Tulu Chavadi Karyakrama bokka Pustaka Budugade 22 March 2014

Tulu Chavadi Karyakrama bokka Pustaka Budugade 22 March 2014

ತುಳು ಅಕಾಡೆಮಿ: ಮಾರ್ಚ್ ೨೨ರಂದು ‘ಚಾವಡಿ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ’
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಲಾಲ್‌ಬಾಗ್ ಮಂಗಳೂರು ಇಲ್ಲಿನ ಚಾವಡಿಯಲ್ಲಿ ಮಾರ್ಚ್ ತಿಂಗಳ ೨೨ನೇ ತಾರೀಕು ಶನಿವಾರದಂದು ಅಪರಾಹ್ನ ಗಂಟೆ ೪.೦೦ಕ್ಕೆ ಚಾವಡಿ ಕಾರ್ಯಕ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್‍ಯಕ್ರಮವು ನಡೆಯಲಿರುವುದು. ಈ ಸಮಾರಂಭದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ವರದರಾಜ ಚಂದ್ರಗಿರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ‘ಮರೆಪ್ಪೆರಾವಂದಿ ತುಳುವೆರ್ ಮಾಲಿಕೆಯ’ ಅತ್ತಾವರ ಎಲ್ಲಪ್ಪ ಲೇ; ಮಲಾರ್ ಜಯರಾಮ್ ರೈ, ಸೇಡಿಯಾಪು ಕೃಷ್ಣಭಟ್ರ್ ಲೇ; ಡಾ ಯೋಗೀಶ್ ಕೈರೋಡಿ, ಎಮ್ ಲೋಕಯ್ಯ ಶೆಟ್ರ್ ಲೇ; ಉಮೇಶ್ ಕೆ. ಆರ್, ಡಾ ವಿ ಎಸ್ ಆಚಾರ್ಯೆರ್ ಲೇ; ಡಾ ಎಸ್ ಪದ್ಮನಾಭ ಭಟ್, ಕೆದಂಬಾಡಿ ರಾಮಗೌಡೆರ್ ಲೇ; ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಹಾಗೂ ಜೋಕುಲೆ ಸಂಚಿ ಲೇ; ಕುದ್ಕಾಡಿ ವಿಶ್ವನಾಥ ರೈ ಪುಸ್ತಕಗಳು ಬಿಡುಗಡೆಗೊಳ್ಳಲಿದೆ.

ಈ ಕಾರ್‍ಯಕ್ರಮದಲ್ಲಿ ತುಳುವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅಕಾಡೆಮಿ ಅಧ್ಯಕ್ಷರು ಎಮ್ ಜಾನಕಿ ಬ್ರಹ್ಮಾವರ ಹಾಗೂ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಅವರು ವಿನಂತಿಸಿದ್ದಾರೆ.