Preamble in Tulu Script – ತುಳು ಲಿಪಿಟ್ ಭಾರತದ ಸಂವಿಧಾನದಾದ ಪೀಠಿಕೆ ಬುಡುಗಡೆ

Preamble in Tulu Script – ತುಳು ಲಿಪಿಟ್ ಭಾರತದ ಸಂವಿಧಾನದಾದ ಪೀಠಿಕೆ ಬುಡುಗಡೆ

ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.) ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್ ಇವರ ಸಹಯೋಗದಲ್ಲಿ ದಿನಾಂಕ 27-01-2020 ರಂದು ಮಂಗಳೂರಿನ ತುಳುಭವನದಲ್ಲಿ ತುಳು ಭಾಷೆ ಮತ್ತು ತುಳು ಲಿಪಿಯಲ್ಲಿ ಭಾರತದ ಸಂವಿಧಾನದಾ ಪೀಠಿಕೆಯನ್ನು ಬಿಡುಗಡೆಗೊಳಿಸಾಲಾಯಿತು.

ಈ ಕಾರ್ಯಕ್ರಮದಾ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಾ ಅಧ್ಯಕ್ಷರಾದ ಶ್ರೀ ದಯಾನಂದ್ ಕತ್ತಲ್ಸಾರ್ ಅವರು ವಹಿಸಿಕೊಂಡು ತುಳು ಲಿಪಿಯಾ ಸಂವಿಧಾನದಾ ಪೀಠಿಕೆಯನ್ನ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತಾಡಿದ ಅಧ್ಯಕ್ಷರು ತುಳು ಪರವಾಗಿ ದುಡಿಯುತ್ತಿರೋ ಸಂಘಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಆ ಸಂಘಟನೇಗಳಿಗೆ ಸರ್ವ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದರು. ಅಷ್ಟು ಮಾತ್ರವಲ್ಲದೇ ತುಳು ಸಂಸ್ಕೃತಿಯಾ ಉಳಿವಿಗಾಗಿ ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು.

“ತುಳು ಭಾಷೆಯಲ್ಲಿ ಸಂವಿಧಾನದ ಬಿಡುಗಡೆ ಬಹುಕಾಲದ ಹಿಂದೆಯೇ ನಡೆಯಬೇಕಿದ್ದಾ ಕಾರ್ಯವಾಗಿತ್ತು, ಈ ದಿನಾ ಸಂವಿಧಾನದಾ ಪೀಠಿಕೆಯನ್ನ ತುಳು ಭಾಷೆ ಮತ್ತು ತುಳು ಲಿಪಿಯಲ್ಲಿ ರಚಿಸಾಲಾಗಿದೆ ಇನ್ನೂ ಮುಂದೆ ಸಂಪೂರ್ಣ ಸಂವಿಧಾನವನ್ನೇ ತುಳು ಭಾಷೆಯಲ್ಲಿ ನಿರ್ಮಿಸುವ ಅಗತ್ಯವಿದೇ” ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಾ ಡಾ. ಆಕಾಶ್ ರಾಜ್ ಜೈನ್ ರವರು ಅಭಿಪ್ರಾಯಪಟ್ಟರು.

ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಲೀಲಾಕ್ಷ ಕರ್ಕೇರ, ನಿಟ್ಟೆ ಶಶಿಧರ ಶೆಟ್ಟಿ, ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ, ಅಕಾಡೆಮಿ ಯ ರಿಜಿಸ್ಟ್ರಾರ್ ರಾಜೇಶ್ ಜಿ ರವರು ಜೈ ತುಳುನಾಡ್ ಸಂಘ ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್ ನಾ ಸದಸ್ಯರು ಉಪಸ್ಥಿತರಿದ್ದರು.