‘Sonada Sese’ Program at Hejamadi on September 2

‘Sonada Sese’ Program at Hejamadi on September 2

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತುಕರಾವಳಿ ಯುವಕ-ಯುವತಿ ವೃಂದ (ರಿ) ಇದರ ಆಶ್ರಯದಲ್ಲಿ ಸಪ್ಟೆಂಬರ್ ೨ ರಂದು ಭಾನುವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೪.೩೦ ರವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪೆಜಮಾಡಿ ಇಲ್ಲಿ ‘ಸೋನದ ಸೇಸೆ’ ಕಾರ್ಯಕ್ರಮ ಜರಗಲಿದೆ. ಬೆಳಿಗ್ಗೆ ೯.೩೦ ಕ್ಕೆ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮಾನಾಥ. ಎ. ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆವಹಿಸಲಿರುವರು. ಪಡೆದ್ರ ಜಿಲ್ಲಾ

ಪಂಚಯತ್ ಸದಸ್ಯರಾದ ಗೀತಾಂಜಲಿ ಸುವರ್ಣ, ಪೆಜಮಾಡಿ ತಾಲೂಕು ಪಂಚಾಯತ್ ಸದಸ್ಯರಾದ ಸಚಿನ್ ನಾಕ್, ಪೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವರದಾ ಪಿ ಸಾಲಿಯಾನ್ ಹಾಗೂ ತುಳು ಸಿರಿ ಚಾವಡಿ ಒಡಿಪು ಇದರ ಅಧ್ಯಕ್ಷರಾದ ಈಶ್ವರ್ ಚಿಟ್ಪಾಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಈ ಕಾರ್ಯಕ್ರಮದಲ್ಲಿ ಸೋನದ ವಿಶೇಷ ಪೊಲಬು ಸೋನದ ಜೋಗಿ, ಸೋನದ ಮದಿಮಾಲ್, ತಡ್ಯಪೂಜೆ, ಅಜ್ಜಿಗಿಡಪುನು ಮುಂತಾದ್ಯ ಪ್ರಾತ್ಯಕ್ಷಿಕೆಗಳಿವೆ ಈ ಪ್ರಾತ್ಯಕ್ಷಿಕೆಗಳ ಬಗ್ಗೆ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರಾದ ಡಾ| ಕಿಶೋರ್ ಕುಮಾರ್ ರೈ ಶೇಣಿ ಮಾತನಾಡಲಿರುವರು. ಒರಿಪು ಪೊಲಬು ಸ್ಪರ್ಧೆಯಲ್ಲಿ ಜೋಕ್ಲೆ, ತುಳುಗಾದೆ ಪನ್ಲೆ, ಪಾಡ್ದನ ತೆರಿಯೊನ್ಲೆ, ಮಾಜೊಂದಿಪ್ಪುನ್ ಉರಲ್, ಬಲೀಂದ್ರನ ಲೆಪ್ಪುನ್ ಎಂಚ?, ಪೊಲಿ ಲೆಪ್ಪುನು ಇಂಚ, ಚೆನ್ನೆ ಗೊಬ್ಬುಲೆ-ಜೋಡು ಪೆರ್ಗ ಪಂಥ ನಡೆಯಲಿದೆ. ಹಾಗೂ ಎದುರುಕತೆ ನಡೆಯಲಿದೆ. ಎದುರುಕತೆಯ ಬಗ್ಗೆ ವಿದ್ಯಾದಾಯಿನಿ ಸುರತ್ಕಲ್ ಇಲ್ಲಿಯ ಮುಖ್ಯ ಗುರುಗಳಾದ ಕೆ ಕೆ ಪೇಜಾವರ ನಡೆಸಿಕೊಡುವರು.

ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮಾನಾಥ ಎ. ಕೋಟ್ಯಾನ್ ಇವರು ಅಧ್ಯಕ್ಷತೆ ವಹಿಸಲಿರುವರು. ಸಿರಿ ತುಳು ಚಾವಡಿ ಒಡಿಪು ಇದರ ಗೌರವಾಧ್ಯಕ್ಷರಾದ ಡಾ ವೈ ಎನ್ ಶೆಟ್ಟಿ ಸಮಾರೋಪ ಭಾಷಣ ವಹಿಸಲಿರುವರು. ವಕೀಲರಾದ ಗಂಗಾಧರ ಎಚ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಇಲ್ಲಿಯ ಯೋಜನಾಧಿಕಾರಿಯಾದ ದಯಾಶೀಲ ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರಾವಳಿ ಯುವಕ-ಯುವತಿ ವೃಂದ ಪೆಜಮಾಡಿಯಲ್ಲಿ ನಡೆಸುತ್ತಿರುವ ‘ಸೋನದ ಸೇಸೆ’ ಈ ಕಾರ್ಯಕ್ರಮದಲ್ಲಿ ಭಾಷಾಭಿಮಾನಿಗಳು, ಕಲಾವಿದರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.