2019 – Till Now

 

 

Dayananda G. Kathalsar

(President)

Leelaksha Karkera

(Members)

Ravindra Shetty Balanje

(Members)

Nagesh Kulal

(Members)

Vijayalakshmi P Rai

(Members)

Sidhakatte Mallika Ajith shetty

(Members)

Kadaba Dinesh rai

(Members)

Tara Umesh Acharya

(Members)

Nitte Shashidhar Shetty

(Members)

Dr. Akashraj Jain

(Members)

Kanthi Shetty

(Members)

Suresh S Bhandary

(Members)

P M Ravi

(Members)

Chetak Poojary

(Members)

Narendra M Poojary

(Members)

Sarvothama shetty

(Members)

Smt Kalavathi

(Members)

ದಯಾನಂದ ಜಿ. ಕತ್ತಲ್‍ಸಾರ್ (ಅಧ್ಯಕ್ಷರು)
ದಯಾನಂದ ಜಿ. ಕತ್ತಲ್‍ಸಾರ್ ಗುರುವಪ್ಪ ಬಂಗೇರಾ ಮತ್ತು ಭವಾನಿ ಪೆರ್ಗಡೆಯವರ ಮಗನಾಗಿ 11, ಜುಲಾಯಿ 1976 ರಲ್ಲಿ ಗುರು ಪೂರ್ಣಿಮೆಯಂದು ಜನಿಸಿದರು. ಶ್ರೀ ವಾಣಿ ವಿಲಾಸ ಹೈಯರ್ ಪ್ರೈಮರಿ ಸ್ಕೂಲ್ ಪಡುಪೆರಾರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಡಿಪೆÇ್ಲೀಮಾ ಪಡೆದರು.
ಭಜನೆ ಹಾಡುವುದು, ನಾಟಕ, ಯಕ್ಷಗಾನ, ಕಾರ್ಯಕ್ರಮ ನಿರೂಪಣೆ ಹಾಗೂ ತಾಳಮದ್ದಲೆ ಅರ್ಥಗಾರಿಕೆ ಇವರ ಹವ್ಯಾಸವಾಗಿರುತ್ತದೆ.
ಸನ್ಮಾನಗಳು: ಶಕ್ತಿನಗರದ ಸಂಜಯನಗರದಲ್ಲಿ ‘ಸಂಜಯನಗರದ ಸಂಜಯ’ ಬಿರುದಿನೊಂದಿಗೆ ಗೌರವ, ಪಡುಪೆರಾರ ಗೋಳಿಪಲ್ಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾರ್ವಜನಿಕ ಸನ್ಮಾನ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ, ಸಂಸ್ಕಾರ ಭಾರತೀಯ ಪ್ರಶಸ್ತಿ ಹಾಗೂ ‘ನಿರೂಪಣಾಗ್ರೇಸರ’ ತುಳುವೆ ಬೊಳ್ಳಿ ಬಿರುದು, ‘ರಾಷ್ಟ್ರೀಯ ಲೋಕ ಕಲಾ ಪುರಸ್ಕಾರ’ ಬೆಂಗಳೂರಿನ ಸಮಾಜ ಸೇವಾ ಸಂಸ್ಥೆ ಸೃಷ್ಠಿ ಎಂಟರ್‍ಟೈನ್‍ಮೆಂಟ್ ಇವರಿಂದ ‘ತುಳುನಾಡ ಬೊಳ್ಳಿ’ ಬಿರುದು ಪಡೆದಿರುತ್ತಾರೆ. 92.7 ನಲ್ಲಿ ಃig ಈಒ ಅತಿಥಿ ಖಎ ಆಗಿ ‘ಬೊಳ್ಳಿಬೊಳ್ಪು’ ಕಾರ್ಯಕ್ರಮವನ್ನು 5 ವರ್ಷ ನಡೆಸಿ ಃig ಂತಿಚಿಡಿಜ’ ಪಡೆದಿರುತ್ತಾರೆ.
ಧರ್ಮಸ್ಥಳ ಜನಜಾಗೃತಿ ವೇದಿಕೆ ಕದ್ರಿ ವಲಯ, ಪಂಬದ ಅಭ್ಯುದಯ ಯುವ ಜನ ಸೇವಾ ಟ್ರಸ್ಟ್ 9ರಿ), ಪಡುಪೆರಾರ, ತುಳುನಾಡ ದೈವರಾಧನ ರಕ್ಷಣಾ ಚಾವಡ್ (ರಿ), ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ (ರಿ) ಮುಂತಾದ ಸಂಘಟನೆಗಳಲ್ಲಿ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.
ಡಾ. ವಾಮನ ನಂದಾವರ, ಡಾ. ಅಶೋಕ್ ಆಳ್ವ, ಡಾ. ಗಣೇಶ್ ಅಮೀನ್ ಸಂಕಮಾರ್, ಜಪಾನಿನ ಮೀಹೋಹಿಶಿಯಂತಹ ಹಲವಾರು ಸಾಹಿತಿಗಳಿಗೆ ಜನಪದ ಸಾಹಿತ್ಯ ಪಾಡ್ದನ, ಕಥೆ, ಸಂಧಿಗಳನ್ನು ನೀಡಿರುತ್ತಾರೆ. ‘ಪಿಂಗಾರ’ ‘ನೆಂಪು’, ಸಂಚಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 100 ಕ್ಕೂ ಮಿಕ್ಕಿ ಧಾರ್ಮಿಕ ಉಪನ್ಯಾಸ ನೀಡಿದ್ದಾರೆ. ನಮ್ಮ ಟಿವಿ ಚಾನೆಲ್‍ನಲ್ಲಿ ‘ದೈವ ನಡೆ’ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವ ಹೆಮ್ಮೆ ಇವರದ್ದಾಗಿದೆ. ಹಾಸನ ರಘು, ಚಲನಚಿತ್ರ ನಿರ್ದೇಶಕ ನಾಗಾಭರಣ ಹಾಗೂ ಚಲನಚಿತ್ರ ನಟ ರಾಜಶೇಖರ್ ಕೋಟ್ಯಾನ್ ಇವರಿಂದ ವಿಶೇಷ ಸನ್ಮಾನವನ್ನು ಬೆಹರಿನ್‍ನಲ್ಲಿ ಪಡೆದಿರುತ್ತಾರೆ.

ಲೀಲಾಕ್ಷ ಬಿ ಕರ್ಕೇರಾ
ಲೀಲಾಕ್ಷ ಬಿ ಕರ್ಕೇರಾ ಬಿ. ಪಿ. ಕರ್ಕೇರಾ ಮತ್ತು ಮುಲ್ಕಿ ಮಟ್ಟು ಲಕ್ಷ್ಮೀ ಬಿ ಕರ್ಕೇರಾ ಇವರ ಮಗನಾಗಿ ಜನಿಸಿದ ಇವರು ‘ನಮ್ಮ ಕುಡ್ಲ’ ಟಿವಿ ಸಮೂಹ ಸಂಸ್ಥೆಯ ನಿರ್ದೇಶಕರಾಗಿರುತ್ತಾರೆ. ನಮ್ಮ ಕುಡ್ಲ ಸಂಸ್ಥೆಯು ಸಂಘ ಸಂಸ್ಥೆಗಳು, ಬಾಲ ಪತ್ರಿಭಾ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಹಾಗೂ ಸಾಕ್ಷ್ಯ ಚಿತ್ರ ನಿರ್ಮಾಣವು ಮಾಡಿದೆ. ‘ನಮ್ಮ ಕುಡ್ಲ’ ಚಾನೆಲ್ ಇದು ಪ್ರಪ್ರಥಮ ತುಳು ವಾರ್ತಾವಾಹಿನಿಯಾಗಿದೆ.
ಕುದ್ರೋಳಿ ಶ್ರೀ ಗೋಕರ್ನಾಥೇಶ್ವರ ದೇವಸ್ಥಾನದಲ್ಲಿ ಮಾಜಿ ಮಂತ್ರಿ ಬಿ. ಜನಾರ್ದನ ಪೂಜಾರಿಯವರಿಂದ ಬಂಗಾರದ ಪದಕ ಹಾಗೂ ಸನ್ಮಾನ, ನಾರಾಯಣ ಗುರು ಸೇವಾ ಸಮಿತಿ, ಮುಲ್ಕಿ, ಯಕ್ಷಗಾನದ ಚಾರ್ಲಿಚಾಪ್ಲಿನ್ ಸೀತಾರಾಮ ಕುಮಾರ್ ಕಟೀಲ್, ಬೋಳೂರು ಮೊಗವೀರ ಮಹಾಸಭಾದವರ ಸಮಾಜ ಸೇವಾ ಪ್ರಯುಕ್ತ, ಯಕ್ಷಲಹರಿ ಯುಗಪುರುಷ ರಜತ ಮಹೋತ್ಸವದ ಪ್ರಯುಕ್ತ, ಬಾಲಯೇಸು ಮಂದಿರ ಬಿರ್ಕನಕಟ್ಟೆ, ಶ್ರೀ ಕೃಷ್ಣ ಯಕ್ಷ ಸಭಾ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ನೂರಾರು ವಿಶೇಷ ಗೌರವ ಪುರಸ್ಕಾರಗಳು ಹಾಗೂ ಸನ್ಮಾಸಿವೆ. ಇವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮ ಸೇವೆ ಸಲ್ಲಿಸಿರುತ್ತಾರೆ.
2006 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿಯ ಮಹಾಮಸ್ತಾಭಿಷೇಕ ಸಂದರ್ಭ ಗೌರವ ಸನ್ಮಾನ, ಸುಮ ಸೌರಭ, ಪೆರ್ಮೆದ ತುಳುವೆ ಪ್ರಶಸ್ತಿ, (ಸಾಂಗ್ಲಿ ತುಳುಕೂಟ) ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ರವೀಂದ್ರ ಶೆಟ್ಟಿ ಬಳಂಜ
ರವೀಂದ್ರ ಶೆಟ್ಟಿ ಬಳಂಜ ಶ್ರೀಮತಿ ಸೀತಾ ನಾರಾಯಣ ಶೆಟ್ಟಿಯವರ ಮಗನಾಗಿ 06-06-1964 ರಂದು ಬಳಂಜ ನಾಲೂರು ಮನೆಯಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳಂಜದಲ್ಲಿ ಹಾಗೂ ಹೈಸ್ಕೂಲ್ ಪದವಿ, ಸ್ನಾತಕ್ಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾಡಿರುತ್ತಾರೆ.
ನಾಟಕ, ಪುಸ್ತಕ ಓದುವುದು, ಸಂಗೀತ, ಕಬಡ್ಡಿ ಇದು ಇವರ ಹವ್ಯಾಸ. ಇವರಿಗೆ ರಾಜ್ಯ ಮಟ್ಟದ ಪ್ರಶಸ್ತಿ, ಬೆಳ್ತಂಗಡಿ ಮಂಜುಶ್ರೀ ಜೇಸಿಸ್‍ನ ಅಧ್ಯಕ್ಷರಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಬೆಳ್ತಂಗಡಿ ಲಯನ್ಸ್ ಕ್ಲಬ್‍ನ ಉಪಾಧ್ಯಕ್ಷರಾಗಿ ಜನŒಸೇವೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾಗಿ, ಉಜಿರೆ ಬಂಟರ ಸಂಘದ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಚಿಕ್ಕಮಗಳೂರಿನಲ್ಲಿ ಟೀಚರ್ಸ್ ಕೋ-ಓಪರೇಟಿವ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಗೇಶ್ ಕುಲಾಲ್
ನಾಗೇಶ್ ಕುಲಾಲ್ ಮಂಗಳೂರು ತಾಲೂಕಿನ ಕುಳಾಯಿ ಜನಿಸಿದರು. ಇವರು ಬಿ. ಕಾಂ ಪದವೀಧರ ರಲ್ಲಿ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ 2008 ರಲ್ಲಿ ಸ್ಥಾಪಿಸಿದರು. 20 ಕಲಾವಿದರಿಂದ ರಾಜ್ಯ ಮತ್ತು ಅಂತರ್‍ರಾಜ್ಯ ಮಟ್ಟದಲ್ಲಿ 330 ತುಳುನಾಡ ಸಂಸ್ಕೃತಿ ಕಾರ್ಯಕ್ರಮ ನೀಡಿರುತ್ತಾರೆ. ಈ ಅತ್ಯುತ್ತಮ ಸಾಧನೆಗಾಗಿ ‘ಸ್ವಸ್ತಿಕ್ ಸಿರಿ’ ರಾಜ್ಯ ಪ್ರಶಸ್ತಿ ಪಡೆದಿರುತ್ತಾರೆ.
ಕಲಾಕುಂಭ ಯಕ್ಷವೃಂದ ಕುಳಾಯಿ ತಂಡವನ್ನು ಸ್ಥಾಪಿಸಿರುತ್ತಾರೆ. ಸ್ವರ್ಣ ಕುಂಭ ವಿವಿದೋದ್ದೇಶ ಸಹಕಾರ ಸಂಘ ಸುರತ್ಕಲ್ 2007 ರಲ್ಲಿ ಸ್ಥಾಪಿಸಿ ಉಪಾಧ್ಯಕ್ಷರಾಗಿ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, 5 ಶಾಖೆಯನ್ನು ಹೊಂದಿರುತ್ತಾರೆ. ನಾಗರಿಕ ಸಮಿತಿ ಕುಳಾಯಿ, ರಜತ ಸೇವಾ ಟ್ರಸ್ಟ್ ಕುಳಾಯಿ, ಸುರತ್ಕಲ್ ಕುಲಾಲ್ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯಲಕ್ಷ್ಮೀ ಪ್ರಸಾದ್ ರೈ
ವಿಜಯಲಕ್ಷ್ಮೀ ಪ್ರಸಾದ್ ರೈ ಇವರು ದಿ| ನಾರಾಯಣ ಶೆಟ್ಟಿ ಹಾಗೂ ಮೂಡ್ರಗುತ್ತು ಶ್ರೀಮತಿ ಗಿರಿಜಾ ಶೆಟ್ಟಿ ಇವರ ಪುತ್ರಿಯಾಗಿ ಜನಿಸಿದರು. ಇವರು ಮಂಗಳೂರಿನ ಬೆಸೆಂಟ್ ಕಾಲೇಜಿನ ಪದವೀಧರೆ.
ಹೊರದೇಶ ಕತಾರ್‍ನಲ್ಲಿ ‘ಗಲ್ಪ್ ಏಜೆನ್ಸಿ ಕತಾರ್’ ಶಿಪ್ಪಿಂಗ್ ಮತ್ತು ಪ್ರೈಟ್ ಕಂಪೆನೆಯಲ್ಲಿ 6 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಿತ ದ. ಕ ಹಾಲು ಒಕ್ಕೂಟ (ಕೆಎಂಎಫ್) ಇದರ ಅಂಗಸಂಸ್ಥೆಯಾದ ಕೊಣಾಜೆ ಹಾಲು ಉತ್ಪಾದಾರ ಮಹಿಳಾ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷೆಯಾಗಿ, ಬಂಟರ ಸಂಘ ಕೊಣಾಜೆ ಹಾಗೂ ಬಂಟರ ಮಾತೃ ಸಂಘದ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.
ಕೊಣಾಜೆ ಗ್ರಾಮಸ್ಥರ ಅತಿ ಮುಖ್ಯ ಆದ್ಯತೆಗಳಲ್ಲಿ ಒಂದಾದ ರುದ್ರಭೂಮಿಇಯನ್ನು ‘ಮುಕ್ತಿ ಭೂಮಿ’ ಎನ್ನುವ ಹೆಸರಿನೊಂದಿಗೆ ಸುಸಜ್ಜಿತವಾಗಿ ನಿರ್ಮಿಸಿಕೊಟ್ಟಿರುವರು. ಈ ಯೋಜನೆಗಾಗಿ ‘ಅಬ್ಬಕ್ಕ ಟಿ. ವಿ ಪ್ರಶಸ್ತಿ’, ‘ಮಲೆನಾಡ ಮಾತೆ’ ರಾಜ್ಯ ಪ್ರಶಸ್ತಿ, ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಅಭಿನಂದಿಸಿ ಸನ್ಮಾನಿಸಿದೆ. ಹಾಗೂ ಐಎನ್‍ಜಿ ವೈಶ್ಯ ಇನ್ಸುರೆನ್ಸ್ ಕೊ ಆಡ್ವೈಸರಾಗಿ ‘ಗ್ರಾಂಡ್ ಸ್ಲಮ್’ ಪ್ರಶಸ್ತಿಯನ್ನು ಲಂಡನ್‍ನಲ್ಲಿ ಪಡೆದಿದ್ದಾರೆ ಹಾಗೂ ಲಯನ್ಸ್‍ನಿಂದ ಸಿಲ್ವರ್ ಸುಪ್ರಿಮ್ ಎಕ್ಸ್‍ಲೆನ್ಸ್, ಡೈಮಂಡ್ ಸುಪ್ರಿಮ್ ಎಕ್ಸ್‍ಲೆನ್ಸ್ ನಂತಹ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಪ್ರಸ್ತುತ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಆಕಾಶವಾಣಿಯಲ್ಲಿ ‘ಚಿಂತನ’ ಕಾರ್ಯಕ್ರಮ ಹಾಗೂ ಕವನವಾಚನ, ಕವಿಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ. ದೂರದರ್ಶನದಲ್ಲೂ ಇವರ ಕವನಗಳು ಪ್ರಸಾರಗೊಂಡಿವೆ.

ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ
ಸಿದ್ಧಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ ಇವರು ಎಮ್. ಎ ಇನ್ ಇಂಗ್ಲೀಷ್ ಮತ್ತು ಕನ್ನಡ ಪದವೀಧರರು, ಭರತನಾಟ್ಯ, ಸಂಗೀತದಲ್ಲಿ 3 ವರ್ಷದ ಡಿಪೆÇ್ಲೀಮಾ ಪದವಿ ಪಡೆದಿರುತ್ತಾರೆ. ಇವರ ಕಾದಂಬರಿ, ನಾಟಕ, ಕವನ ಸಂಕಲನ, ಬೂಕು ಬಿಡುಗಡೆ ಮತ್ತು ತುಳು ಪದ್ಯಗಳ ಸಿ. ಡಿ ಬಿಡುಗಡೆಗೊಂಡಿರುತ್ತದೆ. ಅಖಿಲ ಭಾಅರತ ನಾಟಕ ಸ್ಪರ್ಧೆಯಲ್ಲಿ ಬೆಸ್ಟ್ ಅಕ್ಟೇರಸ್ ಪ್ರಶಸ್ತಿ ಲಭಿಸಿದೆ. ಆಕಾಶವಾಣಿಯ ನಾಟಕದ ‘ಎ’ ಗ್ರೇಡ್ ಕಲಾವಿದೆ. ಹಾಗೂ ಉದ್ಘೋಷಕಿಯಾಗಿರುತ್ತಾರೆ.
ಟಿ. ವಿ. ಚಾನೆಲ್‍ಗಳಲ್ಲಿ ವಾರ್ತಾ ವಾಚಕಿ, ನಿರೂಪಕಿ ಆಗಿ ಸೇವೆ ಸಲ್ಲಿಸಿರುತ್ತಾರೆ. ಶಾಲೆಗಳಲ್ಲಿ ಸಂಗೀತ, ಭರತನಾಟ್ಯ ಶಿಕ್ಷಕಿಯಾಗಿರುತ್ತಾರೆ.
ಪ್ರಸ್ತುತ ಇವರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಡಬ ದಿನೇಶ್ ರೈ
ಕಡಬ ದಿನೇಶ್ ರೈ ಪುತ್ತೂರು ತಾಲೂಕಿನ ಐತ್ತೂರು ಗ್ರಾಮದ ಬೆತ್ತೋಡಿ – ಮಾಳ ಶ್ರೀ ವರದ ರೈ, ಶ್ರೀಮತಿ ವಾರಿಜ ರೈ ದಂಪತಿಯವರ ಪುತ್ರನಾಗಿ 01, ಜೂನ್ 1983 ರಲ್ಲಿ ಜನಿಸಿದರು. ಇವರು ದ್ವಿತೀಯ ಪಿ. ಯು. ಸಿ ವರೆಗೆ ವಿದ್ಯಾಬ್ಯಾಸ ಮಾಡಿ ಶ್ರೀ ಧರ್ಮಸ್ಥಳ ಲಲಿತಾಕಲಾ ಕೇಂದ್ರವನ್ನು ಸೇರಿ ಗುರು ತಾರನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯಭ್ಯಾಸ ಮಾಡಿ ಯಕ್ಷರಂಗವನ್ನು ಪ್ರವೇಶ ಮಾಡಿದರು.
ಶ್ರೀ ಧರ್ಮಸ್ಥಳ ಮೇಳ 1 ವರ್ಷ, ಶ್ರೀ ಕಟೀಲು ಮೇಳ 3 ವರ್ಷ, ಶ್ರೀ ಪುತ್ತೂರು ಮೇಳ 1 ವರ್ಷ, ಶ್ರೀ ಕುಂಟಾರು ಮೇಳ, ಶ್ರೀ ಮಂಗಳಾದೇವಿ ಮೇಳ, ತೆಂಕು ಬಡಗು ಶ್ರೀ ಹಿರಿಯಡ್ಕ ಮೇಳ, ತಳಕಲ ಮೇಳ ತಿರುಗಾಟವಲ್ಲದೆ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ ಬಾಚಕೆರೆಯಲ್ಲಿ ಅತಿಥಿಯಾಗಿ ಭಾಗವಹಿಸಿರುತ್ತಾರೆ.
‘ನಾಗತಂಬಿಲ’ದ ಕೂಸಮ್ಮ (ನಂಜುಂಡ), ‘ನಾಗರಪಂಚಮಿ’ಯ ‘ನೋಣಯ್ಯ, ‘ವಜ್ರಕುಟುಂಬ’ ದ ಕಪಟ ಸ್ವಾಮೀಜಿ, ‘ಪವಿತ್ರ-ಪಲ್ಲವಿ’ ಯ ಪದ್ಮಾವತಿ (ಪದ್ದು), ‘ಚೆನ್ನಿ-ಚೆನ್ನಮ್ಮ’ ದ ಪುರುಷೋತ್ತಮ, ವಿಜಯ-ಕೇಸರಿ’ ಯ ‘ಮಾರುತಿ’ ಗುಳಿಗೋದ್ಬವ ಪಂಜುರ್ಲಿ ಪ್ರತಾಪ’ ದ ಗೋಪಾಲ ಹಾಗೂ ‘ಚಂದ್ರ’, ಮುಂತಾದ ಪಾತ್ರಗಳಲ್ಲಿ ಅಭಿನಯಿಸಿರುತ್ತಾರೆ. ಚಂದನವಾಹಿನಿಯಲ್ಲಿ ಪ್ರಸಾರವಾದ ‘ಪಾಪೆÇೀದ ಪಿರವು’, ಸಜ್ಜಿಗೆ-ಬಜಿಲ್’ ತುಳು ಧಾರಾವಾಹಿಯಲ್ಲಿ ‘ವಿಜಯ ಕಲಾವಿದರು ಕಿನ್ನಿಗೋಳಿಯವರ ‘ಲೈಫ್ ಕೊರ್ಪರ’ ನಾಟಕದಲ್ಲಿ ನಟಿಸಿದ್ದಾರೆ.
ನಮ್ಮ ತುಳುನಾಡ್ ಟ್ರಸ್ಟ್ (ರಿ) ಹಾಗೂ ಯಕ್ಷ ತುಳು ಪರ್ಬ ಸಮಿತಿ ಮಂಗಳೂರು ಇದರ ಕಾರ್ಯದರ್ಶಿಯಾಗಿ, ನಿರೂಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಅಜೆಕಾರು ಕಲಾಭಿಮಾನಿ ಬಳಗ (ರಿ) ಮುಂಬಯಿ “ಯಕ್ಷರಕ್ಷಾ-2017’, ಬಂಟರ ಸಂಘದ ಯುವ ಬಂಟ್ಸ್‍ವತಿಯಿಂದ ‘ಬಂಟ ಸಮ್ಮಿಲನ ಐಕ್ಯತಾ-2018’, ಬಂಟ್ಸ್ ಯಂಗ್ ಅಚೀವರ್ಸ್ – 2018, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ (ರಿ) ಪೂಪಾಡಿಕಲ್ಲು ಇರುವೈಲು ‘ಯಕ್ಷಬೊಳ್ಳಿ’ ಬಿರುದು, ಯಕ್ಷಭಿಮಾನಿಗಳು ವರ್ಕಾಡಿ – ‘ಯಕ್ಷ ಮಾಣಿಕ್ಯ’ ಬಿರುದು. ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನ ಪಡೆದಿರುತ್ತಾರೆ.

ನಿಟ್ಟೆ ಶಶಿಧರ ಶೆಟ್ಟಿ
ನಿಟ್ಟೆ ಶಶಿಧರ ಶೆಟ್ಟಿ ಇವರು ನಿಟ್ಟೆ ಪಾದೆ ಮನೆ ದಿ| ಶ್ರೀಮತಿ ಶಾಂಭವಿ ಮತ್ತು ಮುದ್ರಾಡಿ ಜೀರಸಾಲೆ ಬೆಟ್ಟು ಶಿವರಾಮ ಶೆಟ್ಟಿ ಇವರ ಪುತ್ರನಾಗಿ 16, ಸಪ್ಟೆಂಬರ್ 1956 ರಲ್ಲಿ ಜನಿಸಿದರು. ಬಿ. ಕಾಂ, ಲಾ ಪದವಿಧರರು.
ಇವರು ಮಂಗಳೂರಿನ ಬಂಟರ ಯಾನೆ ನಾಡವರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಎಸ್. ಡಿ. ಎಂ ಲಾ ಕಾಲೇಜ್‍ನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಎಬಿವಿಪಿ ಮತ್ತು ವಿದ್ಯಾರ್ಥಿ ಪರಿಷತ್ತುಗಳ ಸಕ್ರೀಯ ಕಾರ್ಯಕರ್ತ ಹಾಗೂ ದ. ಕ ಮತ್ತು ಕೊಡಗು ಜಿಲ್ಲಾ ಆಲ್ ಕಾಲೇಜ್ ವಿಧಾರ್ಥಿ ಸಂಘದ ಕಾರ್ಯದರ್ಶಿಯಾಗಿ ದುಡಿದ ಅನುಭವ ಇವರದ್ದು.
ಇವರು ಪದವಿನಂಗಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ಹಾಗೂ ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷರಾಗಿರುವರು. ಇವರು ಸುಮಾರು 40 ವರ್ಷಗಳಿಂದ ಬೇರೆ ಬೇರೆ ಸಂಘ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಾ ಬಂದಿರುತ್ತಾರೆ. ಹಾಗೂ ತುಳುಕೂಟ ಕುಡ್ಲದ ಸದಸ್ಯರು. ಪ್ರಸ್ತುತ ಅಖಿಲ ಭಾರತ ತುಳು ಒಕ್ಕೂಟ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಆಕಾಶ್‍ರಾಜ್ ಜೈನ್
ಡಾ. ಆಕಾಶ್‍ರಾಜ್ ಜೈನ್ ಇವರು ಧರ್ಮರಾಜ್ ಜೈನ್ ಮತ್ತು ವನಿತ ಧರ್ಮರಾಜ್ ದಂಪತಿಯವರ ಪುತ್ರನಾಗಿ 09, ಮಾರ್ಚ್ 1981 ರಂದು ಜನಿಸಿದರು. ಇವರು ದಕ್ಷಿಣ ಕನ್ನಡದ ಆಳುಪ ರಾಜಮನೆತನದವರ ವಂಶಸ್ಥರಾಗಿದ್ದಾರೆ. ಬಿ.ಡಿ.ಎಸ್, ಎಂ.ಬಿ.ಎ.ಹೆಚ್.ಸಿ.ಎಸ್, ಯೆಫ್.ಎಇ.ಜಿ.ಇ, ಸರ್ತಿಫ್‍ಐಇಡ್ ಇಂಪ್ಲಾಂಟಲಾಗಿಸ್ಟ್, ಡಿ. ಫಾರ್ಮ ಪಧವೀದರರು. ಇವರು ವೃತ್ತಿಯಲ್ಲಿ ದಂತ ವೈದ್ಯರಾಗಿರುತ್ತಾರೆ.
ಇವರು ಕನ್ನಡ ಮತ್ತು ತುಳುವಿನಲ್ಲಿ ಬಹಳಷ್ಟು ವೈದ್ಯಕೀಯ, ವೈದ್ಯಕೀಯ ಥರ ಲೇಖನ ಬರೆದಿದ್ದು ಇವುಗಳು ಟೈಮ್ಸ್ ಆಫ್ ಕುಡ್ಲ ತುಳು ವಾರಪತ್ರಿಕೆ, ಉದಯವಾಣಿ, ತರಂಗ, ಪ್ರೇರಣಾ ಮತ್ತು ಇತರ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿದೆ. ಭಾರತೀಯ ದಂತ ವೈದ್ಯಕೀಯ ಸಂಘ ಉಡುಪಿ ಜಿಲ್ಲಾ ವಿಭಾಗದಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಲ್ಲದೆ ‘ಬೆಸ್ಟ್ ಜರ್ನಲ್ ಎಡಿಟರ್’ ಪ್ರಶಸ್ತಿ ಮತ್ತು ರಾಷ್ಟ್ರ ಮಟ್ಟದ ‘ಬೆಸ್ಟ್ ಜರ್ನಲ್ ಎಡಿಟರ್ ರನ್ನರ್ ಪ್ರಶಸ್ತಿ ಬಂದಿರುತ್ತದೆ.
ಹನಿಗವನಗಳನ್ನು ಬರೆದಿರುತ್ತಾರೆ ರೋಟರಿ, ಜೆಸಿ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿದ್ದು, ಯಾನ್ ತುಳುವೆ ಎಂಬ ಕಿರು ಸಂಘಟನೆಯನ್ನು ಸ್ಥಾಪಿಸಿರುತ್ತಾರೆ. ಟೈಂಸ್ ಆಫ್ ಕುಡ್ಲ ತುಳು ಪತ್ರಿಕೆಯ ಉಡುಪಿ ವಿಭಾಗದಲ್ಲಿ ಸಂಪಾದಕನಾಗಿ ಕಾರ್ಯ ನಿರ್ವಹಿಸುತಿದ್ದಾರೆ.

ಶ್ರೀಮತಿ ಕಾಂತಿ ಶೆಟ್ಟಿ
ಕೋಂ. ದಿವಂಗತ ತಿಂಗಳೆ ಮಲ್ಲಿಕಾರ್ಜುನ ಹೆಗ್ಗಡೆ ಕಾಂತಿ ಶೆಟ್ಟಿ ಇವರು ಮೂಲತ: ಶಿರ್ವನಡಿಬೆಟ್ಟಿನವರಾದ ಇವರು ಕಾರ್ಕಳ ತಾಲ್ಲೂಕಿನ ಹಿರ್ಗಾನ ಗ್ರಾಮದಲ್ಲಿ ಜನಿಸಿದ ಇವರು ಬಿ.ಕಾಂ. ಪದವೀದರರು. ಮೂಡುಬಿದರೆಯ ಅಲಂಗಾರಿನಲ್ಲಿ ಜಿ.ಡಿ.ಸಿ (ಜನರಲ್ ಡಿಪ್ಲೋಮಾ ಬ್ಯಾಂಕಿಂಗ್ ಕೋರ್ಸ್). ಕಳೆದ 17 ವರ್ಷಗಳಿಂದ ಬೆಂಗಳೂರಿನ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ಟೆಲಿಕಾಂ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಸಮಾಜ ಸೇವೆಗೆ “ಆರ್ಯಭಟ ಅಂತರ್‍ರಾಷ್ಟ್ರೀಯ ಪ್ರಶಸ್ತಿ 2018” ಪ್ರಶಸ್ತಿ ಲಭಿಸಿವೆ
ಇವರು ಬೆಂಗಳೂರು ಬಂಟರ ಸಂಘದಲ್ಲಿ ವಿವಾಹ ವೇದಿಕೆಯ ಅಧ್ಯಕ್ಷೆಯಾಗಿ “ಸಮ್ಮಿಲನ” ಹಾಗೂ “ಮದುವೆ ಚಾವಡಿ” ಎನ್ನುವ ವಿನೂತನ ಜನಪರ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ವೈಬ್‍ಸೈಟಿ ಸಮಿತಿ ಅಧ್ಯಕ್ಷೆಯಾಗಿ ಕೆಲಸ ಮಾಡಿರುತ್ತಾರೆ. 2016-19ರ ಅವಧಿಯ ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾಗಿ, “ತುಳುಕೂಟ” ಹಾಗೂ “ತುಳುವೆರೆಂಕುಲು” ಇನ್ನಿತರ ಅನೇಕ ತುಳು-ಕನ್ನಡ ಸಂಸ್ಥೆಯಲ್ಲಿ ಸಮಿತಿ ಸದಸ್ಯೆಯಾಗಿ, ದೆಹಲಿ ಕರ್ನಾಟಕ ಸಂಘದಲ್ಲಿ ನಡೆದ ಗಡಿನಾಡ ಕನ್ನಡಿಗರ ಸಮ್ಮೇಳನದಲ್ಲಿ ಸಂಚಾಲಕಿಯಾಗಿ ಜವಾಬ್ದಾರಿ. 2018ರಲ್ಲಿ ದುಬೈನಲ್ಲಿ ನಡೆದ ತುಳು ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿರುತ್ತಾರೆ.
ಕನ್ನಡ ಭಾಷೆಯಲ್ಲಿ ಚಿಕ್ಕ ಚಿಕ್ಕ ಕಥೆ ಕವನ, ಲೇಖನ ಹಾಗೂ ನಾಟಕ ಬರೆಯುವ ಹವ್ಯಾಸವು ಇವರದ್ದಾಗಿದೆ.

ತಾರಾ ಉಮೇಶ್ ಆಚಾರ್ಯ