Tulu geetha gayana kammata 2-11-14

Tulu geetha gayana kammata 2-11-14

ತುಳು ಗೀತಗಾಯನ ಕಮ್ಮಟ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಝೇಂಕಾರ ಗಾನಕಲಾ ಕೇಂದ್ರ (ರಿ), ಮಂಗಳೂರು, ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ ಇವರ ಸಕಾರದೊಂದಿಗೆ “ತುಳು ಗೀತಗಾಯನ ಕಮ್ಮಟ ವನ್ನು ದಿನಾಂಕ ೦೨-೧೧-೨೦೧೪ ರಿಂದ ೦೪-೧೧-೨೦೧೪ ರವರೆಗೆ ಮೂರು ದಿನಗಳಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಭಾಂಗಣ ಮಂಗಳೂರು ಇಲ್ಲ್ಲಿ ಹಮ್ಮಿಕೊಳ್ಳಲಾಗಿದೆ. ಕಮ್ಮಟದ ಉದ್ಘಾಟನಾ ಸಮಾರಂಭವು ದಿನಾಂಕ ೦೨-೧೧-೨೦೧೪, ಆದಿತ್ಯವಾರ ಬೆಳಗ್ಗೆ ೦೯.೩೦ ಕ್ಕೆ ನಡೆಯಲಿದ್ದು, ಎಸ್.ಡಿ.ಎಮ್ ಸಂಸ್ಥೆಯ ಪಿ.ಜಿ.ಸೆಂಟರ್‌ನ ನಿರ್ದೇಶಕರಾದ ಡಾ ಕೆ ದೇವರಾಜ್ ಇವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಎಮ್ ಜಾನಕಿ ಬ್ರಹ್ಮಾವರ ಅವರು ವಹಿಸಲಿದ್ದು, ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಡಾ ಮಾಲತಿ ಆರ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದಿನಾಂಕ ೦೪-೧೧-೨೦೧೪ ರಂದು ಅಪರಾಹ್ನ ೨.೩೦ ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ಚಂದ್ರಹಾಸ ರೈ ಬಿ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದು, ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಉಪನ್ಯಾಸಕರಾದ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕಮ್ಮಟದ ಸಂಪನ್ಮೂಲ ವ್ಯಕಿಗಳಾಗಿ ಶ್ರೀ ಕೆ.ವಿ ರಮಣ್, ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಶ್ರೀಮತಿ ಸುರೇಖಾ ಶಿವಪ್ರಸಾದ್ ಪರ್ಕಳ ಇವರುಗಳು ಭಾಗವಹಿಸಲಿರುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಸುತ್ತಿರುವ ಈ ಕಮ್ಮಟದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಮ್ಮಟವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.