ತುಳು ಭಾಷೆ

ತುಳುನಾಡು ಎಂದು ಕರೆಯಲ್ವಡುವ ಭೂಭಾಗದ ಪ್ರಾಚೀನ ನಿವಾಸಿಗಳ ಮಾತೃಭಾಷೆ ತುಳು. ಇದು ದ್ರಾವಿಡ ಪರಿವಾರಕ್ಕೆ ಸೇರಿದ ಒಂದು ಭಾಷೆ. 1945 ರಲ್ಲಿ ರಾಬರ್ಟ ಕಾಲ್ಡ್ವೆಲ್ ದ್ರಾವಿಡ ಮೂಲದಿಂದ ಬಂದು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ತುಳುಗಳನ್ನು ಪಂಚ ದ್ರಾವಿಡ ಬಾಷೆಗಳೆಂದು ಹೆಸರಿಸಿದನು.

ನಂತರ ಭಾಷಾ ಸಂಶೋಧಕರು ದ್ರಾವಿಡ ಮೂಲದಿಂದ ಬಂದ ಒಟ್ಟು 27 ಬಾಷೆಗಳನ್ನು ಹೆಸರಿಸಿದರು ದ್ರಾವಿಡ ಭಾಷೆಯು ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಭಾಷೆ ಎಂಬುದಾಗಿ ಮೊದಲಿನ ಜನರ ಕಲ್ಪನೆಯಾಗಿತ್ತು ಇದು ಈಗ ಬದಲಾಗಿದೆ. ಭಾರತದಲ್ಲಷ್ಟೇ ಅಲ್ಲ, ಪೃಕೃತ ಭಾರತದಿಂದ ಹೊರಗಿರುವ ಪಾಕಿಸ್ತಾನ, ಅಫಘಾನಿಸ್ತಾನಗಳಲ್ಲೂ ಪ್ರಾಚೀನ ಕಾಲದಲ್ಲಿ ದ್ರಾವಿಡ ಮೂಲದಿಂದ ಬಂದ ಕೆಲವು ಬಾಷೆಗಳಿದ್ದವು ಅವುಗಳಲ್ಲಿ ಬ್ರಾಹುಈ ಮುಖ್ಯವಾದುದು ಎಂಬುದಾಗಿ ಭಾಷಾ ತಜ್ಷರು ಕಂಡುಹಿಡಿದಿದ್ದಾರೆ. ಉತ್ತರ ಭಾರತದಲ್ಲಿ ಇವು ಕೂಡ ಅನೇಕ ದ್ರಾವಿಡ ಮೂಲದ ಭಾಷೆಗಳು ಇನ್ನೂ ಆಡು ಭಾಷೆಗಳಾಗಿ ಉಳಿದಿವೆ ಅಫಘಾನಿಸ್ತಾನದ ಪಕ್ಕದಲ್ಲಿ ‘ಪ್ರಾಕ್’ ಎಂಬ ಒಂದು ಸ್ಥಳವಿದೆ ಪ್ರಾಕ್ ಎಂಬುದು ತುಳು ಭಾಷೆಯ ಪದ ಪ್ರಾಕ್ ಎಂಬ ಪದವೆ ಸಂಸ್ಕೃತದಲ್ಲಿ ಪ್ರಾರ್ಥನೆ ಎಂಬುದಾಗಿ ಪರಿವರ್ತನೆಗೊಂಡಿತ್ತು. ತುಳು ಶಬ್ದದಿಂದ ಕರೆಯಲ್ಪಡುವ ಒಂದು ಪ್ರದೇಶ ಭಾರತದಿಂದ ಹೊರಗಿರಬೇಕಾದರೆ ದ್ರಾವಿಡ ಭಾಷೆ ಭಾರತಕಷ್ಟೇ ಸೀಮಿತವಲ್ಲ. ಜಗತ್ತಿನ ಬೇರೆ ಕಡೆಗಳಲ್ಲು ಆಡು ಭಾಷೆಯಾಗಿತೆಂಬುದು ಇದರಿಂದ ತಿಳಿದು ಬರುತ್ತದೆ.

ತುಳು ಭಾಷೆ ಅದರ ಅರ್ಥಕ್ಕೆ ತಕ್ಕಂತೆ ಅತ್ಯಂತ ಮೃದುವಾದ ಭಾಷೆ, ತುಳುನಾಡಿನ ಬಹುತೇಕ ಜನರು ಈ ಭಾಷೆಯನ್ನಾಡುದರಿಂದ ಇದಕ್ಕೆ ತುಳು ಎಂಬ ಹೆಸರು ಬಂದಿದೆ ಈ ಭಾಷೆಯಲ್ಲಿ ಮಹಾಪ್ರಾಣ ವ್ಯಂಜನಗಳ ಬಳಕೆ ಕಡಿಮೆ. ಅನುನಾಸಿಕ ಸ್ವರಗಳ ಸಮರ್ಪಕವಾಗಿ ಬಳಸಲ್ಪಡುತ್ತದೆ ತುಳು ಭಾಷೆ ದ್ರಾವಿಡ ಮೂಲದಿಂದ ನೇರವಾಗಿ ಹುಟ್ಟಿಬಂದ ಭಾಷೆ. ಇದು ಯಾವುದೇ ಭಾಷೆಯ ಉಪಭಾಷೆಯಲ್ಲ ಇದಕ್ಕೆ 2600 ವರ್ಷಗಳ ಇತಿಹಾಸವಿದೆ ಎಂಬುದಾಗಿ ಭಾಷಾ ತಜ್ಞರು ಒಪ್ಪಿಕೊಂಡಿದ್ದಾರೆ. ಈಜಿಪ್ಟಿನ ಆಕ್ಸಿರಿಂಕಸ್ ಎಂಬ ಸ್ಥಳದಲ್ಲಿದ್ದ ವಸ್ತು ಸಂಗ್ರಹಾಲಯದಲ್ಲಿ ಪಾಪಿರ ಹಾಳೆಯಲ್ಲಿ ಗ್ರೀಕ್ ಲಿಪಿಯಲ್ಲಿ ಸುಮಾರು 2000 ವರ್ಷಗಳ ಹಿಂದೆ ಬರೆಯಲ್ಪಟ್ಟ ಒಂದು ಗ್ರಂಥದಲ್ಲಿ ತುಳು ಪದಗಳು ಬಳಸಲ್ಪಟ್ಟಿವೆ ಇದು ಚೌರಿಸನ್ ಎಂಬ ಹೆಸರಿನ ಒಂದು ಪ್ರಹಸನ ಎಂಬುದಾಗಿ ಸ್ಕ್ವಾಡ್ರನ್ ಲೀಡರ್ ಪಿ. ಎಸ್. ರೈ ಯವರು ಹೇಳಿದ್ದಾರೆ. ಇದನ್ನು ಡಾ. ಶಿವರಾಮ ಕಾರಂತರು ಕೂಡ  ಒಪ್ಪಿಕೊಂಡಿದ್ದಾರೆ ಈ ಪ್ರಹಸನದಲ್ಲಿ ಹಲವು ಪ್ರಾಚೀನ ತುಳು ಪದಗಳು ಬಳಕೆಯಲ್ಲಿವೆ ಮಲ್ಪೆಯ ಬಳಿ ನಡೆದ ಒಂದು ಘಟನೆಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಸರಿತಿ ಎಂಬ ಗ್ರೀಕ್ ಕನ್ಯೆ ಈ ಪ್ರಹಸನದ ನಾಯಕಿ ಜಗತ್ತಿನಲ್ಲಿ ಒಟ್ಟು ಸುಮಾರು 1.19 ಕೋಟಿ ಮಂದಿ ತುಳು ಬಲ್ಲವರಿದ್ದಾರೆ ಎಂಬುದಾಗಿ ಎನ್ ಸೈಕ್ಲೋಪೀಡಿಯ ಆಫ್ ಬ್ರಿಟಾನಿಕದಲ್ಲಿ ಹೆಸರಿಸಲಾಗಿತ್ತು ಆದರೆ ಈ ಸಂಖ್ಯೆ ಕುಂಟಿತವಾಗಿದೆ. ಸಾಕಷ್ಟು ಲಿಖಿತ ಸಾಹಿತ್ಯಯ ಇಲ್ಲದೆ ಇರುವುದು ರಾಜಾಶ್ರಯಲ್ಲದಿರುವುದು, ಸರ್ಕಾರದ ಪ್ರೋತ್ಸಾಹದ ಕೊರತೆ, ಅನ್ಯ ಭಾಷಿಗರು ತುಳು ನಾಡನ್ನು ಆವರಿಸಿಕೊಂಡಿರುವುದು ಇವೆಲ್ಲ  ಇದಕ್ಕೆ ಕಾರಣ.

ತುಳು ಭಾಷೆಗೆ ಲಿಪಿ ಇಲ್ಲ ಎಂಬ ಒಂದು ಸುದ್ದಿ ಇತ್ತೀಚಿನವರೆಗೂ ಪ್ರಚಾರದಲ್ಲಿತ್ತು. ಆದರೆ ತುಳು ಭಾಷೆಗೆ ಪ್ರಾಚೀನ ಕಾಲದಿಂದಲೂ ಲಿಪಿ ಇತ್ತು. ಎಲ್ಲಾ ಭಾಷೆಗಳಿಗೆ ಆದರದ್ದೆ ಆದ ಪ್ರತೈಕ ಲಿಪಿ ಎಂಬುದು ಇರುವುದಿಲ್ಲ. ಭಾಷೆಯಷ್ಟೆ ಸಂಖ್ಯೆಯಲ್ಲಿ ಲಿಪಿಗಳಿರುವುದಿಲ್ಲ. ಸಂಸ್ಕೃತವು ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ದೇವನಾಗರಿ ಲಿಪಿಯನ್ನು ಬಳಸಿಕೊಳ್ಳಲಾಗಿದೆ ಇಂಗ್ಲೀಷ್ ಸೇರಿದಂತೆ ಯುರೋಪಿನ ಹೆಚ್ಚಿನ ಭಾಷೆಗಳಿಗೆ ರೋಮನ್ ಲಿಪಿಯನ್ನು ಬಳಸಿಕೊಳ್ಳಲಾಗುತ್ತುದೆ, ಟಿಬೆಟ್, ಬರ್ಮಾ ಚೈನಾ ಮತ್ತು ಜಪಾನ್ ಭಾಷೆಗಳಿಗೆ ಒಂದೇ ಮಾದರಿಯ ಲಿಪಿಯನ್ನು ಬಳಸಿದರೆ ಉರ್ದು, ಪರ್ಷಿಯನ್ ಮತ್ತು ಅರೆಬೀಕ್ ಭಾಷೆಗಳಿಗೆ ಒಂದೇ ಹೋಲಿಕೆಯಿರುವ ಲಿಪಿಯನ್ನು ಬಳಸಲಾಗುತ್ತಿದೆ. ತುಳುವಿಗೆ ಗ್ರಂಥ ಮೂಲದ “ತುಳು” ಲಿಪಿಯನ್ನು ಬಳಸಲಾಗುತ್ತಿತ್ತು. ಈ ಲಿಪಿಯಲ್ಲಿ ಬರೆದ ಸಾವಿರಾರು ತಾಳೆಗರಿಯ ಗ್ರಂಥಗಳು ದೊರೆತಿವೆ.ತುಳುನಾಡಿನ ಹಲವಾರು ವೈದಿಕ ಮನೆಗಳಲ್ಲಿ ಈಗಲೂ ಪೂಜಿಸಲ್ಪಡುತ್ತಿವೆ, ಧರ್ಮಸ್ಥಳದ ದರ್ಮಾಧಿಕಾರಿ ಶ್ರೀ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂತಹ ಸಾವಿರಾರು ಗ್ರಂಥ ಶೇಖರಣೆಗೊಳಿಸಿ ರಕ್ಷಣೆಯಲ್ಲಿಟ್ಟಿದ್ದಾರೆ. ಡಾ. ವಿಘ್ನರಾಜ್ರವರು ಇದರ ಮೇಲ್ವೀಚಾರಣೆ ನೋಡುತ್ತಿದ್ದಾರೆ. ಡಾ. ವೆಂಕಟರಾಜ ಪುಣಿಂಚಿತ್ತಾಯರವರು ಹಲವು ತುಳು ಲಿಪಿಯ ಗ್ರಂಥಗಳನ್ನು ಲಿಪ್ಯಂತರಗೊಳಿಸಿದ್ದಾರೆ. ವಿಷ್ಣ್ಣುತುಂಗ ಬರೆದ ತುಳು ಭಾಗವತ, ಉಡುಪಿ ಕೊಡವೂರ್ ನ ಆರುಣಾಬ್ಜ ಬರೆದ ತುಳು ಮಹಾಭಾರತೋ, ದೇವಿ ಮಹಾತ್ಮೆ ಎಂಬ ಗದ್ಯ ಗ್ರಂಥ, ಕಾವೇರಿ, ಕರ್ಣ ಪರ್ವ ಇವುಗಳೆಲ್ಲ ಅವುಗಳಲ್ಲಿ ಮುಖ್ಯವಾದುವು. ಇವೆಲ್ಲ ಸುಮಾರು 13 – 14 ನೇ ಶತಮಾನದಲ್ಲಿ ಬರೆದವುಗಳೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ತುಳು,ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿರುವ, ತುಳು ಲಿಪಿಯಲ್ಲಿ ಬರೆಯಲ್ಪಟ್ಟ ಸುಮಾರು 45ರಷ್ಟು ಶಿಲಾಶಾಸನಗಳು ಸಿಕ್ಕಿದ್ದು, ಅವುಗಳು ಕ್ರಿಸ್ತಶಕ 7 8ನೇ ಶತಮಾನದಿಂದ 14ನೇ ಶತಮಾನದವರೆಗಿನ ಶಾಸನಗಳಾಗಿವೆ.

ಪ್ರಾಚೀನ ಕಾಲದಲ್ಲಿ ಇಲ್ಲಿಗೆ ವಿದೇಶಿಯರು ಬಂದು ಹೋಗುತ್ತಿದ್ದರು ಅವರಲ್ಲಿ ಹೆಚ್ಚಿನವರು ಅರಬರು. ಅರಬರು ವ್ಯಾಪರಕ್ಕಾಗಿ ಇಲ್ಲಿಗೆ ಬರುತ್ತಿದ್ದರು ಇಲ್ಲಿನ ಮುಖ್ಯ ಬೆಳೆ ಅಕ್ಕಿ ‘ಅರಿಶಿ’ ಎಂಬುದು ಇದರ ದ್ರಾವಿಡ ಮೂಲದ ಪದ ತುಳುವಿನಲ್ಲಿ ಅದು ಅರಿ ಎಂದಾದೆ ಅರೆಬಿಕ್ ಭಾಷೆಯಲ್ಲಿ ಅದು ವೊರೈಸಾ ಆಯಿತು ಇಂಗ್ಲೀಷ್ನಲ್ಲಿ ಅದನ್ನು ರೈಸ್ ಎಂದರೆ ಫ್ರೆಚರು ರೈಯಿಸ್ ಎಂದು ಹೆಸರಿಸಿದರು. ಹೀಗೆ ಅರಬರ ಮೂಲಕ ಯುರೋಪಿನ ಜನರಿಗೆ ಅನ್ನ ಪ್ರಾಶನ ಮಾಡಿಸಿದ ಕೀರ್ತಿ ತುಳುವರಿಗೆ ಸಲ್ಲುತ್ತದೆ. ಅರಬರ ಮೂಲಕ ಆನೇಕ ತುಳು ಪದಗಳು  ಯುರೋಪಿನ ಭಾಷೆಗಳಲ್ಲಿ ಸೇರಿ ಹೋಗಿವೆ. ತುಳು ಭಾಷೆಗೆ ಸಂಸ್ಕೃತ ಮತ್ತು ಭಾರತದ ಮತ್ತು ಇಂಗ್ಲೀಷಿನ ಹಲವು ಪದಗಳು ಸೇರಿಕೊಂಡಿವೆ. ಅದೇ ರೀತಿ ಸಂಸ್ಕೃತಕ್ಕೂ ಮತ್ತು ಇತರ ಭಾಷೆಗಳಿಗು ತುಳು ಶಬ್ದಗಳು ಬೆರೆತು ಹೋಗಿವೆ ಕ್ರಿ. ಶ 18 ರಲ್ಲಿ ಜರ್ಮನ್ನ ಬಾಸೆಲ್ನಿಂದ ಮಿಶನರಿಯವರು ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ತುಳುನಾಡಿಗೆ ಬಂದರು. ಅವರು ಇಲ್ಲಿ ತುಳುವನ್ನು ಕಲಿತು ಧರ್ಮ ಪ್ರಚಾರಕ್ಕೆ ಪ್ರಾರಂಬಿಸಿದರು. ಅವರು ತುಳುವಿನ ಗ್ರಂಥಗಳನ್ನು ರಚಿಸಿದರು. ಕನ್ನಡ ಲಿಪಿಯನ್ನು ಬಳಸಿದರು 1886 ರಲ್ಲಿ ರೆವೆರಂಡ್ ಆಗಸ್ಟ್ ಮೇನರ್ ಎಂಬವರು ಸಂಗ್ರಹಿಸಿದ ಪಾಡ್ದನೊಳು ಎಂಬ ಮೊದಲ ಗ್ರಂಥ ಪ್ರಕಟಗೊಂಡಿತು. ರೆವೆರಂಡ್ ಬ್ರಿಗೆಲ್ರವರು ‘ತುಳು ಗ್ರಾಮರ್’ ಎಂಬ ಗ್ರಂಥವನ್ನು ಬರೆದರು ಮೇನರ್ರವರು ತುಳು ಇಂಗ್ಲೀಷ್ ಅರ್ಥ ಕೋಶವನ್ನು ಕೂಡ ರಚಿಸಿದರು. ಮಿಶನರಿಯವರು ಬೈಬಲ್ ಗೀತೆಗಳನ್ನು ತುಳುವಿಗೆ ಭಾಷಾಂತರಿಸಿದರು . ಹೀಗೆ ತುಳು ಗ್ರಂಥಗಳು ಮಿಶನರಿಯವರಿಂದ ಕನ್ನಡ ಲಿಪಿಯಲ್ಲಿ ಪ್ರಕಟಗೊಳ್ಳಲು ಪ್ರಾರಂಭವಾಯಿತು. ಮಿಶನರಿಯವರು ತುಳು ಮಾಧ್ಯಮದ ಪ್ರಾಥಮಿಕ ಶಾಲೆಗಳನ್ನು ಕೂಡ ಪ್ರಾರಂಭಿಸಿದರು 1892 ರಲ್ಲಿ ಒಂದನೇ ತರಗತಿಯ ಪಾಠ ಪುಸ್ತಕವು ಕೂಡ ರಚನೆಗೊಂಡಿತು. ಆದರೆ ಜನರು ತಮ್ಮ ಮಕ್ಕಳನ್ನು ತುಳು ಮಾಧ್ಯಮ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದುದರಿಂದ 3ನೇ ತರಗತಿಯಲ್ಲಿ ತುಳು ಮಾಧ್ಯಮವನ್ನು ನಿಲ್ಲಿಸಬೇಕಾಯಿತು.