2001-2004

ಡಾ. ವಾಮನ ನಂದಾವರ (ಅಧ್ಯಕ್ಷರು)

ಶ್ರೀ ಪಾಲ್ತಾಡಿ ರಾಮಕೃಷ್ಣ ಆಚಾರ್ (ಸದಸ್ಯರು)

ಶ್ರೀ ಮುದ್ದು ಮೂಡುಬೆಳ್ಳೆ (ಸದಸ್ಯರು)

ಶ್ರೀ ಸದಾನಂದ ಸುವರ್ಣ (ಸದಸ್ಯರು)

ಶ್ರೀ ವಿ. ಜಿ. ಪಾಲ್ (ಗೋಪಾಲ್ ಟಿ. ಕೋಟ್ಯಾನ್) (ಸದಸ್ಯರು)

ಶ್ರೀ ಬೆಳ್ಳಿಪ್ಪಾಡಿ ಸತೀಶ್ ರೈ (ಸದಸ್ಯರು)

ಶ್ರೀಮತಿ ಗಾಯತ್ರಿ ನಾವಡ (ಸದಸ್ಯರು)

ಶ್ರೀ ಕೆ. ಚಿನ್ನಪ್ಪ ಗೌಡ (ಸದಸ್ಯರು)

ಶ್ರೀ ಕೊಯಿರಾ ಎಸ್ ಬಾಳೆಪುಣಿ (ಸದಸ್ಯರು)

ಶ್ರೀ ಎಂ ಆನಂದ ಶೆಟ್ಟಿ (ಸದಸ್ಯರು)

ಶ್ರೀ ಮನೋಹರ ಪ್ರಸಾದ್ (ಸದಸ್ಯರು)

ಶ್ರೀ ನಾಗರಾಜ ಪೂವಣಿ (ಸದಸ್ಯರು)

ಶ್ರೀಮತಿ ಸುಶೀಲಾ ಪಿ ಉಪಾಧ್ಯಾಯ (ಸದಸ್ಯರು)

ಶ್ರೀಮತಿ ವೈಜಯಂತಿ ಕೇಶವ ಕಂಗೆನ್ (ಸದಸ್ಯರು)

ಡಾ. ವಾಮನ ನಂದಾವರ

೧೯೯೪ ಡಿಸೆಂಬರ್ ೧೧ರಂದು ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಜನಿಸಿದರು. ಇವರು ಎಂ.ಎ.ಪಿ.ಎಚ್.ಡಿ. ಪದವೀಧರರು. ಧಾರವಾಡ, ಅಣ್ಣಾಮಲೈ, ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಇವರಿಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ.

೧೯೭೩ರಲ್ಲಿ ಅಧ್ಯಾಪನ ಹುದ್ದೆಗೆ ಸೇರಿ, ಸತತ ೩೪ ವರ್ಷಗಳ ಸೇವೆ ಸಲ್ಲಿಸಿದರು. ಸಹಾಯಕ ಅಧ್ಯಾಪಕರಾಗಿ, ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಪಿಲಿಕುಲ ನಿಸರ್ಗಧಾಮ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೫ ರಿಂದ ೫ ವರ್ಷಗಳ ಕಾಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿ, ೨೦೦೧ರಲ್ಲಿ ತುಳು ಅಕಾಡೆಮಿಯ ೪ನೇ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಅಕಾಡೆಮಿಯಲ್ಲಿ ಅನೇಕ ಕೆಲಸ ಕಾರ್ಯಗಳನ್ನು ನಡೆಸಿದರು. ಇವರು ಒರ್ವ ಕವಿ, ಸಾಹಿತಿ, ಜಾನಪದ ವಿದ್ವಾಂಸ, ಚಿಂತಕರು, ಸಂಘಟಕರು ಆಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಹೇಮಾಂಶು ಪ್ರಕಾಶನ ಎನ್ನುವ ಪ್ರಕಾಶನ ಎನ್ನುವ ಪ್ರಕಾಶನವನ್ನು ಹೊಂದಿದ್ದು, ಅನೇಕ ತುಳು- ಕನ್ನಡ ಬರಹಗಾರರಿಗೆ ಪ್ರೊತ್ಸಾಹ ನೀಡಿ, ಪುಸ್ತಕಗಳನ್ನು ತಮ್ಮ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಅಲ್ಲದೆ ತುಳು ನಿಘಂಟು ಯೋಜನೆಯಡಿ ಸಹಾಯಕ ವಿದ್ವಾಂಸರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಮ್ಮಟಗಳಲ್ಲಿ, ವಿಚಾರಸಂಕಿರಗಳಲ್ಲಿ ಭಾಗವಹಿಸಿ ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಇವರ ಕೃತಿಗಳು : ತುಳುವೆರೆ ಕುಸಾಲ್ ಕುಸಲ್, ಕೋಟಿ ಚೆನ್ನಯೆರ್, ಸಿಂಗದನ, ತುಳುಟು ಪನಿಕತೆ, ಬೀರ, ಕಲಾವಿದರೆ ಕೈಪಿಡಿ, ಒಂಜಿ ಕೋಪೆ ಕತೆಕುಲು, ತುಳುನಾಡ ಜನಾಂಗೊಲೆ ಅಧ್ಯಯನ, ಜೋಕುಲೆ ಸಂಚಿ (ಸಂ.) … ಇತ್ಯಾದಿ.

ಪುಸ್ತಕಗಳು : ತಾಳಮೇಳ, ಓಲೆಪಟಾಕಿ, ಸಿಂಗದನ, ಪಟ್ಟಾಂಗ, ಸರ್ ಜೇಮ್ಸ್ ಫ್ರೇಜರ್, ಕಿಡಿಗೇಡಿಯ ಕೀಟಲೆ, ಕೋಟಿ ಚೆನ್ನಯ, ಕೋಟಿಚೆನ್ನಯ ಜಾನಪದೀಯ ಅಧ್ಯಯನ, ಜನಪದ ಸಂಸ್ಕೃತಿ ರೂಪಿಸುವ ಬದಕು-ಕೆಲವು ಚಿಂತನೆಗಳು, ಎಂಕು ಪಣಂಬೂರಿಗೆ ಹೋದ ಹಾಗೆ, ಕೆ.ಬಿ.ಭಂಡಾರಿ… ಇತ್ಯಾದಿ. ಇದರೊಂದಿಗೆ ಅನೇಕ ಸಂಪಾದಿತ ಕೃತಿಗಳನ್ನೂ ಹೊರತಂದಿದ್ದಾರೆ.

ಇವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಅನೇಕ ಸಂಘಟನೆಗಳಿಂದ ಪ್ರಶಸ್ತಿ, ಫೆಲೋಶಿಪ್, ಸನ್ಮಾನಗಳನ್ನೂ ಪಡೆದಿದ್ದು, ೨೦೦೬ರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಪಾಲ್ತಾಡಿ ರಾಮಕೃಷ್ಣ ಆಚಾರ್

೧೯೪೫ ಸಪ್ಟೆಂಬರ್ ೯ ರಂದು ಜನಿಸಿದರು. ಪ್ರಾಥವಿಕ ಹಾಗೂ ಪ್ರೌಡ ಶಿಕ್ಷಣವನ್ನು ಪುತ್ತೂರಿನಲ್ಲಿ ಪಡೆದ ಇವರು ಕನ್ನಡಲ್ಲಿ ಎಂ.ಎ, ಬಿ. ಇಡಿ, ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ೧೯೬೩ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಮುಂದೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಬಡ್ತಿ ಹೊಂದಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು.

ತುಳುವಿನಲ್ಲಿ ಕೃತಿಗಳು: ಪಚ್ಚೆ ಕುರಲ್, ದುನಿಪು, ಭೂತಾಳ ಪಾಂಡ್ಯ, ಡಾ. ಶಿವರಾಮ ಕಾರಂತೆರ್, ತುಳು ಸಂಸ್ಕೃತಿದ ಪೊಲಬು, ತುಳು ನಾಡ್ಡ ನಾಗಬೆರ್ಮೆರ್ ಮುಂತಾದವು.

ತುಳು ಸಂಸ್ಕೃತಿಯ ಬಗ್ಗೆ ಗ್ರಂಥಗಳು: ತುಳುವರ ಜನಪದ ಕಥೆಗಳು, ಜಾನಪದ ಸ್ಪಂದನ, ಜಾನಪದ ಕುಣಿತ, ಕಲ್ಕುಡ ಕಲ್ಲುರ್ಟಿ ಇತ್ಯಾದಿ

ಇತರ ಕೃತಿಗಳು: ಬಂಗ್ಲಾ ವಿಜಯ (ಯಕ್ಷಗಾನ), ಕಿರಣ, ಅಂತರ್ಭೂತ, ನಮ್ಮ ಸರಕಾರ, ಕಾವ್ಯ ರಶ್ಮಿ ಇತ್ಯಾದಿ.

ದ್ವನಿಸುರುಳಿಗಳಿಗೆ ಸಾಹಿತ್ಯ: ತುಳುವ ಸಿರಿ, ತುಳುವ ಮಲ್ಲಿಗೆ, ಅರ್ತಿದ ಪೂ, ಮುಂತಾದವು.

ಪ್ರಶಸ್ತಿಗಳು: ತುಳು ಡೈಯಾಲೆಕ್ಟ್ಸ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಿಮಿಯಿಂದ ೧೯೯೫ರ ಸಾಲಿನ ಪುಸ್ತಕ ಪ್ರಶಸ್ತಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ೨೦೦೫, ಮುಂಬಯಿಯಲ್ಲಿ ನಡೆದ ೧೦ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ೨೦೦೧, ಕರ್ನಾಟಕ ಸರಕಾರದಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ೧೯೯೩ ಇತ್ಯಾದಿ.

ತುಳು ಭಾಷಾಧ್ಯಯನ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ೧೯೯೫ರಲ್ಲಿ ತುಳುಕೂಟ ಉಡುಪಿ ಇದರ ದಶಮಾನೋತ್ಸವ ಗೌರವಸಂಮಾನ.
ಇವರು ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಮುದ್ದು ಮೂಡುಬೆಳ್ಳೆ

೧೯೫೫ ರಲ್ಲಿ ಉಡುಪಿ ಜಿಲ್ಲೆಯ ಬೆಳ್ಳೆ ಕಟ್ಟಿಂಗೇರಿ ಗ್ರಾಮದಲ್ಲಿ ಜನಿಸಿದರು, ಎಂ. ಎ ಪದವೀದರರಾದ ಇವರು ಸಾಹಿತ್ಯ ಕೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ‘ಮುಮುಕ್ಷು’ , ಆರಾಧಕ ಇತ್ಯಾದಿ ಕಾವ್ಯ ನಾಮಗಳಿಂದ ಚಿರಪರಿಚಿತರಾಗಿರುವ, ಇವರು ಕಥೆಗಾರ, ಕವಿ, ಜಾನಪದ ಅಧ್ಯನಕಾರ, ಗಾಯಕ, ನಟ, ನಾಟಕಕಾರಾಗಿ ಕಲೆಗಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕೃತಿಗಳು : ಗೂಢ ಮತ್ತು ಇತರ ಕಥೆಗಳು, ಉದಿಪು, ಒಸಯೊ, ಪೂವರಿ, ತುಳು ರಂಗಭುಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕನ್ನಡ ಪತ್ರಿಕೆ ‘ತುಳುದರ್ಶನ’ ದ ಮಾಜಿ ಸಂಪಾದಕ ‘ಸಿಂಚನ’ ಮತ್ತಿತರ ಪತ್ರಿಕೆಗಳ ಅಂಕಣಗಾರ.

ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಗೋರೂರು ಸಾಹಿತ್ಯ ಪುರಸ್ಕಾರ, ತುಳು ಆಯನೋ ಪ್ರಶಸ್ತಿ ಮೊದಲಾದವು. ಪ್ರಸ್ತುತ ಮಂಗಳೂರು ಅಕಾಶವಾಣಿ ಹಿತಿಯ ಶ್ರೇಣಿ ಉದ್ಘೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸದಾನಂದ ಸುವರ್ಣ

೧೯೩೧ ಡಿಸೆಂಬರ್ ೨೪ ರಲ್ಲಿ ದ.ಕ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದು ಪ್ರೌಢಶಿಕ್ಷಣ ವನ್ನು ಮುಂಬಯಿಯಲ್ಲಿ ಪಡೆದರು ಮುಂಬಯಿಯ ಪ್ರತಿಷ್ಠಿತ ನಾಟ್ಯ ಅಕಾಡೆಮಿಯ ಪದವೀದರರು. ಪುಣೆಯ ಫಿಲ್ಮ ಮತ್ತು ಟೆಲಿವಿಜನ್ ಸಂಸ್ಥಯಿಂದ ಚಲನ ಚಿತ್ರ ರಸ ಗ್ರಹಣ ಶಿಬಿರದ ಡಿಪ್ಲೊಮಾ ಪಡೆದರು. ಮುಂಬಯಿಯ ರಾತ್ರಿ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ.

ನಾಟಕಗಳು : ಅಭಾಗಿನಿ, ವಿಷಮ ಘಳಿಗೆ, ಕುಲ ಗೌರವ, ಕದ್ದವನೆ ಕಳ್ಳ ಮುಂರಾದವುಗಳು.

ಕಾದಂಬರಿ : ರಚಿಸಿದ ಏಕ ಮಾತ್ರ ಕಾದಂಬರಿ ‘ಮನೆ ಬೆಳಕು’ ಧಾರವಾಹಿಯಾಗಿ ಮುಂಬಯಿ ಮೊಗವೀರ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕಾದಂಬರಿ: ಏಕ ಮಾತ್ರ ಕಾದಂಬರಿ ಮನೆ ಬೆಳಕು ಧಾರವಾಹಿಯಾಗಿ ಮುಂಬಯಿಯ ಮೊಗವೀರ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶಸ್ತಿಗಳು : ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಬಿಲ್ಲವರ ಅಸೋಸಿಯೇಶನ್, ಮುಂಬಯಿ ಕೊಡಮಾಡಿದ ಶ್ರೀ ನಾರಾಯಣ ಗುರು ಸಾಹಿತ್ಯ ಪ್ರಶಸ್ತಿ ಇತ್ಯಾದಿ.

ವಿ. ಜಿ. ಪಾಲ್ (ಗೋಪಾಲ್ ಟಿ. ಕೋಟ್ಯಾನ್)

೧೯೪೨ ಅಕ್ಟೋಬರ್ ೨೭ ರಂದು ಮಂಗಳೂರಿನಲ್ಲಿ ಜನಿಸಿದರು. ವೆಸ್ಟರ್ನ ವರ್ಕ್ಸ್ ಇಂಜಿನಿಯರಿಂಗ್ ಮುಂಬೈಯಲ್ಲಿ ಹಿರಿಯ ತಾಂತ್ರಿಕ ಸಹಾಯಕರಾಗಿ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ.

೧೯೬೦ ರಲ್ಲಿ ನಡೆದ ಕಲ್ಜಿಗದ ಕುರುಕ್ಷೇತ್ರ’ ತುಳುನಾಟಕದ ಮೂಲಕ ರಂಗ ಪ್ರವೇಶ ಮಾಡಿದರು, ಕನ್ನಡ, ತುಳು, ಸುಮಾರು ೧೫೦೦ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದರು, ಬಯ್ಯ ಮಲ್ಲಿಗೆ, ಭಾಗ್ಯವಂತೆದಿ, ಸತ್ಯ ಓಲುಂಡು…….?, ಬಂಗಾರದ ಪಟ್ಲೇರ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಅಭಿನಯಿಸಿದ ವಿಡಿಯೋ ಚಿತ್ರ: ಪೂ-ಪನ್ನೀರ್, ಧ್ವನಿ ಸುರುಳಿ ಕಂಠದಾನ ಸುಮಾರು ೫೦.

ಪ್ರಶಸ್ತಿ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಾಂತೀಯ ಲಯನ್ಸ್ ಕಲಾ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳು ಮತ್ತು ರಂಗ ಸಮಾಜ (ರಿ) ಬೆಂಗಳೂರು ‘ಸಮಾಜ ರತ್ನ’ ಪ್ರಶಸ್ತಿ ಮಂಗಳೂರು.

ಸನ್ಮಾನ: ಸುಮಾರು ೬೦ ಕ್ಕೂ ಮಿಕ್ಕಿ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಗಳಿಂದ ಗೌರವ ಸನ್ಮಾನ.