‘TULU KAVITHE,GAYANA,KAMMATA AT SHIRVA 26 TO 28

‘TULU KAVITHE,GAYANA,KAMMATA AT SHIRVA 26 TO 28

ತುಳು ಅಕಾಡೆಮಿ: ಶಿರ್ವದಲ್ಲಿ ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ತುಳು ಕವಿತೆ ಗಾಯನ ಕಮ್ಮಟ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿವತಿಯಿಂದ ಉಡುಪಿ ಜಿಲ್ಲಾ ಮಟ್ಟದ ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ‘ತುಳು ಕವಿತೆ ಗಾಯನ ಕಮ್ಮಟ’ ನಡೆಯಲಿದೆ. ಈ ಕಮ್ಮಟವು ನವೆಂಬರ್ ೨೬, ೨೭ ಹಾಗೂ ೨೮ ರಂದು ೩ ದಿನಗಳ ಕಾಲ ಶಿರ್ವ ಸಂತ ಮೇರೀ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ದಿನಾಂಕ ೨೬-೧೧-೨೦೧೨ ರ ಸೋಮವಾರ ಬೆಳಿಗ್ಗೆ ೯.೩೦ ಗಂಟೆಗೆ ಉದ್ಘಾಟನ ಸಮಾರಂಭ ನಡೆಯಲಿದೆ. ಕಮ್ಮಟವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮಾನಾಥ. ಎ. ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಸಂತ ಮೇರೀ ವಿದಾಸಂಸ್ಥೆಯ ಸಂಚಾಲಕರಾದ ರೆ|ಫಾ| ಸ್ಟ್ಯಾನಿ ತಾವ್ರೋ ಅಧ್ಯಕ್ಷತೆವಹಿಸಲಿರುವರು. ಸಾಹಿತಿ ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು ಅತಿಥಿಗಳಾಗಿ ಭಾಗವಹಿಸಲಿರುವರು. ೩ ದಿನಗಳ ತರಬೇತಿಯಲ್ಲಿ ಖ್ಯಾತ ಕವಿಗಳು ರಚಿಸಿರುವ ತುಳು ಕವಿತೆಗಳನ್ನು ಹಾಡಲು ತರಬೇತಿ ನೀಡಲಾಗುವುದು. ದಿನಾಂಕ ೨೮ ರಂದು ಸಂಜೆ ೩.೩೦ ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮಾನಾಥ. ಎ. ಕೋಟ್ಯಾನ್ ಅಧ್ಯಕ್ಷತೆವಹಿಸಲಿರುವರು. ಸಂತ ಮೇರೀ ಮಹಾವಿದಾಲಯ ಶಿರ್ವ ಇಲ್ಲಿಯ ಪ್ರಾಂಶುಪಾಲರಾದ ಡಾ| ಜೋನ್ ಕ್ಲಾರೆನ್ಸ್ ಮಿರಾಂದ ಹಾಗೂ ಜಾನಪದ ಸಂಶೋಧಕರಾದ ಕೆ. ಎಲ್ ಕುಂಡಂತಾಯ ಎಲ್ಲೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಹಾಗೂ ಕಮ್ಮಟದಲ್ಲಿ ಶ್ರೀಮತಿ ಸಂಗೀತಾ ಬಾಲಚಂದ್ರ ಉಡುಪಿ, ಶ್ರೀಮತಿ ಕಾತ್ಯಾಯಿನಿ ಕುಂಜಿಬೆಟ್ಟು, ಉಡುಪಿ, ಶ್ರೀಮತಿ ಗಾಯತ್ರಿ ಎಸ್ ಉಡುಪ ಕಿನ್ನಿಗೋಳಿ, ಶ್ರೀ ಶಂಕರದಾಸ್ ಬೆಂಡ್‌ಕಲ, ಶ್ರೀ ತೋನ್ಸೆ ಪುಷ್ಕಳ್ ಕುಮಾರ್, ಶ್ರೀ ಜಗದೀಶ್ ಶಿವಪುರ ಹಾಗೂ ರತ್ನಾವತಿ ಜೆ. ಬೈಕಾಡಿ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿವತಿಯಿಂದ ನಡೆಯುವ ಕಮ್ಮಟದಲ್ಲಿ ಪದವಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಚಂದ್ರಹಾಸ ರೈ. ಬಿ ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ