ರಿಜಿಸ್ಟ್ರಾರ್

 

 

ಎಂ. ದೇವರಾಜ್

(1994- 1995)

ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್

(1995-1998)

ಎಸ್.ಎಚ್. ಶಿವರುದ್ರಪ್ಪ

(1998-2005)

ಡಾ. ದುಗ್ಗಪ್ಪ ಕಜೆಕಾರ್

(2005-2008)

ಚಂದ್ರಹಾಸ ರೈ.ಬಿ

(2009-2019)

ರಾಜೇಶ್ ಜಿ

(From 2019- )

ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್

1945 ಸಪ್ಟೆಂಬರ್ 9 ರಂದು ಜನಿಸಿದರು. ಪ್ರಾಥವಿಕ ಹಾಗೂ ಪ್ರೌಡ ಶಿಕ್ಷಣವನ್ನು ಪುತ್ತೂರಿನಲ್ಲಿ ಪಡೆದ ಇವರು ಕನ್ನಡಲ್ಲಿ ಎಂ.ಎ, ಬಿ. ಇಡಿ, ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. 1963 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಮುಂದೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಬಡ್ತಿ ಹೊಂದಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು.

ತುಳುವಿನಲ್ಲಿ ಕೃತಿಗಳು: ಪಚ್ಚೆ ಕುರಲ್, ದುನಿಪು, ಭೂತಾಳ ಪಾಂಡ್ಯ, ಡಾ. ಶಿವರಾಮ ಕಾರಂತೆರ್, ತುಳು ಸಂಸ್ಕೃತಿದ ಪೊಲಬು, ತುಳು ನಾಡ್ಡ ನಾಗಬೆರ್ಮೆರ್ ಮುಂತಾದವು

ತುಳು ಸಂಸ್ಕೃತಿಯ ಬಗ್ಗೆ ಗ್ರಂಥಗಳು: ತುಳುವರ ಜನಪದ ಕಥೆಗಳು, ಜಾನಪದ ಸ್ಪಂದನ, ಜಾನಪದ ಕುಣಿತ, ಕಲ್ಕುಡ ಕಲ್ಲುರ್ಟಿ ಇತ್ಯಾದಿ

ಇತರ ಕೃತಿಗಳು: ಬಂಗ್ಲಾ ವಿಜಯ (ಯಕ್ಷಗಾನ), ಕಿರಣ, ಅಂತರ್ಭೂತ, ನಮ್ಮ ಸರಕಾರ, ಕಾವ್ಯ ರಶ್ಮಿ ಇತ್ಯಾದಿ.

ದ್ವನಿಸುರುಳಿಗಳಿಗೆ ಸಾಹಿತ್ಯ: ತುಳುವ ಸಿರಿ, ತುಳುವ ಮಲ್ಲಿಗೆ, ಅತರ್ದ ಪೂ, ಮುಂತಾದವು.

ಪ್ರಶಸ್ತಿಗಳು: ತುಳು ಡೈಯಾಲೆಕ್ಟ್ಸ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡಿಮಿಯಿಂದ 1995ರ ಸಾಲಿನ ಪುಸ್ತಕ ಪ್ರಶಸ್ತಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ – 2005, ಮುಂಬಯಿಯಲ್ಲಿ ನಡೆದ 10ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ – 2001, ಕರ್ನಾಟಕ ಸರಕಾರದಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ – 1993 ಇತ್ಯಾದಿ.

ತುಳು ಭಾಷಾಧ್ಯಯನ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ 1995ರಲ್ಲಿ ತುಳುಕೂಟ ಉಡುಪಿ ಇದರ ದಶಮಾನೋತ್ಸವ ಗೌರವಸಂಮಾನ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ದುಗ್ಗಪ್ಪ ಕಜೆಕಾರ್

1969 ಅಗೋಸ್ಟ್ 2 ರಂದು ಮಡಂತ್ಯಾರಿನ ಕಜೆಕಾರ್ ನಲ್ಲಿ ಜನಿಸಿದ ಇವರು ಮಂಗಳೂರು ವಿ. ವಿ ಯಲ್ಲಿ ಸಮಾಜಶಾಸ್ತ್ರ ಎಂ. ಎ ಪದವಿಯನ್ನು , ಎಂ.ಫಿಲ್ , ಪಿ.ಹೆಚ್.ಡಿ ಪದವಿಗಳನ್ನು ಗಳಿಸಿದ್ದಾರೆ.

ಡಾ. ದುಗ್ಗಪ್ಪ ಕಜೆಕಾರ್ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಪ್ರಕಟಿತ ಕೃತಿ: 2008 ರಲ್ಲಿ ‘ರಿಸರ್ಚ್ ಮೆತೋಡೋಲಾಜಿ’ ಮಂಗಳೂರು ವಿ. ವಿ ಅಂತಿಮ ಬಿ. ಎ. ತರಗತಿಗೆ ಕೈಪಿಡಿಯ ಪ್ರಕಟಣೆ.

ಪ್ರಕಟಿತ ಲೇಖನಗಳು: ‘ಕುಂಬಾರಿಕೆ ದಕ್ಷಿಣ ಕನ್ನಡದ ವ್ಯಾಪ್ತಿಯಲ್ಲಿ’ ಕನ್ನಡ ಪುಸ್ತಕ ಪ್ರಾಧಿಕಾರದ ಗ್ರಾಮ ಸಂಸ್ಕೃತಿ ಮಾಲೆಯಲ್ಲಿ ಪ್ರಕಟಗೊಂಡಿದೆ. ‘ಒಕ್ಯುಪೇಶನಲ್ ಮೊಬಿಲಿಟಿ ಎಮಂಗ್ ಕುಲಾಲ್ಸ್, ಮೀಸಲಾತಿ ಮತ್ತು ಕುಲಾಲರು ಇವುಗಳು ಪ್ರಕಟಗೊಂಡಿದೆ.

ಪ್ರಬಂಧ ಮಂಡನೆಗಳು: ಕರ್ನಾಟಕ ರಾಜ್ಯ ಮಟ್ಟದ ಸಮಾಜಶಾಸ್ತ್ರ ಸಮ್ಮೇಳನ, ಹಾಸನ, ರಾಷ್ಟ್ರ ಮಟ್ಟದ ಸಮಾಜಶಾಸ್ತ್ರ ವಿಚಾರ ಸಂಕಿರಣ ಮಂಗಳೂರು ಇಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಸಂಪಾದಕತ್ವ: ತುಳು ಅಕಾಡೆಮಿಯ ತ್ರೈಮಾಸಿಕ ಮದಿಪು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ 4 ಸಂಚಿಕೆಗಳ ಪ್ರಕಟಣೆ. ಕೊಂಕಣಿ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ “ಕೊಂಕಣಿ ಸಿರಿಸಂಪದ’ದ ವ್ಯವಸ್ಥಾಪಕ ಸಂಪಾದಕರಾಗಿ ಸಂಚಿಕೆಗಳ ಪ್ರಕಟಣೆ.

ಚಂದ್ರಹಾಸ ರೈ. ಬಿ

26-09-2009 ರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು 1986 ರಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಉಡುಪಿ ಜಿಲ್ಲಾ ಸ. ಪ. ಪೂ ಕಾಲೇಜು ಪೊಲಿಪು, ಕಾಪು ಇಲ್ಲಿ ವೃತ್ತಿ ಜೀವನ ಆರಂಭಿಸಿ ಮುಂದೆ ಸ.ಪ.ಪೂ ಕಾಲೇಜು ಪಂಜ, ಸ. ಪ್ರಾ ಶಾಲೆ ಸರ್ವೆ ಇಲ್ಲಿ ಸೇವೆ ಸಲ್ಲಿಸಿದರು. 1991 ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಬಡ್ತಿ ಹೊಂದಿ ಇಂಗ್ಲೀಷ್ ಉಪನ್ಯಾಸಕರಾಗಿ ಪದವಿ ಪೂರ್ವ ಕಾಲೇಜುಗಳಾದ ಕೆಯ್ಯೂರು, ಪುತ್ತೂರು, ಸವಣೂರು, ಐವರ್ನಾಡುಗಳಲ್ಲಿ ಸೇವೆ ಸಲ್ಲಿಸಿದರು. ಇವರು ಮಂಗಳೂರು ವಿಶ್ವ ವಿದ್ಯಾಲಯದ ಬಿ. ಎಸ್ಸಿ ಹಾಗೂ ಬಿ. ಎಡ್ ಪದವಿಯನ್ನು, ಧಾರವಾಡ ವಿಶ್ವ ವಿದ್ಯಾಲಯದಲ್ಲಿ ಇಂಗ್ಲೀಷ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.

ಅಂತರಾಷ್ಟ್ರೀಯ ಸಂಸ್ಥೆ ಜೇಸೀಸ್ನ ಬೆಳ್ಳಾರೆ ಘಟಕದ ಸದಸ್ಯರಾಗಿ, ಅಧ್ಯಕ್ಷರಾಗಿ, ವಲಯಾಧಿಕಾರಿಯಾಗಿ 1997 ರಲ್ಲಿ 8 ಕಂದಾಯ ಜಿಲ್ಲೆಗಳನ್ನೊಳಗೊಂಡ ವಲಯ 15 ರ ಅಧ್ಯಕ್ಷರಾಗಿ ಮತ್ತು ಜೇಸೀಸ್ನ ರಾಷ್ಟ್ರೀಯ ಆಡಳಿತ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತೀಯ ಜೇಸೀಸ್ನ ರಾಷ್ಟ್ರೀಯ ತರಬೇತುದಾರರಾಗಿರುವ ಇವರು ಅಂತಾರಾಷ್ಟ್ರೀಯ ಜೇಸೀಸ್ ವಿಶ್ವ ವಿದ್ಯಾಲಯದಿಂದ ಪ್ರೈಮ್ ತರಬೇತುದಾರ ಪದವಿಯನ್ನು ಪಡೆದಿದ್ದಾರೆ.

ಅಂತರಾಷ್ಟ್ರೀಯ ಖ್ಯಾತಿಯ NABARD ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಲಕ್ನೊದ BIRD ಸಂಸ್ಥೆಯಲ್ಲಿ 4 ದಿನಗಳ ಕಾಲ ಗ್ರಾಮೀಣಾಭಿವೃದ್ಧಿ ಕುರಿತು ರಾಷ್ಟ್ರೀಯ ಮಟ್ಟದ ತರಬೇತಿಯನ್ನು ಪಡೆದಿದ್ದಾರೆ.

ಕ್ಯಾರಿಯರ್ ಗೈಡೆನ್ಸ್, ವಿಜ್ಞಾನ ಮತ್ತು ಆಂಗ್ಲ ಭಾಷಾ ವಿಷಯ ಸಂಪದೀಕರಣ, ನಾಯಕತ್ವವೇ ಮೊದಲಾದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ, ಯುವಕರಿಗೆ, ಶಿಕ್ಷಕರಿಗೆ, ಉದ್ಯೋಗಿಗಳಿಗೆ ರಾಜ್ಯಾದ್ಯಂತ ತರಬೇತಿಗಳನ್ನು ನಡೆಸಿದ್ದಾರೆ.

ಹುಟ್ಟೂರು ಕೆಯ್ಯೂರಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಯುವಕ ಮಂಡಲದ ಸ್ಥಾಪಕ ಕಾರ್ಯದರ್ಶಿಯಾಗಿ, ಶ್ರೀ ದುಗರ್ಾ ಚ್ಯಾರಿಟೇಬಲ್ ಸೊಸೈಟಿ ಕೆಯ್ಯೂರು ಇದರ ನಿರ್ದೇಶಕರಾಗಿ ಪುತ್ತೂರಿನ ಶಿಕ್ಷಣ ಅಧ್ಯಯನ ಕೇಂದ್ರದ ಸಹಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ, ಯುವಜನ ಮೇಳಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೀರ್ಪುಗಾರರಾಗಿ, ಸಂಘಟಕನಾಗಿ ಕಾರ್ಯನಿರ್ವಹಿಸಿದ್ದಾರೆ.

ನಾಟಕ, ಯಕ್ಷಗಾನ, ಯಕ್ಷಗಾನ ತಾಳಮದ್ದಳೆಗಳಲ್ಲಿ ಕಲಾವಿದರಾದ ಇವರು ಕಿರು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.