1998-2001

ಶ್ರೀ ಬಾಲಕೃಷ್ಣ ಶೆಟ್ಟಿ ಪೊಳಲಿ (ಅಧ್ಯಕ್ಷರು)

ಡಾ. ವಾಮನ ನಂದಾವರ (ಸದಸ್ಯರು)

ಶ್ರೀಮತಿ ಎಮ್ ಜಾನಕಿ ಬ್ರಹ್ಮಾವರ (ಸದಸ್ಯರು)

ಶ್ರೀಮತಿ ಕ್ಯಾಥರಿನ್ ರೊಡ್ರಿಗಸ್ (ಸದಸ್ಯರು)

ಶ್ರೀ ಅಭಯ ಕುಮಾರ್ (ಸದಸ್ಯರು)

ಶ್ರೀ ಡಿ. ಕೆ. ಚೌಟ (ಸದಸ್ಯರು)

ಶ್ರೀ ಕೆ. ಪಿ. ಪುತ್ತೂರಾಯ (ಸದಸ್ಯರು)

ಶ್ರೀ ಕೆ. ಟಿ. ಗಟ್ಟಿ (ಸದಸ್ಯರು)

ಶ್ರೀ ಎಂ ಎಸ್ ಇಬ್ರಾಹಿಂ (ಸದಸ್ಯರು)

ಶ್ರೀ ಮುನಿರಾಜ ರೆಂಜಾಳ (ಸದಸ್ಯರು)

ಶ್ರೀ ವಿಠಲ ಕಬಕ (ಸದಸ್ಯರು)

ಶ್ರೀ ಯಶವಂತ ಬೋಳೂರು (ಸದಸ್ಯರು)

ಶ್ರೀ ದಾಮೋಧರ ನಿಸರ್ಗ (ಸದಸ್ಯರು)

ಶ್ರೀಮತಿ ಸುನಿತಾ ಶೆಟ್ಟಿ (ಸದಸ್ಯರು)

 

 

ಬಾಲಕೃಷ್ಣ ಶೆಟ್ಟಿ ಪೊಳಲಿ

೧೯೪೧ ಜೂನ್ ೨೮ ರಲ್ಲಿ ಜನಿಸಿದರು. ಎಲ್. ಎಲ್. ಬಿ ಪದವಿಧರರು, ಇವರು ಸಿ.ಎ.ಐ.ಐ.ಬಿ ಬ್ಯಾಂಕಿಂಗ್ ಡಿಪ್ಲೋಮಾ ಭಾರತದಲ್ಲಿ ೪ನೇ ರ್ಯಾಂಕ್ ಪಡೆದವರು, ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕನ್ನಡದಲ್ಲಿ ಎಮ್. ಎ. ಪದವಿಯಲ್ಲಿ ೭ನೇ ರ್ಯಾಂಕ್ಗಳಿಸಿದ್ದಾರೆ. ಇವರಿಗೆ ಸಾಹಿತ್ಯದಲ್ಲಿ ಪ್ರೋತ್ಸಾಹ ನೀಡಿದವರು ದಿ. ಪೊಳಲಿ ಎನ್. ಎ. ಶೀನಪ್ಪ ಹೆಗ್ಡೆ ಹಾಗೂ ತುಳು ಮಹಾಕವಿ ಮಂದಾರ ಕೇಶವ ಭಟ್ರ್ .

೧೯೬೭ನೇ ಇಸವಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಸಾಂಗ್ಲಿ ಶಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ನಂತರ ಬ್ರಾಂಚ್ ಮೆನೇಜರ್, ಕೃಷಿ ಯೋಜನಾಧಿಕಾರಿ, ಸಿಬ್ಬಂದಿ ತರಬೇತಿ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಮಾರ್ಗದರ್ಶಿ ಬ್ಯಾಂಕ್ ಪ್ರಬಂದಕರಾಗಿ ಹೀಗೆ ೩೧ ವರ್ಷ ದುಡಿದರು.

ಇವರ ಕೃತಿಗಳು: ಪೆಂಗದೂಮನ ಕಬಿತೆ, ಶೀನಪ್ಪ ಹೆಗ್ಗಡೆಯವರ ಜೀವನ ಪರಿಚಯ, ಪೊಳಲಿ ನುಡಿಮಾಲೆ, ತುಳು ಕೋಡೆ-ಇನಿ-ಎಲ್ಲೆ ಇತ್ಯಾದಿ.

ಪುಸ್ತಕಗಳು: ಸೇಡಿಯಾಪು ಕೃಷ್ಣ ಭಟ್ರ ತಥ್ಯ ದರ್ಶನ, ಬೇಟೆಯ ನೆನಪುಗಳು, ನವನೀತ ಇತ್ಯಾದಿ. ಅಲ್ಲದೆ ಇವರು ‘ಫೊಕ್ ಟೆಲ್ಸ್ ಆಫ್ ತುಳುನಾಡ್’ ಎಂಬ ಕೋಟಿ ಚೆನ್ನಯ ಇದನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ. ಇದು ಸಾಗುಣ ಡೈಜೆಸ್ಟ್ ಎಂಬ ಇಂಗ್ಲೀಷ್ ಪತ್ರಿಕೆಯಲ್ಲಿ ಒಂದು ಧಾರವಾಹಿಯಾಗಿ ಪ್ರಕಟ ಆಗಿದೆ.

ಡಾ. ವಾಮನ ನಂದಾವರ

೧೯೯೪ ಡಿಸೆಂಬರ್ ೧೧ರಂದು ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಜನಿಸಿದರು. ಇವರು ಎಂ.ಎ.ಪಿ.ಎಚ್.ಡಿ. ಪದವೀಧರರು. ಧಾರವಾಡ, ಅಣ್ಣಾಮಲೈ, ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಇವರಿಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ.

೧೯೭೩ರಲ್ಲಿ ಅಧ್ಯಾಪನ ಹುದ್ದೆಗೆ ಸೇರಿ, ಸತತ ೩೪ ವರ್ಷಗಳ ಸೇವೆ ಸಲ್ಲಿಸಿದರು. ಸಹಾಯಕ ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಪಿಲಿಕುಲ ನಿಸರ್ಗಧಾಮ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೫ ರಿಂದ ೫ ವರ್ಷಗಳ ಕಾಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿ, ೨೦೦೧ರಲ್ಲಿ ತುಳು ಅಕಾಡೆಮಿಯ ೪ನೇ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಅಕಾಡೆಮಿಯಲ್ಲಿ ಅನೇಕ ಕೆಲಸ ಕಾರ್ಯಗಳನ್ನು ನಡೆಸಿದರು. ಇವರು ಒರ್ವ ಕವಿ, ಸಾಹಿತಿ, ಜಾನಪದ ವಿದ್ವಾಂಸ, ಚಿಂತಕರು, ಸಂಘಟಕರು ಆಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಹೇಮಾಂಶು ಪ್ರಕಾಶನ ಎನ್ನುವ ಪ್ರಕಾಶನ ಎನ್ನುವ ಪ್ರಕಾಶನವನ್ನು ಹೊಂದಿದ್ದು, ಅನೇಕ ತುಳು- ಕನ್ನಡ ಬರಹಗಾರರಿಗೆ ಪ್ರೊತ್ಸಾಹ ನೀಡಿ, ಪುಸ್ತಕಗಳನ್ನು ತಮ್ಮ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಅಲ್ಲದೆ ತುಳು ನಿಘಂಟು ಯೋಜನೆಯಡಿ ಸಹಾಯಕ ವಿದ್ವಾಂಸರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಮ್ಮಟಗಳಲ್ಲಿ, ವಿಚಾರಸಂಕಿರಗಳಲ್ಲಿ ಭಾಗವಹಿಸಿ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಇವರ ಕೃತಿಗಳು : ತುಳುವೆರೆ ಕುಸಾಲ್ ಕುಸಲ್, ಕೋಟಿ ಚೆನ್ನಯೆರ್, ಸಿಂಗದನ, ತುಳುಟು ಪನಿಕತೆ, ಬೀರ, ಕಲಾವಿದರೆ ಕೈಪಿಡಿ, ಒಂಜಿ ಕೋಪೆ ಕತೆಕುಲು, ತುಳುನಾಡ ಜನಾಂಗೊಲೆ ಅಧ್ಯಯನ, ಜೋಕುಲೆ ಸಂಚಿ (ಸಂ.) … ಇತ್ಯಾದಿ.

ಪುಸ್ತಕಗಳು : ತಾಳಮೇಳ, ಓಲೆಪಟಾಕಿ, ಸಿಂಗದನ, ಪಟ್ಟಾಂಗ, ಸರ್ ಜೇಮ್ಸ್ ಫ್ರೇಜರ್, ಕಿಡಿಗೇಡಿಯ ಕೀಟಲೆ, ಕೋಟಿ ಚೆನ್ನಯ, ಕೋಟಿಚೆನ್ನಯ ಜಾನಪದೀಯ ಅಧ್ಯಯನ, ಜನಪದ ಸಂಸ್ಕೃತಿ ರೂಪಿಸುವ ಬದಕು-ಕೆಲವು ಚಿಂತನೆಗಳು, ಎಂಕು ಪಣಂಬೂರಿಗೆ ಹೋದ ಹಾಗೆ, ಕೆ.ಬಿ.ಭಂಡಾರಿ… ಇತ್ಯಾದಿ. ಇದರೊಂದಿಗೆ ಅನೇಕ ಸಂಪಾದಿತ ಕೃತಿಗಳನ್ನೂ ಹೊರತಂದಿದ್ದಾರೆ.

ಇವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಅನೇಕ ಸಂಘಟನೆಗಳಿಂದ ಪ್ರಶಸ್ತಿ, ಫೆಲೋಶಿಪ್, ಸನ್ಮಾನಗಳನ್ನೂ ಪಡೆದಿದ್ದು, ೨೦೦೬ರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಎಮ್ ಜಾನಕಿ ಬ್ರಹ್ಮಾವರ

೧೯೫೦ ಜೂನ್ ೨೦ ರಲ್ಲಿ ಉಡುಪಿ ಜಿಲ್ಲೆಯ ಮೂಡುಕುದುರಿಗ್ರಾಮದಲ್ಲಿ ಜನಿಸಿದರು. ಬಿ. ಎಡ್ ಪದವೀಧರರಾದ ಇವರು ಬ್ರಹ್ಮಾವರದ ‘ಸೈಂಟ್ ಮೇರಿ ಸಿರಿಯನ್ ಪದವಿಪೂರ್ವ ಕಾಲೇಜಿನಲ್ಲಿ ಸಹಶಿಕ್ಷಕಿ ಯಾಗಿ ೩೫ ವರ್ಷ ಸೇವೆಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ.

ಕೃತಿಗಳು : ಕನ್ನಡ ಕೃತಿಗಳು- ಕಂಬಳ, ತಿರುಗಾಟದ ತಿರುಳು, ಯುಗಾಂತರದಲ್ಲಿ, ವೀರ ನೇತಾರ, ಅಮಳ ಬೈದ್ಯರು ತುಳು ಕೃತಿಗಳು : ಕುದುರುದ ಕೇದಗ, ಯುಗ ಮಗ್ರ್ನಗ, ರುಕ್ಕು, ತಿರ್ಗಾಟದ ತಿರ್ಲ್ ಇತ್ಯಾದಿ. ಭಾಷಾಂತರ ಕೃತಿಗಳು- ‘ರಕ್ತಾಕ್ಷಿ’ ಮೂಲ ಕನ್ನಡ ರಕ್ತಾಕ್ಷಿ ಕುವೆಂಪು.

ಪ್ರಶಸ್ತಿಗಳು : ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ತುಳುನಾಡ ತುಳು ಶ್ರೀ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರಗಳು ಮುಂತಾದವುಗಳು.

ಕ್ಯಾಥರಿನ್ ರೊಡ್ರಿಗಸ್

೧೯೫೪ ನವೆಂಬರ್ ೨೫ ರಂದು ಜನಿಸಿದ ಇವರು ಎಂ. ಎ ಪದವೀದರರು. ಕೊಂಕಣಿ, ತುಳು, ಕನ್ನಡ ಭಾಷೆಗಳಲ್ಲಿ ಸಾಹಿತ್ಯದ ಹೆಚ್ಚಿನ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕೃತಿಗಳು: ಬಂಗಾರದ ದೊಡ್ಡಿ, ಬನ್ನಾಲ್, ಬೀರೆರ್, ಪಾಪೆ, ಅರಿತಿಂದೆ ಮುಂತಾದವುಗಳು.

ಅನುವಾದ : ನಾಣಜ್ಜೆರ್ ಸುದೆ ತಿರ್ಗಾಯೆರ್ ತುಳುವಿನಿಂದ ಕೊಂಕಣಿಗೆ

ಪ್ರಕಟಿತ ಪುಸ್ತಕಗಳು : ಕೇದಗ, ಬನ್ನಾಲ್ ಮುಂತಾದವುಗಳು.

ಪ್ರಶಸ್ತಿಗಳು: ಧರ್ಮಸ್ಥಳ ದಿ ರತ್ನಮರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಪ್ರಶಸ್ತಿ, ದಿ ಕಲ್ಪನಾ ಸ್ಮಾರಕ ನಾಟಕ ಪ್ರಶಸ್ತಿ, ಸಂದೇಶ ವಿಶೇಷ ಪ್ರಶಸ್ತಿ ಮುಂತಾದವು.

ಕೊಂಕಣಿ ಕತೆಗಳು: ಚರುವೊ, ಯೇಕ್ ಫೊಡ್ ದುಕಾ ಮಾಸ್ ಇತ್ಯಾದಿ.

ಸನ್ಮಾನ: ತುಳು ಕೂಟ ಮಂಗಳೂರು, ತುಳು ಕೂಟ ಉಡುಪಿ, ತುಳು ಕೂಟ ಬೆಂಗಳೂರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.