ಅಕಾಡೆಮಿ ಬಗ್ಗೆ

ದ್ರಾವಿಡ ಪರಿವಾರಕ್ಕೆ ಸೇರಿದ ಒಂದು ಫ್ರೌಢ ಹಾಗೂ ಪ್ರಮುಖ ಭಾಷೆಯಾದ ತುಳುವಿನ ಉಳಿವು ಮತ್ತು ಬೆಳವಣಿಗೆಗಾಗಿ ಹಿಂದೆಂದೂ ತುಳುನಾಡಿನ ಜನರು ಒಗ್ಗಟ್ಟಾಗಿ ಹೋರಾಟ ನಡೆಸಿರಲಿಲ್ಲ. ಬಹು ಭಾಷೆ ಮತ್ತು ಸಂಸ್ಕೃತಿಗಳ ನೆಲೆ ಬೀಡಾದ ತುಳುನಾಡಿನಲ್ಲಿ ಆಡಳಿತ ವ್ಯವಸ್ಥೆಯ ಪ್ರೋತ್ಸಾಹದ ಕೊರತೆಯಿಂದಾಗಿ ಮತ್ತು ಜನರ ಇಂಗ್ಲೀಷ್ ವ್ಯಾಮೋಹದಿಂದಾಗಿ ತುಳು ಭಾಷೆ ನಶಿಸಿ ಹೋಗುವ ಸಂಬಂದ ಹೆಚ್ಚಾಯಿತು ಈ ಸಂದರ್ಭದಲ್ಲಿ ತುಳು ಭಾಷೆಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಸಂಘಟನೆ ನಡೆಸಿದವರು ಮಂಗಳೂರಿನ ಪ್ರಸಿದ್ದ ವಕೀಲರಾದ ಶ್ರೀ ದಿವಂಗತ ಎಸ್. ಅರ್ ಹೆಗ್ಡೆಯವರು ಇವರು 4-1-1970 ರಲ್ಲಿ ಮಂಗಳೂರು ತುಳುಕೂಟವನ್ನು ಸ್ಥಾಪಿಸಿದರು. ತುಳುಕೂಟದ ವತಿಯಿಂದ 1994 ರಲ್ಲಿ ಮೂಲ್ಕಿಯಲ್ಲಿ ಪ್ರೂ. ಅಮೃತ ಸೋಮೇಶ್ವರವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ವಿಶ್ವ ತುಳು ಸಮ್ಮೇಳನ ನಡೆಯಿತು.

ವಿಶ್ವ ತುಳು ಸಮ್ಮೇಳನದಲ್ಲಿ ಸರ್ಕಾರದ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸುವಂತೆ ಸರ್ಕಾರವನ್ನು ಕೇಳುವ ನಿರ್ಣಯ ಕೈಗೊಳ್ಳಲಾಯಿತು. ತುಳುವರು ತುಳುಕೂಟ ಮತ್ತಿತರ ಸಂಘ ಸಂಸ್ಥೆಗಳ ನಿರಂತರ ಹೋರಾಟದ ಫಲವಾಗಿ 1994 ರಲ್ಲಿ ಶ್ರೀ ಎಂ. ವೀರಪ್ಪ ಮೊಯ್ಲ್ಲಿಯವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿತು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಬಿ .ಎ. ವಿವೇಕ ರೈಯವರು ಮೊದಲ ಅಧ್ಯಕ್ಷರಾದರು. ಅಕಾಡೆಮಿಯ ಎರಡನೇ ಸಮಿತಿಗೂ (1995-1998) ಡಾ. ಬಿ.ಎ ವಿವೇಕ ರೃಯವರು ಅಧ್ಯಕ್ಷರಾದರು. ಮೂರನೇ ಸಮಿತಿಯಲ್ಲಿ (1998-2001) ಅ.ಬಾಲಕೃಷ್ಣ ಶೆಟ್ಟಿ ಪೊಳಲಿ, ನಾಲ್ಕನೇ ಸಮಿತಿಯಲ್ಲಿ (2001-2004) ಡಾ. ವಾಮನ ನಂದಾವರ, ಐದನೇ ಸಮಿತಿಯಲ್ಲಿ (2005-2008) ಶ್ರೀ ಯಮ್. ಕೆ. ಸೀತರಾಮ್ ಕುಲಾಲ್, ಆರನೇ ಸಮಿತಿಯಲ್ಲಿ (2008 -2011) ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರುಗಳು ಅಕಾಡೆಮಿಯ ಕಾರ್ಯ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ನಡೆಸಿ ಅಕಾಡೆಮಿಯ ಹೆಸರನ್ನು ಉತ್ತುಂಗಕ್ಕೆ ಏರಿಸಿದರು ಬಳಿಕ ಅಕಾಡಮಿಯ ಏಳನೇ ಸಮಿತಿಯಲ್ಲಿ (2011 ರಿಂದ) ಶ್ರೀ ಉಮಾನಾಥ ಕೋಟ್ಯಾನ್ ಅವರು ಅಕಾಡಮಿಯ ಕಾರ್ಯ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿಸಿನೆಸ್ ಮ್ಯಾನೆಜ್ಮೆಂಟ್ ಕಾಲೇಜಿನ ಉಪನ್ಯಾಸಕರಾಗಿದ್ದ ಡಾ. ಕೆ ದೇವರಾಜರವರು ಮೊದಲ ರಿಜಿಸ್ಟ್ರಾರ್ರಾಗಿ ನೇಮಕಗೊಂಡರು ಆದರೆ ರಿಜಿಸ್ಟ್ರಾರ್ ಹುದ್ದೆಯು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಮೀಸಲಾಗಿ ಇಡಲ್ಪಟ್ಟ ಹುದ್ದೆಯಾದ ಕಾರಣ ಕನ್ನಡ ಉಪನ್ಯಾಸಕರಾದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು 1996 ರಿಂದ ರಿಜಿಸ್ಟ್ರಾರರಾದರು. ಬಳಿಕ ಶ್ರೀ ಎಸ್. ಎಚ್. ಶಿವರುದ್ರಪ್ಪ, ಡಾ. ದುಗ್ಗಪ್ಪ ಕಜೆಕಾರ್ ಇವರುಗಳು ರಿಜಿಸ್ಟ್ರಾರ್ಗಳಾಗಿ ಸೇವೆ ಸಲ್ಲಿಸಿ ಪ್ರಸ್ತುತ ಶ್ರೀ ಚಂದ್ರಹಾಸ ರೈ ಬಿ ಇವರು ರಿಜಿಸ್ಟ್ರಾರ್ರಾಗಿರುತ್ತಾರೆ.