chavadi Koota Feb 10, jage Buntara Bhavana, Surathkal gante: 10.00

chavadi Koota Feb 10, jage Buntara Bhavana, Surathkal gante: 10.00

ಫೆ.೧೦: ಸುರತ್ಕಲ್ ಬಂಟರ ಭವನದಲ್ಲಿ ತುಳು ಯಕ್ಷಗಾನ ‘ಕೋಡೆ ಇನಿ ಎಲ್ಲೆ’ ಚಾವಡಿ ಕೂಟ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಫೆಬ್ರವರಿ ೧೦ ರಂದು ಭಾನುವಾರ ಬೆಳಿಗ್ಗೆ ೧೦ಗಂಟೆಗೆ ಬಂಟರ ಭವನ ಸುರತ್ಕಲ್‌ನಲ್ಲಿ ಚಾವಡಿ ಕೂಟ ಹಾಗೂ ‘ತುಳು ಯಕ್ಷಗಾನ ‘ಕೋಡೆ ಇನಿ-ಎಲ್ಲೆ’ ಕುರಿತು ಸಂವಾದ ಕಾರ್ಯಕ್ರಮವು ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ವಹಿಸಲಿದ್ದಾರೆ. ಪ್ರಸಂಗ ಕರ್ತರಾದ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಎಮ್.ಜೆ. ಶೆಟ್ಟಿ , ಜನಪದ ವಿದ್ವಾಂಸರಾದ ಕೆ.ಎಲ್ ಕುಂಡಂತಾಯ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾದ ಸರಪಾಡಿ ಅಶೋಕ್ ಶೆಟ್ಟಿ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಯಕ್ಷಗಾನ ಕಲಾವಿದರಾದ ಸಂಪಾಜೆ ಶೀನಪ್ಪ ರೈ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಡಿ.ಮನೋಹರ್ ಕುಮಾರ್, ತಾರಾನಾಥ ಬಲ್ಯಾಯ ವರ್ಕಾಡಿ, ನವನೀತ ಶೆಟ್ಟಿ ಕದ್ರಿ ಭಾಗವಹಿಸಲಿದ್ದಾರೆ. ಯಕ್ಷಗಾನ ಸಂಘಟಕ ಕಸ್ತೂರಿ ವರದರಾಯ ಪೈ ಸುರತ್ಕಲ್ ಇವರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ ೧.೦೦ ಗಂಟೆಗೆ ಪಂದಬೆಟ್ಟು ವೆಂಕಟರಾವ್ ವಿರಚಿತ `ಕೋಟಿ -ಚೆನ್ನಯ’ ತುಳು ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಪಟ್ಲ. ಸತೀಶ್ ಶೆಟ್ಟಿ ಬೋಂದೆಲ್, ಕೃಷ್ಣ ಪ್ರಕಾಶ್ ಉಳಿತ್ತಾಯ, ಜಯರಾಮ ಆಚಾರ್ಯ ಚೇಳಾರು, ಮಾಧವ ಮಯ್ಯ ಸುರತ್ಕಲ್, ಮುಮ್ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಕೆ.ಎಲ್.ಕುಂಡಂತ್ತಾಯ ಪೆರುವಾಯಿ ನಾರಾಯಣ ಶೆಟ್ಟಿ, ಡಿ.ಮನೋಹರ್ ಕುಮಾರ್, ಜಪ್ಪು ದಯಾನಂದ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಭಾಗವಹಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮ ಸಂಯೋಜಿಸಿದ್ದಾರೆ. ತುಳುವರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ.ಕೋಟ್ಯಾನ್ ಮತ್ತು ರಿಜಿಸ್ಟ್ರಾರ್ ಚಂದ್ರಹಾಸ ರೈ ವಿನಂತಿಸಿದ್ದಾರೆ.