ದಶಕಗಳಿಂದ ತುಳು ರಂಗಭೂಮಿಯಲ್ಲಿ ಪೌರಾಣಿಕ ಚಾರಿತ್ರಿಕ – ಜಾನಪದ, ಸಾಮಾಜಿಕ ನಾಟಕ ಹಾಗೂ ಸುಮಾರು ೫೦೦ ಕ್ಕೂ ಮಿಕ್ಕಿ ನಾಟಕ ಪ್ರದರ್ಶನದಲ್ಲಿ ಅಭಿನಯಿಸಿದ್ದಾರೆ. ೨೦೦೯ ರಲ್ಲಿ ವಿಶ್ವತುಳು ಸಮ್ಮೇಳನದಲ್ಲಿ ‘ತುಳುನಾಡ ಬೀರೆ ದೇವು ಪೂಂಜೆ’, ಗಲ್ಪ್ ಕತಾರ್‌ನಲ್ಲಿ ‘ಮಣ್ಣದ ಮಗಲ್ ಅಬ್ಬಕ್ಕ’ ದುಬಾಯಿಯಲ್ಲಿ ‘ಕಟೀಲಪ್ಪೆ ಉಳ್ಳಾಲ್ದಿ’, ಪೌರಾಣಿಕ ನಾಟಕವನ್ನು ಅಭಿನಯಿಸಿದ್ದಾರೆ. ತುಳು ಚಲನಚಿತ್ರ ಹಾಗೂ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. , ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ.

ಅಭಿನಯಿಸಿದ ಚಲನಚಿತ್ರ ‘ಬದಿ’ ೨೦೦೭, ‘ತೆಲಿಕೆದ ಬೊಳ್ಳಿ’, ಬರಲಿರುವ ಚಲನಚಿತ್ರ ‘ಎಕ್ಕಸಕ’, ಕಿರುತೆರೆಯಲ್ಲಿ ‘ಕಾರ್ನಿಕದ ಕೋರ್‍ದಬ್ಬು’, ‘ಭೂಮಿ’ ಇತ್ಯಾದಿ.

ಅಭಿನಯಿಸಿದ ಪೌರಾಣಿಕ ನಾಟಕಗಳು: ‘ಮಹಾರಥಿ ಕರ್ಣ’, ‘ಕೋರ್‍ದಬ್ಬು ತನ್ನಿ ಮಾನಿಗ’, ‘ಕಲ್ಕುಡ – ಕಲ್ಲುರ್ಟಿ’ ‘ಕೃಷ್ಣದೇವರಾಯ’, ದಕ್ಷ ಯಜ್ಞೋ’, ‘ಕಾರ್ನಿಕದ ಶಿವಮಂತ್ರ’, ‘ಕಾರ್ನಿಕದ ಶನೀಶ್ವರ’, ‘ಪ್ರಚಂಡ ವಿಶ್ವಾಮಿತ್ರೆ’, ‘ಬ್ರಹ್ಮ ಕಪಾಲ’, ‘ಮೈಮೆದ ಜೋಗಿಲು’, ಯಕ್ಷಮಣಿ, ಕುದುರುದ ಸಿರಿ, ಸಿರಿ ಲಲಿತೆ ಪರಮೇಶ್ವರಿ, ಸತ್ಯೊದ ಸಿರಿ, ಮೈಮೆದ ಸಿರಿದುರ್ಗೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಇವರು ಕದ್ರಿ ಮಂಜುನಾಥ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯ, ಕದ್ರಿ ಹಳೇ ವಿದ್ಯಾರ್ಥಿ ಸಂಘ ಇದರ ಉಪಾಧ್ಯಕ್ಷ, ಕಡಲನಾಡ ಕಲಾವಿದರು ಟ್ರಸ್ಟ್ (ರಿ) ಇದರ ಸದಸ್ಯರಾಗಿದ್ದಾರೆ. ಜಯಮಾರುತಿ ಯುವಕ ವೃಂದ ಕದ್ರಿ, ಕದ್ರಿ ಕಂಬಳ ಮಿತ್ರ ವೃಂದ, ಲಕುಮಿ ತಂಡ (ರಿ) ಶ್ರೀ ಲಲಿತೆ ಪೌರಾಣಿಕ ನಾಟಕ ತಂಡ, ಭಗವತಿ ಯಂಗ್‌ಸ್ಟರ್‍ಸ್ ಕದ್ರಿ, ನವಚೇತನ ನೀರುಮಾರ್ಗ, ಸುಬ್ರಮಣ್ಯ ಕಲಾವೃಂದ ನೀರುಮಾರ್ಗ, ಯಕ್ಷಗಾನ ಕಲಾಮಂಡಳಿ ನವಮಂಗಳೂರು, ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ, ಕಾವೇಶ್ವರ ಮಿತ್ರ ಮಂಡಳಿ, ಬೆಳ್ಳೂರು, ಮಿಕ್ರಮ ಮಿತ್ರ ವೃಂದ ಉಳ್ಳಾಲ ಮುಂತಾದ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ವಸಂತ ಶೆಟ್ಟಿ ಬೆಳ್ಳಾರೆ
ತಂಟೆಪ್ಪಾಡಿ, ಬೆಳ್ಳಾರೆಯಲ್ಲಿ ಜನಿಸಿದ ಇವರು ಬಿ. ಕಾಂ ಪದವಿದರರು. ಪ್ರಸ್ತುತ ದೆಹಲಿಯ ಫರಿದಾಬಾದ್‌ನಲ್ಲಿ ಜನರಲ್ ಮ್ಯಾನೇಜರ್ ಮಾರ್ಕೇಟಿಂಗ್ ಆಗಿದ್ದಾರೆ.

ಪ್ರಶಸ್ತಿ ಪುರಸ್ಕಾರ: ದಕ್ಷಿಣ ಕನ್ನಡ ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’, ‘ಶತಮಾನೋತ್ಸವ ಸಾಧಕ ಪ್ರಶಸಿ’, ‘ಸಮಾಜ ರತ್ನ ರಾಜ್ಯ ಪ್ರಶಸ್ತಿ’, ‘ಹೃದಯವಂತರು ಪ್ರಶಸ್ತಿ’, ‘ಹೊರನಾಡ ಕನ್ನಡಿಗ ಪ್ರಶಸ್ತಿ’, ‘ಕನ್ನಡಶ್ರೀ ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಪ್ರಮುಖ ಕೃತಿಗಳು: ‘ಅಂತರ್ಗತ’ ಕಿರು ಕಾದಂಬರಿ, ಅಕಾಲ ಕಥಾ ಸಂಕಲನ, ದೆಹಲಿಯ ನಲ್ವತ್ತಕ್ಕೂ ಮಿಕ್ಕ ಕವಿಗಳ ಕವನ ಸಂಕಲನ ‘ಅನೇಕ’ ಪ್ರಕಟಣೆ ೨೦೦೮, ‘ಆಶಾಸೌಧ’ ಕಥಾ ಸಂಕಲನ ಪ್ರಕಟಣೆ, ‘ಅದಮ್ಯ’ ಕೃತಿ ಪ್ರಕಟಣೆ, ಶ್ರೀ ಕೆ ರಾಮಯ್ಯ ರೈ ಕೃತಿ – ಸ್ಮೃತಿ ‘ಅಳಿಕೆ’ ಪ್ರಕಟಣೆಗಳು.

ಕನ್ನಡ ಸಂಘ ಸಂಸ್ಥೆಗಳು: ರಾಜಧಾನಿ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ, ವಿಶ್ವಕನ್ನಡ ಕೇಂದ್ರದ ಕಾರ್ಯದರ್ಶಿ, ಹಾಗೂ ಇತರ ಕನ್ನಡ ಸಂಘ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ತುಳು ಸಂಘ ಸಂಸ್ಥೆಗಳು: ದೆಹಲಿಯಲ್ಲಿ ರಾಷ್ಟ್ರೀಯ ಮಟ್ಟದ ತುಳು ಸಮಾವೇಶ ೮ನೇ ಪರಿಚ್ಚೇದದಲ್ಲಿ ತುಳು ಭಾಷೆ ಸೇರಿಸಲು ವಿಶೇಷ ಪ್ರಯತ್ನ, ೨೦೦೩ ದೆಹಲಿಯಲ್ಲಿ ತುಳು ಅಕಾಡೆಮಿ ಜೊತೆ ಸೇರಿ ತುಳು ಸಮಾವೇಶ , ೮ನೇ ಪರಿಚ್ಚೇದದಲ್ಲಿ ತುಳು ಭಾಷೆಯನ್ನು ಸೇರಿಸಲು ಒತ್ತಾಯ. ೨೦೧೩ ರಲ್ಲಿ ದೆಹಲಿ ತುಳು ಸಿರಿ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರನ್ನು ಸೇರಿಸಿ ತುಳು ಭಾಷೆಯನ್ನು ೮ನೇ ಪರಿಚ್ಚೇದದಲ್ಲಿ ಸೇರಿಸಲು ಪ್ರಯತ್ನ. ‘ಚೆನ್ನೈಯಲ್ಲಿ ‘ಚೆನ್ನೈಡ್ ತುಳುತ ಬೊಳ್ನೈ’ ಕಾರ್ಯಕ್ರಮ ಆಯೋಜನೆ. ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ದೆಹಲಿ ಕರ್ನಾಟಕ ಸಂಘದಲ್ಲಿ ಸಹಕಾರ್ಯದರ್ಶಿಯಾಗಿ, ಸಮಿತಿ ಸದಸ್ಯ, ಸಂಪಾದಕ ಮಂಡಳಿ ಸದಸ್ಯ, ಉಪಾಧ್ಯಕ್ಷ, ಪ್ರಧಾನ ಸಂಪಾದಕ, ಮೊದಲ ಬಾರಿಗೆ ಮಕ್ಕಳ ಪೋಟೋ ಸ್ಪರ್ಧೆ, ‘ಕರ್ನಾಟಕ ಯಕ್ಷಭಾರತಿ ತಂಡದ ಮೂಲಕ ಅಂದಿನ ಕೇಂದ್ರ ಸಚಿವರಾದ ಶ್ರೀ ಆಸ್ಕರ್ ಫೆರ್ನಾಂಡೀಸ್ ಮತ್ತು ಮಾಜಿ ಮುಖ್ಯಮಂತ್ರಿ ಶ್ರೀ ಎಂ ವೀರಪ್ಪ ಮೊಯ್ಲಿಯವರು ಕಲಾವಿದರಾಗಿ ಭಾಗವಹಿಸಿದ ಯಕ್ಷಗಾನ ಪ್ರದರ್ಶನದ ಆಯೋಜನೆ ಮುಂತಾದ ಸಂಘಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ದೆಹಲಿ ಮಿತ್ರದ ಸಂಚಾಲಕನಾಗಿ ಜೂನಿಯರ್ ರಾಜ್‌ಕುಮಾರ್ ರಸಮಂಜರಿ ಕಾರ್ಯಕ್ರಮ, ಅಸದುಲ್ಲಾ ಖಾನ್ ಅವರಿಂದ ದೆಹಲಿಯಲ್ಲಿ ಮೊತ್ತಮೊದಲ ಬಾರಿ ಶಾಯಿರಿ ಕಾರ್ಯಕ್ರಮ, ಎಂ ಡಿ ಪಲ್ಲವಿ ಮತ್ತು ಬಿ ಎಸ್ ಅರುಣ್ ಅವರಿಂದ ಭಾವಗೀತೆ, ಅಕ್ಕಾ, ಕಾರ್ಯಕ್ರಮದ ಜೊತೆ ಸ್ಮಿತಾ ಬೆಳ್ಳೂರು ರವರ ವಚನ ಗಾಯನ, ಶಶಿಧರ್ ಕೋಟೆರವರಿಂದ ಸಂಗೀತ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ರೇವಾ ಇಂಡಸ್ಟೀಸ್ ಲಿ ಫರಿದಾಬಾದ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ೧೭ ವರ್ಷಗಳ ಅನುಭವ ಹಾಗೂ ಸೆಂಚುರಿ ಕ್ರೇನ್ ಇಂಜಿನಿಯರ್‍ಸ್ ಪ್ರೈವೇಟ್ ಲಿ ಫರಿದಾಬಾದ್, ಜನರಲ್ ಮ್ಯಾನೇಜರ್, ಮಾರ್ಕೇಟಿಂಗ್ ಆಗಿ ೧೨ ವರ್ಷಗಳ ಅನುಭವ ಹೊಂದಿದ್ದಾರೆ.

ಕೃಷ್ಣಪ್ಪ ಉಪ್ಪೂರು
೧೯೪೮ ಮಾರ್ಚ್ ೪ ರಂದು ಉಪ್ಪೂರಿನಲ್ಲಿ ಜನಿಸಿದರು. ಇವರು ಎಂ. ಎ ಪದವಿಧರರು. ನಿವೃತ್ತ ಪ್ರಾಧ್ಯಾಪಕರು, ಅವಿಭಜಿತ ದ.ಕ ಜಿಲ್ಲಾ ಪ. ಊ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯ ಪ್ರಶಸ್ತಿ ವಿಜೇತ ತುಳು ಚಲನಚಿತ್ರ ‘ಮಾರಿಬಲೆ’ ಮತ್ತು ಕಂಚಿಲ್ದ ಬಾಲೆ, ಇವರೇ ಕಥೆ, ಸಂಭಾಷಣೆ, ಚಿತ್ರಕಥೆ, ನಿರ್ದೇಶಿಸಿದ ತುಳು ಚಲನಚಿತ್ರಗಳು. ಹಾಗೂ ಕನ್ನಡ ಚಲನಚಿತ್ರ ‘ಮಹಾನದಿ’ , ತುಳುನಾಟಕ ‘ನಂಬುಲೆ ನಂಬಾದ್ ಕೊರ್ಪೆ’ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದೆ. ‘ಗುಂಪುಡೊರಿ ಗೋವಿಂದೆ’, ‘ಮಾಯಿದ ಪುಣ್ಣಮೆ’, ಮುಂತಾದ ತುಳು ನಾಟಕ ರಚಿಸಿದ್ದಾರೆ. ಕನ್ನಡ ನಾಟಕ ‘ಹೌಂದ್ರಾಯನ ಪಾಲಗ’,

ಇವರು ಶ್ರೀ ಭೈರವ ಗಣಪತಿ ಮತ್ತು ಮಹಾಲಿಂಗೇಶ್ವರ ದೇವಸ್ಥಾನ, ಚೌಳಿಕೇರಿ ಬಾರ್ಕೂರು, ಉಡುಪಿ ತಾಲೂಕಿನಲ್ಲಿ ಕಳೆದ ೧೦ ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿದ್ದಾರೆ.

ರಘು ಇಡ್ಕಿದು
ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಇವರು ತುಳು – ಕನ್ನಡ ಬರಹಾಗಾರು, ಕಥೆ, ಕವನ, ನಾಟಕ, ಮಕ್ಕಳ ಸಾಹಿತ್ಯ ಈ ಪ್ರಕಾರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಜಿಲ್ಲೆ – ಹೊರಜಿಲ್ಲೆಗಳ ಹಲವಾರು ಸಾಹಿತ್ಯ ಸಂಘಗಳು, ಸಂಘ – ಸಂಸ್ಥೆಗಳು, ಅಕಾಡೆಮಿಯವರು ಆಯೋಜಿಸಿದ ತುಳು – ಕನ್ನಡ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಮಂಗಳೂರು ಆಕಾಶವಾಣಿಯಲ್ಲಿ ಕಥೆ, ಕವನ, ಭಾಷಣ, ವ್ಯಕ್ತಿ ಪರಿಚಯ, ವಿಮರ್ಶೆ, ಮುಂತಾಗಿ ೭೦ ಕ್ಕೂ ಹೆಚ್ಚು ಅಧಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇವರು ರಚಿಸಿದ ಭಾವಗೀತೆ ತಿಂಗಳ ಹಾಡಾಗಿ ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಮಕ್ಕಳ ಕವನ ರಚನಾ ಕಮ್ಮಟಗಳಲ್ಲಿ ಎಚ್. ಆರ್ ಡಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ.

ತುಳು ಸಾಹಿತ್ಯ ಪರಿಷತ್ತು ವಿಟ್ಲ ಇದರ ಸದಸ್ಯರು ಹಾಗೂ ದ. ಕ ಜಿಲ್ಲಾ ಗ್ರಾಮೀಣ ಕ್ರೀಡಾ ಪರಿಷತ್ ಇದರ ಕೋಶಾಧಿಕಾರಿಯಾಗಿದ್ದಾರೆ.

ಪ್ರಕಟಗೊಂಡ ಕೃತಿ: ‘ಅಜ್ಜನಗಡ್ಡ’, ‘ತಿಬಿಲೆ’, ‘ಕಾರ್ನಿಕೊ’, ‘ಮುಕ್ಕಾಲ್ ಮೂಜಿ ಗಳಿಗೆ’ ಹಾಗೂ ‘ನನ್ನ ನೆರಳಿನ ಚಿತ್ರ ಇತ್ಯಾದಿ.

ರೂಪಕಲಾ ಆಳ್ವ:
ತುಳು – ಕನ್ನಡ ಬರಹಗಾರ್ತಿ, ಕತೆ, ಕವನ, ಲೇಖನಗಳು ಉದಯವಾಣಿ, ವಿಜಯಕರ್ನಾಟಕ ಹಾಗೂ ಮದಿಪು ಸಂಪರ್ಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಎಂ.ಎ (ಹಿಸ್ಟರಿ) ಹಾಗೂ ಸಹಕಾರ ಡಿಪ್ಲೊಮಾ (ಜಿ.ಡಿ.ಸಿ) ಪದವಿಧರೆ. ‘ನೆಹರು ಯುವಕೇಂದ್ರ’ (ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ) ‘ರಾಷ್ಟ್ರೀಯ ಸೇವಾ ಕಾರ್ಯಕರ್ತೆ’ ‘ಸಂದೇಶ’ ಸಂಸ್ಥೆಯಲ್ಲಿ ತುಳು ಜಾನಪದ ಸಂಶೋಧಕಿಯಾಗಿ, ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಸಂದೇಶ ಪ್ರಕಾಶನದಲ್ಲಿ ‘ನಾಟಿ’ – ಜಾನಪದ ಸಂಬಂಧಿತ ಕೃತಿ ‘ಶಿವ ಸುಗಿಪು’ ತುಳು ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆಗೊಂಡಿದೆ. ೨೫ ಕ್ಕೂ ಹೆಚ್ಚು ತುಳು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ನಿರೂಪಕಿಯಾಗಿ ಹಾಗೂ ನಮ್ಮ ಸಂಪರ್ಕ ಮಾಸ ಪತ್ರಿಕೆಯಲ್ಲಿ ಸಲಹಾ ಸಮಿತಿಯ ಸದಸ್ಯೆಯಾಗಿ ದುಡಿದ ಅನುಭವವಿದೆ.

ಬಹುಮಾನಗಳು: ‘ಅಪ್ಪೆಗ್ ಬಾಲೆದ ಓಲೆ’, ಅಂಚೆ ಕಾರ್ಡ್ ಪತ್ರ ಸ್ಪರ್ಥೆ ರಾಜ್ಯ ಮಟ್ಟದಲ್ಲಿ ಪ್ರಥಮ, ‘ಮದಿಪು’ ತುಳು ಕಥಾ ಸ್ಪರ್ಧೆಯಲ್ಲಿ ಪ್ರಥಮ, ‘ಉಡಲ್’, ‘ಚಾವಡಿ ಚರ್ಚೆ’, ‘ವಾಗ್ವಾದ’, ಕರಾವಳಿ ಲೇಖಕಿಯರ – ವಾಚಕಿಯರ ಸಂಘ ಏರ್ಪಡಿಸಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಸಂದರ್ಶನಾಧರಿತ ಲೇಖನ ಸ್ಪರ್ಧೆ ಪ್ರಥಮ, ವಿಮರ್ಶೆ ತೃತೀಯ, ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರಿಕಾ ಕಾಲೇಜಿನ ಆಶ್ರಯದಲ್ಲಿ ನಡೆದ ಅಡಿಗೆ ಸ್ಪರ್ಧೆ (ಮೀನಿನ ಖಾದ್ಯ ತಯಾರಿ) ಯಲ್ಲಿ ಬಹುಮಾನ ಪಡೆದಿರುತ್ತಾರೆ.

ಜನಪದ ನೃತ್ಯ, ಸಂಗೀತ ನಾಟಕ, ಯಕ್ಷಗಾನ, ತಾಳಮದ್ದಲೆ ಇತ್ಯಾದಿಗಳಲ್ಲಿ ಅಭಿರುಚಿ ಹೊಂದಿದ್ದಾರೆ. ಕರಾವಳ್ ಲೇಖಕಿಯರ – ವಾಚಕಿಯರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ, ಮಹಿಳಾ ಸಭಾ, ರಾಗತರಂಗ, ಭಗಿನ ಸಮಾಜ, ತುಳು ಐಸಿರಿ ಮುಂತಾದ ಸಂಘಗಳಲ್ಲಿ ಸದಸ್ಯೆಯಾಗಿದ್ದಾರೆ…