Chavadi Karyakrama 29-11-2014, Shanivara

Chavadi Karyakrama 29-11-2014, Shanivara


ನವೆಂಬರ್ ೨೯: ತುಳು ಅಕಾಡೆಮಿ ಚಾವಡಿಯಲ್ಲಿ – ‘ಡಾ ಪಾದೂರು ಗುರುರಾಜ ಭಟ್ಟರ ನೆನಪು ಮತ್ತು ಉಪನ್ಯಾಸ’
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಲಾಲ್‌ಬಾಗ್, ಮಂಗಳೂರು ಇಲ್ಲಿನ ಚಾವಡಿಯಲ್ಲಿ ನವೆಂಬರ್ ತಿಂಗಳ ೨೯ನೇ ತಾರೀಕು ಶನಿವಾರದಂದು ಅಪರಾಹ್ನ ಗಂಟೆ ೩.೦೦ಕ್ಕೆ ‘ಡಾ ಪಾದೂರು ಗುರುರಾಜ ಭಟ್ಟರ ನೆನಪು ಮತ್ತು ಅವರ ಸ್ಟಡೀಸ್ ಇನ್ ತುಳುವ ಹಿಸ್ಟರಿ ಎಂಡ್ ಕಲ್ಚರ್ ಕೃತಿಯ ಕುರಿತು ಉಪನ್ಯಾಸ’ ಕಾರ್ಯಕ್ರಮವು ನಡೆಯಲಿರುವುದು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಎಮ್ ಜಾನಕಿ ಬ್ರಹ್ಮಾವರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.. ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಡಾ| ವಸಂತಕುಮಾರ ಪೆರ್ಲ ಇವರು ಡಾ| ಪಾದೂರು ಗುರುರಾಜ ಭಟ್ಟರ ಕುರಿತು ನುಡಿನಮನ ಸಲ್ಲಿಸಲಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ| ಜಗದೀಶ ಶೆಟ್ಟಿ ಡಾ| ಪಾದೂರು ಗುರುರಾಜ ಭಟ್ಟರ ಸ್ಟಡೀಸ್ ಇನ್ ತುಳುವ ಹಿಸ್ಟರಿ ಎಂಡ್ ಕಲ್ಚರ್ ಕೃತಿಯ ಕುರಿತು ಉಪನ್ಯಾಸ ಮಾಡಲಿದ್ದಾರೆ.. ಮಾಹೆ ವಿಶ್ವವಿದ್ಯಾನಿಲಯದ ಶ್ರೀ ಪರಶುರಾಮ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ತುಳು ಸಾಹಿತ್ಯಾಭಿಮಾನಿಗಳು ಈ ಕಾರ್‍ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್‍ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಇವರು ವಿನಂತಿಸಿದ್ದಾರೆ.