Awards 2008

Awards 2008

ಶ್ರೀ ಬನ್ನಂಜೆ ಬಾಬು ಅಮೀನ್

ಕ್ಷೇತ್ರ : ಸಾಹಿತ್ಯ ಮತ್ತು ಸಂಶೋಧನೆ

ಅಮೀನರು ಸಮಾಜ ಸೇವೆ, ಸಂಘ – ಸಂಸ್ಥಗಳ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯಕ್ಷಗಾನ, ಕೋಲ, ನೇಮ, ಗರೋಡಿ, ಇತ್ಯಾದಿ ವಿಷಯಗಳಲ್ಲಿ ಪಾಲು ಪಡೆದು ವಿಶೇಷ ಅನುಭವವನ್ನು ಪಡೆದರು.

ಕೃತಿಗಳು: ಕೋಟಿ ಚೆನ್ನಯ, ತುಳುನಾಡಿನ ಗರೋಡಿಗಳ ಅಧ್ಯಯನ, ತುಳು ಜಾನಪದ ಆಚರಣೆಗಳು, ಪೂ-ಪೊದ್ದುಲು ಇತ್ಯಾದಿ.

ಇವರಿಗೆ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯಿಂದ ಇವರ ಗರೋಡಿಗಳ ಅಧ್ಯಯನ ಗ್ರಂಥಕ್ಕೆ ಬಹುಮಾನ ಸಂದಿದೆ. ಕು.ಶಿ ಜಾನಪದ ಪ್ರಶಸ್ತಿ, ಅಬುದಾಬಿ ಕರ್ನಾಟಕ ಸಂಘದ ಪ್ರಶಸ್ತಿ ಇತ್ಯಾದಿ.

ಶ್ರೀ ಬನ್ನಂಜೆ ಬಾಬು ಅಮೀನ್ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೦೭-೨೦೦೮ ಸಾಲಿನ  ಗೌರವ ಪ್ರಶಸ್ತಿಯಯನ್ನು ನೀಡಿ ಗೌರವಿಸಲಾಗಿದೆ.

ಶ್ರೀ ಸದಾಶಿವ ಸಾಲ್ಯಾನ್

ಕ್ಷೇತ್ರ : ತುಳು ನಾಟಕ-ಚಲನಚಿತ್ರ

೧೯೫೦ ನವೆಂಬರ್ ೧೭ ರಂದು ಮಂಗಳೂರು ತಾಲೂಕಿನ ಬೈಕಂಪಾಡಿಯಲ್ಲಿ ಜನಿಸಿದರು. ವಡಾಲದಲ್ಲಿ ಪ್ರೌಢಶಾಲೆಯಲ್ಲಿ ಮುಗಿಸಿ ಅಂಧೇರಿಯ ಚಿನ್ಮಯ ಕಾಲೇಜಿನಿಂದ ಪದವಿಯನ್ನು ಗಳಿಸಿದರು. ಸದಾಶಿವರವರು ಖ್ಯಾತ ನಿರ್ದೇಶಕರುಗಳಾದ ಕೆ.ಕೆ ಸುವರ್ಣ, ಸದಾನಂದ ಸುವರ್ಣ, ಕೆ. ಜೆ. ರಾವ್, ಇಮ್ತಿಯಾಜ್ ಹುಸೇನ್ ಮುಂತಾದವರಿಂದ ಮಾರ್ಗದರ್ಶನ ಗಳಿಸಿಕೊಂಡು ೫೦೦ಕ್ಕೂ ಹೆಚ್ಚು ತುಳು, ಕನ್ನಡ, ಹಿಂದಿ ಮತ್ತು ಮರಾಠಿ ನಾಟಕಗಳಿಗೆ ನಿರ್ದೇಶನ ನೀಡುದಷ್ಟೇ ಅಲ್ಲದೆ ತಾನು ಪಾತ್ರ ವಹಿಸಿ ಮುಂಬಯಿಯ ಕಲಾರಂಗದಲ್ಲಿ ಜನಪ್ರಿಯರಾದರು. ೪೨ ಕನ್ನಡ ಚಿತ್ರಗಳಲ್ಲಿ ಖಳನಾಯಕರಾಗಿ ಶ್ರೀ ಸಾಲ್ಯಾನ್ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಅಜ್ಙಾತವಾಸ, ಪೋಲಿಸ್ ಬೆಲ್ಟ್, ರಾಜಕೀಯ, ಐ.ಪಿ.ಎಸ್ ಕೆಂಪಯ್ಯ, ಅನಾಥ ರಕ್ಷಕ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಸಾಲ್ಯಾನ್ ಬೆಳ್ಳಿತೆರೆಯ ನಟನಾಗಿ ಪ್ರಶಂಸೆಗೆ ಪಾತ್ರರಾದರು.

ಶ್ರೀ ಸದಾಶಿವ ಸಾಲ್ಯಾನ್ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೦೭-೨೦೦೮ ಸಾಲಿನ  ಗೌರವ ಪ್ರಶಸ್ತಿಯಯನ್ನು ನೀಡಿ ಗೌರವಿಸಲಾಗಿದೆ.

ಶ್ರೀ ದಾಸು ಬಂಗೇರ

ಕ್ಷೇತ್ರ : ತುಳು ಜಾನಪದ

ಇವರು ಪಡುಬಿದ್ರಿಯಲ್ಲಿ ಜನಿಸಿದರು, ೭ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದರು. ೫೦ ವರ್ಷಗಳ ಕಾಲವನ್ನು ದೈವರಾಧನೆಯ ಸೇವೆಯಲ್ಲೇ ಕಳೆದವರು. ತುಳುನಾಡಿನ ಪ್ರಸಿದ್ಧಿ ಪಡೆದ ಆರಾಧನಾ ಕಲೆಯಾದ ಭೂತಾರಾಧನೆಯಲ್ಲಿ ತನ್ನ ಯವ್ವನಾವಸ್ಥೆಯಿಂದಲೇ ತನ್ನನ್ನು ತೊಡಗಿಸಿಕೊಂಡ ಬಂಗೇರರು ಮುಂದೆ ಅದನ್ನೇ ತನ್ನ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡರು.

ಪ್ರಸಿದ್ಧಿ ಪಡೆದ ರಾಜನ್ ದೈವಗಳಾದ ಜಾರಂದಾಯ, ಜುಮಾದಿ, ಮರ್ಲ್ ಜುಮಾದಿ, ಪಂಚ ಜುಮಾದಿ, ಪಂಜುರ್ಲಿ, ಮಾಯಾಂದಾಳ್, ಒಡಿಲ್ತಾಯ ಮುಂತಾದ ಭೂತಗಳಿಗೆ ಮಾಧ್ಯಮ ವ್ಯಕ್ತಿಯಾಗಿ ತನ್ನ ಕಲೆ, ಕೌಶಲಗಳಿಂದ ಭೂತಗಳ ಕಾರಣಿಕವನ್ನು ಹೆಚ್ಚಿಸಿದ ಕೀರ್ತಿ ದಾಸು ಬಂಗೇರರಿಗೆ ಸಲ್ಲುತ್ತದೆ. ಇವರು ಸುಶ್ರಾವ್ಯವಾಗಿ ಪಾಡ್ದನಗಳನ್ನು ಹಾಡಬಲ್ಲ ಪರಿಣತರು.

ಜಾನಪದ ಕ್ಷೇತ್ರಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ ಇವರನ್ನು ಸುವರ್ಣ ಕರ್ನಾಟಕ ಜಯಂತಿ  ೨೦೦೬ ರಲ್ಲಿ ಗೌರವಿಸಿದೆ.

ಶ್ರೀ ದಾಸು ಬಂಗೇರ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೦೭-೨೦೦೮ ಸಾಲಿನ  ಗೌರವ ಪ್ರಶಸ್ತಿಯಯನ್ನು ನೀಡಿ ಗೌರವಿಸಲಾಗಿದೆ.