Awards 2005

Awards 2005

ಬಂತೆಪ್ಪ ಕಂಬಚ

ಕ್ಷೇತ್ರ : ಜಾನಪದ

ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್

ಕ್ಷೇತ್ರ : ಸಾಹಿತ್ಯ ಮತ್ತು ಸಂಶೋಧನೆ

೧೯೪೫ ಸಪ್ಟೆಂಬರ್ ೯ ರಂದು ಜನಿಸಿದರು. ಪ್ರಾಥವಿಕ ಹಾಗೂ ಪ್ರೌಡ ಶಿಕ್ಷಣವನ್ನು ಪುತ್ತೂರಿನಲ್ಲಿ ಪಡೆದ ಇವರು ಕನ್ನಡಲ್ಲಿ ಎಂ.ಎ, ಬಿ. ಇಡಿ, ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ೧೯೬೩ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಮುಂದೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಬಡ್ತಿ ಹೊಂದಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು,

ತುಳುವಿನಲ್ಲಿ ಕೃತಿಗಳು: ಪಚ್ಚೆ ಕುರಲ್, ದುನಿಪು, ಭೂತಾಳ ಪಾಂಡ್ಯ, ಡಾ. ಶಿವರಾಮ ಕಾರಂತೆರ್, ತುಳು ಸಂಸ್ಕೃತಿದ ಪೊಲಬು, ತುಳು ನಾಡ್ಡ ನಾಗಬೆರ್ಮೆರ್ ಮುಂತಾದವು

ತುಳು ಸಂಸ್ಕೃತಿಯ ಬಗ್ಗೆ ಗ್ರಂಥಗಳು: ತುಳುವರ ಜನಪದ ಕಥೆಗಳು, ಜಾನಪದ ಸ್ಪಂದನ, ಜಾನಪದ ಕುಣಿತ, ಕಲ್ಕುಡ ಕಲ್ಲುರ್ಟಿ ಇತ್ಯಾದಿ

ಇತರ ಕೃತಿಗಳು: ಬಂಗ್ಲಾ ವಿಜಯ (ಯಕ್ಷಗಾನ), ಕಿರಣ, ಅಂತರ್ಭೂತ, ನಮ್ಮ ಸರಕಾರ, ಕಾವ್ಯ ರಶ್ಮಿ ಇತ್ಯಾದಿ.

ದ್ವನಿಸುರುಳಿಗಳಿಗೆ ಸಾಹಿತ್ಯ: ತುಳುವ ಸಿರಿ, ತುಳುವ ಮಲ್ಲಿಗೆ, ಅರ್ತಿದ ಪೂ, ಮುಂತಾದವು.

ಪ್ರಶಸ್ತಿಗಳು: ತುಳು ಡೈಯಾಲೆಕ್ಟ್ಸ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಿಮಿಯಿಂದ ೧೯೯೫ರ ಸಾಲಿನ ಪುಸ್ತಕ ಪ್ರಶಸ್ತಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ೨೦೦೫, ಮುಂಬಯಿಯಲ್ಲಿ ನಡೆದ ೧೦ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ  ೨೦೦೧, ಕರ್ನಾಟಕ ಸರಕಾರದಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ  ೧೯೯೩ ಇತ್ಯಾದಿ.

ತುಳು ಭಾಷಾಧ್ಯಯನ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ೧೯೯೫ರಲ್ಲಿ ತುಳುಕೂಟ ಉಡುಪಿ ಇದರ ದಶಮಾನೋತ್ಸವ ಗೌರವಸಂಮಾನ.

ಇವರು ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿ. ಜಿ. ಪಾಲ್ (ಗೋಪಾಲ್ ಟಿ. ಕೋಟ್ಯಾನ್)

ಕ್ಷೇತ್ರ : ನಾಟಕ-ಚಲನಚಿತ್ರ

೧೯೪೨ ಅಕ್ಟೋಬರ್ ೨೭ ರಂದು ಮಂಗಳೂರಿನಲ್ಲಿ ಜನಿಸಿದರು. ವೆಸ್ಟರ್ನ ವರ್ಕ್ಸ್ ಇಂಜಿನಿಯರಿಂಗ್ ಮುಂಬೈಯಲ್ಲಿ ಹಿರಿಯ ತಾಂತ್ರಿಕ ಸಹಾಯಕರಾಗಿ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ.

೧೯೬೦ ರಲ್ಲಿ ನಡೆದ ಕಲ್ಜಿಗದ ಕುರುಕ್ಷೇತ್ರ’ ತುಳುನಾಟಕದ ಮೂಲಕ ರಂಗ ಪ್ರವೇಶ ಮಾಡಿದರು, ಕನ್ನಡ, ತುಳು, ಸುಮಾರು ೧೫೦೦ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದರು, ಬಯ್ಯ ಮಲ್ಲಿಗೆ, ಭಾಗ್ಯವಂತೆದಿ, ಸತ್ಯ ಓಲುಂಡು…….?, ಬಂಗಾರದ ಪಟ್ಲೇರ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಅಭಿನಯಿಸಿದ ವಿಡಿಯೋ ಚಿತ್ರ: ಪೂ-ಪನ್ನೀರ್, ಧ್ವನಿ ಸುರುಳಿ ಕಂಠದಾನ ಸುಮಾರು ೫೦,

ಪ್ರಶಸ್ತಿ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಾಂತೀಯ ಲಯನ್ಸ್ ಕಲಾ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳು ಮತ್ತು ರಂಗ ಸಮಾಜ (ರಿ) ಬೆಂಗಳೂರು ‘ಸಮಾಜ ರತ್ನ’ ಪ್ರಶಸ್ತಿ ಮಂಗಳೂರು.

ಸನ್ಮಾನ: ಸುಮಾರು ೬೦ ಕ್ಕೂ ಮಿಕ್ಕಿ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಗಳಿಂದ ಗೌರವ ಸನ್ಮಾನ.