(English) Awards 2009

(English) Awards 2009

ಡಾ. ರಾಮಕೃಷ್ಣ. ಟಿ. ಶೆಟ್ಟಿ

ಕ್ಷೇತ್ರ : ಸಂಶೋಧನೆ

೧೯೪೮ ಜೂನ್ ೧೫ ರಮದು ಮುಂಬಯುಯಲ್ಲಿ ಜನಿಸಿದರು. ಮೂಲತಃ ಇವರು ದಕ್ಷಿಣ ಕನ್ನಡ ಜಿಲೆಯ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮೂಡುಬಿತ್ತಿಲ್ ಮನೆತನದ ತುಳುವ ಬಂಟ ಸಮಾಜಕ್ಕೆ ಸೇರಿದವರು. ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಪಡೆದರು. ಮುಲಗಕಿ ಕಾಲೇಜಿನಿಂದ ಬಿ. ಎಸ್ ಸಿ ಪದವೀಧರರಾದ ಇವರು ವ್ಯಾಕರಣ ವಿಷಯವನ್ನು ಆಯ್ದಕೊಂಡು ಪಿ.ಎಚ್.ಡಿ ಪದವಿ ಗಳಿಸಿದರು. ತುಳು ಭಾಷೆಯ ಬಗ್ಗೆ ವಿಶೇಷ ಸಂಶೋಧನೆ ನಡೆಸಿ ತುಳುವಿನ ಪ್ರಾಚೀನತೆಯನ್ನು ಶ್ರುತಪಡಿಸಿದರು.
ಕೃತಿಗಳು: ದೃಷ್ಠಿ ಮತ್ತು ಇತರ ಕಥೆಗಳು, ವರ್ಣನತ್ಮಾಕ ತುಳು ವ್ಯಾಕರಣ, ಕಾಂಪ್ರಹೆನ್ಸಿಮ್ ಗ್ರಾಮರ್ ಇನ್ ತುಳು, ಕೊರಗ ಗ್ರಾಮರ್, ಆಕ್ಸಿಲರಿ ವರ್ಕ್ಸ ಇನ್ ತುಳು, ಮುಂತಾದವು. ಇವರು ನಡೆಸಿದ ಸಂಶೋಧನೆಗಳನ್ನು ಪರಿಗಣಿಸಿ ಇವರಿಗೆ ರಾಜ್ಯ, ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳು ಈಗಾಗಲೇ ಸಂದಿದೆ,
ಡಾ. ರಾಮಕೃಷ್ಣ. ಟಿ. ಶೆಟ್ಟಿ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೦೯-೨೦೧೦ ಸಾಲಿನ ಗೌರವ ಪ್ರಶಸ್ತಿಯಯನ್ನು ನೀಡಿ ಗೌರವಿಸಲಾಗಿದೆ.

 

 

ಬಿ. ಭೋಜ ಸುವರ್ಣ

ಕ್ಷೇತ್ರ : ನಾಟಕ

 

 

 

 

 

ಶ್ರೀ ಕಾಂಚನ ಸಂಜೀವ ರೈ

ಕ್ಷೇತ್ರ : ಯಕ್ಷಗಾನ

೧೯೪೨ ರ ಅಗಸ್ಟ ೨೪ ರಂದು ಬಂಟ್ವಾಳ ತಾಲೂಕಿನ ಸಜಿಪ ಮೂಡಗ್ರಾಮದ ನಗ್ರಿ ಗುತ್ತುವಿನಲ್ಲಿ ಜನಿಸಿದರು. ಪ್ರಾಥಮಿಕ ಆರನೇ ತರಗತಿಯಲ್ಲಿ ತನ್ನ ಶಿಕ್ಷಣವನ್ನು ನಿಲ್ಲಿಸಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟರು ಶ್ರೀ ಮಾಣಂಗಾಯಿ ಕೃಷ್ಣ ಭಟ್ಟರಿಂದ ಯಕ್ಷಗಾನ ತರಭೇತಿಯನ್ನು ಪಡೆದರು ಮುಂದೆ ಯಕ್ಷಗಾನ ಕಲಾವಿದನಾಗಿ ತನ್ನ ವೃತ್ತಿ ಜೀವನದಲ್ಲಿ ತೊಡಗಿದರು. ಯಕ್ಷಗಾನ ಮಂಡಳಿಯಲ್ಲಿ ಸುಮಾರು ೪೨ ವರ್ಷಗಳ ಕಾಲ ಕಲಾವಿದನಾಗಿ ಸೇವೆ ಸಲ್ಲಿಸಿ ಪಕೃತ ನಿವೃತ್ತಿ ಜೀವನ ಸಡೆಸುತ್ತಿದ್ದಾರೆ.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಯಕ್ಷಗಾನ ಹವ್ಯಾಸಿ ಬಳಗ ಕದ್ರಿ, ಶ್ರೀ ಕೃಷ್ಣ ಯಕ್ಷಸಭಾ ಮಲ್ಲಿಕಟ್ಟೆ, ಕದ್ರಿ, ಮುಂತಾದ ಸಂಸ್ಥಗಳು ಅವರನ್ನು ಸನ್ಮಾನಿಸಿದೆ.
ಶ್ರೀ ಕಾಂಚನ ಸಂಜೀವ ರೈ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೦೯-೨೦೧೦ ಸಾಲಿನ  ಗೌರವ ಪ್ರಶಸ್ತಿಯಯನ್ನು ನೀಡಿ ಗೌರವಿಸಲಾಗಿದೆ.