ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಜಯಭೇರಿ ಸಾಧಿಸಿದ ವಿದ್ಯಾರ್ಥಿಗಳು

ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಜಯಭೇರಿ ಸಾಧಿಸಿದ ವಿದ್ಯಾರ್ಥಿಗಳು

ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಜಯಭೇರಿ ಸಾಧಿಸಿದ ವಿದ್ಯಾರ್ಥಿಗಳು
ಮಂಗಳೂರು: ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 416 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ. ದ.ಕ ಜಿಲ್ಲೆಯ 35 ಶಾಲೆಗಳಲ್ಲಿ 8,9 ಮತ್ತು 10ನೇ ತರಗತಿಗಳಲ್ಲಿ ತುಳು ಭಾಷೆಯ ಪಠ್ಯ ಕಲಿಸಲಾಗುತ್ತಿದ್ದು ಈ ಪೈಕಿ 22 ಶಾಲೆಗಳ 10ನೇ ತರಗತಿಯ “ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದು ಈ ಪೈಕಿ 89 ಮಕ್ಕಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. 24 ಮಂದಿ 99 ಅಂಕ ಪಡೆದಿದ್ದಾರೆ ಹಾಗೆಯೇ 107 “ವಿದ್ಯಾರ್ಥಿಗಳು 90 ರಿಂದ 98 ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಮಕ್ಕಳಲ್ಲಿ ಶೇಕಡಾ 50 ಮಕ್ಕಳು ಂ+ ಶ್ರೇಣಿ ಪಡೆದಿದ್ದಾರೆ.
ತುಳುವಿನಲ್ಲಿ ಶೇಕಡಾ 100 ಫಲಿತಾಂಶ ಬರುವ ಮೂಲಕ ಶಾಲೆಗಳ ಫಲಿತಾಂಶ ಹಾಗೂ ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಏರಿಕೆಯಾಗಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣರಾದ ದ.ಕ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ತುಳು ಭಾಷಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ ತಿಳಿಸಿದ್ದಾರೆ.
ತುಳು ಪಠ್ಯ ಭೋದನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು 2018-19ನೇ ಸಾಲಿನಲ್ಲಿ 100ಕ್ಕೂ ಅಧಿಕ ಶಾಲೆಗಳಲ್ಲಿ ತುಳು ಪಠ್ಯವನ್ನು ಭೋದನೆ ಮಾಡಲು ಕ್ರಮವಹಿಸಲಾಗಿದೆ. ತೃತೀಯ ಐಚ್ಛಿಕ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತಿದ್ದು ಈ ಮೂಲಕ ಶಾಲೆಗಳು ಕೂಡಾ ಫಲಿತಾಂಶದಲ್ಲಿ ದಾಖಲೆ ನಿರ್ಮಿಸುತ್ತಿದೆ. ಎಂದು ಹೇಳಿರುವ ಎ.ಸಿ ಭಂಡಾರಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಾಲೆಗಳ ಶಿಕ್ಷಕ ವರ್ಗ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಸಹಿ/-
ಎ.ಸಿ ಭಂಡಾರಿ