Mumbai Program

Mumbai Program

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತುಕಲಾ ಸಂಪದ ಮುಂಬಯಿ ಇದರ ಆಶ್ರಯದಲ್ಲಿ ಅಗೋಸ್ಟು ೧೯ ರಂದು ಭಾನುವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೮.೩೦ ರವರೆಗೆ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಂಗಣ ಮಾಟುಂಗ (ಪಶ್ಚಿಮ) ಇಲ್ಲಿ ಬೊಂಬಾಯಿಡ್ ತುಳುವೆರ್ ಗೌಜಿ ಗಮ್ಮತ್ತ್‌ದ ಲೇಸ್ ಕಾರ್ಯಕ್ರಮ ಜರಗಲಿದೆ. ಬೆಳಿಗ್ಗೆ ೯.೩೦ ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಾಹಿತಿ. ಡಾ ಸುನೀತಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಕಾಶ್ ಭಟ್, ಹಿರಿಯ ತಾಳಮದ್ದಲೆ ಕಲಾವಿದರಾದ ಕೆ. ಕೆ ಶೆಟ್ಟಿ, ಗೀತಾಂಬಿಕ ಮಂದಿರದ ಅಧ್ಯಕ್ಷರಾದ ಡಿ. ಕೆ ಪೂಜಾರಿ, ಮಲಾಡ್ ಹೋಟೇಲ್ ಪ್ರಸಾದ್ ಮಾಲಕರಾದ ಬಾಬು ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ‘ಕೋಟಿ-ಚೆನ್ನಯ್ಯ‘ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ತಾಳಮದ್ದಲೆಯಲ್ಲಿ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಗಣೇಶ್ ಹೆಬ್ರಿ, ಆನಂದ ಗುಡಿಗಾರ್ ಕೆರುವಾಳೆ, ಜಗದೀಶ್ ಶೆಟ್ಟಿ ಏಳಿಂಜೆ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಶಂಭು ಶರ್ಮ ವಿಟ್ಲ, ನವನಿತ್ ಶೆಟ್ಟಿ ಕದ್ರಿ, ವಿಷ್ಣು ಶರ್ಮ, ಬಾಲಕೄಷ್ಣ ಶೆಟ್ಟಿ ಅಜೆಕಾರು ಇವರುಗಳು ಭಾಗವಹಿಸಲಿದ್ದಾರೆ.

ಮದ್ಯಾಹ್ನ ೧.೩೦ ಗಂಟೆಗೆ ‘ಹಾಸ್ಯ ಕವಿಗೋಷ್ಠಿ‘ ನಡೆಯಲಿದೆ. ಕೋಡು ಭೋಜ ಶೆಟ್ಟಿ ಅಧ್ಯಕ್ಷತೆವಹಿಸಲಿರುವರು, ಕವಿಗಳಾಗಿ ಡಾ| ಸುನೀತಾ ಶೆಟ್ಟಿ, ಪ್ರಾ| ಸೀತಾರಾಮ್ ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ, ಶ್ರೀಮತಿ ಜಿ. ಪಿ ಕುಸುಮ, ಬಿ ಎಸ್ ಕುರ್ಕಾಲ್, ಶಿಮಂತೂರು ಚಂದ್ರಹಾಸ ಸುವರ್ಣ, ಡಾ| ಕರುಣಾಕರ ಶೆಟ್ಟಿ, ಶ್ರೀಮತಿ ಅರುಷಾ ಶೆಟ್ಟಿ, ಅಶೋಕ್ ಪಕ್ಕಳ ಇವರುಗಳು ಭಾಗವಹಿಸಲಿದ್ದಾರೆ.

ಮದ್ಯಾಹ್ನ ೨.೩೦ ಕ್ಕೆ ‘೨೧ನೇ ಶತಮಾನೊಡು ಭೂತಾರಾಧನೆ‘ ಕುರಿತು ‘ಸಂವಾದ‘ ನಡೆಯಲಿದೆ ಬಂಟರವಾಣಿ ಕಾರ್ಯದ್ಯಕ್ಷರಾದ ಶ್ರೀ ನಿತ್ಯಾನಂದ ಹೆಗ್ಡೆ ಶಿರ್ವ ನಡಿಬೆಟ್ಟು ಅಧ್ಯಕ್ಷತೆ ವಹಿಸಲಿರುವರು. ‘ಭೂತಾರಾಧನೆ-ಕಲಾವಿದೆರ್‘ ವಿಚಾರದಲ್ಲಿ ಉಪನ್ಯಾಸಕರಾಗಿ ಪರಮಾನಂದ ಸಾಲ್ಯಾನ್ ಭಾಗವಹಿಸಲಿದ್ದಾರೆ, ‘ಭೂತಾರಾಧನೆ ಬೊಕ್ಕ ಪ್ರಾತ್ಯಕ್ಷಿಕೆಲು‘ ವಿಚಾರದಲ್ಲಿ ಶಿಮಂತೂರು ಚಂದ್ರಹಾಸ ಸುವರ್ಣ ಉಪನ್ಯಾಸ ನೀಡಲಿದ್ದಾರೆ. ‘ಭೂತಾರಧನೆ ಬೊಕ್ಕ ತುಳು ಸಾಹಿತ್ಯ‘ ವಿಚಾರದಲ್ಲಿ ಡಾ| ಗಣೇಶ್ ಅಮೀನ್ ಸಂಕಮಾರ್ ಉಪನ್ಯಾಸ ನೀಡಲಿದ್ದಾರೆ. ಸಮನ್ವಯಕಾರರಾಗಿ ಪ್ರಾ| ಸೀತಾರಾಮ್ ಆರ್ ಶೆಟ್ಟಿ, ಡಾ ಪದ್ಮನಾಭ ಭಟ್, ಜಿ. ಟಿ ಆಚಾರ್ಯ, ಡಾ| ಎಂ ಪಿ ಶ್ರೀನಾಥ, ಗುತ್ತಿನಾರ್ ರಮೇಶ್ ಶೆಟ್ಟಿ ಬರುಗುತ್ತು ಕಾಪು ಭಾಗವಹಿಸಲಿದ್ದಾರೆ.

ಮದ್ಯಾಹ್ನ ೪.೦೦ ಕ್ಕೆ ‘ನಾಟಕ‘ ‘ಬಂಟ ರಂಗ ತಂಡ‘ ಇವರಿಂದ ರತ್ನಾಕರ್ ಕಾವೂರು ರಚನೆಯ ‘ಭೂತಾಳ ಪಾಂಡ್ಯ‘ ಜಾನಪದ ನಾಟಕ ಜಗದೀಶ್ ಶೆಟ್ಟಿ ಕೆಂಚನೆಕೆರೆ ನಿರ್ದೆಶನದಲ್ಲಿ ಪ್ರದರ್ಶನಗೊಳ್ಳಲಿದೆ.

ಸಂಜೆ ೫.೦೦ ಕ್ಕೆ ‘ಮುಗಿತಲದ ಲೇಸ್‘ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮಾನಾಥ ಎ. ಕೋಟ್ಯಾನ್ ಇವರು ಅಧ್ಯಕ್ಷತೆ ವಹಿಸಲಿರುವರು. ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಸಿ. ಎ. ಶಂಕರ್ ಬಿ ಶೆಟ್ಟಿ ಇವರು ಗೌವರ ಪ್ರಧಾನ ನೆರವೇರಿಸಲಿರುವರು. ಜಾನಪದ ಸಂಶೋಧಕರಾದ ಡಾ| ಗಣೇಶ್ ಅಮೀನ್ ಸಂಕಮಾರ್, ಸಾಯಿಕೇರ್ ಲಾಜಿಸ್‌ಟಿಕ್ಸ್ ಸಿಎಮ್‌ಡಿಯ ಸುರೇಂದ್ರ ಪೂಜಾರಿ, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಬಾಲಕೃಷ್ಣ ಭಂಡಾರಿ, ಹೋಟೇಲ್ ಅಮೃತ ಪಂಜಾಬ್‌ನ ಎಕ್ಕಾರ್ ನಡ್ಯೋಡಿಗುತ್ತು ಶ್ರೀನಿವಾಸ ಮುದ್ದ, ಬಂಟರ ಸಂಘ ಮುಂಬಯಿಯ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ಕಾರ್ಯದ್ಯಕ್ಷರು ಅಶೋಕ್ ಕೊಟ್ಯಾನ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿರುವರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೋಡು ಭೋಜ ಶೆಟ್ಟಿ-ಸಾಹಿತ್ಯ, ಡಾ ಸಂಜೀವ – ಶಿಕ್ಷಣ, ಶ್ರೀ ಎಂ ಎನ್ ಸುವರ್ಣ – ನೃತ್ಯಗುರು, ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ-ಯಕ್ಷಗಾನ, ಜಯಕರ ಡಿ ಪೂಜಾರಿ-ಸಾಹಿತಿ, ಸಂಶೋಧಕೆ, ಎಂ ಟಿ ಪೂಜಾರಿ-ಯಕ್ಷಗಾನ ಸಾಹಿತ್ಯ, ಶ್ರೀಮತಿ ಶೈಲಜಾ ಮಧೂಸೂಧನ್-ಸಂಗೀತನೃತ್ಯ, ಪ್ರೀಯಾ ಸರೋಜದೇವಿ-ರಂಗಭೂಮಿ ಇವರುಗಳಿಗೆ ತಮ್ಮ ಬಲ್ಮನ ನಡೆಯಲಿದೆ.

ಸಿನಿಮಾ ತಾರೆಯರಾದ ಪಾಕೀ ಹೆಗ್ಡೆ, ನಮೃತಾ ಹೆಗ್ಡೆ, ಆಶ್ರಿತಾ ಶೆಟ್ಟಿ, ರಂಜನ್ ರಾಘು ಶೆಟ್ಟಿ, ಹರೀಶ್ ವಾಸು ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಸಚಿನ್ ಸುವರ್ಣ, ವೇಣುಗೋಪಾಲ್ ಶೆಟ್ಟಿ ಇವರುಗಳಿಗೆ ವಿಶೇಷ ಅಭಿನಂದನೆ ನಡೆಯಲಿದೆ.

ಪುಷ್ಕಲ್ ಕುಮಾರ್ ತೋನ್ಸೆ ಇವರಿಂದ ‘ಕುಸಾಲ್ ಕುಸೇಲ್‘ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ೬.೩೦ ಗಂಟೆಗೆ ಪ್ರಪಥಮ ಬಾರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕದ್ರಿ ನವನೀತ್ ಶೆಟ್ಟಿ ಮತ್ತು ಜಗನ್ನಾಥ ಶೆಟ್ಟಿ ಬಾಳ ಇವರ ಪರಿಕಲ್ಪನೆ – ನಿರೂಪಣೆಯಲ್ಲಿ ‘ಆದರ್ಶ ಮಿತ್ರೆರ್ (ಕುಸೇಲ್ದ ಪಂಥ)’ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ಮತ್ತು ರಿಜಿಸ್ಟ್ರಾರ್ ಚಂದ್ರಹಾಸ ರೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮವು ಅಕಾಡೆಮಿಯ ಸದಸ್ಯ ಕರ್ನೂರು ಮೋಹನ್ ರೈಯವರ ಸಂಯೋಜನೆಯಲ್ಲಿ ನಡೆಯಲಿದೆ.

(ಚಂದ್ರಹಾಸ ರೈ. ಬಿ)

ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ